ದೇವವಾಣಿ ಸಂಸ್ಕೃತವು ದೇಶದ ಮೊದಲ ನೆಚ್ಚಿನ ಭಾಷೆ ಮಾಡಬೇಕಾಗಿದೆ ! – ರಾಜ್ಯಪಾಲ ರಮೇಶ ಬೈಸ

ನಾಗಪುರ – ದೇಶದ ವರ್ತಮಾನಕಾಲದಲ್ಲಿ ಮತ್ತು ಭವಿಷ್ಯದಲ್ಲಿ ಸಂಸ್ಕೃತವಿಲ್ಲದೆ ಸಾಧ್ಯವಿಲ್ಲ. ಸಂಸ್ಕೃತವು ಜಗತ್ತಿನಲ್ಲಿ ಇತರ ಭಾಷೆಗಳ ಜನನಿ ಆಗಿದೆ; ಆದರೆ ಶಿಕ್ಷಣ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಆಂಗ್ಲ ಭಾಷೆಯ ಪ್ರಭಾವವಿರುವುದು ದುರಾದೃಷ್ಟಕರವಾಗಿದೆ. ಭಾರತೀಯ ಸ್ವಾತಂತ್ಯ್ರದ ಸುವರ್ಣಯುಗವು ನಡೆಯುತ್ತಿದ್ದು ೨೦೪೭ರ ವೇಳೆಗೆ ನಾವು ದೇವವಾಣಿ ಸಂಸ್ಕೃತವನ್ನು ದೇಶದ ಮೊದಲ ನೆಚ್ಚಿನ ಭಾಷೆಯನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ ವಿಶ್ವವಿದ್ಯಾಲಯಗಳು ಪ್ರಯತ್ನ ಮಾಡಬೇಕಾಗಿದೆ, ಎಂದು ರಾಜ್ಯಪಾಲ ರಮೇಶ ಬೈಸ ಮಾರ್ಚ್ ೬ ರಂದು ಮನವಿಮಾಡಿದರು. ರಾಮಟೆಕ್‌ನ ಕವಿಕುಲಗುರು ಕಾಳಿದಾಸ ಸಂಸ್ಕೃತ ವಿದ್ಯಾಪೀಠದ ೧೨ನೇ ಘಟಿಕೋತ್ಸವ ಸಮಾರಂಭದಲ್ಲಿ ದೂರದರ್ಶನದ ಮೂಲಕ ರಾಜ್ಯಪಾಲ ರಮೇಶ ಬೈಸ ಇವರು ಪದವಿಧರರಿಗೆ ಮಾರ್ಗದರ್ಶನ ನೀಡುತ್ತಿದ್ದರು.

(ಸೌಜನ್ಯ – DD Sahyadri News)

ವಿದೇಶಿ ಇತಿಹಾಸಕಾರರು ತಮ್ಮ ಗ್ರಂಥಗಳಲ್ಲಿ ಸಂಸ್ಕೃತ ಭಾಷೆಯ ಮಹತ್ವವನ್ನು ವಿವರಿಸಿದ್ದಾರೆ. ಭಾರತ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಆತ್ಮನಿರ್ಭರ ಆಗುತ್ತಿದೆ. ಮಾತೃಭಾಷೆ ಮತ್ತು ಮಾತೃಭೂಮಿಯಿಂದ ಮಾತ್ರ ಆತ್ಮನಿರ್ಭರ ಪ್ರಾರಂಭವಾಗುವುದು. ವಿದೇಶಿ ವಿದ್ಯಾಲಯಗಳು ಸಂಸ್ಕೃತ ಭಾಷೆಯನ್ನು ಕಲಿಸಲು ಸಿದ್ಧವಾಗಿವೆ. ಸಂಸ್ಕೃತವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು, ಎಂದು ಬೈಸರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.