ಹಿಂದೂಗಳು ವೈಯಕ್ತಿಕ ಸುಖ-ದುಃಖ ಮತ್ತು ನಷ್ಟಗಳ ಬಗ್ಗೆ ಯೋಚಿಸದೆ ರಾಷ್ಟ್ರದ ರಕ್ಷಣೆಗೆ ಮುಂದಾದರೆ ಮಾತ್ರ ರಾಷ್ಟ್ರ ಉಳಿಯುವುದು ! – ಮಹಂತ ದೀಪಕ ಗೋಸ್ವಾಮಿ, ಜ್ಞಾನಮ್ ಫೌಂಡೇಶನ್

‘ವಿಶೇಷ ಸಂವಾದ : ‘೨೦೪೭ ರ ತನಕ ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಮಾಡಲು ಪಿ.ಎಫ್.ಐ. ನ ಪಿತೂರಿ ?’

ಮಹಂತ ದೀಪಕ ಗೋಸ್ವಾಮಿ, ಜ್ಞಾನಮ್ ಫೌಂಡೇಶನ್

೨೦೪೭ ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಶೇ. ೧೦ ರಷ್ಟು ಮುಸಲ್ಮಾನರು ಸಹಾಯ ಮಾಡಿದರೆ, ದುರ್ಬಲ ಬಹುಸಂಖ್ಯಾತರನ್ನು (ಹಿಂದೂಗಳು) ಮಂಡಿಯೂರಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಮಾಡುವೆವು’, ಎಂದು ಆತ್ಮವಿಶ್ವಾಸದಿಂದ ಹೇಳುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ (ಪಿ.ಎಫ್.ಐ.ನ) ಕಾಗದಪತ್ರಗಳನ್ನು ದುರ್ಲಕ್ಷಿಸದಿರಿ. ಇದೇ ವೃತ್ತಿಯಿಂದಾಗಿ ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಅಫ್ಘಾನಿಸ್ತಾನ, ಪಾಕಿಸ್ತಾನ, ಶ್ರೀಲಂಕಾಗಳನ್ನು ನಾವು ಕಳೆದುಕೊಂಡಿದ್ದೇವೆ. ಇಂದು ನಮಗೆ ಏನಾದರೂ ಹಾನಿಯಾಗುತ್ತದೆ ಎಂದು ನಾವು ಹೆದರಿ ಹಿಂದೆ ಸರಿಯುತ್ತಿದ್ದರೆ, ನಾಳೆ ರಾಷ್ಟ್ರವೇ ಉಳಿಯುವುದಿಲ್ಲ. ರಾಷ್ಟ್ರ ನಮ್ಮದಾಗಿ ಉಳಿಯದಿದ್ದರೆ ನಮ್ಮದೂ ಏನೂ ಉಳಿಯುವುದಿಲ್ಲ. ‘ಸೆಕ್ಯುಲರ್’ ಸರಕಾರವೂ ಇರುವುದಿಲ್ಲ. ಇಂದು ಜಾರ್ಖಂಡ್ ರಾಜ್ಯದ ಶಾಲೆಯೊಂದು ಮುಸಲ್ಮಾನ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ ೭೦ ಕ್ಕಿಂತ ಹೆಚ್ಚಾದ ನಂತರ ಹಿಂದೂ ವಿದ್ಯಾರ್ಥಿಗಳಿಗೆ ಕೈಮುಗಿದು ಪ್ರಾರ್ಥನೆ ಮಾಡುವುದನ್ನು ನೇರವಾಗಿ ನಿಷೇಧಿಸಿದೆ. ಈ ಕಾರಣದಿಂದ ಹಿಂದೂಗಳು ತಮ್ಮ ವೈಯಕ್ತಿಕ ಸುಖ-ದುಃಖ ಮತ್ತು ನಷ್ಟಗಳ ಬಗ್ಗೆ ಯೋಚಿಸದೆ ರಾಷ್ಟ್ರದ ರಕ್ಷಣೆಗೆ ಮುಂದಾದರೆ ಮಾತ್ರ ಈ ರಾಷ್ಟ್ರದ ರಕ್ಷಣೆಯಾಗುತ್ತದೆ, ಎಂದು ರಾಜಸ್ಥಾನದ ‘ಜ್ಞಾನಮ್ ಫೌಂಡೇಶನ್’ ಸಂಸ್ಥಾಪಕ ಮಹಂತ ದೀಪಕ ಗೋಸ್ವಾಮಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ‘೨೦೪೭ರ ತನಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪಿ.ಎಫ್.ಐ.ನ ಪಿತೂರಿ ?’ ಎಂಬ ವಿಷಯದ ಕುರಿತು ಆನ್‌ಲೈನ್ ‘ವಿಶೇಷ ಸಂವಾದ’ದಲ್ಲಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ಬಿಹಾರದ ‘ಭಾರತೀಯ ಜನಕ್ರಾಂತಿ ದಳ’ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ರಾಕೇಶ ದತ್ತ ಮಿಶ್ರಾ ಅವರು ಮಾತನಾಡುತ್ತಾ, ಬಿಹಾರದ ಘಟನೆಯಿಂದ ಪಿ.ಎಫ್.ಐ. ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಹೋಲಿಕೆ ತಪ್ಪಾಗಿದೆ. ಪಿ.ಎಫ್.ಐ. ವಿವಿಧ ಮಾರಕ ಆಯುಧಗಳ ತರಬೇತಿ ನೀಡುವ ಮೂಲಕ ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ಎಸಗುತ್ತಿದೆ, ಆದರೆ ರಾ.ಸ್ವ. ಸಂಘವು ದೇಶಪ್ರೇಮಿ ಸಂಘಟನೆಯಾಗಿದ್ದು, ನಾಗರಿಕರಿಗೆ ಸ್ವರಕ್ಷಣಾ ತರಬೇತಿಯನ್ನು ಕಲಿಸುತ್ತದೆ. ವಾಸ್ತವವಾಗಿ, ಸಂಘದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಬಿಹಾರ ಪೊಲೀಸ್ ಅಧಿಕಾರಿ ಮಾನವಜಿತ ಸಿಂಗ್ ಢಿಲ್ಲೋನ್ ಅವರಿಗೆ ಖಲಿಸ್ತಾನಿ ಭಯೋತ್ಪಾದಕರೊಂದಿಗೆ ಏನಾದರೂ ನಂಟಿದೆಯೇ, ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದರು.
ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸಿರಿ !

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡುತ್ತಾ, ತುರ್ಕಸ್ಥಾನದ ಬೇಹುಗಾರಿಕಾ ಗುಂಪು ‘ಐ.ಹೆಚ್.ಹೆಚ್.’ (IHH) ಜಗತ್ತಿನಾದ್ಯಂತ ದಾನದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಾಡುತ್ತಿದೆ. ಈ ಗುಂಪಿನೊಂದಿಗೆ ಪಿ.ಎಫ್.ಐ.ನ ಹಲವು ಸಭೆಗಳನ್ನು ನಡೆಸಲಾಗಿದೆ. ಚೀನಾದಿಂದ ಪಿ.ಎಫ್.ಐ.ಗೆ ಕೋಟ್ಯಂತರ ರೂಪಾಯಿ ಸಿಗುತ್ತಿದೆ. ಅದರದ್ದೇ ಆದ ಇನ್ನೊಂದು ಸಂಘಟನೆ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ (ಸಿ.ಎಫ್.ಐ.) ಮತ್ತು ಇತರ ಸಂಘಟನೆಗಳಿಗೆ ೧೦೦ ಕೋಟಿ ಸ್ವೀಕರಿಸಿದೆ ಎಂದು ‘ಇಡಿ’ ತನಿಖೆಯ ಸಮಯದಲ್ಲಿ ಬೆಳಕಿಗೆ ಬಂದಿದೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ವಿರೋಧಿಸಲು ಪಿ.ಎಫ್.ಐ.ಗೆ ವಿವಿಧ ದೇಶಗಳಿಂದ ೧೨೦ ಕೋಟಿ ರೂಪಾಯಿ ಸಿಕ್ಕಿದೆ. ಈ ಸಂಘಟನೆಯು ಅನೇಕ ಹಿಂದುತ್ವವಾದಿಗಳ ಹತ್ಯೆ ಮಾಡಿದೆ. ನಿಷೇಧಿತ ‘ಸಿಮಿ’ಯ ಜನರು ಪಿ.ಎಫ್.ಐ. ಸಂಘಟನೆ ಮೂಲಕ ದೇಶವಿರೋಧಿ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದೇ ಸಂಘಟನೆಯು ಕೇರಳದಲ್ಲಿ ರ‍್ಯಾಲಿಯಲ್ಲಿ ೧೦ ವರ್ಷದ ಬಾಲಕನೊಬ್ಬ ಹಿಂದೂಗಳ ನರಮೇಧಕ್ಕೆ ಕರೆ ನೀಡಿದ್ದಾನೆ. ಆದ್ದರಿಂದ ‘ಪಿ.ಎಫ್.ಐ’ಗೆ ಸಂಬಂಧಿಸಿದ ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಹೇಳಿದರು.