ನೂಪುರ್ ಶರ್ಮಾ ಇವರ ಮೇಲೆ ಸರ್ವೋಚ್ಚ ನ್ಯಾಯಾಲಯದ ಸಂತಾಪ ಹಾಗೂ ರಾಷ್ಟ್ರಪ್ರೇಮಿಗಳಿಗೆ ತೀರ್ಪಿನ ಅಪೇಕ್ಷೆ !

ಪೂ. (ನ್ಯಾಯವಾದಿ) ಸುರೇಶ್ ಕುಲಕರ್ಣಿ

೧. ಸರ್ವೋಚ್ಚ ನ್ಯಾಯಾಲಯವು ನೂಪುರ್ ಶರ್ಮಾ ಇವರ ಮೇಲೆ ಆಕ್ರೋಶಗೊಂಡು ಅವರಿಗೆ ಇಡೀ ದೇಶದ ಕ್ಷಮೆ ಕೇಳಲು ಹೇಳುವುದು 

ಭಾಜಪದ ಮಾಜಿ ವಕ್ತಾರರಾದ ನೂಪುರ್ ಶರ್ಮಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮುಸಲ್ಮಾನರ ಭಾವನೆಯನ್ನು ನೋಯಿಸುವ ಹೇಳಿಕೆಯನ್ನು ನೀಡಿದರು, ಎಂದು ಅವರ ಮೇಲೆ ಆರೋಪವಿದೆ. ಅದರಿಂದ ಅವರ ವಿರುದ್ಧ ಮಹಾರಾಷ್ಟ್ರ, ಕಾಶ್ಮೀರ, ಬಂಗಾಲ ಇತ್ಯಾದಿ ವಿವಿಧ ರಾಜ್ಯಗಳಲ್ಲಿ ಅನೇಕ ಅಪರಾಧಗಳನ್ನು ದಾಖಲಿಸಲಾಗಿದೆ. ಅವರಿಗೆ ಜೀವಬೆದರಿಕೆ ಬರುತ್ತಿರುವುದರಿಂದ ಭದ್ರತೆಯ ದೃಷ್ಟಿಯಲ್ಲಿ ಪ್ರಯಾಣ ಮಾಡುವುದು ಅಪಾಯವಾಗಿದೆ. ಆದ್ದರಿಂದ ವಿವಿಧ ರಾಜ್ಯಗಳಲ್ಲಿನ ಎಲ್ಲ ಅಪರಾಧಗಳನ್ನು ದೆಹಲಿಗೆ ವರ್ಗಾಯಿಸಬೇಕು, ಎಂದು ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ದಾಖಲಿಸಿದ್ದರು. ಅದರ ಆಲಿಕೆಯು ನ್ಯಾಯಾಧೀಶ ಸೂರ್ಯಕಾಂತ ಇವರ ದ್ವಿಸದಸ್ಯ ಪೀಠದ ಮುಂದೆ ಬಂತು. ಆಗ ನ್ಯಾಯಾಧೀಶ ಸೂರ್ಯಕಾಂತ ಇವರು, “ಬೆದರಿಕೆ ಬರಲು ಅವರೇ ಹೊಣೆಯಾಗಿದ್ದಾರೆ. ದೇಶದಲ್ಲಿ ಏನೆಲ್ಲ ನಡೆಯುತ್ತಿದೆಯೋ, ಅದಕ್ಕೂ ಅವರೇ ಹೊಣೆ. ನಾವು ವಾರ್ತಾವಾಹಿನಿಯ ಚರ್ಚೆಯನ್ನು ನೋಡಿದ್ದೇವೆ. ಅವರನ್ನು (ಮತಾಂಧ ರನ್ನು) ಹೇಗೆ ಉದ್ರೇಕಿಸಲಾಗಿತ್ತು, ಎಂಬುದು ನಮಗೆ ತಿಳಿದಿದೆ. ನೂಪುರ್ ಶರ್ಮಾ ಇವರು ಇಡೀ ದೇಶದ ಮುಂದೆ ಕ್ಷಮೆ ಯಾಚಿಸಬೇಕು”, ಎಂದರು. ಅನಂತರ ನ್ಯಾಯಾಧೀಶರು ‘ಈ ಚರ್ಚೆ ಕೇವಲ ಒಂದು ‘ಅಜೆಂಡಾ’ಕ್ಕಾಗಿ ಆಗಿತ್ತೇ ? ಅವರು (ವಾರ್ತಾವಾಹಿನಿಯವರು) ಈ ವಿಷಯವನ್ನು ಏಕೆ ಆಯ್ಕೆ ಮಾಡಿದರು ?’, ಎಂದು ಕೂಡ ವಿಚಾರಿಸಿದರು. ನ್ಯಾಯಾಧೀಶರು ಪೊಲೀಸರ ವಿಷಯದಲ್ಲಿ ಹೇಳುತ್ತಾ, “ನೀವು ಇತರರ ವಿರುದ್ಧ ಅಪರಾಧವನ್ನು ದಾಖಲಿಸುತ್ತೀರಿ, ಆಗ ಅವರನ್ನು ತಕ್ಷಣ ಬಂಧಿಸುತ್ತೀರಿ. ಇಲ್ಲಿ ಶರ್ಮಾ ಇವರ ವಿರುದ್ಧ ಅಪರಾಧವನ್ನು ದಾಖಲಿಸಿದಾಗ ಅವರನ್ನು ಮುಟ್ಟುವ ಧೈರ್ಯ ಪೊಲೀಸರಿಗಿಲ್ಲ”, ಎಂದರು. ನ್ಯಾಯಾಲಯ ಮಾತು ಮುಂದುವರಿಸುತ್ತಾ, “ಇದರಿಂದ ಅವರ (ನೂಪುರ್ ಶರ್ಮಾ ಇವರ) ಸ್ವಭಾವ ಹಟವಾದಿ ಮತ್ತು ಹುಂಬತನದ್ದಿದೆ ಎಂದು ಕಂಡುಬರುತ್ತದೆ. ಅವರು ಪಕ್ಷದ ವಕ್ತಾರರಾಗಿದ್ದರೇನಾಯಿತು ? ನಮ್ಮ ಹಿಂದೆ ಅಧಿಕಾರವಿದೆಯೆಂದು ನಾವು ಕಾನೂನನ್ನು ಲೆಕ್ಕಿಸದೆ ಏನಾದರೂ ಹೇಳಿಕೆಗಳನ್ನು ನೀಡಬಹುದೇ ? ನೂಪುರ್ ಶರ್ಮಾ ಇವರ ವಿವಾದಾತ್ಮಕ ಹೇಳಿಕೆಯಿಂದ ಉದಯಪುರದಲ್ಲಿ ಹೊಲಿಗೆಯ ಕೆಲಸ ಮಾಡುತ್ತಿದ್ದ ವ್ಯಕ್ತಿಯು (ಕನ್ಹಯ್ಯಾಲಾಲ) ಜೀವವನ್ನು ಕಳೆದುಕೊಳ್ಳಬೇಕಾಯಿತು”, ಎಂದಿತು.

ತಮಗೆ ತಿಳಿದ ಹಾಗೆ ನೂಪುರ್ ಶರ್ಮಾ ಇವರು ಒಂದು ಧಾರ್ಮಿಕ ಪುಸ್ತಕದ ಆಧಾರದಲ್ಲಿ ಹೇಳಿಕೆ ನೀಡಿರುವುದರಿಂದ ಅವರಿಗೆ ಜೀವಬೆದರಿಕೆ ಬರುತ್ತಿದೆ. ಈ ವಿಷಯದಲ್ಲಿ ಕನ್ಹಯ್ಯಾಲಾಲ ಇವರ ಮಗನು ನೂಪುರ್ ಇವರನ್ನು ಸಮರ್ಥಿಸುವ ಸಂದೇಶವನ್ನು ಸಾಮಾಜಿಕ ಪ್ರಸಾರಮಾಧ್ಯಮದಲ್ಲಿ ಪ್ರಸಾರ ಮಾಡಿದ್ದರು. ಅದರಿಂದ ಮತಾಂಧರು ಕನ್ಹಯ್ಯಾಲಾಲ ಇವರನ್ನು ಖಡ್ಗದಿಂದ ಬರ್ಬರವಾಗಿ ಕೊಲೆ ಮಾಡಿದರು. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂಬುದನ್ನು ಗಮನಿಸಿ ಅದರ ತನಿಖೆಯನ್ನು ರಾಷ್ಟ್ರೀಯ ತನಿಖಾ ವಿಭಾಗಕ್ಕೆ (ಎನ್.ಐ.ಎ.ಗೆ) ಒಪ್ಪಿಸಲಾಗಿದೆ.

ನ್ಯಾಯಾಧೀಶ ಸೂರ್ಯಕಾಂತ ಇವರ ಹಿನ್ನೆಲೆ

೨೦೧೮ ರಲ್ಲಿ ‘ನ್ಯಾಯಾಧೀಶ ಸೂರ್ಯಕಾಂತರು ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಾಧೀಶರೆಂದು ನೇಮಕ ಮಾಡಲು ಅರ್ಹರಾಗಿದ್ದಾರೆಯೇ ?’, ಎನ್ನುವ ಚರ್ಚೆ ನಡೆದಿತ್ತು. ಡಿಸೆಂಬರ್ ೨೦೧೮ ರಲ್ಲಿ ನ್ಯಾಯಾಧೀಶ ಮದನ ಲೋಕೂರ ಇವರು ಕೊಲೇಜಿಯಮ್‌ನಲ್ಲಿ (ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನು ಆರಿಸುವ ಒಂದು ಪ್ರಕ್ರಿಯೆ) ಇರುವಾಗ ರಾಜೇಂದ್ರ ಮೆನನ್ ಹಾಗೂ ಪ್ರದೀಪ ನಂದರಾಜೋಗ ಇವರ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಆಗ ೧೨ ಜನವರಿ ೨೦೧೮ ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ಗೋಯಲ್ ಇವರು ನ್ಯಾ. ಸೂರ್ಯಕಾಂತ ಇವರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಅಂದಿನ ಮುಖ್ಯನ್ಯಾಯಾಧೀಶರಾದ ದೀಪಕ ಮಿಶ್ರಾ ಇವರಿಗೆ ಒಂದು ಪತ್ರ ಬರೆದು ಅವರ ನೇಮಕವನ್ನು ವಿರೋಧಿಸಿರುವುದು ತಿಳಿಯುತ್ತದೆ. ಅದರಲ್ಲಿ ಅವರು ‘ನ್ಯಾ. ಸೂರ್ಯಕಾಂತ ಇವರನ್ನು ಹಿಮಾಚಲ ಪ್ರದೇಶದ ನ್ಯಾಯಾಧೀಶರೆಂದು ಕಳುಹಿಸಬೇಡಿ’, ಎಂದು ಸ್ಪಷ್ಟವಾಗಿ ಬರೆದಿದ್ದರು. ಆ ಪತ್ರದ ವಿಚಾರ ಮಾಡದೆ ನ್ಯಾ. ಸೂರ್ಯಕಾಂತ ಇವರನ್ನು ೩ ಅಕ್ಟೋಬರ ೨೦೧೮ ರಂದು ಹಿಮಾಚಲ ಪ್ರದೇಶದ ಮುಖ್ಯ ನ್ಯಾಯಾಧೀಶರೆಂದು ನೇಮಿಸಲಾಗಿತ್ತು. ಈ ವಿಷಯದ ಮಾಹಿತಿಯು ಜಾಲತಾಣದಲ್ಲಿದೆ. ಮುಂದೆ ನ್ಯಾಯಾಧೀಶ ಮದನ ಲೋಕೂರ ನಿವೃತ್ತರಾದರು ಹಾಗೂ ನ್ಯಾಯಾಧೀಶ ಅರುಣ ಮಿಶ್ರಾ ಇವರು ಕೊಲೇಜಿಯಮ್‌ಗೆ ಬಂದರು. ಜನವರಿ ೨೦೧೯ ಅಂದರೆ ಕೇವಲ ಒಂದು ವರ್ಷದ ಅಂತರದಲ್ಲಿ ಸರ್ವೋಚ್ಚ ನ್ಯಾಯಾಲಯದ ಬಡ್ತಿ ಕೋಟಾದಿಂದ ಹಿಂದಿನ ೨ ಹೆಸರುಗಳನ್ನು ವರ್ಜಿಸಲಾಯಿತು. ಅದರ ಬದಲು ಇನ್ನೋರ್ವ ನ್ಯಾಯಾಧೀಶ ಮತ್ತು ಸೂರ್ಯಕಾಂತ ಇವರ ಹೆಸರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಗಾಗಿ ಘೋಷಿಸಲಾಯಿತು.

ಅನಂತರ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾ. ಸೂರ್ಯಕಾಂತ ಇವರ ಬಡ್ತಿಯ ವಿಷಯದಲ್ಲಿ ಚರ್ಚೆ ಆಗುತ್ತಿರುವಾಗ ಹಿರಿಯ ವಕೀಲ ಪ್ರಶಾಂತ ಭೂಷಣ ಇವರು ಅಂದಿನ ಮುಖ್ಯನ್ಯಾಯಾಧೀಶ ರಂಜನ ಗೋಗೋಯಿ ಇವರಿಗೆ ಪತ್ರ ಬರೆದರು. ಅದರಲ್ಲಿ ನ್ಯಾ. ಸೂರ್ಯಕಾಂತ ಇವರ ವಿಚಾರಣೆಯ ಬಗ್ಗೆ ವಿನಂತಿಸುವ ನ್ಯಾ. ಎ.ಕೆ. ಗೋಯಲ್ ಇವರ ಪತ್ರದ ಬಗ್ಗೆ ಬರೆಯಲಾಗಿತ್ತು. ನ್ಯಾ. ಸೂರ್ಯಕಾಂತ ಇವರು ೨೦೨೫-೨೬ ಈ ಅವಧಿಯಲ್ಲಿ ಭಾರತದ ೫೩ ನೆ ಮುಖ್ಯ ನ್ಯಾಯಾಧೀಶರಾಗುವರು.

೨. ಹಿಂದೂ ದೇವತೆಗಳ ನಗ್ನ ಚಿತ್ರಗಳನ್ನು ಬಿಡಿಸುವ ಹಿಂದೂದ್ವೇಷಿ ಮ.ಫಿ. ಹುಸೇನ, ಡಾ. ಝಾಕೀರ ನಾಯಿಕ್ ಇವರ ವಿರುದ್ಧ ವಿವಿಧ ರಾಜ್ಯದಲ್ಲಿನ ಖಟ್ಲೆಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಲಾಗಿತ್ತು; ಆದರೆ ಅದೇ ನ್ಯಾಯವನ್ನು ನೂಪುರ್ ಶರ್ಮಾ ಇವರಿಗೆ ನಿರಾಕರಿಸಲಾಯಿತು

ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕ್ರಿಮಿನಲ್ ಅಥವಾ ದಿವಾಣಿ ದಾವೆ, ದೂರು ಹಾಗೂ ಖಟ್ಲೆಗಳು ದಾಖಲಾದಾಗ ಅವುಗಳೆಲ್ಲವನ್ನೂ ಒಂದು ರಾಜ್ಯದ ನ್ಯಾಯಾಲಯದಲ್ಲಿ ನಡೆಯಬೇಕೆಂಬ ವ್ಯವಸ್ಥೆ ಕಾನೂನಿನಲ್ಲಿದೆ. ಈ ಹಿಂದೆ ಡಝನ್‌ಗಟ್ಟಲೆ ಪ್ರಕರಣಗಳಲ್ಲಿ ಇಂತಹ ಆದೇಶಗಳನ್ನು ನೀಡಲಾಗಿದೆ. (ಉದಾ. ಹಿಂದೂದ್ವೇಷಿ ಮ.ಫಿ.ಹುಸೇನ, ಡಾ. ಝಾಕೀರ ನಾಯಿಕ್, ಅಕ್ಬರುದ್ದೀನ ಓವೈಸಿ ಇವರ ಪ್ರಕರಣಗಳು) ಹಿಂದೂದ್ವೇಷಿ ಚಿತ್ರ ಕಾರ ಮ.ಫಿ.ಹುಸೇನನು ಹಿಂದೂಗಳ ಶಿವ, ಸೀತೆ, ಹನುಮಂತ ಇತ್ಯಾದಿ ದೇವೀದೇವತೆಗಳ ನಗ್ನ ಚಿತ್ರಗಳನ್ನು ಚಿತ್ರಿಸಿದ್ದನು. ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರು ಮತಾಂಧರ ಹಾಗೆ ಕಾನೂನನ್ನು ಕೈಗೆತ್ತಿಕೊಳ್ಳಲಿಲ್ಲ. ಅವರು ನ್ಯಾಯಮಾರ್ಗದಲ್ಲಿ ಹುಸೇನನ ವಿರುದ್ಧ ಅನೇಕ ರಾಜ್ಯಗಳಲ್ಲಿ ಕ್ರಿಮಿನಲ್ ಅರ್ಜಿಯನ್ನು ಮತ್ತು ದೂರನ್ನು ದಾಖಲಿಸಿದರು. ಆಗ ಇಂತಹ ೧೨೫೦ ದೂರುಗಳನ್ನು ವಿವಿಧ ನ್ಯಾಯಾಲಯಗಳಿಂದ ಒಂದು ಸ್ಥಳಕ್ಕೆ ವರ್ಗಾಯಿಸಬೇಕೆಂದು ಅರ್ಜಿಯನ್ನು ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಮನ್ನಿಸಿ ‘ಹಿಂದೂದ್ವೇಷಿ ಮ.ಫಿ. ಹುಸೇನ ವಿರುದ್ಧದ ಎಲ್ಲ ದೂರುಗಳು ಮತ್ತು ಖಟ್ಲೆಗಳನ್ನು ಒಂದೇ ರಾಜ್ಯದಲ್ಲಿ ಮತ್ತು ಒಂದೇ ನ್ಯಾಯಾಲಯದಲ್ಲಿ ನಡೆಸಬೇಕು’, ಎಂದು ಅದೇಶವನ್ನು ಹೊರಡಿಸಲಾಗಿತ್ತು. ಅನಂತರ ಆ ಎಲ್ಲ ಖಟ್ಲೆಗಳನ್ನು ‘ಕ್ರಿಮಿನಲ್ ಪ್ರೊಸಿಜರ್ ಕೋಡ್’ನ ಕಲಮ್ ೪೮೨ ಕ್ಕನುಸಾರ ಮೂಲಭೂತ ಅಧಿಕಾರ ಮತ್ತು ಸ್ವಾತಂತ್ರ್ಯವೆಂದು ರದ್ದುಪಡಿಸಲಾಯಿತು.

ಜಿಹಾದಿ ಮತ್ತು ಉಗ್ರವಾದಿ ಕಾರ್ಯಾಚರಣೆ ಮಾಡಲು ಉತ್ತೇಜಿಸುವ ಡಾ. ಝಾಕೀರ ನಾಯಿಕ್ ಗಣಪತಿಯ ವಿಡಂಬನೆ ಮಾಡಿದ್ದಕ್ಕಾಗಿ ಅವನ ವಿರುದ್ಧವೂ ದೇಶದಾದ್ಯಂತ ಕ್ರಿಮಿನಲ್ ಅರ್ಜಿಯನ್ನು ದಾಖಲಿಸಲಾಗಿತ್ತು. ಅವುಗಳನ್ನು ಒಂದೇ ಸ್ಥಳದಲ್ಲಿ ನಡೆಸಬೇಕೆಂದು ಅರ್ಜಿಯನ್ನು ದಾಖಲಿಸಲಾಗಿತ್ತು. ಅದಕ್ಕನುಸಾರ ಅವರ ಎಲ್ಲ ಖಟ್ಲೆಗಳನ್ನು ಒಂದೆಡೆಗೆ ವರ್ಗಾಯಿಸಲಾಗಿತ್ತು. ಮೂರನೇ ಉದಾಹರಣೆಯೆಂದರೆ, ‘ಎಮ್.ಐ.ಎಮ್.’ ಪಕ್ಷದ ಮುಖಂಡ ಅಕ್ಬರುದ್ದೀನ ಓವೈಸಿ ‘೧೫ ನಿಮಿಷ ಪೊಲೀಸರನ್ನು ಬದಿಗೆ ಸರಿಸಿರಿ, ನಾವು ೧೫ ನಿಮಿಷದಲ್ಲಿ ಹಿಂದೂಗಳನ್ನು ಮುಗಿಸಿ ಬಿಡುತ್ತೇವೆ’, ಎಂದು ಹೇಳಿದ್ದನು. ಆದ್ದರಿಂದ ಅವರ ವಿರುದ್ಧವೂ ಕೆಲವು ಅರ್ಜಿಗಳನ್ನು ದಾಖಲಿಸಲಾಗಿತ್ತು. ಅವುಗಳನ್ನೂ ಒಂದೆಡೆ ವರ್ಗಾಯಿಸಲಾಗಿತ್ತು. ಕೇವಲ ವರ್ಗಾಯಿಸುವುದು ಮಾತ್ರವಲ್ಲ ‘ಅವರು ಇಂತಹ ಹೇಳಿಕೆಗಳನ್ನು ನೀಡುವುದು ಅಪರಾಧವಾಗುವುದಿಲ್ಲ’, ಎಂದು ಹೇಳುವಷ್ಟರ ವರೆಗೆ ನ್ಯಾಯಾಲಯ ಹೋಗಿತ್ತು.

೩. ಮತಾಂಧರಿಗೆ ಒಂದು ನ್ಯಾಯ ಹಾಗೂ ಹಿಂದೂ ಸಂತರಿಗೆ ಮತ್ತು ನೇತಾರರಿಗೆ ಇನ್ನೊಂದು ನ್ಯಾಯ ಏಕೆ ?

ಈ ರೀತಿ ನ್ಯಾಯಸಂಸ್ಥೆಯ ಕಾನೂನು ಅಥವಾ ವಿಚಾರಶೈಲಿ ಇರುವಾಗ ನ್ಯಾಯಾಧೀಶರು ನೂಪುರ್ ಶರ್ಮಾ ಇವರಿಗೆ ಮಾತ್ರ ‘ನಿಮ್ಮ ಪ್ರಚೋದನೆಯಿಂದ ಅದು (ಮುಸಲ್ಮಾನ ಸಮಾಜ) ಅಸಮಾಧಾನಗೊಂಡಿದೆ. ಆದ್ದರಿಂದ ನೀವು ದೇಶದ ಮುಂದೆ ಕ್ಷಮೆಯಾಚಿಸಬೇಕು’, ಎಂದು ಹೇಳಿದರು. ನೂಪುರ್ ಶರ್ಮಾ ವಿಷಯದಲ್ಲಿ ನ್ಯಾಯಾಲಯ ಇಷ್ಟು ಕಠೋರವಾಗಲು ಕಾರಣವೇನು ? ಎಂದು ಜನರಲ್ಲಿ ಪ್ರಶ್ನೆ ನಿರ್ಮಾಣವಾದರೆ ತಪ್ಪೇನು ? ಹಿಂದೂ ದೇವರ ನಗ್ನ ಚಿತ್ರಗಳನ್ನು ಚಿತ್ರಿಸುವ ಹಿಂದೂದ್ವೇಷಿ ಮ.ಫಿ. ಹುಸೇನರ ಎಲ್ಲ ಖಟ್ಲೆಗಳನ್ನು ಒಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಕೇಳಿದಾಗ ಹೀಗೆ ಉತ್ತರವನ್ನು ನೀಡಿತ್ತೇ ? ಬಾಂಗ್ಲಾದೇಶದಲ್ಲಾದ ಬಾಂಬ್‌ಸ್ಫೋಟಕ್ಕಾಗಿ ಅಲ್ಲಿನ ಉಗ್ರವಾದಿಗಳಿಗೆ ಪ್ರೇರಣಾದಾಯಕನಾಗಿರುವ ಡಾ. ಝಾಕೀರ ನಾಯಿಕ್‌ನ ಖಟ್ಲೆಗಳನ್ನು ಒಂದೇ ಸ್ಥಳದಲ್ಲಿ ನಡೆಸುವಾಗ ಅವನಿಗೂ ಹೀಗೆ ಕೇಳಿದ್ದೀರಾ ? ಎನ್ನುವ ಪ್ರಶ್ನೆ ನಾಗರಿಕರ ಮನಸ್ಸಿನಲ್ಲಿ ಮೂಡಬಹುದು. ಹೀಗಿರುವಾಗ ‘ಸಂವಿಧಾನವು ನೀಡಿರುವ ಅಧಿಕಾರವು ಒಂದು ವಿಶಿಷ್ಟ ಸಮುದಾಯಕ್ಕೆ ಮಾತ್ರ ಇದೆಯೇ ? ಅವರಿಗೆ ಅವರ ಧಾರ್ಮಿಕ ಭಾವನೆಯನ್ನು ಕಾಪಾಡುವ ಅಧಿಕಾರವಿದೆ; ಆದರೆ ಅದು ಹಿಂದೂಗಳಿಗಿಲ್ಲ’, ಎನ್ನುವ ಅರ್ಥ ಇದರಿಂದ ಸ್ಪಷ್ಟವಾಗುವುದಿಲ್ಲವೆ ? ಏಕೆಂದರೆ ಇಷ್ಟು ಉದ್ರೇಕಕಾರಿ ಹಾಗೂ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವ ಮತಾಂಧರ ವಿರುದ್ಧ ಕಾರ್ಯಾಚರಣೆಯಾಗುವುದಿಲ್ಲ. ಆಗ ಅದು ‘ಹೇಟ್ ಸ್ಪೀಚ್’ (ಪ್ರಚೋದನಾಕಾರಿ ಭಾಷಣ) ಆಗುವುದಿಲ್ಲವೇ ? ಹಿಂದೂ ಸಂತರು ಮತ್ತು ನೇತಾರರು ಸ್ವಲ್ಪ ಏನಾದರೂ ಮಾತನಾಡಿದರೆ ಅವರಿಗೆ ‘ಕಾನೂನು ಮತ್ತು ಸುವ್ಯವಸ್ಥೆಯನ್ನು ಜೋಪಾನ ಮಾಡುವ ಹೊಣೆ ಹಿಂದೂಗಳದ್ದಾಗಿದೆ, ಎಂದು ಏಕೆ ಉಪದೇಶಿಸಲಾಗುತ್ತದೆ ? ಇಂತಹ ಅನೇಕ ವಿಷಯಗಳಿವೆ. ಇಲ್ಲಿ ನೂಪುರ್ ಶರ್ಮಾ ಇವರ ಪರವಾಗಿ ಮಾತನಾಡುವ ಉದ್ದೇಶವಿಲ್ಲ; ಆದರೆ ಇಲ್ಲಿ ‘Justice is not only required to be done, but it seems to have been done’ (ಅರ್ಥ : ನ್ಯಾಯವು ಕೇವಲ ಕೊಡಲಾಗಿದೆ, ಎಂದಾಗದೆ ಅದನ್ನು ನೀಡಿರುವುದು ಜನರಿಗೆ ಸ್ಪಷ್ಟವಾಗಿ ತಿಳಿಯಬೇಕು), ಎಂಬ ನ್ಯಾಯಾಲಯಕ್ಕೆ ಸಂಬಂಧಿಸಿದ ಒಂದು ವಾಕ್ಯ ನೆನಪಾಗುತ್ತದೆ.

ಹಿಂದೂಗಳು ಏನಾದರೂ ಹೇಳಿಕೆ ನೀಡಿದರೆ ಅವರಿಗೆ ಮೂಲಭೂತ ಅಧಿಕಾರ ಇರುವುದಿಲ್ಲ; ಏಕೆಂದರೆ ಅಲ್ಲಿ ಮತಾಂಧರ ಭಾವನೆಗೆ ನೋವಾಗುತ್ತದೆ; ಆದರೆ ಯಾವಾಗ ಮತಾಂಧರು ಕಾನೂನನ್ನು ಕೈಗೆತ್ತಿ ಒಬ್ಬ ಹಿಂದೂವನ್ನು ಕ್ರೂರವಾಗಿ ಹತ್ಯೆ ಮಾಡಿ ಅದಕ್ಕೂ ಹಿಂದೂಗಳೇ ಹೊಣೆಯೆಂದು ಹೇಳಲಾಗುತ್ತದೆ.

೪. ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಮುಸಲ್ಮಾನರ ಬೇಡಿಕೆಯನ್ನು ಒಪ್ಪಿಕೊಂಡರೂ ಮತಾಂಧರು ಲಕ್ಷಗಟ್ಟಲೆ ಹಿಂದೂಗಳ ಹತ್ಯೆ ಮಾಡಿದರು, ಅದಕ್ಕೆ ಮೋಹನದಾಸ ಗಾಂಧಿಯವರು ಹೊಣೆ ಎಂದು ಹೇಳಬಹುದೇ ?

ಸ್ವಾತಂತ್ರ್ಯಸೈನಿಕರು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕೇಳಿದರು, ಆದ್ದರಿಂದ ಮುಸಲ್ಮಾನರು ಬೇರೆ ದೇಶವನ್ನು (ಪಾಕಿಸ್ತಾನ) ಕೇಳಿದರು. ಅನಂತರ ಮತಾಂಧರು ಹಿಂದೂಗಳನ್ನು ಹತ್ಯೆ ಮಾಡಿದರು ಹಾಗೂ ಹಿಂದೂ ಸ್ತ್ರೀಯರ ಮಾನಭಂಗ ಮಾಡಿದರು. ಅದಕ್ಕೆ ಪ್ರತಿಕಾರವೆಂದು ನೌಕಾಲಿಯಲ್ಲಿ ಗಲಭೆ ಭುಗಿಲೆದ್ದಿತು. ಮೋಪಳೆಯರ ಬಂಡಾಯದಿಂದ ಅದು ಸ್ವಾತಂತ್ರ್ಯ ಸಿಗುವವರೆಗೆ ಹಾಗೂ ಅದು ಸಿಕ್ಕಿದ ನಂತರವೂ ಮತಾಂಧರು ಹಿಂದೂಗಳ ನರಮೇಧ ನಡೆಸಿದರು. ಹೀಗೆ ಎಲ್ಲ ಪ್ರಸಂಗಗಳಲ್ಲಿಯೂ ಮೋಹನದಾಸ ಗಾಂಧಿ ಇವರು ಕೇವಲ ಮತಾಂಧರ ಪರವಾಗಿ ನಿಂತರು ಮತ್ತು ಪಾಕಿಸ್ತಾನಕ್ಕೆ ಕೋಟಿಗಟ್ಟಲೆ ರೂಪಾಯಿಗಳನ್ನೂ ಕೊಟ್ಟರು. ಇದಕ್ಕೆ ಪ್ರತಿಕ್ರಿಯೆಯೆಂದು ನಥೂರಾಮ ಗೋಡ್ಸೆ ಇವರು ಮೋಹನದಾಸ ಗಾಂಧಿಯವರ ಹತ್ಯೆ ಮಾಡಿದರು. ಹಾಗಾದರೆ ಇಲ್ಲಿ ಹೀಗೆ ಹೇಳಬೇಕಿತ್ತೇ, ಅಂದರೆ, ‘ಭಾರತೀಯರು ಸ್ವಾತಂತ್ರ್ಯವನ್ನು ಕೇಳಿದರು, ಆದ್ದರಿಂದ ಮತಾಂಧರು ಸ್ವತಂತ್ರ ದೇಶವನ್ನು ಕೇಳಿದರು ಮತ್ತು ಸ್ವತಂತ್ರ ದೇಶವನ್ನು ಪಡೆದ ನಂತರವೂ ಹಿಂದೂಗಳ ಹತ್ಯೆಯಾಯಿತು, ಹಾಗಾದರೆ ಹಿಂದೂಗಳು ಸ್ವಾತಂತ್ರ್ಯವನ್ನು ಕೇಳಬಾರದಿತ್ತು’, ಎಂದು ಹೇಳುವುದು ಸರಿಯೇ ? ಇದೇ ನ್ಯಾಯವನ್ನು ಅನ್ವಯಿಸಲಿಕ್ಕಿದ್ದರೆ, ನಥೂರಾಮ ಗೋಡ್ಸೆಯವರು ಗಾಂಧಿಯ ಹತ್ಯೆ ಮಾಡಿರುವ ವಿಷಯವೂ ಹೀಗೆಯೇ ಎಂದು ಹೇಳಬಹುದಲ್ಲವೇ ? ಎಂದು ಯಾರ ಮನಸ್ಸಿನಲ್ಲಾದರೂ ಬಂದರೆ ತಪ್ಪೇನಿದೆ ?

೫. ನ್ಯಾಯಾಧೀಶರು ಎಲ್ಲ ಆಯಾಮಗಳಲ್ಲಿಡಬೇಕು !

ನ್ಯಾಯಾಧೀಶರು ತಮ್ಮ ಮುಂದೆ ಬಂದಿರುವ ಪ್ರಕರಣಗಳು ಹೇಗಿವೆ ? ಎಂಬುದನ್ನು ನೋಡಬೇಕು. ಅದೇ ರೀತಿ ಅರ್ಜಿದಾರರ ಪರವಾಗಿ ಹಿಂದೆ ಏನಾದರೂ ತೀರ್ಪುಪತ್ರದ ಸಂದರ್ಭವಿದೆಯೇ ? ಎಂಬುದರ ಬಗ್ಗೆಯೂ ವಿಚಾರ ಮಾಡಬೇಕು. ಆಯಾ ಖಟ್ಲೆಯಲ್ಲಿ ಅರ್ಜಿಯನ್ನು ಸಮ್ಮತ ಆಥವಾ ಅಸಮ್ಮತವೆಂದು ಮಾಡಬೇಕು; ಆದರೆ ಅರ್ಜಿಯ ತೀರ್ಪು ನೀಡುವಾಗ ಅದಕ್ಕನುಸಾರ ಇರುವ ಆದೇಶವನ್ನು ನೀಡದೆ ಮತಾಂಧರು ಮಾಡಿರುವ ಎಲ್ಲ ಅಯೋಗ್ಯ ಕೃತ್ಯಗಳಿಗೆ ಕೇವಲ ಅರ್ಜಿದಾರರೇ ಹೊಣೆಯೆಂದು ನಿರ್ಧರಿಸಬೇಕೆ ? ಮತಾಂಧರು ಕೇವಲ ಕನ್ಹಯ್ಯಾಲಾಲ ತೇಲಿ ಇವರ ಹತ್ಯೆ ಮಾತ್ರವಲ್ಲ, ನೂರಾರು ಕಡೆಗಳಲ್ಲಿ ಹಿಂಸಾಚಾರವನ್ನೂ ಮಾಡಿದ್ದಾರೆ, ಹಾಗಾದರೆ ‘ಹಿಂಸಾಚಾರದ ಮೇಲಿನ ಕಾರ್ಯಾಚರಣೆಯ ವಿಷಯದಲ್ಲಿ ಮಾತನಾಡಬೇಕೆ ಅಥವಾ ಕಾನೂನನ್ನು ಕೈಗೆತ್ತಿಕೊಳ್ಳುವವರ ಭಾವನೆ ಯೋಗ್ಯವಾಗಿದೆ’, ಎನ್ನಬೇಕೇ ? ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ನ್ಯಾಯಾಧೀಶ ಸೂರ್ಯಕಾಂತ ಇವರು ನೂಪುರ್ ಶರ್ಮಾ ಇವರ ಪ್ರಕರಣದಲ್ಲಿ ಮಾಡಿರುವ ವಿಶ್ಲೇಷಣೆಯಿಂದ ಕೆಲವು ರಾಷ್ಟ್ರಪ್ರೇಮಿ ನಾಗರಿಕರು ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶ ಮತ್ತು ಕೇಂದ್ರೀಯ ವಿಧಿ ಮತ್ತು ನ್ಯಾಯಮಂತ್ರಿಯವರಿಗೆ ದೂರು ಹಾಗೂ ಮನವಿಯನ್ನು ಸಲ್ಲಿಸಲು ಆರಂಭಿಸಿದ್ದಾರೆ. ಸೂರ್ಯಕಾಂತರ ನಿರ್ಣಯದಿಂದ ರಾಷ್ಟ್ರ ಹಾಗೂ ಧರ್ಮ ಪ್ರೇಮಿಗಳಿಂದ ತೀವ್ರ ಸಂತಾಪ ವ್ಯಕ್ತವಾಗುತ್ತಿದೆ.

– (ಪೂ) ನ್ಯಾಯವಾದಿ ಸುರೇಶ ಕುಲಕರ್ಣಿ, ಸಂಸ್ಥಾಪಕ ಸದಸ್ಯರು, ಹಿಂದೂ ವಿಧಿಜ್ಞ ಪರಿಷತ್ತು ಹಾಗೂ ನ್ಯಾಯವಾದಿಗಳು, ಮುಂಬಯಿ ಉಚ್ಚ ನ್ಯಾಯಾಲಯ. (೧.೭.೨೦೨೨)