ಗುರುಪೂರ್ಣಿಮೆಯ ನಿಮಿತ್ತ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಸಂದೇಶ

ಭಗವಂತನ ಕೃಪೆಯನ್ನು ಸಂಪಾದಿಸಲು ಪ್ರಯತ್ನ ಹೆಚ್ಚಿಸಿ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಇಂದಿನ ಸ್ಥಿತಿಯಲ್ಲಿ ಸಾಮಾನ್ಯ ವ್ಯಕ್ತಿಗೆ ದೈನಂದಿನ ಜೀವನವನ್ನೂ ಜೀವಿಸಲು ಬಹಳ ಸಂಘರ್ಷ ಮಾಡಬೇಕಾಗುತ್ತಿದೆ. ಜೀವನ ಆನಂದಮಯವಾಗಲು ವ್ಯಕ್ತಿಯು ಸಾಧನೆ (ಈಶ್ವರಪ್ರಾಪ್ತಿಗಾಗಿ ದಿನನಿತ್ಯ ಮಾಡಬೇಕಾದ ಪ್ರಯತ್ನಗಳು) ಮಾಡುವುದು ಆವಶ್ಯಕವಾಗಿರುತ್ತದೆ. ಸದ್ಯ ನಿತ್ಯ ಸಾಧನೆಯನ್ನು ಮಾಡುವುದು ಕಠಿಣವೆನಿಸುತ್ತಿದ್ದರೆ ನೀವು ಎಲ್ಲಿರುವಿರೋ, ಅಲ್ಲಿ ದೇವರ ನಾಮಜಪವನ್ನು ಮಾಡುವುದು, ಸತತವಾಗಿ ದೇವರೊಂದಿಗೆ ಮಾತನಾಡುವುದು, ದೇವರಲ್ಲಿ ಹೆಚ್ಚೆಚ್ಚು ಪ್ರಾರ್ಥನೆ ಮಾಡುವುದು ಮತ್ತು ಶರಣು ಹೋಗುವುದು, ಪ್ರತಿಯೊಂದು ಕೃತಿಯ ಕರ್ತತ್ವವನ್ನು ದೇವರಿಗೆ ಅರ್ಪಿಸುವುದು ಇತ್ಯಾದಿ ಕೃತಿಗಳನ್ನು ಮಾಡಿ ! ಇದರಿಂದ ನಿಮ್ಮ ಮೇಲೆ ಈಶ್ವರನ ಕೃಪೆ ಬೇಗನೆ ಆಗುತ್ತದೆ. ಈ ವರ್ಷದ ಗುರುಪೂರ್ಣಿಮೆಯ ನಿಮಿತ್ತ ‘ನನ್ನ ಪ್ರತಿಯೊಂದು ಕೃತಿಯೂ ದೇವರ ಕೃಪೆಯನ್ನು ಸಂಪಾದಿಸಲೆಂದೇ ನೆರವೇರಲಿ’, ಎಂದು ಪ್ರಾರ್ಥಿಸಿ !

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ

ಧರ್ಮಸಂಸ್ಥಾಪನೆಗಾಗಿ ನಿಮ್ಮ ಕ್ಷಮತೆಗನುಸಾರ ಕೊಡುಗೆ ನೀಡಿ ! – ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಶ್ರೀ ಗುರುಗಳಿಗೆ ಅಪೇಕ್ಷಿತವಿರುವ ಧರ್ಮಕಾರ್ಯವನ್ನು ಮಾಡುವುದೇ ಶಿಷ್ಯನು ಸಲ್ಲಿಸುವ ನಿಜವಾದ ಗುರುದಕ್ಷಿಣೆಯಾಗಿರುತ್ತದೆ. ಸದ್ಯದ ಕಾಲವು ಧರ್ಮಸಂಸ್ಥಾಪನೆಗಾಗಿ, ಅಂದರೆ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಅನುಕೂಲವಾಗಿದೆ. ಈ ಕಾಲದಲ್ಲಿ ಸಮಾಜದಲ್ಲಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಧರ್ಮದ ರಕ್ಷಣೆಗಾಗಿ ಕೃತಿಶೀಲ ಕೊಡುಗೆ ನೀಡಲು ಪ್ರತಿಯೊಬ್ಬರು ತಮ್ಮ ಕ್ಷಮತೆಗನುಸಾರ ಯೋಗದಾನ ನೀಡುವುದೂ ಒಂದು ರೀತಿಯ ಗುರುಕಾರ್ಯವಾಗುತ್ತದೆ. ಯಾವುದೇ ಕಾರ್ಯವನ್ನು ಮಾಡುವ ಕ್ಷಮತೆ ಇಲ್ಲದಿರುವ ವ್ಯಕ್ತಿಯೂ ಪ್ರತಿದಿನ ದೇವತೆಗಳಿಗೆ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ಪ್ರಾರ್ಥನೆಯನ್ನು ಮಾಡಿ ಈ ಕಾರ್ಯದಲ್ಲಿ ಯೋಗದಾನವನ್ನು ನೀಡಬಹುದು. ಈ ಗುರುಪೂರ್ಣಿಮೆಯಿಂದ ಧರ್ಮಸಂಸ್ಥಾಪನೆಗಾಗಿ ಅಂದರೆ ಧರ್ಮಾಧಿಷ್ಠಿತ ಹಿಂದು ರಾಷ್ಟ್ರದ ಸ್ಥಾಪನೆಗಾಗಿ ತಮ್ಮ ಕ್ಷಮತೆಗನುಸಾರ ಹೆಚ್ಚೆಚ್ಚು ಕೊಡುಗೆ ನೀಡಲು ನಿರ್ಧರಿಸಿ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.