ಹಿಂದುತ್ವನಿಷ್ಠ ಆಡಳಿತಾವಧಿಯಲ್ಲಿ ಹಿಂದೂಗಳ ಹಿತರಕ್ಷಣೆಗಾಗಿ ಹಿಂದೂಸಂಘಟನೆಗಳು ಮಾಡಬೇಕಾದ ಪ್ರಯತ್ನಗಳು !

ಶ್ರೀ.ರಮೇಶಶಿಂದೆ

೧. ಭೂಮಿಕೆ

ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರಹಿತದ ದೃಷ್ಟಿಯಿಂದ ಸಂಘರ್ಷವನ್ನು ಮಾಡುತ್ತಿರುತ್ತವೆ. ಅವುಗಳಲ್ಲಿನ ಹೆಚ್ಚಿನ ಸಂಘಟನೆಗಳಿಗೆ ಯಾವುದೇ ರೀತಿಯ ಧನಸಹಾಯ ಸಿಗುವುದಿಲ್ಲ. ಸರಕಾರದಿಂದ ಭದ್ರತೆ ಸಿಗುವುದಂತೂ ದೂರದ ಮಾತಾಯಿತು. ಈ ಸಂಘಟನೆಗಳ ಕಾರ್ಯಕರ್ತರು ಕಾನೂನಿನ ರಕ್ಷಣೆಗಾಗಿ ಹೋರಾಟ ಮಾಡಿದರೂ ಆಡಳಿತ ಮತ್ತು ಸರಕಾರದಿಂದ ಯಾವುದೇ ಸಹಾಯ ಸಿಗುವುದಿಲ್ಲ. ಅನೇಕ ಸಲ ಪೊಲೀಸರು ಅವರನ್ನೇ ಬಂಧಿಸುತ್ತಾರೆ. ಬಂಧಿಸಿದ ನಂತರ ಅವರಿಗೆ ನ್ಯಾಯವಾದಿಗಳು ಸಿಗುವುದಿಲ್ಲ ಅಥವಾ ಜಾಮೀನು ನೀಡುವವರೂ ಸಿಗುವುದಿಲ್ಲ ! ಅವರ ಮನೆ ಖರ್ಚಿನ ಬಗ್ಗೆಯಾಗಲಿ, ಅವರ ಮಕ್ಕಳ ಭವಿಷ್ಯದ ಕುರಿತಾಗಲಿ ಯಾರೂ ವಿಚಾರ ಮಾಡುವುದಿಲ್ಲ; ಆದರೆ ಈ ಸತ್ಯ ಸ್ಥಿತಿ ಇರುವಾಗಲೂ ಎಲ್ಲ ಕಷ್ಟವನ್ನು ಸಹಿಸಿಕೊಂಡು ಮತ್ತು ಸಂಕಟಗಳನ್ನು ಎದುರಿಸಿ ಹಿಂದುತ್ವನಿಷ್ಠರು ಹೋರಾಡುತ್ತಿರುತ್ತಾರೆ. ಅಧಿಕಾರದಲ್ಲಿರುವ ಸರಕಾರ ಹಿಂದೂ ಧರ್ಮದ ವಿರುದ್ದದ ವಿಚಾರಧಾರೆಯದ್ದಾಗಿದ್ದರೆ ಸಂಕಟಗಳು ನಿರಂತರವಾಗಿ ಹೆಚ್ಚಾಗು ತ್ತಲೇ ಇರುತ್ತವೆ. ಯಾವಾಗ ಹಿಂದುವಿರೋಧಿ ಸರಕಾರವು ಅಧಿಕಾರದಲ್ಲಿರುತ್ತದೆಯೋ, ಆಗ ಮುಸಲ್ಮಾನರು ಮತ್ತು ಕ್ರೈಸ್ತರು ಪುನಃ ಪುನಃ ಬೆಂಬತ್ತುವಿಕೆಯನ್ನು ಮಾಡಿ ತಮಗೆ ಅನುಕೂಲ ಹಾಗೂ ಸಹಾಯಕವಾದಂತಹ ಕಾನೂನುಗಳನ್ನು, ಹಾಗೆಯೇ ಧೋರಣೆಗಳನ್ನು ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ ೨೦೧೧ ರಲ್ಲಿ ಆಗಿನ ಕಾಂಗ್ರೆಸ್ ಸರಕಾರವು ಗಲಭೆಯಲ್ಲಿ ಹಿಂದೂಗಳನ್ನು ಅಪರಾಧಿಗಳೆಂದು ನಿರ್ಧರಿಸುವ ‘ಕೋಮು ಮತ್ತು ಉದ್ದೇಶಿತ ಹಿಂಸೆ ತಡೆ ಕಾಯಿದೆಯನ್ನು (ಗಲಭೆ ನಿಯಂತ್ರಣ ಕಾಯಿದೆ) ತರುವ ಷಡ್ಯಂತ್ರವನ್ನು ರಚಿಸಿತ್ತು. ಅದೇ ರೀತಿ ಮುಸಲ್ಮಾನರಂತಹ ಅಲ್ಪಸಂಖ್ಯಾತರಿಗೆ ಸಚ್ಚರ ಆಯೋಗದಂತೆ ರಿಯಾಯತಿಗಳು, ವಕ್ಫ ಬೋರ್ಡಕ್ಕಾಗಿ ನ್ಯಾಯಾಂಗ ಅಧಿಕಾರ ಇವುಗಳ ದೃಷ್ಟಿಯಿಂದ ಕಾನೂನು ವ್ಯವಸ್ಥೆಯನ್ನು ಮಾಡಲಾಗಿತ್ತು. ಇದರ ಸಂದರ್ಭದಲ್ಲಿ ಹಿಂದೂವಿರೋಧಕರ ಒಂದು ‘ಇಕೊಸಿಸ್ಟಮ್, ಅಂದರೆ ಪರಸ್ಪರ ಕಾರ್ಯವ್ಯವಸ್ಥೆಯನ್ನು ನಿರ್ಧರಿಸಲಾಗಿರುತ್ತದೆ. ಈ ‘ಇಕೊಸಿಸ್ಟಮ್ ನಮಗೆ ಪ್ರತ್ಯಕ್ಷ ಕಾಣಿಸುವುದಿಲ್ಲ; ಆದರೆ ಹಿಂದುತ್ವವನ್ನು ವಿರೋಧಿಸುವ ಪ್ರತಿಯೊಂದು ಘಟಕ ಅದರಲ್ಲಿ ಭಾಗವಹಿಸುತ್ತದೆ. ಈ ‘ಇಕೋಸಿಸ್ಟಮ್ ಹೇಗೆ ಕಾರ್ಯವನ್ನು ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಒಂದು ಉದಾಹರಣೆಯನ್ನು ನೋಡೊಣ

೨. ಹಿಂದೂವಿರೋಧಿ ‘ಇಕೋಸಿಸ್ಟಮ್ನ ಕಾರ್ಯಪದ್ದತಿ !

ವಿದೇಶಗಳಿಂದ ಕಾನೂನುಬಾಹಿರವಾಗಿ ಬಂದಿರುವ ರೊಹಿಂಗ್ಯಾ ಮುಸಲ್ಮಾನರ ವಿರುದ್ಧ ಹಿಂದುತ್ವನಿಷ್ಠ ಸಂಘಟನೆಗಳು ಧ್ವನಿ ಎತ್ತಿ ಅವರನ್ನು ದೇಶದಿಂದ ಹೊರಗೆ ಹಾಕಲು ಆಂದೋಲನಗಳನ್ನು ಆರಂಭಿಸಿದರು. ಸರಕಾರದ ಮೇಲೆ ಒತ್ತಡ ಬಂದು ಅವರನ್ನು ಭಾರತದಿಂದ ಹೊರಗೆ ಹಾಕಬೇಕಾದ ನಿರ್ಧಾರವನ್ನು ತೆಗೆದು ಕೊಳ್ಳಬೇಕು ಎಂಬ ಸ್ಥಿತಿ ನಿರ್ಮಾಣವಾಯಿತು. ಆದ್ದರಿಂದ ಇದರ ಸಂದರ್ಭದಲ್ಲಿ ಕೂಡಲೇ ಈ ‘ಇಕೋಸಿಸ್ಟಮ್ ಆರಂಭವಾಯಿತು. ಅದರಲ್ಲಿ ಮೊದಲನೇ ಹಂತದಲ್ಲಿ ‘ಕಮ್ಯುನಿಸ್ಟ (ಸಾಮ್ಯವಾದಿ) ಮತ್ತು ‘ಸೆಕ್ಯುಲರ (ಜಾತ್ಯತೀತ) ಪತ್ರಕರ್ತರಿಂದ ‘ರೊಹಿಂಗ್ಯಾ ಮುಸಲ್ಮಾನರು ಹೇಗೆ ತೊಂದರೆಯಲ್ಲಿದ್ದಾರೆ, ಅದೇ ರೀತಿ ‘ಅವರಿಗೆ ಮಾನವ ಹಕ್ಕು ರಕ್ಷಣೆ ಹೇಗೆ ಆವಶ್ಯಕವಾಗಿದೆ, ಈ ಕುರಿತು ಪ್ರಮುಖ ವಾರ್ತಾಪತ್ರಿಕೆಗಳಲ್ಲಿ ವಾರ್ತೆಗಳು ಹಾಗೂ ಲೇಖನಗಳು ಪ್ರಕಟವಾಗತೊಡಗಿದವು. ಅದೇ ರೀತಿ ರೊಹಿಂಗ್ಯಾ ಮುಸಲ್ಮಾನರ ಬಡತನ ತೋರಿಸುವ ಅವರ ಚಿಕ್ಕ ಮಕ್ಕಳ ಅಪೌಷ್ಠಿಕತೆ ಕಾಣಿಸುವ ಚಿತ್ರಗಳನ್ನು ಪ್ರಕಟಿಸಿ ಜನರ ಮನಸ್ಸಿನಲ್ಲಿ ಅವರ ಬಗ್ಗೆ ಕನಿಕರ ಮೂಡುವಂತೆ ಪ್ರಯತ್ನಿಸಲಾಯಿತು. ತದನಂತರ ಈ ವಾರ್ತೆಗಳ ಆಧಾರದಲ್ಲಿ ಟ್ವಿಟರ್, ಫೇಸ್‌ಬುಕ್, ವಾಟ್ಸ್‌ಅಪ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ ಆರಂಭವಾಯಿತು. ‘ಟ್ವಿಟರ್ ಟ್ರೆಂಡ್ ಆರಂಭವಾಯಿತು. ಈ ಮೂಲಕ ಅವರು ಈ ವಿಷಯವನ್ನು ರಾಷ್ಟ್ರಮಟ್ಟದ ‘ಒಂದು ದೊಡ್ಡ ಸಮಸ್ಯೆ ಎಂದು ಬಿಂಬಿಸುವಲ್ಲಿ ಯಶಸ್ವಿಯಾದರು. ನಂತರ ಮುಸಲ್ಮಾನ ಸಂಘಟನೆಗಳು ರಸ್ತೆಗಿಳಿದು ‘ರೊಹಿಂಗ್ಯಾ ಮುಸಲ್ಮಾನರಿಗೆ ನ್ಯಾಯ ಸಿಗಬೇಕು ಮತ್ತು ಅವರಿಗೆ ಭಾರತದಲ್ಲಿ ಆಶ್ರಯ ಸಿಗಬೇಕು, ಎಂದು ಆಂದೋಲನಗಳನ್ನು ಮಾಡಿದರು. ಅದರಲ್ಲಿ ಓವೈಸಿಯಂತಹ ನಾಯಕರು ‘ನಾವು ಅವರ ಎಲ್ಲ ವ್ಯವಸ್ಥೆಯನ್ನು ಮಾಡಿ ಅವರಿಗೆ ಭಾಗ್ಯನಗರ (ಹೈದರಾಬಾದ)ದಲ್ಲಿ ಆಶ್ರಯ ನೀಡಲಿದ್ದೇವೆ, ಎಂದು ಘೋಷಣೆಯನ್ನು ಮಾಡಿದರು. ಇತರ ‘ಸೆಕ್ಯುಲರವಾದಿ ಪಕ್ಷಗಳು ಅವರಿಗೆ ಆಶ್ರಯ ನೀಡಬೇಕೆಂಬ ಹೇಳಿಕೆಗಳನ್ನು ಮಂಡಿಸಲು ಪ್ರಾರಂಭಿಸಿದವು. ನಂತರ ಈ ಹೇಳಿಕೆಯ ಆಧಾರದಲ್ಲಿ ದೂರಚಿತ್ರವಾಹಿನಿಗಳಲ್ಲಿ ಚರ್ಚೆ ಮತ್ತು ವಾದವಿವಾದಗಳು ಆರಂಭವಾದವು. ಇದರಿಂದ ಈ ವಿಷಯವು ಇನ್ನಷ್ಟು ದೊಡ್ಡದಾಯಿತು. ಕೊನೆಗೆ ರೊಹಿಂಗ್ಯಾ ಮುಸಲ್ಮಾನರ ಮಾನವಾಧಿಕಾರದ ರಕ್ಷಣೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು.

ಕಾಶ್ಮೀರದ ನಿರಾಶ್ರಿತರಾದ ಹಿಂದೂಗಳಿಗೆ ೩೨ ವರ್ಷಗಳಾದರೂ ಇನ್ನೂ ನ್ಯಾಯಸಿಕ್ಕಿಲ್ಲ, ಅದೇ ರೀತಿ ಪಾಕಿಸ್ತಾನದಿಂದ ಬಂದಿದ್ದ ಸಂತ್ರಸ್ತ ಹಿಂದೂಗಳು ಮರಳಿ ಪಾಕಿಸ್ಥಾನಕ್ಕೆ ಹೋಗಬೇಕಾಯಿತು; ಆದರೆ  ವಿದೇಶದಿಂದ ಅಕ್ರಮವಾಗಿ ಬಂದಿದ್ದ ರೊಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಅವರಿಗೆ ಆಶ್ರಯ ನೀಡುವ ಯಾವುದೇ ಕಾನೂನು ಇಲ್ಲದಿರುವಾಗಲೂ ಭಾರತದಲ್ಲಿ ಇರಲು ಒಂದು ರೀತಿಯ ಪರವಾನಗಿಯೇ ಸಿಕ್ಕಿದೆ. ಅದೇ ರೀತಿ ಭಾರತದಲ್ಲಿ ಈ ನಿರಾಶ್ರಿತರ ಪೈಕಿ ಅನೇಕರ ಬಳಿ ಆಧಾರಕಾರ್ಡ ಮತ್ತು ಪಡಿತರ ಚೀಟಿಗಳೂ ಇರುವುದು ಕಂಡುಬಂದಿದೆ. ‘ಸೆಕ್ಯುಲರ ಪತ್ರಕರ್ತರು, ವಿಚಾರವಂತರು, ರಾಜಕೀಯ ನಾಯಕರು, ಮುಸಲ್ಮಾನ ಸಂಘಟನೆಗಳು, ನ್ಯಾಯವಾದಿಗಳು ಹೀಗೆ ಎಲ್ಲರೂ ತಮ್ಮ ತಮ್ಮ ಸಹಭಾಗವನ್ನು ನೀಡಿ ಸರಕಾರದ ನಿರ್ಧಾರದ ವಿರುದ್ಧ ತಮ್ಮ ನಿಲುವನ್ನು ಯಶಸ್ವಿಯನ್ನಾಗಿ ಮಾಡಿ ತೋರಿಸಿದರು. ಇದಾಗಿದೆ ಅವರ ‘ಇಕೋಸಿಸ್ಟಮ್ನ ಪ್ರಭಾವ !

ದುರದೃಷ್ಟದಿಂದ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂ ಸಂಘಟನೆಗಳಿಗೆ ಈ ರೀತಿಯ ‘ಇಕೋಸಿಸ್ಟ್ಟಿಮ್ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಈ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದಲ್ಲಿನ ಆಯೋಜನೆಗಳನ್ನು ಮಾಡಬೇಕು.

೩. ಅನಧಿಕೃತ ಕಟ್ಟಡಗಳಿಗೆ ರಕ್ಷಣೆ ನೀಡಿ ಹಾಗೂ ಸರಕಾರಿ ಭೂಮಿಯನ್ನು ನೀಡಿ ಸಹಾಯ ಮಾಡುವುದು

ಇದರಲ್ಲಿ ಮತ್ತೊಂದು ಮಹತ್ವದ ವಿಷಯವೆಂದರೆ, ಹಿಂದೂ ವಿರೋಧಿ ಸರಕಾರ, ಸರಕಾರಿ ಭೂಮಿಗಳನ್ನು ಕಬಳಿಸಿ ಅಲ್ಲಿ ನಿರ್ಮಿಸಲಾಗುವ ಅನಧಿಕೃತ ಚರ್ಚ್ ಮತ್ತು ದರ್ಗಾ-ಮಜಾರ ಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿ ಸಹಾಯ ಮಾಡುತ್ತದೆ. ಮಹಾರಾಷ್ಟ್ರದಲ್ಲಿನ ಅಫಜಲಖಾನ್‌ನ ಅನಧಿಕೃತ ದರ್ಗಾ ಮತ್ತು ಕೋಟೆಯ ಮೇಲಿನ ಮಜಾರ ಇವು ಅದರ ಉದಾಹರಣೆಗಳಾಗಿವೆ, ಅದೇ ರೀತಿ ಮಧ್ಯದ ಕಾಲದಲ್ಲಿ ಛತ್ತಿಸಗಡದ ಕಾಂಗ್ರೆಸ್ ಸರಕಾರವು ಪಾಕಿಸ್ತಾನದ ‘ದಾವತ-ಎ-ಇಸ್ಲಾಮಿ ಈ ಕಟ್ಟರಪಂಥಿ ಸಂಸ್ಥೆಗೆ ಮದರಸಾಕ್ಕಾಗಿ ೨೫ ಎಕರೆ ಭೂಮಿಯನ್ನು ನೀಡಿತ್ತು. ಈ ರೀತಿಯಲ್ಲಿ ಸರಕಾರಿ ಭೂಮಿಯನ್ನು ಮದರಸಾಗಳಿಗೆ ಹಾಗೂ ಚರ್ಚ್‌ಗಳಿಗೆ ವಿತರಿಸಲಾಗುತ್ತದೆ ಅಥವಾ ಕಾಯ್ದಿರಿಸಲಾಗುತ್ತದೆ.

೪. ಹಿಂದೂ ಸಂಘಟನೆಗಳು ಯಾವ ಭೂಮಿಕೆಯನ್ನು ಸ್ವೀಕರಿಸಬೇಕು ?

ಈ ಉದಾಹರಣೆಗಳಿಂದ, ಮುಸಲ್ಮಾನ ಮತ್ತು ಕ್ರೈಸ್ತರು ಅಲ್ಪಸಂಖ್ಯಾತರಾಗಿದ್ದರೂ ಅವರಿಗೆ ಅನುಕೂಲ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರು ಪುನಃ ಪುನಃ ವಿಧಾನಸೌಧಕ್ಕೆ ಹೋಗಿ ಮಂತ್ರಿಗಳನ್ನು ಭೇಟಿಯಾಗಿ ತಮ್ಮ ಬೇಡಿಕೆಗಳನ್ನು ಪುನಃ ಪುನಃ ಮಂಡಿಸುತ್ತಾರೆ. ಈ ರೀತಿ ಸರಕಾರದ ಮೇಲೆ ಒತ್ತಡವನ್ನು ಹೇರಿ ತಮ್ಮ ಹಿತದ ಕಾನೂನುಗಳನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಇತರ ವಿಷಯ ಗಳಲ್ಲಿ ರಿಯಾಯತಿಗಳನ್ನೂ ಪಡೆಯುತ್ತಾರೆ. ಇದರ ತುಲನೆಯಲ್ಲಿ ಹಿಂದುತ್ವನಿಷ್ಠರ ಆಡಳಿತ ಅಧಿಕಾರಕ್ಕೆ ಬಂದಾಗ ಅವರ ಮೇಲೆ ಒತ್ತಡವನ್ನು ಹಾಕಿ ಹಿಂದೂಹಿತದ ಕಾನೂನುಗಳನ್ನು ಮಾಡಿಸಿ ಕೊಳ್ಳಲು ಅಥವಾ ಹಿಂದೂಗಳ ಮೇಲಿನ ಅನ್ಯಾಯಗಳನ್ನು ದೂರಗೊಳಿಸಲು ಹಿಂದುತ್ವನಿಷ್ಠ ಸಂಘಟನೆಗಳು ಈ ರೀತಿ ಯಲ್ಲಿ ಪ್ರಯತ್ನಿಸುವುದು ಕಂಡುಬರುವುದಿಲ್ಲ. ಹಿಂದುತ್ವನಿಷ್ಠ ಆಡಳಿತಾವಧಿಯಲ್ಲಿಯೂ ಅವರು ನ್ಯಾಯವನ್ನು ಪಡೆಯಲು ರಸ್ತೆಗಿಳಿದು ಆಂದೋಲನಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅನುಕೂಲ ಆಡಳಿತ ಅಧಿಕಾರಕ್ಕೆ ಬಂದರೂ ಹಿಂದುತ್ವನಿಷ್ಠರಿಗೆ ಕಾನೂನಿನ ದೃಷ್ಟಿಯಲ್ಲಿ ಹೆಚ್ಚೇನು ಲಾಭವಾಗುವುದಿಲ್ಲ. ಈ ದೃಷ್ಟಿಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ತಮ್ಮ ಭೂಮಿಕೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಇದರ ಕೆಲವು ಉದಾಹರಣೆಗಳನ್ನು ನಿಮ್ಮ ಮುಂದೆ ಮಂಡಿಸುತ್ತಿದ್ದೇನೆ.

೪ ಅ. ಹಿಂದೂಹಿತದ ಕಾನೂನುಗಳನ್ನು ಇನ್ನೂ ಕಠೋರಗೊಳಿಸಲು ಪ್ರಯತ್ನಿಸುವುದು : ಇಂದು ಹಿಂದುತ್ವನಿಷ್ಠ ಸಂಘಟನೆಗಳು ‘ಲವ್ ಜಿಹಾದ್, ಗೋರಕ್ಷಣೆ ಮತ್ತು ಅವುಗಳಿಗೆ ಸಂಬಂಧಿಸಿದ ಘಟನೆಗಳಲ್ಲಿ ತಮ್ಮ ಸ್ವಬಲದ ಮೇಲೆ ಪ್ರಯತ್ನಿಸುತ್ತಿರುವುದು ಕಂಡು ಬರುತ್ತದೆ. ಯಾವ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಇದೆಯೋ, ಅಲ್ಲಿಯೂ ಪೊಲೀಸರು ಲಂಚ ಪಡೆದು ಗೋಮಾಂಸದ ವ್ಯಾಪಾರ ಮಾಡುವವರಿಗೆ ಸಹಾಯ ಮಾಡುವುದು ಕಂಡುಬರುತ್ತದೆ. ಇಂತಹ ಸ್ಥಳಗಳಲ್ಲಿ ಹಿಂದುತ್ವನಿಷ್ಠ ಸಂಘಟನೆಗಳು ಆಢಳಿತಾಧಿಕಾರಿಗಳನ್ನು ಭೇಟಿಯಾಗಿ ಗೋಹತ್ಯೆ ನಿಷೇಧ ಕಾನೂನಿನಲ್ಲಿ ಇನ್ನಷ್ಟು ಕಠೋರ ಕಲಂಗಳನ್ನು ಸೇರಿಸಲು ಪ್ರಯತ್ನಿಸಬೇಕು. ‘ಲವ್ ಜಿಹಾದ್ ತಡೆಗಟ್ಟಲು ಮತಾಂತರ ನಿಷೇಧ ಕಾನೂನಿನಲ್ಲಿ ಆವಶ್ಯಕತೆಗನುಸಾರ ಸುಧಾರಣೆಗಳನ್ನು ಮಾಡುವುದೂ ಆವಶ್ಯಕವಾಗಿದೆ.

೪ ಆ. ಹಿಂದೂಗಳ ಮೇಲಿನ ಸುಳ್ಳು ಅಪರಾಧಗಳನ್ನು ತೆಗೆದು ಹಾಕಲು ಪ್ರಯತ್ನಿಸಬೇಕು : ಅನೇಕ ಸ್ಥಳಗಳಲ್ಲಿ ಪ್ರಾಮಾಣಿಕ ಹಿಂದುತ್ವನಿಷ್ಠರ ಮೇಲೆ ಸುಳ್ಳು ಅಪರಾಧಗಳನ್ನು ಹಾಕಿರುತ್ತಾರೆ. ಅವರನ್ನು ಅಪರಾಧಿ ಗಳೆಂದು ನಿರ್ಧರಿಸಿ ಅವರನ್ನು ಗಡಿಪಾರು ಮಾಡುವ ಪ್ರಯತ್ನವನ್ನೂ ವಿರೋಧಿ ಸರಕಾರದ ಕಾಲದಲ್ಲಿ ಮಾಡಲಾಗುತ್ತದೆ. ಇಂತಹ ಸಮಯ ದಲ್ಲಿ ಹಿಂದುತ್ವನಿಷ್ಠ ಸರಕಾರ ಅಧಿಕಾರದಲ್ಲಿರುವಾಗ ಈ ಕುರಿತು ಸತ್ಯ ಮಾಹಿತಿಯನ್ನು ನೀಡಿ ಕಾರ್ಯಕರ್ತರ ಮೇಲಿನ ಅಯೋಗ್ಯ ಕ್ರಮಗಳನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಇದರಂತೆ ಪ್ರಯತ್ನಿಸಿದರೆ ಹಿಂದೂಗಳ ಬಗ್ಗೆ ಜನಪ್ರತಿನಿಧಿಗಳ ಮೇಲೆ ಒಂದು ರೀತಿಯ ವರ್ಚಸ್ಸು ನಿರ್ಮಾಣವಾಗುತ್ತದೆ, ಹಾಗೆಯೇ ಅವರಿಗೆ ಹಿಂದುತ್ವನಿಷ್ಠ ಸರಕಾರವನ್ನು ಹಿಂದೂಗಳು ಆರಿಸಿರುವುದರ ಅರವಾಗಿ ಹಿಂದೂ ಮತದಾರರಿಗಾಗಿ ಕಾರ್ಯ ಮಾಡಬೇಕಾಗುತ್ತದೆ. ಜೊತೆಗೆ ಸರಕಾರಕ್ಕೂ ತಮ್ಮ ಜವಾಬ್ದಾರಿ ಗಮನಕ್ಕೆ ಬಂದು ಅದಕ್ಕೂ ಹಿಂದೂಗಳ ಹಿತದ ರಕ್ಷಣೆಗಾಗಿ ಕಾರ್ಯ ಮಾಡಬೇಕಾಗುತ್ತದೆ. ಇದಕ್ಕಾಗಿ ಹಿಂದೂ ಸಂಘಟನೆಗಳು ನಿರಂತವಾಗಿ ಪ್ರಯತ್ನಿಸಬೇಕು. ಓರ್ವ ಜನಪ್ರತಿನಿಧಿಯ ನಿರಾಶಾದಾಯಕ ಪ್ರತಿಕ್ರಿಯೆಯಿಂದ ನಿರಾಶರಾಗದೇ, ಅವರನ್ನು ಬಿಟ್ಟು ಬೇರೆಯವರ ಮಾಧ್ಯಮದಿಂದ ಪ್ರಯತ್ನಗಳನ್ನು ಮಾಡ ಬೇಕು. ಈ ಪ್ರಯತ್ನ ಯಶಸ್ವಿಯಾದರೆ ಪ್ರತಿಯೊಂದು ಬೇಡಿಕೆಗಾಗಿ ರಸ್ತೆಗಿಳಿದು ಆಂದೋಲನ ಮಾಡುವ ಸಮಯ ಮತ್ತು ಹೋರಾಟ ದಲ್ಲಿನ ಶ್ರಮ ಇವೆರಡೂ ಉಳಿಯುತ್ತವೆ. ಅದನ್ನು ಹಿಂದೂಹಿತದ ಬೇರೆ ಉಪಕ್ರಮಗಳಿಗೆ ಉಪಯೋಗಿಸಬಹುದು.

– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ