ಭತ್ತ ಮತ್ತು ರಾಗಿ ಕೃಷಿಯ ಮುಖ್ಯ ವೈಶಿಷ್ಟ್ಯಗಳು !

ಡಾ. ನಿವೃತ್ತಿರಾಮಚಂದ್ರ ಚವ್ಹಾಣ

ಮುಂಗಾರು ಮಳೆ ಪ್ರಾರಂಭವಾಗಿದೆ. ಈ ಅವಧಿಯಲ್ಲಿ ಭತ್ತ ಮತ್ತು ರಾಗಿಯ ಕೃಷಿಯನ್ನು ಮಾಡಲಾಗುತ್ತದೆ. ಈ ಕೃಷಿಯನ್ನು ಯಾವ ರೀತಿ ಮಾಡಬೇಕು ? ಬೀಜಗಳ  ಆಯ್ಕೆ ಮತ್ತು ಬೀಜ ಪ್ರಕ್ರಿಯೆ, ಗೊಬ್ಬರ ಉಪಯೋಗಿಸುವುದು ಅಲ್ಲದೇ ನಾಲ್ಕು ಅಂಶಗಳ  ಭತ್ತದ ಕೃಷಿಯ ಮುಖ್ಯ ವೈಶಿಷ್ಟ್ಯಗಳು ಇತ್ಯಾದಿಗಳ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ.

೧. ಭತ್ತ

೧ ಅ. ಭೂಮಿ ಮತ್ತು ಹವಾಮಾನ : ಸಮುದ್ರದ ಮಟ್ಟದಿಂದ ೩ ರಿಂದ ೫ ಸಾವಿರ ಅಡಿಯಷ್ಟು ಎತ್ತರದ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ. ಉಷ್ಣ ಮತ್ತು ಆರ್ದ್ರ ಹವಾಮಾನ ಇವುಗಳು ಬೆಳೆಗೆ ಪೂರಕವಾಗಿರುತ್ತವೆ. ಸಾಧಾರಣವಾಗಿ ಭೂಮಿಯ ಪಿ.ಎಚ್. (ದ್ರವದ ಆಮ್ಲಿಯತೆಯನ್ನು ಅಳೆಯುವ ಮಾಪಕ) ೫ ರಿಂದ ೮ ಈ ನಡುವೆ ಇರಬೇಕು. ೮೦೦ ಮಿಲಿ ಮೀಟರಗಿಂತ ಅಧಿಕ ಮಳೆ ಬೀಳುವ ಪ್ರದೇಶ ಮತ್ತು ೨೫ ರಿಂದ ೩೫ ಡಿಗ್ರಿ ಸೆಂಟಿಗ್ರೇಡ ಉಷ್ಣತೆ ಹಾಗೂ ಶೇ. ೬೫ ರಿಂದ ೭೦ ಕ್ಕಿಂತ ಅಧಿಕ ಆರ್ದ್ರತೆಯು ಪೂರಕವಾಗಿರುತ್ತದೆ. ಹಗುರ ಮತ್ತು ಮಧ್ಯಮ ಭೂಮಿಯಲ್ಲಿ ಅದೇ ರೀತಿ ಕ್ಷಾರಯುಕ್ತ ಭೂಮಿಯಲ್ಲಿಯೂ ಈ ಬೆಳೆಯನ್ನು ಬೆಳೆಯಲಾಗುತ್ತದೆ.

೧ ಆ. ಭೂಮಿ ಹದಗೊಳಿಸುವಿಕೆ : ಭತ್ತದ ಬೆಳೆ ಸರಿಯಾಗಿ ಬೆಳೆಯುವುದಕ್ಕಾಗಿ ಗದ್ದೆಯಲ್ಲಿ ಗೊಬ್ಬರ ಮತ್ತು ಕೆಸರು ನೀರು ಮಾಡುವುದು ಅತ್ಯಂತ ಮಹತ್ವದ್ದಾಗಿರುತ್ತದೆ. ಭೂಮಿ ಹದ ಮಾಡುವುದು ಮತ್ತು ಕೆಸರಿನಿಂದ ಭೂಮಿಯ ವಿವಿಧ ಹಂತಗಳಲ್ಲಿ ಮಿಶ್ರಣಗೊಳ್ಳುತ್ತದೆ ಮತ್ತು ಹುಲ್ಲುಕಡ್ಡಿ, ಕೀಟ ಮತ್ತು ರೋಗಗಳ ನಿಯಂತ್ರಣವಾಗುತ್ತದೆ. ಭೂಮಿಯನ್ನು ನೇರವಾಗಿ, ಅಡ್ಡಲಾಗಿ ನೇಗಿಲು ಹೂಡಿ ಚೆನ್ನಾಗಿ ಕೊಳೆತ ಸೆಗಣಿಗೊಬ್ಬರ ಅಥವಾ ಕಂಪೋಸ್ಟ ಗೊಬ್ಬರವನ್ನು ಹೆಕ್ಟೇರಿಗೆ ೧೦ ಟನ್ ಈ ಪ್ರಮಾಣದಲ್ಲಿ ಭೂಮಿಯಲ್ಲಿ ಮಿಶ್ರಣ ಮಾಡಬೇಕು.

೧ ಇ. ಬಿತ್ತುವ ಪದ್ಧತಿ : ಭೂಮಿ, ಮಳೆ ಮತ್ತು ನೀರಿನ ಲಭ್ಯತೆಯಂತೆ ವಿವಿಧ ಪದ್ಧತಿಗಳಲ್ಲಿ ಭತ್ತದ ಕೃಷಿ ಮಾಡಲಾಗುತ್ತದೆ.

೧ ಇ ೧. ನಾಟಿ ಪದ್ಧತಿ : ಯಾವ ಸ್ಥಳದಲ್ಲಿ ೧೦೦೦ ಮಿಲಿಮೀಟರ ಕ್ಕಿಂತ ಅಧಿಕ ಮಳೆ ಬೀಳುತ್ತದೆಯೋ, ಇಂತಹ ಸ್ಥಳದಲ್ಲಿ ಈ ಪದ್ಧತಿಯನ್ನು ಉಪಯೋಗಿಸಲಾಗುತ್ತದೆ.

೧ ಇ ೨. ಬಿತ್ತನೆ ಪದ್ಧತಿ : ಮಧ್ಯಮದಿಂದ ಬೃಹತ್ ಪ್ರಮಾಣದ ಭೂಮಿ ಕಂಡು ಬರುವ ಪ್ರದೇಶದಲ್ಲಿ ಬೀಜ ಬಿತ್ತುವ ಕೂರಿಯ ಸಹಾಯದಿಂದ ಅಥವಾ ಬಿತ್ತನೆಯ ಯಂತ್ರದ ಸಹಾಯದಿಂದ ಬಿತ್ತಲಾಗುತ್ತದೆ.

೧ ಇ ೩. ಟೋಕನ ಪದ್ಧತಿ : ೧೦೦೦ ಮಿಲಿಮೀಟರಗಿಂತ ಕಡಿಮೆ ಮಳೆ ಬೀಳುವ ಪ್ರದೇಶ ಮತ್ತು ಮಧ್ಯಮ ಮಳೆ ಭೂಮಿಯಿರುವ ಪ್ರದೇಶದಲ್ಲಿ ಟೋಕನ ಪದ್ಧತಿಯಿಂದ ಬಿತ್ತಲಾಗುತ್ತದೆ.

೧ ಈ. ಬೀಜಗಳ ಆಯ್ಕೆ ಮತ್ತು ಬೀಜ ಪ್ರಕ್ರಿಯೆ : ಕೃಷಿ ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿರುವ ಜಾತಿಯ ಬೀಜಗಳನ್ನು ಸರಕಾರದ ಅಧಿಕೃತ ಸಂಸ್ಥೆಯಿಂದ, ಕೃಷಿ ವಿಶ್ವವಿದ್ಯಾಲಯದ ಮಾರಾಟ ಕೇಂದ್ರದಿಂದ ಅಥವಾ ನಂಬಿಕೆಯುಳ್ಳ ಮಾರಾಟಗಾರರಿಂದ ಖರೀದಿಸಬೇಕು. ನಾಟಿ ಪದ್ಧತಿಗಾಗಿ ೩೫ ರಿಂದ ೪೦ ಕಿಲೋ ಬೀಜಗಳನ್ನು ಪ್ರತಿ ಹೆಕ್ಟೇರ, ಬಿತ್ತುವ ಪದ್ಧತಿಗಾಗಿ ೮೦ ರಿಂದ ೧೦೦ ಕಿಲೋ ಮತ್ತು ಟೋಕನ ಪದ್ಧತಿಗಾಗಿ ೫೦ ರಿಂದ ೬೦ ಕಿಲೋ ಬೀಜಗಳನ್ನು ಉಪಯೋಗಿಸಬೇಕು. ಸಮ್ಮಿಶ್ರ ಜಾತಿಗಾಗಿ ಹೆಕ್ಟೇರಿಗೆ ೨೦ ಕಿಲೋ ಬೀಜಗಳನ್ನು ಉಪಯೋಗಿಸಬೇಕು. ಬಿತ್ತುವ ಮೊದಲು ಬೀಜಗಳನ್ನು ಶೇ. ೩೦ ರಷ್ಟು ಉಪ್ಪಿನ ದ್ರಾವಣದಲ್ಲಿ (೩೦೦ ಗ್ರಾಮ ಪ್ರತಿ ಲೀಟರ್ ನೀರು) ಮುಳುಗಿಸಿ ಮೇಲೆ ತೇಲುವ ಹಗುರ ಮತ್ತು ರೋಗಗ್ರಸ್ತ ಬೀಜಗಳನ್ನು ತೆಗೆದು ಹಾಕಬೇಕು ಮತ್ತು ಬೀಜಗಳನ್ನು ನೆರಳಿನಲ್ಲಿ ಒಣಗಿಸಬೇಕು. ಬಿತ್ತುವಿಕೆಯ ಮೊದಲು ಪ್ರತಿಗ್ರಾಮ್ ಬೀಜಗಳಿಗೆ ೨.೫ ಗ್ರಾಮ ‘ಥೈರಮ್’ ತಿಕ್ಕಬೇಕು.

ನೀಲಿ-ಹಸಿರು ಪಾಚಿಯನ್ನು (೨೦ ಕಿಲೋ ಪ್ರತಿ ಹೆಕ್ಟೇರ್) ಭತ್ತದ ನಾಟಿಯ ಬಳಿಕ ೮ ರಿಂದ ೧೦ ದಿನಗಳ ನಂತರ ಗದ್ದೆಯಲ್ಲಿ ಹಾಕಬೇಕು. ಹಾಗೆಯೇ ‘ಅಜೋಲಾ’ (೪ ರಿಂದ ೫ ಕ್ವಿಂಟಲ್ ಪ್ರತಿ ಹೆಕ್ಟೇರ) ನಾಟಿಯ ಬಳಿಕ ಗದ್ದೆಯಲ್ಲಿ ಹಾಕಬೇಕು.

೧ ಉ. ಸಸಿ ನೆಡುವಿಕೆ : ಸಸಿಗಳ ಮರುನಾಟಿಯ ಮೊದಲು ಸಾಂಪ್ರದಾಯಿಕ ಪದ್ಧತಿಯಿಂದ ಅಥವಾ ಯಂತ್ರದ ಸಹಾಯದಿಂದ ಕೆಸರು ಮಾಡಬೇಕು. (ಬೇಗ ಪಕ್ವವಾಗುವ) ಅಲ್ಪಾವಧಿ ತಳಿಯ ಸಸಿಗಳ ಬಿತ್ತನೆ ಮಾಡಿದ ೨೧ ರಿಂದ ೨೫ ದಿನಗಳ ನಂತರ, ಮಧ್ಯಮಾವಧಿ ಪಕ್ವವಾಗುವ ಬೆಳೆಗಳಿಗೆ ೨೩ ರಿಂದ ೨೭ ದಿನಗಳ ಬಳಿಕ ಮತ್ತು ದೀರ್ಘಾವಧಿ ಪಕ್ವವಾಗುವ ಬೆಳೆಗಳಿಗೆ ೨೫ ರಿಂದ ೩೦ ದಿನಗಳ ಬಳಿಕ ಮಾಡಬೇಕು. ಒಂದು ಸೂಡಿನಲ್ಲಿ ೩ ರಿಂದ ೪ ಸಸಿಗಳನ್ನು ಇಡಬೇಕು. ಸಮ್ಮಿಶ್ರ ಜಾತಿಗಾಗಿ ಒಂದು ಕುಂಡದಲ್ಲಿ ೧ ರಿಂದ ೨ ಸಸಿಗಳನ್ನು ಇಡಬೇಕು. ಅಲ್ಪಾವಧಿ ತಳಿಗಳ ಸಸಿಗಳ ನಾಟಿ ೧೫ x ೧೫ ಸೆಂ.ಮೀ. ನಂತೆ ಮಧ್ಯಮಾವಧಿ ತಳಿಗಳಿಗೆ ಮತ್ತು ದೀರ್ಘಾವಧಿ ತಳಿಗಳಿಗೆ ೨೦ x ೧೫ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು.

೧ ಊ. ಗೊಬ್ಬರ ನಿರ್ವಹಣೆ : ಚೆನ್ನಾಗಿ ಕೊಳೆತ ಸೆಗಣಿಗೊಬ್ಬರ ಅಥವಾ ಕಂಪೋಸ್ಟ ಗೊಬ್ಬರವನ್ನು ಪ್ರತಿ ಹೆಕ್ಟೇರ್‌ಗೆ ೧೦ ಟನನಂತೆ ಬಿತ್ತನೆಯ ಮೊದಲು ಭೂಮಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. (ಗೋಮಯ ಲಭ್ಯವಿದ್ದರೆ, ಅದನ್ನು ಕೂಡ ಉಪಯೋಗಿಸಬಹುದು) ಭತ್ತದ ನಾಟಿಗಾಗಿ ಪ್ರತಿ ಹೆಕ್ಟೇರಿಗೆ ೧೦೦ ಕಿಲೋ ಸಾರಜನಕ, ೫೦ ಕಿಲೋ ರಂಜಕ ಮತ್ತು ೫೦ ಕಿಲೋ ಪೊಟ್ಯಾಶಿಯಂ ಈ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಶಿಫಾರಸ್ಸು ಮಾಡಲಾಗಿದೆ. ಈ ಗೊಬ್ಬರದ ಪ್ರಮಾಣವನ್ನು ಅಲ್ಪಾವಧಿ ತಳಿಗಳ ನಾಟಿಯ ಸಮಯದಲ್ಲಿ ಶೇ. ೫೦ ಸಾರಜನಕ, ಸಂಪೂರ್ಣ ರಂಜಕ ಮತ್ತು ಪೊಟ್ಯಾಶಿಯಂ ಹಾಗೂ ಶೇ. ೫೦ ರಷ್ಟು ಸಾರಜನಕ ನಾಟಿ ಮಾಡಿದ ೨೫ ರಿಂದ ೩೦ ದಿನಗಳ ಬಳಿಕ ಕೊಡಬೇಕು ಹಾಗೂ ಅಲ್ಪಾವಧಿ ಮತ್ತು ದೀರ್ಘಾವಧಿ ತಳಿಗಳ ನಾಟಿಯ ಸಮಯದಲ್ಲಿ ಶೇ. ೪೦ ರಷ್ಟು ಸಾರಜನಕ, ಸಂಪೂರ್ಣ ರಂಜಕ ಮತ್ತು ಪೊಟ್ಯಾಶಿಯಂ, ಶೇ. ೪೦ ರಷ್ಟು ಸಾರಜನಕ ನಾಟಿಯ ಬಳಿಕ ೨೫ ರಿಂದ ೩೦ ದಿನಗಳ ಬಳಿಕ ಮತ್ತು ಶೇ. ೨೦ ರಷ್ಟು ಸಾರಜನಕ ನಾಟಿಯ ಬಳಿಕ ೫೫ ರಿಂದ ೬೦ ದಿನಗಳ ಬಳಿಕ ಕೊಡಬೇಕು. ಮಿಶ್ರ ತಳಿಗಾಗಿ ಹೆಕ್ಟೇರಿಗೆ ೧೨೦ ಕಿಲೋ ಸಾರಜನಕ, ೫೦ ಕಿಲೋ ರಂಜಕ ಮತ್ತು ೫೦ ಕಿಲೋ ಪೊಟ್ಯಾಶಿಯಂ ಈ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ಶಿಫಾರಸ್ಸು ಮಾಡಲಾಗಿದೆ. ಈ ರಾಸಾಯನಿಕ ಗೊಬ್ಬರದ ಪ್ರಮಾಣವನ್ನು ನಾಟಿಯ ಸಮಯದಲ್ಲಿ ಶೇ. ೫೦ ರಷ್ಟು ಸಾರಜನಕ, ಸಂಪೂರ್ಣ ರಂಜಕ ಮತ್ತು ಪೊಟ್ಯಾಶಿಯಂ, ಶೇ. ೨೫ ರಷ್ಟು ಸಾರಜನಕ ನಾಟಿಯ ಬಳಿಕ ೨೫ ರಿಂದ ೩೦ ದಿನಗಳ ನಂತರ ಮತ್ತು ಇನ್ನುಳಿದ ಶೇ. ೨೫ ರಷ್ಟು ಸಾರಜನಕ ನಾಟಿಯ ಬಳಿಕ ೫೫ ರಿಂದ ೬೦ ದಿನಗಳ ಬಳಿಕ ಕೊಡಬೇಕು.

೧ ಎ. ನಾಲ್ಕು ಅಂಶಗಳ ಭತ್ತ ನಾಟಿಯ ಮುಖ್ಯ ವೈಶಿಷ್ಟ್ಯಗಳು !

೧. ಭತ್ತದ ಬೆಳೆಯ ಅವಶೇಷವನ್ನು (ಭತ್ತದ ಹೊಟ್ಟಿನ ಬೂದಿ ೦.೫ ರಿಂದ ೧ ಕಿಲೋ ಪ್ರತಿ ಚದರ ಮೀಟರ ನಾಟಿಯ ಮಧ್ಯೆ ಮಿಶ್ರಣ ಮಾಡಬೇಕು. ಇದರಿಂದ ಸಸಿಗಳಿಗೆ ಸಿಲಿಕಾನ ಈ ಉಪಯುಕ್ತ ಆಹಾರದ್ರವ್ಯದ ಪೂರೈಕೆಯು ಆಗುತ್ತದೆ ಮತ್ತು ಸಸಿಗಳು ಆರೋಗ್ಯ ಪೂರ್ಣ, ಸುದೃಢ ಮತ್ತು ಹಚ್ಚಹಸಿರಾಗಿರುತ್ತವೆ) ಮರಳಿ ಉಪಯೋಗಿಸಬೇಕು.

೨. ಭತ್ತದ ಸೂಡು (ಸುಮಾರು ೨೦ ಕಿಲೋ ಗ್ರಾಮ ಪ್ರತಿ ಗುಂಟೆ)) ನೇಗಿಲಿನ ಸಹಾಯದಿಂದ ಭೂಮಿಯಲ್ಲಿ ಉಳಿಮೆ ಮಾಡಬೇಕು. ಇದರಿಂದ ಭತ್ತದ ಬೆಳೆಗೆ ಸಿಲಿಕಾನ ಮತ್ತು ಪೊಟ್ಯಾಶಿಯಂ ಪೂರೈಕೆಯಾಗುತ್ತದೆ. ಬೆಳೆಗೆ ರೋಗ ಮತ್ತು ಕೀಟಗಳ ವಿರುದ್ಧ ಹೋರಾಡುವ ಕ್ಷಮತೆ ಬರುತ್ತದೆ.

೩. ಗೊಬ್ಬರದ ಗಿಡ ೩ ಟನ ಪ್ರತಿ ಹೆಕ್ಟೇರ ಕೆಸರು ಮಾಡುವ ಸಮಯದಲ್ಲಿ ಭೂಮಿಯಲ್ಲಿ ಹೂಳಬೇಕು.

೪. ಭತ್ತದ ಸುಧಾರಿತ ತಳಿಯ ಸಸಿಗಳ ನೆಡುವುದನ್ನು ಜೋಡು ಸಾಲಿನ ಪದ್ಧತಿಯಲ್ಲಿ (ನೆಡುವಿಕೆಯ ಅಂತರ ೧೫-೧೫ x ೨೫ ಸೆಂ.ಮೀ) ಮಾಡಬೇಕು.

೫. ಯೂರಿಯಾ-ಡಿಎಪಿ ೬೦:೪೦ ಪ್ರಮಾಣದಲ್ಲಿ ಬ್ರಿಕೆಟ್ಸ್‌ಗಳನ್ನು (ಗೊಬ್ಬರದ ಗುಳಿಗೆ) (೧೭೦ ಕಿಲೋ ಪ್ರತಿ ಹೆಕ್ಟೇರ) ಬಳಸಬೇಕು.

೧ ಏ. ಜೈವಿಕ ಮತ್ತು ಹಸಿ ಗೊಬ್ಬರದ ಉಪಯೋಗ !

೧. ನೀಲಿ-ಹಸಿರು ಪಾಚಿ (೨೦ ಕಿಲೋ ಪ್ರತಿ ಹೆಕ್ಟೇರ) ಭತ್ತ ನಾಟಿಯ ನಂತರ ೮ ರಿಂದ ೧೦ ದಿನಗಳ ಬಳಿಕ ಗದ್ದೆಯಲ್ಲಿ ಹಾಕಬೇಕು.

೨. ನಾಟಿಯ ಬಳಿಕ ‘ಓಝೊಲಾ’ (೪ ರಿಂದ ೫ ಕ್ವಿಂಟಲ ಪ್ರತಿ ಹೆಕ್ಟೇರ) ೧೦ ದಿನಗಳ ಬಳಿಕ ಗದ್ದೆಯಲ್ಲಿ ಹಾಕಬೇಕು.

೩. ಹಸಿಗೊಬ್ಬರ ಉದಾ. ಗೊಬ್ಬರದ ಗಿಡ, ಧೈಂಚ, ಸೆಣಬು ಇತ್ಯಾದಿ ೩ ರಿಂದ ೫ ಟನ ಪ್ರತಿ ಹೆಕ್ಟೇರ ಕೆಸರಿನಲ್ಲಿ ಮಿಶ್ರಣ ಮಾಡಬೇಕು. ಇದಕ್ಕಾಗಿ ಗೊಬ್ಬರದ ಮರವನ್ನು ಗದ್ದೆಯ ಒಡ್ಡಿನ ಮೇಲೆ ನೆಟ್ಟು, ಅದರ ಎಳೆಯ ಟೊಂಗೆಗಳನ್ನು ಮತ್ತು ಎಲೆಗಳನ್ನು ಕೆಸರಿನಲ್ಲಿ ಹೂಳಬೇಕು. ಸೆಣಬು ಮತ್ತು ಧೈಂಚ ಅನುಕ್ರಮವಾಗಿ ೩೦ ಮತ್ತು ೪೦ ಕಿಲೋ ಪ್ರತಿ ಹೆಕ್ಟೇರ ಈ ಪ್ರಮಾಣದಲ್ಲಿ ಬಿತ್ತನೆ ಮಾಡಿ ಹೂ ಬಿಡತೊಡಗಿದ ಬಳಿಕ ಭೂಮಿಯಲ್ಲಿ ಹೂಳಬೇಕು. ನಿಯಂತ್ರಿತ ಸಸಿ ಬಿತ್ತನೆಯ ಬಳಿಕ ಅದೇ ದಿನ ಅಥವಾ ೫ ದಿಗಳ ವರೆಗೆ ಪ್ರತಿ ನಾಲ್ಕು ಸೂಡುಗಳ ಚೌಕೋನದಲ್ಲಿ ೨.೭ ಗ್ರಾಮ ತೂಕದ ಒಂದು ಬ್ರಿಕೆಟ (ಯೂರಿಯಾ ಡಿಎಪಿ) ಕೈಯಿಂದ ೫ ಸೆಂ.ಮೀ. ಆಳದಲ್ಲಿ ಕೆಸರಿನಲ್ಲಿ ಹೂಳಬೇಕು. ಇದರಿಂದ ಆ ಗೊಬ್ಬರ ಶೇ. ೮೦ ರ ವರೆಗೆ ಬಳಕೆಯಾಗುತ್ತದೆ. ವಾತಾವರಣದ ಮಾಲಿನ್ಯ ದೂರವಾಗಿ ಬೆಳೆಯ ಉತ್ಪಾದನೆ ವೃದ್ಧಿಸುತ್ತದೆ.

೧ ಒ. ಭೂಮಿ ಹದಗೊಳಿಸುವುದು : ಭತ್ತದ ಸಸಿಯನ್ನು ಮರು ನಾಟಿ ಮಾಡಿದ ಬಳಿಕ ಆವಶ್ಯಕತೆಯಂತೆ ೧ ರಿಂದ ೨ ಸಲ ಕಳೆಯನ್ನು ಕಿತ್ತೆಸೆಯಬೇಕು. ಬಿತ್ತನೆ ಮತ್ತು ಒಂದೊಂದು ಬೀಜವನ್ನು ಬಿತ್ತುವ ಪದ್ಧತಿಯಿಂದ ನೆಟ್ಟರೆ ಆವಶ್ಯಕತೆಗನುಸಾರ ಗುದ್ದಲಿಯಿಂದ ಕಳೆಯನ್ನು ನಾಶಪಡಿಸಬೇಕು. ನೆಟ್ಟ ಬಳಿಕ ಭತ್ತದ ಕುಣಿಯಲ್ಲಿ ೫ ರಿಂದ ೬ ಸೆಂ.ಮೀ. ನೀರಿನಲ್ಲಿ ಇಟ್ಟರೆ ಕಳೆ ಅಲ್ಪ ಪ್ರಮಾಣದಲ್ಲಿ ಕಂಡು ಬರುತ್ತದೆ. ಕಳೆಯನ್ನು ನಾಶಪಡಿಸಲು ‘ಬ್ಯೂಟಾಕ್ಲೋರ ೫೦ ಇಸಿ’ ಅಥವಾ ‘ಬೆಂಥಿಯೋಕಾರ್ಬ ೫೦ ಇ.ಸಿ.’ ಈ ಕಳೆನಾಶಕ ೨ ರಿಂದ ೩ ಮಿ.ಲೀ. ಪ್ರತಿ ಲೀಟರ ನೀರಿನಲ್ಲಿ ಈ ಪ್ರಮಾಣದಲ್ಲಿ (೧ ಹೆಕ್ಟೇರಗಾಗಿ ೫೦೦ ರಿಂದ ೬೦೦ ಲೀ. ದ್ರಾವಣ ಬೇಕಾಗುತ್ತದೆ) ಮಿಶ್ರಣ ಮಾಡಿ ಭತ್ತದ ನಾಟಿಯ ಬಳಿಕ ೧ ವಾರದೊಳಗೆ ಸಿಂಪಡಿಸಬೇಕು. ಕಳೆನಾಶಕ ಸಿಂಪಡಿಸುವಿಕೆಯ ಮೊದಲು ಭತ್ತದ ಕುಣಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಮತ್ತು ಮರುದಿನ ಪುನಃ ನೀರನ್ನು ಗದ್ದೆಯಲ್ಲಿ ತುಂಬಬೇಕು.

೧ ಔ. ನೀರಿನ ನಿರ್ವಹಣೆ : ಭತ್ತದ ಬೆಳೆ ಸರಿಯಾಗಿ ಬೆಳೆಯಲು ಮತ್ತು ಅಧಿಕ ಉತ್ಪನ್ನಕ್ಕಾಗಿ ಭತ್ತದ ಕುಣಿಯಲ್ಲಿ ನೀರಿನ ಸೂಕ್ತ ಮಟ್ಟವನ್ನು ಕಾಯ್ದುಕೊಳ್ಳುವ ಅವಶ್ಯಕತೆಯಿದೆ. ಬೆಳೆಯ ಬೆಳವಣಿಗೆಯಂತೆ ಭತ್ತದ ಕುಣಿಯಲ್ಲಿರುವ ನೀರಿನ ಮಟ್ಟ ಮುಂದಿನಂತೆ ಇರಬೇಕು.

೧. ನೆಟ್ಟ ಬಳಿಕ ಸಸಿಗಳು ಸ್ಥಿರವಾಗಿ ನಿಲ್ಲುವವರೆಗೆ ೧-೨ ಸೆಂ.ಮೀ.

೨. ಸಸಿಗಳ ಬೆಳವಣಿಗೆಯ ಪ್ರಾಥಮಿಕ ಹಂತದಲ್ಲಿ ೨-೩ ಸೆಂ.ಮೀ.

೩. ಅಧಿಕ ತೆನೆ ಒಡೆಯುವ ಹಂತದಲ್ಲಿ ೩ ರಿಂದ ೫ ಸೆಂ.ಮೀ.

೪. ಭತ್ತ ತೆನೆಯ ಹಂತದಲ್ಲಿರುವಾಗ ೫ ರಿಂದ ೧೦ ಸೆಂ.ಮೀ.

೫. ಹೂ ಬಿಡುವ ಮತ್ತು ಕಾಳು ತುಂಬುವ ಸ್ಥಿತಿಯಲ್ಲಿ ೧೦ ಸೆಂ.ಮೀ.

೬. ಕಟಾವಿನ ಮೊದಲು ೧೦ ದಿನ ಮೊದಲು ನೀರನ್ನು ಸಿಂಪಡಿಸಬೇಕು.

೧ ಅಂ. ಬೆಳೆ ಸಂರಕ್ಷಣೆ : ಕೀಟಗಳ ನಿಯಂತ್ರಣಕ್ಕಾಗಿ ಭತ್ತದ ಬೆಳೆಯನ್ನು ಕತ್ತಿಯ ಸಹಾಯದಿಂದ ನೆಲದಿಂದ ಕೊಯ್ಯಬೇಕು. ಭತ್ತದ ಬೆಳೆಯನ್ನು ಕೊಯ್ದ ಬಳಿಕ ನೇಗಿಲು ಹೂಡಿ ಹುಲ್ಲು, ಕಸಕಡ್ಡಿಯನ್ನು ಒಟ್ಟು ಮಾಡಿ ನಾಶಗೊಳಿಸಬೇಕು. ಹಾಗೆಯೇ ಇತರ ಕೀಟಗಳ ನಾಶಪಡಿಸಲು ‘ಕ್ಲೊರೊಪಾಯರಿಫಾಸ’ ೨ ರಿಂದ ೩ ಗ್ರಾಮ ಪ್ರತಿ ಲೀಟರ ನೀರಿನಲ್ಲಿ ಮಿಶ್ರಣ ಮಾಡಿ ಆವಶ್ಯಕತೆಗನುಸಾರ ೧ ರಿಂದ ೨ ಸಲ ಸಿಂಪಡಿಸಬೇಕು. ಭತ್ತಕ್ಕೆ ತಗಲುವ ರೋಗ ನಿಯಂತ್ರಣಕ್ಕಾಗಿ ‘ಕಾಪರ ಆಕ್ಜಿಕ್ಲೊರಾಯಿಡ್’ ಶೇ. ೫೦ (೨.೫ ಗ್ರಾಮ ಪ್ರತಿ ಲೀಟರ ನೀರಿನಲ್ಲಿ ಮಿಶ್ರಣ ಮಾಡಿ) ಆವಶ್ಯಕತೆಯನುಸಾರ ೧ ರಿಂದ ೨ ಸಲ ಸಿಂಪಡಿಸಬೇಕು ಅಥವಾ ‘ಕಾರ್ಬೆಡಝಿಮ್’ ಶೇ. ೫೦ (೨ ರಿಂದ ೨.೫ ಗ್ರಾಮ ಪ್ರತಿ ಲೀಟರ ನೀರಿನಲ್ಲಿ ಮಿಶ್ರಣ ಮಾಡಿ) ಆವಶ್ಯಕತೆಯನುಸಾರ ೧ ರಿಂದ ೨ ಸಲ ಸಿಂಪಡಿಸಬೇಕು.

೧ ಕ. ಕೊಯ್ಯುವುದು, ಒಕ್ಕುವುದು ಮತ್ತು ಶೇಖರಿಸುವುದು : ಭತ್ತದ ತೆನೆಯಲ್ಲಿ ಶೇ. ೮೦ ರಿಂದ ೯೦ ರಷ್ಟು ಕಾಳುಗಳು ಪಕ್ವಗೊಂಡಿರುವುದು ಕಾಣಿಸುತ್ತಲೇ, ಬೆಳೆಯನ್ನು ನೆಲಮಟ್ಟದಿಂದ ತೆನೆಕೊಯ್ಯುವ ಕತ್ತಿಯಿಂದ ಕತ್ತರಿಸಬೇಕು. ಯಂತ್ರದ ಸಹಾಯದಿಂದ ಕತ್ತರಿಸಿದರೆ ಸಮಯಕ್ಕೆ ಸರಿಯಾಗಿ ಮತ್ತು ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಕತ್ತರಿಸಿದ ಭತ್ತವನ್ನು ಒಣಗಿಸಲು ೧-೨ ದಿನಗಳ ವರೆಗೆ ಹರಡಬೇಕು ಮತ್ತು ಬಳಿಕ ಒಕ್ಕಬೇಕು. ಒಳ್ಳೆಯ ಬೆಳೆ ಸಿಗಲು ಒಕ್ಕುವ ಯಂತ್ರ ಉಪಯೋಗಿಸಬೇಕು. ಕಾಳುಗಳ ಆರ್ದ್ರತೆಯ ಪ್ರಮಾಣ ಶೇ. ೧೨ ರಿಂದ ೧೪ ಆಗುವವರೆಗೆ ಭತ್ತವನ್ನು ಒಣಗಿಸಬೇಕು. ಬಳಿಕ ದಪ್ಪನೆಯ ಪ್ಲಾಸ್ಟಿಕ ಚೀಲದಲ್ಲಿ ತುಂಬಿ ಒಣ, ಸ್ವಚ್ಛ ಮತ್ತು ಸುರಕ್ಷಿತ ಸ್ಥಳದಲ್ಲಿ ಧಾನ್ಯವನ್ನು ಸಂಗ್ರಹಿಸಬೇಕು.

೨. ರಾಗಿ ಬಿತ್ತುವಿಕೆ

೨ ಅ. ಹವಾಮಾನ ಮತ್ತು ಭೂಮಿ : ಮಧ್ಯಮದಿಂದ ಅಧಿಕ ಮಳೆಯ, ಉಷ್ಣ ಮತ್ತು ಆರ್ದ್ರತೆಯ ಹವಾಮಾನದ ಪ್ರದೇಶದಲ್ಲಿ ಗುಡ್ಡದ ಇಳಿಜಾರಿನಲ್ಲಿ ನಿಧಾನವಾಗಿ ನೀರು ಹರಿಯುವ ನೀರಾವರಿ ಭೂಮಿಯ ಮೇಲೆ ಈ ಬೆಳೆಯನ್ನು ಬೆಳೆಯಲಾಗುತ್ತದೆ.

೨ ಆ. ಭೂಮಿ ಹದಗೊಳಿಸುವುದು : ಮೊದಲ ಮಳೆಯ ನಂತರ ಹಗುರವಾದ ಕಬ್ಬಿಣದ ಅಥವಾ ನೇಗಿಲಿನಿಂದ ಇಳಿಜಾರಿನಲ್ಲಿ ಅಡ್ಡಲಾಗಿ ಉಳುಮೆ ಮಾಡಬೇಕು ಮತ್ತು ಹುಲ್ಲು, ಕಸ ಕಡ್ಡಿಗಳನ್ನು ಆರಿಸಿ ತೆಗೆದು ಭೂಮಿಯನ್ನು ಸ್ವಚ್ಛಗೊಳಿಸಬೇಕು.

೨ಇ. ಬಿತ್ತನೆ : ಸಸಿಗಳನ್ನು ನೆಡಲು ತಯಾರಿ ಆದ ಬಳಿಕ ಬಿತ್ತನೆಯ ೧-೨ ದಿನಗಳ ಮೊದಲು ಸಸಿಗೆ ನೀರು ಉಣಿಸಬೇಕು. ಮಳೆಗಾಲ ಪ್ರಾರಂಭವಾದ ಬಳಿಕ ಸಸಿಗಳನ್ನು ನೆಡಬೇಕು. ೨ ಸಾಲಿನಲ್ಲಿ ೨೦ ಸೆಂ.ಮೀ ಮತ್ತು ೨ ಸಸಿಗಳ ಮಧ್ಯೆ ೧೫ ಸೆಂ.ಮೀ ಅಂತರವಿಟ್ಟು ಒಂದೇ ಸ್ಥಳದಲ್ಲಿ ೨ ಸಸಿಗಳನ್ನು ನೆಡಬೇಕು. ರಾಗಿಯ ಅಧಿಕ ಉತ್ಪನ್ನಕ್ಕಾಗಿ ಸಮತಟ್ಟಾದ ಮತ್ತು ನೀರಾವರಿ ಭೂಮಿಗಾಗಿ ೨೫ x ೨೦ ಸೆಂ.ಮೀ. ಅಂತರದ ಮೇಲೆ ಮರು ನಾಟಿ ಮಾಡಬೇಕು.

೨ ಈ. ಸಸಿ ನೆಡುವ ಮೊದಲು ಪ್ರತಿ ಹೆಕ್ಟೇರಿಗೆ ೫ ಟನ ಚೆನ್ನಾಗಿ ಕೊಳೆತ ಸಗಣಿಗೊಬ್ಬರ ಅಥವಾ ಕಾಂಪೋಸ್ಟ ಗೊಬ್ಬರವನ್ನು ಭೂಮಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. ಹಾಗೆಯೇ ೮೦ ಕಿಲೋ ಸಾರಜನಕ, ೪೦ ಕಿಲೋ ರಂಜಕ ಮತ್ತು ೪೦ ಕಿಲೋ ಪೊಟ್ಯಾಶಿಯಮ್ ಪ್ರತಿ ಹೆಕ್ಟೇರಿಗೆ ಕೊಡಬೇಕು. ಮೊದಲ ವಾರ ೪೦ ಕಿಲೋ ಸಾರಜನಕ ಮತ್ತು ೪೦ ಕಿಲೋ ಪೊಟ್ಯಾಶಿಯಂ ಮತ್ತು ರಂಜಕ ಬಿತ್ತುವಿಕೆಯ ಸಮಯದಲ್ಲಿ ಕೊಡಬೇಕು. ಸಾರಜನಕ ಗೊಬ್ಬರ ಎರಡನೇಯ ವಾರ (೪೦ ಕಿಲೋ ಸಾರಜನಕ) ಬಿತ್ತುವಿಕೆಯ ನಂತರ ಒಂದು ತಿಂಗಳ ಬಳಿಕ ಕೊಡಬೇಕು.

೨ ಉ. ಅಂತರ ಬೆಳೆ : ಬಿತ್ತನೆಯ ಬಳಿಕ ವಾರದಲ್ಲಿ ರಾಶಿ ತುಂಬಿಸಬೇಕು (ಯಾವ ಸ್ಥಳದಲ್ಲಿ ಸಸಿಗಳು ಸತ್ತಿರುತ್ತವೆಯೋ, ಆ ಸ್ಥಳದಲ್ಲಿ ಪುನಃ ಮರು ಬಿತ್ತುವಿಕೆ ಮಾಡಬೇಕು) ಬಿತ್ತನೆಯ ಬಳಿಕ ೨ ರಿಂದ ೩ ವಾರದ ಬಳಿಕ ಕತ್ತಿಯಿಂದ ಗದ್ದೆಯಲ್ಲಿ ಕಳೆಯನ್ನು ಕಿತ್ತು, ಕಳೆಯಿಲ್ಲದಂತೆ ಮಾಡಬೇಕು.

೨ಊ. ಕೊಯ್ಲು : ಬೆಳೆ ಬೆಳೆದ ಬಳಿಕ ರಾಗಿಯ ತೆನೆಗಳನ್ನು ಕತ್ತಿಯಿಂದ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಬೇಕು. ಬಳಿಕ ಕೋಲಿನಿಂದ ಬಡಿದು ಅಥವಾ ಯಂತ್ರದ ಸಹಾಯದಿಂದ ಒಕ್ಕಣೆ ಮಾಡಬೇಕು. ಈ ಬೆಳೆಯಿಂದ ಹೆಕ್ಟೇರಿಗೆ ೧೫ ರಿಂದ ೨೦ ಕ್ವಿಂಟಲ ಉತ್ಪನ್ನ ಸಿಗುತ್ತದೆ.

ಸಂಕಲನಕಾರರು : ಡಾ. ನಿವೃತ್ತಿ ರಾಮಚಂದ್ರ ಚವ್ಹಾಣ (ಆಧ್ಯಾತ್ಮಿಕ ಮಟ್ಟ ಶೇ. ೬೫), ಎಮ್. ಎಸ್ಸಿ. (ಅಗ್ರಿಕಲ್ಚರ), ಪಿಎಚ್‌ಡಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೬.೨೦೨೨)