ಗರ್ವ ಸೇ ಕಹೋ …!

ಹಿಂದೂ ರಾಷ್ಟ್ರ ಎಂಬ ಭಾರತದ ಭವ್ಯ ಅಸ್ಮಿತೆಯನ್ನು ಅಳಿಸಿ ಹಾಕಿದ ಮೇಲೆ ಇದೀಗ ಹಿಂದೂ ಧರ್ಮೀಯರ ‘ಹಿಂದೂ ಈ ಗುರುತನ್ನು ಅಳಿಸಿ ಹಾಕುವ ಷಡ್ಯಂತ್ರ ನಡೆಯುತ್ತಿದೆ. ಮೊಘಲರು ಮತ್ತು ಬ್ರಿಟಿಷರು ಭಾರತದ ‘ಹಿಂದೂ ರಾಷ್ಟ್ರ ಎಂಬ ಗುರುತನ್ನು ಅಳಿಸಿಹಾಕಿದ ಆಕ್ರಮಣಕಾರಿಯಾಗಿದ್ದರು. ಹಿಂದೂಗಳ ‘ಹಿಂದೂ ಈ ಗುರುತನ್ನು ಅಳಿಸಲು ಆ ಆಕ್ರಮಣಕಾರರ ಸಂತಾನವಾದ ಕಾಂಗ್ರೆಸ್ಸಿಗರು, ಪ್ರಗತಿ(ಅಧೋಗತಿ)ಪರರು, ಕಮ್ಯುನಿಸ್ಟರು, ಮತಾಂಧರು ಮುಂತಾದವರು ಹಗಲಿರುಳು ಸಕ್ರಿಯರಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (‘ಇಸ್ರೋ) ಮಾಜಿ ಹಿರಿಯ ವಿಜ್ಞಾನಿ ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿದ ‘ರಾಕೆಟ್ರಿ : ದಿ ನಂಬಿ ಎಫೆಕ್ಟ್ ಚಲನಚಿತ್ರದೊಂದಿಗೆ ಮತ್ತೊಮ್ಮೆ ಅದು ಅನುಭವಕ್ಕೆ ಬಂದಿತು. ಈ ಚಲನಚಿತ್ರದಲ್ಲಿ ಅವರು ಪೂಜೆ ಅರ್ಚನೆ ಮಾಡುತ್ತಿರುವುದನ್ನು ತೋರಿಸ ಲಾಗಿದೆ. ಇದರಿಂದ ಚಲನಚಿತ್ರ ವಿಮರ್ಶಕರು ಇದನ್ನು ಟೀಕಿಸಿದ್ದಾರೆ. ಅವರಿಗೆ ಉತ್ತರಿಸಿದ ನಂಬಿ ನಾರಾಯಣನ್‌ರವರು, “ನಾನು ಹಿಂದೂ ಆಗಿದ್ದೇನೆ ಮತ್ತು ನನಗೆ ಅದನ್ನು ಹೇಳಲು ನಾಚಿಕೆಯಾಗುವುದಿಲ್ಲ, ಹಿಂದೂ ಆಗಿರುವುದು ಪಾಪವೇ ? ನಾನು ಹಿಂದೂ ಆಗಿದ್ದೇನೆ ಎಂಬ ಕಾರಣಕ್ಕೆ ಚಲನಚಿತ್ರದಲ್ಲಿ ನನ್ನನ್ನು ಹಿಂದೂ ಎಂದು ತೋರಿಸಲಾಗಿದೆ. ನನ್ನನ್ನು ಮುಸ್ಲಿಂ ಅಥವಾ ಕ್ರೈಸ್ತ ಎಂದು ತೋರಿಸಲು ಸಾಧ್ಯವಿಲ್ಲ, ಎಂದು ಹೇಳಿದ್ದಾರೆ. ನಂಬಿ ನಾರಾಯಣನ್ ಅವರ ಈ ಖಂಡತುಂಡ ಪ್ರತ್ಯುತ್ತರವು ಪ್ರತಿಯೊಬ್ಬ ಹಿಂದೂವಿಗೂ ಸ್ಫೂರ್ತಿದಾಯಕವಾಗಿದೆ.

ವಿಮರ್ಶಕರ ಹಿಂದೂದ್ರೋಹ !

ವಾಸ್ತವದಲ್ಲಿ ಯಾವುದೇ ವಿಮರ್ಶಕ ತಟಸ್ಥವಾಗಿ ಸಮೀಕ್ಷೆ ಯನ್ನು ಮಾಡಬೇಕು. ಎದುರಿಗೆ ಇರುವ ಯಾವುದೇ ವಿಷಯ ಅದು ಪುಸ್ತಕವಿರಲಿ, ಸಾಹಿತ್ಯವಿರಲಿ ಅಥವಾ ಚಲನಚಿತ್ರವಾಗಿರಲಿ ಅದರ ಬಗ್ಗೆ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಬೇಕು. ಅದಕ್ಕಾಗಿ ವಿಮರ್ಶಕರು ತಟಸ್ಥ ದೃಷ್ಟಿಯನ್ನು ಹೊಂದಿರಬೇಕು. ದುರದೃಷ್ಟವಶಾತ್ ಇಂದು ಹಿಂದೂ ಧರ್ಮ, ಹಿಂದೂಗಳು, ದೇವತೆಗಳು, ಸಂತರು, ರಾಷ್ಟ್ರಪುರುಷರು, ಸಂಪ್ರದಾಯಗಳು ಮುಂತಾದವುಗಳನ್ನು ಹಿಂದೂದ್ವೇಷದ ಕನ್ನಡಕದಿಂದ ನೋಡಲಾಗುತ್ತಿದೆ. ಈ ಮಂಡಳಿಗಳಲ್ಲಿ ಹಿಂದೂ ಧರ್ಮದ ಬಗ್ಗೆ ತೀವ್ರ ದ್ವೇಷ, ಮತ್ಸರ ಮತ್ತು ಪೂರ್ವಗ್ರಹ ಕಂಡುಬರುತ್ತದೆ. ಈ ದ್ವೇಷ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದು ಕಂಡುಬರುತ್ತದೆ; ಏಕೆಂದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ವಿರುದ್ಧ ಈ ಮಂಡಳಿಗಳು ಚಕಾರವನ್ನು ಎತ್ತುವುದು ಕಂಡುಬರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ಅವರಿಗೆ ಚಲನಚಿತ್ರಗಳು, ಕಾದಂಬರಿಗಳು ಇತ್ಯಾದಿಗಳಲ್ಲಿ ಅಶ್ಲೀಲತೆ ನಡೆಯುತ್ತದೆ. ಅವರ ವಿಮರ್ಶಾತ್ಮಕ ಬುದ್ಧಿಯು ಹಿಂದೂ ಧರ್ಮದ ವಿರುದ್ಧ ಮಾತ್ರ ನಿಪುಣವಾಗಿದೆ; ಹಾಗಾಗಿಯೇ ಅಂತಹವರು ನಂಬಿ ನಾರಾಯಣನ್ ಇವರ ಚಲನಚಿತ್ರದಲ್ಲಿ ಪೂಜೆ ಮಾಡುವುದು ಬೇಡ ಎಂದು ಆಕ್ಷೇಪಿಸುತ್ತಾರೆ. ಚಲನಚಿತ್ರದಲ್ಲಿ ನಟರು ನಮಾಜ್ ಮಾಡುವುದು ಅಥವಾ ಚರ್ಚ್‌ಗಳಲ್ಲಿ ಪ್ರಾರ್ಥನೆ ಮಾಡುವುದನ್ನು ತೋರಿಸುವ ಚಲನಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟಿವೆ; ಆದರೆ ಈ ಬಗ್ಗೆ ಮಂಡಳಿಗಳು ಬಾಯಿ ಮುಚ್ಚಿರುತ್ತಾರೆ. ಇದು ನಡೆಯುತ್ತದೆ; ಆದರೆ ಪೂಜೆ ಆಗುವುದಿಲ್ಲ, ಇದು ವಿಮಶಕರ ಹಿಂದೂದ್ವೇಷವಲ್ಲವೇ ? ಚಲನಚಿತ್ರಗಳಲ್ಲಿ ತೋರಿಸಲಾಗುವ ಲವ್ ಜಿಹಾದ್ ವಿಚಾರದಲ್ಲೂ ಈ ಮಂಡಳಿ ಮೌನ ವಹಿಸುತ್ತದೆ. ಒಟ್ಟಿನಲ್ಲಿ ಹಿಂದೂಗಳನ್ನು ಸದಾ ತುಳಿಯುವ ಇಂತಹ ಮತೀಯ ವಿಮಶಕರ ಹಿಂದೂದ್ವೇಷ ವಿಮರ್ಶೆಗೆ ಪ್ರಾಮುಖ್ಯತೆ ಕೊಡುವ ಅಗತ್ಯವಿಲ್ಲ. ‘ಹಾತಿ ಚಲೇ ಅಪನಿ ಚಾಲ, ಭೌಂಕೆ ಕುತ್ತೆ ಹಜಾರ್, (ಸಾವಿರಾರು ನಾಯಿಗಳು ಬೊಗಳಿದರೂ ಆನೆ ಅದನ್ನು ಲೆಕ್ಕಿಸದೇ ತನ್ನ ದಾರಿಯಲ್ಲಿ ನಡೆಯುತ್ತದೆ) ಇದು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.

‘ಇಸ್ರೋವು ವಿದ್ವಾನ ವಿಜ್ಞಾನಿಗಳ ಒಂದು ಸುದೀರ್ಘ ಸಂಪ್ರದಾಯವನ್ನು ಹೊಂದಿದೆ. ಇದರಲ್ಲಿ ಅನೇಕ ವಿಜ್ಞಾನಿಗಳು ಆಸ್ತಿಕರಾಗಿದ್ದಾರೆ; ಅದಕ್ಕಾಗಿಯೇ ‘ಇಸ್ರೋದ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ಮೊದಲು ಶ್ರೀ ಬಾಲಾಜಿಯ ಮುಂದೆ ಒಂದು ಪ್ರತಿಕೃತಿ ಇಡಲಾಗುತ್ತದೆ ಎಂದು ನಾವೆಲ್ಲರೂ ಕೇಳಿರಬೇಕು ಅಥವಾ ಓದಿರಬೇಕು. ಇದು ಹಿಂದೂದ್ವೇಷಿಗಳನ್ನು ಚುಚ್ಚುತ್ತಿದೆ. ಆದ್ದರಿಂದ ವಿಜ್ಞಾನಿಗಳನ್ನು ಮತ್ತು ಆ ಮೂಲಕ ‘ಇಸ್ರೋದ ತೇಜೋವಧೆ ಮಾಡುವ ಅಂತಾರಾಷ್ಟ್ರೀಯ ಸರಪಳಿ ಸಕ್ರಿಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದೇ ನಂಬಿ ನಾರಾಯಣನ್ ಅವರನ್ನು ‘ಇಸ್ರೋದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಬಂಧಿಸಲಾಗಿತ್ತು. ಅಂತಿಮವಾಗಿ, ನ್ಯಾಯಾಲಯದಲ್ಲಿ ಅವರು ನಿರಪರಾಧಿ ಎಂದು ಸಾಬೀತಾಯಿತು. ಆದರೆ, ನಂಬಿ ನಾರಾಯಣನ್ ಅವರ ಪ್ರತಿಷ್ಠೆ ಮತ್ತು ಅದಕ್ಕಿಂತ ಮುಖ್ಯವಾಗಿ ‘ಇಸ್ರೋಗೆ ಮಾಡಿದ ಹಾನಿಯನ್ನು ಯಾರು ತುಂಬಿಸುತ್ತಾರೆ ? ನಾರಾಯಣನ್ ಅವರನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಶ್ರೀಕುಮಾರ್ ಈಗ ಗುಜರಾತ ಗಲಭೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇದರಿಂದ ಈ ಪಿತೂರಿಯ ವ್ಯಾಪ್ತಿಯು ಗಮನಕ್ಕೆ ಬರುತ್ತದೆ. ಇಂತಹ ಸಮಯದಲ್ಲಿ ನಂಬಿ ನಾರಾಯಣನ್ ಬೆಂಬಲಕ್ಕೆ ನಿಲ್ಲುವುದು ಕೇವಲ ವ್ಯಕ್ತಿಯ ಹಿಂದೆ ನಿಲ್ಲುವುದಲ್ಲ: ಸಜ್ಜನರನ್ನು ಕಾಡುವ ದುಷ್ಟವೃತ್ತಿಗಳ ವಿರುದ್ಧ ನಿಲ್ಲುವುದಾಗಿದೆ. ನಾರಾಯಣನ್ ಅವರ ಮೇಲಿನ ಚಲನಚಿತ್ರದ ಸಂದರ್ಭದಲ್ಲಿ ಅವರು ಮಂಡಿಸಿದ ಪ್ರತ್ಯುತ್ತರವು ಎಲ್ಲಾ ಹಿಂದೂಗಳಿಗೆ ಬೋಧಪ್ರದವಾಗಿದೆ. ‘ಗರ್ವ ಸೇ ಕಹೋ ಹಮ್ ಹಿಂದೂ ಹೆ ಎಂಬುದು ಇದುವರೆಗಿನ ಘೋಷಣೆ ಮಾತ್ರ ಆಗಿತ್ತು; ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತಹ ವಾತಾವರಣ ನಿರ್ಮಾಣವಾಗುತ್ತಿರುವುದು ಕಂಡುಬರುತ್ತಿದೆ. ಇದೊಂದು ಉದಾಹರಣೆಯಾಗಿದೆ. ಇದು ಕಾಲದ ಮಹಿಮೆಯಾಗಿದೆ; ಏಕೆಂದರೆ ಹಿಂದೂ ರಾಷ್ಟ್ರ ಬರುತ್ತದೆ ಎಂದು ಸಂತರು ಹೇಳಿದ್ದಾರೆ. ‘ಇಂತಹ ಘಟನೆಗಳು ಆ ದಿಕ್ಕಿನಲ್ಲಿಡುತ್ತಿರುವ ಹೆಜ್ಜೆಗಳಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು !