ಹೇ ನ್ಯಾಯದೇವತೆ, ಸರ್ವೋಚ್ಚ ನ್ಯಾಯಾಲಯದಲ್ಲಿನ ಆಕಸ್ಮಿಕ ಘಟನೆಯ ಪರಿಣಾಮಗಳ ಬಗ್ಗೆ ನಿನಗೆ ತಿಳಿದಿದೆಯೇ ?

ಹಿಂದೂ ವಿಧಿಜ್ಞ ಪರಿಷದ್‌ನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ ಇವರಿಂದ ನ್ಯಾಯದೇವತೆಗೆ ಬಹಿರಂಗ ಪತ್ರ !

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

೧. ನೂಪುರ ಶರ್ಮಾ ಪ್ರಕರಣದ ಬಗ್ಗೆ ಸಂಕ್ಷಿಪ್ತದಲ್ಲಿ… !

ನ್ಯಾಯದೇವತೆ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡು ಒಂದು ಕೈಯಲ್ಲಿ ತಕ್ಕಡಿ ಮತ್ತು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿದು ನಿಂತಿದ್ದಾಳೆ. ಆದುದರಿಂದ ಅವಳಿಗೆ ಕಾಣಿಸುವುದಿಲ್ಲ; ಆದರೆ ಕೇಳಿಸುತ್ತದೆ, ಎಂದು ಅವಳ ಪ್ರತಿಮೆಯಿಂದ ಅನಿಸುತ್ತದೆ. ‘ನಿನ್ನೆ ನ್ಯಾಯಾಲಯದಲ್ಲಿ ಆಕಸ್ಮಿಕವಾಗಿ ಘಟಿಸಿದ್ದು ದೇಶದಾದ್ಯಂತ ಅದರ ಪರಿಣಾಮ ಪ್ರಕಟವಾಯಿತು. ಇದರಲ್ಲಿ ನಿನಗೇನಾದರೂ ಅರ್ಥವಾಯಿತೇ ? ಪ್ರಾಯಶಃ ಮೊದಲ ಬಾರಿಗೆ ಇಂತಹ ಭೂಕಂಪವಾಗಿರಬೇಕು. ನಿನ್ನ ಕೈಯಲ್ಲಿನ ತಕ್ಕಡಿ ಮತ್ತು ಖಡ್ಗ ಕಿಂಚಿತ್ತಾದರೂ ಕಂಪಿಸಿತೇ ?’ ಎಂಬ ಪ್ರಶ್ನೆ ನಮಗಿದೆ. ನೂಪುರ ಶರ್ಮಾಳ ಪ್ರಕರಣವೇನು ಎಂದು ಪ್ರಾಯಶಃ ನಿನಗೆ ಗೊತ್ತಿರಲಾರದು. ಒಂದು ದೂರಚಿತ್ರವಾಹಿನಿಯ ಚರ್ಚೆಯಲ್ಲಿ ಅವಳು ಏನೋ ಮಾತನಾಡಿದಳು ಮತ್ತು ನಂತರ ಅವಳು ಹೇಗೆ ತಪ್ಪು ಮಾತನಾಡಿದಳು, ಎಂಬ ಬಗ್ಗೆ ದೇಶದಾದ್ಯಂತ ಆಂದೋಲನಗಳು ಆರಂಭವಾದವು. ತನ್ನ ಸಂಚಾರವಾಣಿಯಲ್ಲಿ ‘ಸ್ಟೆಟಸ್’ ಇಟ್ಟಿದ್ದರಿಂದ ಉದಯಪುರದ ಕನ್ಹಯ್ಯಾಲಾಲ ಎಂಬವರ ಕುತ್ತಿಗೆಯನ್ನು ಕತ್ತರಿಸಿ ಹತ್ಯೆಗೈಯ್ಯಲಾಯಿತು. ನೂಪುರ ಶರ್ಮಾ ಇವರ ವಿರುದ್ಧ ದೇಶದಾದ್ಯಂತ ಅನೇಕ ಸ್ಥಳಗಳಲ್ಲಿ ದೂರುಗಳು ದಾಖಲಾದವು. ಒಂದೇ ಘಟನೆಯ ಬಗ್ಗೆ ಅನೇಕ ಅಪರಾಧಗಳನ್ನು ದಾಖಲಿಸಲಾಗುವುದಿಲ್ಲ, ಎಂಬ ಸ್ಪಷ್ಟವಾದ ಕಾಯಿದೆ ಇದೆ; ಆದರೆ ಅವರ ಸಂದರ್ಭದಲ್ಲಿ ಅನೇಕ ಸ್ಥಳಗಳಲ್ಲಿ ಅಪರಾಧಗಳು ದಾಖಲಾಗಿವೆ. ಅವುಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಬೇಕೆಂದು ಶರ್ಮಾ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದ್ದರು. ಇತ್ತೀಚೆಗಷ್ಟೆ ಅದರ ಆಲಿಕೆಯಾಯಿತು.

೨. ಕನ್ಹಯ್ಯಾಲಾಲರ ಹತ್ಯೆಗೆ ನೂಪುರ ಶರ್ಮಾ ಇವರ ಹೇಳಿಕೆ ಹೇಗೆ ಕಾರಣ ?

ನ್ಯಾಯದೇವತೆ, ನಿನ್ನ ನ್ಯಾಯಾಧೀಶ ಸೂರ್ಯಕಾಂತ ಮತ್ತು ನ್ಯಾಯಾಧೀಶ ಪಾರಡಿವಾಲಾ ಇವರಿಬ್ಬರ ಪೀಠದ ಎದುರು ಈ ಮನವಿ ಆಲಿಕೆಗೆ ಬಂದಿತು. ನ್ಯಾಯಮೂರ್ತಿ ಸೂರ್ಯಕಾಂತ ಇವರು ಶರ್ಮಾ ಇವರ ನ್ಯಾಯವಾದಿಗೆ ನೂಪುರ ಶರ್ಮಾ ಇವರು ದೇಶದ ಕ್ಷಮೆ ಕೇಳಬೇಕು ಏಕೆಂದರೆ ಇಂದು ದೇಶ ದಲ್ಲಿ ಘಟಿಸುವ ಘಟನೆಗಳಿಗೆ ನೂಪುರ ಶರ್ಮಾ ಇವರೇ ಕಾರಣರಾಗಿದ್ದಾರೆ ಎಂದು ಕಠೋರವಾಗಿ ಹೇಳದರು ಎಂದು ಹೇಳಲಾಗುತ್ತಿದೆ. ಅವರ ಮನವಿಯೂ ಉದ್ಧಟತನದಿಂದ ಕೂಡಿದೆ. ಈ ಬಗೆಗಿನ ವಾರ್ತೆಗಳು ಪ್ರಕಟಗೊಂಡು ದೇಶದಾದ್ಯಂತ ಅದರ ಪರಿಣಾಮ ಕಾಣತೊಡಗಿತು. ನ್ಯಾಯಾಲಯದೆದುರು ಬಂದ ವಿಷಯ ವನ್ನಷ್ಟೇ ನ್ಯಾಯಾಲಯವು ಓದುತ್ತದೆ, ಎಂದು ನೀನು ಹಾಕಿ ಕೊಟ್ಟ ನಿಯಮದ ಮಾನದಂಡವನ್ನು ಪ್ರಾಯಶಃ ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತದೆ ಎಂಬುದು ನಿನಗೇ ಗೊತ್ತಿರಬೇಕು. ನ್ಯಾಯಾಧೀಶರ ಈ ನಿರ್ಧಾರಕ್ಕೆ ‘ಟ್ವಿಟರ್’ನಲ್ಲಿ ಪ್ರತಿಭಟನೆಗಳು ಭುಗಿಲ್ಲೆದ್ದಿವೆ. ‘ಸುಪ್ರಿಮ್ ಕೋರ್ಟ್ ಕಾಂಪ್ರಮೈಜ್ ಬ್ಲಾಕ್ ಇಂಡಿಯನ್ ಹಿಸ್ಟರಿ, ಬ್ಲಾಕ್ ಇಂಡಿಯನ್ ಹಿಸ್ಟರಿಯ ಟ್ರೆಂಡ್ ಆರಂಭವಾಯಿತು ಮತ್ತು ಜನರು ತಮ್ಮ ಅಭಿಪ್ರಾಯಗಳನ್ನು ನ್ಯಾಯಾಲಯದ ವಿರುದ್ಧ ನಿರ್ಭಯವಾಗಿ ಮಂಡಿಸಿದರು. ‘ಕನ್ಹಯ್ಯಾಲಾಲ ಇವರ ಕ್ರೂರ ಹತ್ಯೆಗೆ ನೂಪುರ ಶರ್ಮಾ ಇವರ ಹೇಳಿಕೆ ಹೇಗೆ ಕಾರಣ ? ಎಂದು ಪ್ರಶ್ನಿಸತೊಡಗಿದರು. ನೂಪುರ ಶರ್ಮಾ ಇವರ ಹೇಳಿಕೆ ಕಾನೂನಿನ ಉಲ್ಲಂಘನೆಯಾಗಿದ್ದರೆ ಅವರ ಮೇಲೆ ಅಪರಾಧವನ್ನು ದಾಖಲಿಸಬೇಕು ಮತ್ತು ಪೊಲೀಸರು ಅದರ ತನಿಖೆ ಮಾಡಬೇಕು. ಅನಂತರ ನ್ಯಾಯಾಧೀಶರು ಅದಕ್ಕೆ ತೀರ್ಪು ಕೊಡುವರು’ ಇದು ಭಾರತದ ಸಂಪ್ರದಾಯವಾಗಿದೆ. ಸಂಕ್ಷಿಪ್ತದಲ್ಲಿ ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ಆಡಳಿತವು ಕ್ರಮಕೈಗೊಳ್ಳುತ್ತದೆ, ಇದರಿಂದ ಇತರರು ಕಾನೂನನ್ನು ಉಲ್ಲಂಘಿಸಬಾರದು ಎಂಬ ನ್ಯಾಯ ಸಮ್ಮತ ನಿಲುವನ್ನು ಇಂದಿನವರೆಗೆ ನ್ಯಾಯಾಂಗವು ಮಂಡಿಸಿದೆ. ಹೀಗಿರುವಾಗ ಕನ್ಹಯ್ಯಾಲಾಲ ಇವರ ಹತ್ಯೆಗೆ ನೂಪುರ ಶರ್ಮಾ ಇವರ ಹೇಳಿಕೆ ಹೇಗೆ ಮತ್ತು ಏಕೆ ಕಾರಣವಾಗುತ್ತದೆ ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತು. ಅದು ಇಂದಿಗೂ ಅನೇಕರ ಮನಸ್ಸಿನಲ್ಲಿರ ಬಹುದು. ಅದರ ಪ್ರತಿಕ್ರಿಯೆ ಹೇಗೆ ಹರಡಿತು, ಎಂದು ನಾನು ನಿನಗೆ ಹೇಳುತ್ತೇನೆ.

೩. ನೂಪುರ ಶರ್ಮಾ ಇವರನ್ನು ಟೀಕಿಸಿದ ನಂತರ ಜನರು ವ್ಯಕ್ತಪಡಿಸಿದ ಪ್ರತಿಕ್ರಿಯೆ !

ಅ. ಯಾರೊ ಒಬ್ಬರು, ಈ ನ್ಯಾಯದಿಂದ ಅಮೇರಿಕಾದ ಟ್ವಿನ್ ಟವರ್ ಮೇಲಿನ ೯/೧೧ (೯ ಸೆಪ್ಟೆಂಬರ್ ೨೦೦೧ ರ) ಭಯೋತ್ಪಾದಕ ದಾಳಿಗೆ ಆ ವಿಮಾನವನ್ನು ಕಂಡು ಹಿಡಿದ ರೈಟ್ ಸಹೋದರರು ಕಾರಣರಾಗಿದ್ದಾರೆ. ಅವರು ವಿಮಾನವನ್ನು ಕಂಡು ಹಿಡಿಯದಿದ್ದರೆ, ಆಕ್ರಮಣವೇ ಆಗುತ್ತಿರಲಿಲ್ಲ ಎಂದು ಬರೆದಿದ್ದಾರೆ.

ಆ. ಒಬ್ಬರು, ಮುಂಬಯಿಯ ತಾಜ್ ಹೊಟೇಲ್ ಮೇಲಾದ ಭಯೋತ್ಪಾದಕರ ದಾಳಿಗೆ ಟಾಟಾರವರೇ ಕಾರಣರಾಗಿದ್ದಾರೆ. ಟಾಟಾರವರು ಈ ಹೊಟೇಲ್ ಕಟ್ಟದಿದ್ದರೆ ಆಕ್ರಮಣವಾಗುತ್ತಲೇ ಇರಲಿಲ್ಲ, ಎಂದು ಬರೆದಿದ್ದಾರೆ.

ಇ. ಇನ್ನೊಬ್ಬರು, ವಿಭಜನೆಯ ನಂತರದ ಹಿಂಸಾಚಾರ, ಕಾಶ್ಮೀರದಲ್ಲಿ ಹಿಂಸಾಚಾರ, ಭಾರತ-ಪಾಕಿಸ್ತಾನದಲ್ಲಿ ಸೈನಿಕರ ಮೃತ್ಯು ಇವುಗಳಿಗೆ ‘ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕು’, ಎಂದು ಆಗ್ರಹಿಸು ವವರೇ ಕಾರಣರಾಗಿದ್ದಾರೆ. ಸ್ವತಂತ್ರ ಭಾರತದ ಆಗ್ರಹವನ್ನಿಡದಿದ್ದರೆ ಈ ಘಟನೆಯು ಸಂಭವಿಸುತ್ತಲೇ ಇರಲಿಲ್ಲ ಎಂದು ಬರೆದಿದ್ದಾರೆ. ಇವು ಸಾಮಾನ್ಯ ಪ್ರತಿಕ್ರಿಯೆಗಳಾಗಿವೆ.

ಈ. ಕೆಲವು ಜನರು ಹಿಂದೆ ಪ್ರದರ್ಶನಗೊಂಡ ‘ಅಂಧಾ ಕಾನೂನು’ ಈ ಹಿಂದಿ ಚಲನಚಿತ್ರದ ಭಿತ್ತಿಪತ್ರಗಳನ್ನು ‘ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ಜಿಹಾದಿ ಭಯೋತ್ಪಾದಕರು ಹರ್ಷಾ ಎಂಬ ಯುವಕನ ಹತ್ಯೆ ಮಾಡಿದರು. ಅದರಿಂದ ದೊಡ್ಡ ಗಲಭೆಯಾಗಿತ್ತು. ಆ ಬಗ್ಗೆ ಓರ್ವನು, ಹರ್ಷಾನ ತಾಯಿ ಅವನಿಗೆ ಜನ್ಮ ನೀಡದಿದ್ದರೆ, ಅವನ ಹತ್ಯೆಯೇ ಆಗುತ್ತಿರ ಲಿಲ್ಲ. ಹಾಗಾಗಿ ಅವನ ಹತ್ಯೆಗೆ ಅವಳೇ ಕಾರಣ ಎಂದು ಬರೆದಿದ್ದಾರೆ.

ಉ. ಒಬ್ಬನು ಭಾಷಣದಿಂದ ಗಲಭೆಯು ಭುಗಿಲ್ಲೆದ್ದಿತು. ಆದುದರಿಂದ ಗಲಭೆಗಾಗಿ ಭಾಷಣವೇ ಕಾರಣವಾದರೆ ಗಲಭೆಕೋರರ ಕೃತಿ ಗಲಭೆಕೋರರನ್ನು ದೋಷಿಗಳೆಂದು ನಿರ್ಧರಿಸಲಾರದು. ಹೀಗೆ ಬರೆಯುವವರು ಜೋಕರ್ ಆಗಿದ್ದಾರಾ ? ಇದು ಎಂದರೆ ಕೋಳಿಮರಿಗಳನ್ನು ನರಿಯ ಆರೈಕೆಯಲ್ಲಿಟ್ಟಂತಾಗು ತ್ತದೆಯೇ ? ಎಂದಿದ್ದಾನೆ.

೪. ನ್ಯಾಯದೇವತೆ, ಪ್ರತಿಕ್ರಿಯೆ ನೀಡುವವರನ್ನು ಕ್ಷಮಿಸು !

ನ್ಯಾಯದೇವತೆ, ಇದರ ಮುಂದಿನದನ್ನು ನಾನು ನಿನಗೆ ಹೇಳುವುದಿಲ್ಲ, ಪ್ರಾಯಶಃ ಅದು ನಿನಗೆ ಕೇಳಿಸುವುದಿಲ್ಲ. ಹೀಗೆ ಬರೆಯುವ ನೂರಾರು ಜನರು ‘ನ್ಯಾಯಾಲಯವನ್ನು ಅಪಮಾನಿಸಿದರೆ ?’, ಎಂಬುದು ನಿಜವಾದ ಪ್ರಶ್ನೆಯಾಗಿದೆ. ಬಡಪಾಯಿಗಳಿಗೆ ಕಾನೂನಿನ ಬಗ್ಗೆ ಗೊತ್ತಿಲ್ಲ. ಅವರು ತಮ್ಮ ಭಾವನೆಯನ್ನು ವ್ಯಕ್ತ ಪಡಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ಎಂದಿಗೂ ತಪ್ಪುವುದೇ ಇಲ್ಲ ಎಂದು ಅವರು ತಿಳಿದುಕೊಳ್ಳಬೇಕಿತ್ತು. ಸರ್ವೋಚ್ಚ ನ್ಯಾಯಾಲಯವು ಏನು ಹೇಳುತ್ತದೆ, ಎಂಬುದು ಅದಕ್ಕೇ ಮಾತ್ರ ತಿಳಿಯುತ್ತದೆ, ಆದರೂ ಅವರು ಈ ಪದ್ಧತಿಯಿಂದ ಭಾವನೆ ವ್ಯಕ್ತಪಡಿಸಿದ್ದಾರೆ. ನ್ಯಾಯದೇವತೆ, ಅವರನ್ನು ಕ್ಷಮಿಸು ! ಹಾಗೆ ನೋಡಿದರೆ ನೀನು ಅವರನ್ನು ಕ್ಷಮಿಸುವೆ; ಏಕೆಂದರೆ ಕೊರೆಗಾವ ಭೀಮಾ ಪ್ರಕರಣ ದಲ್ಲಿ ತೀರ್ಪು ನೀಡುವಾಗ ನಿನ್ನ ಓರ್ವ ನ್ಯಾಯಾಧೀಶನು, ಖಂಡನೆ ಯೆಂದರೆ ಸಮಾಜದ ‘ಸೇಫ್ಟಿ ವಾಲ್’ (ಸಂರಕ್ಷಕ ಗೋಡೆ) ಆಗಿದೆ. ಅದನ್ನು ಮುಚ್ಚಿದರೆ ‘ಪ್ರೆಶರ್ ಕುಕ್ಕರ್’ ಒಡೆದಂತೆ ಸಮಾಜವು ಉದ್ರೇಕಗೊಳ್ಳುವುದು ಎಂದು ಬರೆದಿಟ್ಟನು. ಆದುದರಿಂದ ನೀನು ಇಂತಹ ಪ್ರತಿಕ್ರಿಯೆಯನ್ನು ವ್ಯಕ್ತ ಮಾಡುವವರನ್ನು ಕ್ಷಮಿಸುವೆ.

೫. ಕ್ರಾಂತಿ ಘಟಿಸುತ್ತಿದೆ, ಈಗ ಏನು ಮಾಡಬೇಕು ?

ಅವರು ಸರ್ವೋಚ್ಚ ನ್ಯಾಯಾಲಯದ ಅಪಮಾನಿಸದರೆಂದು ನೀನು ಶಿಕ್ಷೆ ವಿಧಿಸಲು ನಿಶ್ಚಯಿಸಿದರೆ, ನ್ಯಾಯಾಲಯದಲ್ಲಿ ಎಷ್ಟು ಜನರನ್ನು ಕರೆಯುವೆ ? ಎಂಬ ಪ್ರಶ್ನೆ ಇದ್ದೇ ಇದೆ; ಏಕೆಂದರೆ ಇದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಖಂಡನೆ ವ್ಯಕ್ತವಾಗಿದೆ. ಯಾರಾದ ರೊಬ್ಬರು ಕಾನೂನನ್ನು ಉಲ್ಲಂಘಿಸಿದರೆ ಅದು ಅಪರಾಧವಾಗು ತ್ತದೆ. ಲಕ್ಷಗಟ್ಟಲೆ ಜನರು ಅದನ್ನು ಉಲ್ಲಂಘಿಸಿದಾಗ ಅದಕ್ಕೆ ‘ಕ್ರಾಂತಿ’ ಎಂದು ಹೇಳಲಾಗುತ್ತದೆ. ಆದುದರಿಂದ ಈ ಬಗ್ಗೆ ಏನು ಮಾಡಬೇಕು ಎಂಬ ಪ್ರಶ್ನೆ ನಿನಗೂ ಬಂದಿರಬಹುದು. ಆದರೆ ಹೀಗೇಕಾಯಿತು ಎಂಬ ಬಗ್ಗೆ ವಿಚಾರವನ್ನೂ ಮಾಡಬೇಕು.

೬. ಸರ್ವೋಚ್ಚ ನ್ಯಾಯಾಲಯಕ್ಕೆ ಅಗೌರವವಾಗುವ ಭಯದಿಂದ ನಿವೇದಕಿಯು ಕಾರ್ಯಕ್ರಮವನ್ನು ೧೦ ನಿಮಿಷಗಳಲ್ಲಿ ಮುಗಿಸುವುದು

ನನಗೆ ೬-೭ ವರ್ಷಗಳ ಹಿಂದಿನ ಒಂದು ಪ್ರಸಂಗದ ನೆನಪಾಯಿತು. ‘ಉಜ್ಜೈನದ ಮಹಾಕಾಲ ದೇವಸ್ಥಾನದಲ್ಲಿನ ಶಿವಲಿಂಗದ ಮೇಲೆ ‘ಆರ್.ಓ. (ರಿವರ್ಸ್ ಆಸ್ಮೊಸಿಸ್ – ನೀರು ಶುದ್ಧ ಮಾಡುವ ಪ್ರಕ್ರಿಯೆ) ನೀರಿನಿಂದ ಅಭಿಷೇಕ ಮಾಡಬೇಕು’, ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತ್ತು. ಆ ವಿಷಯದಲ್ಲಿ ನನ್ನನ್ನು ಯಾವುದೋ ಒಂದು ದೂರಚಿತ್ರವಾಹಿನಿಯಲ್ಲಿ ಚರ್ಚೆಗಾಗಿ ಕರೆಯಲಾಗಿತ್ತು. ಆಗ ನಿವೇದಕಿಯು ಮೊದಲ ೨ ನಿಮಿಷ ಯಾರೂ ಸರ್ವೋಚ್ಚ ನ್ಯಾಯಾಲಯದ ಅವಮಾನವಾಗಬಾರದು ಎಂಬ ಬಗ್ಗೆ ಕಿವಿ ಮಾತು ಹೇಳಿದಳು. ಅನಂತರ ಪುರೋಹಿತರಿಗೆ ಅಭಿಪ್ರಾಯವನ್ನು ಮಂಡಿಸಲು ಹೇಳಿದಳು. ಸರ್ವೋಚ್ಚ ನ್ಯಾಯಾಲಯದ ಅವಮಾನ ಈ ವಿಷಯವಾಗಿರುವು ದರಿಂದ ಬಡಪಾಯಿ ಪರೋಹಿತರೂ ೨-೨ ಬಾರಿ ‘ಸರ್ವೋಚ್ಚ ನ್ಯಾಯಾಲಯಕ್ಕೆ ಗೌರವ, ಸರ್ವೋಚ್ಚ ನ್ಯಾಯಾಲಯಕ್ಕೆ ಗೌರವ ಎಂದು ಮಾತನಾಡಿ ನಿಲ್ಲಿಸಿದರು. ನಂತರ ಅವಳು ನನ್ನನ್ನು ಕಾನೂನುತಜ್ಞ ಎಂದು ನನ್ನ ಅಭಿಪ್ರಾಯಗಳನ್ನು ಕೇಳಿದಳು. ನಾನು ಅಯೋಧ್ಯಾ ಮಂದಿರ, ಯುನಿಫಾರ್ಮ್ ಸಿವಿಲ್ ಕೊಡ್ (ಸಮಾನ ನಾಗರಿಕ ಕಾಯಿದೆ) ಹೀಗೆ ಅನೇಕ ವಿಷಯಗಳು ಬಾಕಿ ಇರುವಾಗ ಸರ್ವೋಚ್ಚ ನ್ಯಾಯಾಲಯ ಈ ವಿಷಯಕ್ಕೆ ಏಕೆ ಸಮಯವನ್ನು ನೀಡುತ್ತದೆ ?, ಎಂಬುದೇ ನಿಜವಾದ ಪ್ರಶ್ನೆಯಾಗಿದೆ. ಎರಡನೆಯದು ಎಂದರೆ ಈ ಪ್ರಶ್ನೆ ಸರ್ವೋಚ್ಚ ನ್ಯಾಯಾಲಯವು ಸಮಯ ನೀಡುವಂತಹುದೇನಲ್ಲ; ಏಕೆಂದರೆ ಇದು ಧಾರ್ಮಿಕ ಶ್ರದ್ಧೆಯ ಭಾಗವಾಗಿರುವುದರಿಂದ ಆ ಬಗ್ಗೆ ಪುರೋಹಿತರು ನಿಶ್ಚಯಿಸಬೇಕು, ಎಂದು ಸ್ಪಷ್ಟವಾಗಿ ಹೇಳಿದೆನು. ನಿವೇದಕಿಯು ಅಪಮಾನದ ಭಯದಿಂದ ಎಷ್ಟು ಗಾಬರಿಗೊಂಡಿದ್ದಳೆಂದರೆ ಅವಳು ಆ ಕಾರ್ಯಕ್ರಮವನ್ನು ೧೦ ನಿಮಿಷಗಳಲ್ಲಿಯೇ ಮುಗಿಸಿದಳು, ಅಂದರೆ ನಮ್ಮಿಂದ ಸರ್ವೋಚ್ಚ ನ್ಯಾಯಾಲಯದ ಅಪಮಾನವಾಗಬಾರದೆಂದು ದೂರಚಿತ್ರವಾಹಿನಿಯ ಭಾವನೆಯಾಗಿತ್ತು.

೭. ಜನರ ಭಾವನೆಗೆ ನೋವಾದರೆ, ಅದಕ್ಕೆ ಯಾವುದೇ ಉಪಾಯವಿಲ್ಲ !

ನ್ಯಾಯಮೂರ್ತಿ ಸೂರ್ಯಕಾಂತ ಮತ್ತು ನ್ಯಾಯಮೂರ್ತಿ ಪಾರಡೀವಾಲಾ ಇವರ ಹೇಳಿಕೆಯಿಂದ ಸಮಾಜದ ಭಾವನೆಗಳಿಗೆ  ಧಕ್ಕೆ ತಂದಿರುವ ಹೇಳಿಕೆ ಮತ್ತು ಬರುತ್ತಿರುವ ಪ್ರತಿಕ್ರಿಯೆಗಳನ್ನು ನೀನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವಿ ಎಂದು ನಾನು ತಿಳಿದಿದ್ದೇನೆ. ಈ ಅಂಶವು ಇಲ್ಲಿಗೇ ನಿಲ್ಲುವುದು ಎಂದು ಹೇಳಲು ಬರುವುದಿಲ್ಲ. ನ್ಯಾಯ ಮೂರ್ತಿಗಳು ಈ ಹೇಳಿಕೆಗಳನ್ನು ಹಿಂಪಡೆಯಬೇಕೆಂದು ಯಾರೋ ಸರ್ವೋಚ್ಚ ನ್ಯಾಯಾಲಯಕ್ಕೆ ಪತ್ರವನ್ನು ಕಳುಹಿಸಿದ್ದಾ ರೆಂದು ಹೇಳಲಾಗಿದೆ. ಇದಕ್ಕೂ ಮೊದಲು ‘ನ್ಯಾಯಮೂರ್ತಿ ಸೂರ್ಯಕಾಂತರ ನ್ಯಾಯದಾನದ, ಹಾಗೆಯೇ ಅವರ ಮೇಲೆ ಏನಾದರೂ ಭ್ರಷ್ಟಾಚಾರದ ಆರೋಪಗಳಿವೆಯೇ ? ಎಂಬುದರ ವಿಚಾರಣೆ ಮಾಡದ ಹೊರತು ಅವರಿಗೆ ಬಡ್ತಿ ನೀಡಬಾರದು, ಎಂಬ ಪತ್ರವನ್ನು ನ್ಯಾಯಾಲಯದ ಆಗಿನ ನ್ಯಾಯಾಧೀಶ ಎ.ಕೆ. ಗೋಯಲ ಇವರು ನೀಡಿದ್ದರು. ನ್ಯಾಯಾಧೀಶ ಪಾರಡಿವಾಲಾ ಇವರ ತಂದೆ ಕಾಂಗ್ರೆಸ್‌ನ ಶಾಸಕರಾಗಿದ್ದನ್ನು ಈಗ ಅನುಕೂಲಕರವಾಗಿ ನೆನಪಿಸಿಕೊಳ್ಳುತ್ತಿದ್ದಾರೆ. ಜನರ ಭಾವನೆಗೆ ನೋವಾದರೆ ಅದಕ್ಕೆ ಯಾವುದೇ ಉಪಾಯವಿಲ್ಲ.

೮. ನ್ಯಾಯಾಂಗ ಪಕ್ಷಪಾತದಿಂದ ವರ್ತಿಸುತ್ತದೆಯೇ ?

‘ನೂಪುರ ಶರ್ಮಾರ ಬಗೆಗಿನ ದೂರುಗಳ ಒಂದೇ ಪೊಲೀಸ್ ಠಾಣೆಯಲ್ಲಿ ತನಿಖೆಯಾಗಬೇಕು, ಎಂಬ ಬೇಡಿಕೆಯು ಹೊಸದಾಗಿದೆ ಎಂದೇನಿಲ್ಲ. ಈ ಹಿಂದೆಯೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಮಕಬುಲ್ ಫಿದಾ ಹುಸೇನ್‌ನ ವಿರುದ್ಧ ದೂರುಗಳನ್ನು ಒಂದು ಕಡೆ ತರಲಾಗಿತ್ತು. ಇಷ್ಟೇ ಅಲ್ಲದೇ ದೆಹಲಿ ಉಚ್ಚ ನ್ಯಾಯಾಲಯವು ಅದನ್ನು ರದ್ದುಗೊಳಿಸಿತ್ತು. ಝಾಕೀರ ನಾಯಿಕನು ಗಣಪತಿಯ ಬಗ್ಗೆ ತಪ್ಪು ಉದ್ಗಾರವನ್ನು ತೆಗೆದು ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ್ದ. ಅವನ ವಿರುದ್ಧ ನೀಡಿದ ದೂರುಗಳನ್ನು ಒಂದೇ ಸ್ಥಳಕ್ಕೆ ತರಬೇಕು ಎಂಬ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದುದರಿಂದ ನೂಪುರ ಶರ್ಮಾ ಇವರು ಅವರ ಹೇಳಿಕೆಯ ಬಗ್ಗೆ ಬಹಿರಂಗ ಕ್ಷಮೆ ಕೇಳಬೇಕು ಇದು ಯಾವ ಕಾಯಿದೆಯಲ್ಲಿನ ಉಪಾಯವಾಗಿದೆ ಎಂಬ ನಿರ್ಣಯವನ್ನು ಜನರಿಗೆ ಹೇಳಬೇಕು. ಹಾಗಿಲ್ಲದಿದ್ದರೆ ಕೆಲವೊಮ್ಮೆ ‘ನ್ಯಾಯಾಂಗ ಪಕ್ಷಪಾತ ಮಾಡುತ್ತದೆ ಎಂದು ಜನರು ಭಾವಿಸಿದರೆ ಅವರ ವಿಚಾರವನ್ನು ಹೇಗೆ ದೂರ ಮಾಡುವಿರಿ ?

– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದು ವಿಧಿಜ್ಞ ಪರಿಷದ್ (೨.೭.೨೦೨೨)