ಸಹಿಸಲು ಅಸಾಧ್ಯವಾಗಿರುವ ಯಾವುದೇ ವಿಷಯವನ್ನು ಎಂದಿಗೂ ಸಹಿಸಬಾರದು!

ನೆದರ್‌ಲ್ಯಾಂಡ ಶಾಸಕ ಗೀರ್ತ ವಿಲ್ಡರ್ಸ ಇವರ ಹಿಂದೂಗಳಿಗೆ ಕರೆ

ಆಂಸ್ಟರ್ಡ್ಯಾಮ್ (ನೆದರ್‌ಲ್ಯಾಂಡ) – ಒಂದು ವೇಳೆ ಜಾತ್ಯತೀತತೆಯ ಅರ್ಥ ‘ಓಲೈಕೆ’ ಎಂದಾಗಿದ್ದರೆ, ಅಲ್ಲಿ ಕಾನೂನಿಗೆ ಮಹತ್ವವಿರುವುದಿಲ್ಲ. ಭಾರತ ಮತ್ತು ಹಿಂದೂ ಸ್ನೇಹಿತರೇ, ನಿಮ್ಮ ಮೌಲ್ಯಗಳನ್ನು ರಕ್ಷಿಸಿ, ಸಹಿಸಲು ಅಸಾಧ್ಯವಾಗಿರುವ ವಿಷಯಗಳನ್ನು ಎಂದಿಗೂ ಸಹಿಸದಿರಿ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ರಕ್ಷಣೆಯ ಆವಶ್ಯಕತೆಯಿದೆ’, ಎಂದು ನೆದರ್‌ಲ್ಯಾಂಡಿನ ಶಾಸಕ ಮತ್ತು `ಪಾರ್ಟಿ ಆಫ್ ಫ್ರೀಡಂ’ ರಾಜಕೀಯ ಪಕ್ಷದ ಸಂಸ್ಥಾಪಕರಾದ ಗೀರ್ತ ವಿಲ್ಡರ್ಸ ಇವರು ಟ್ವೀಟ್ ಮೂಲಕ ಹಿಂದೂಗಳಿಗೆ ಕರೆ ನೀಡಿದರು.

ಇನ್ನೊಂದು ಟ್ವೀಟ್ ನಲ್ಲಿ ಭಾರತದ ಸಮರ್ಥಕರಾಗಿರುವ ವಿಲ್ಡರ್ಸ ಇವರು ಮುಂದುವರಿಸುತ್ತಾ, ಇಸ್ಲಾಂನ ಅಭಿಪ್ರಾಯದಲ್ಲಿ `ಹಿಂದೂ `ಕಾಫಿರ’ ಆಗಿದ್ದು, ಅಲ್ಲಾಹನ ಮೇಲೆ ವಿಶ್ವಾಸ ಇಡುವುದಿಲ್ಲ. ಅವರನ್ನು ನಾಶಗೊಳಿಸಬೇಕು’. ಇದು ಸ್ವೀಕರಿಸಲು ಸಾಧ್ಯವಿಲ್ಲ . ಜಾತ್ಯತೀತತೆಯ ಮರೆಯಲ್ಲಿ ಇಂತಹ ನಿರಂಕುಶ ವರ್ತನೆ ಅಥವಾ ಶಿರಚ್ಛೇದವನ್ನು ಮರೆಮಾಚಲು ಸಾಧ್ಯವಿಲ್ಲ. ನ್ಯಾಯಾಧೀಶರು ಶರಿಯತ ಕಾನೂನನ್ನು ವಿರೋಧಿಸಬೇಕು ಮತ್ತು ನೂಪುರ ಶರ್ಮಾರನ್ನು ಸಮರ್ಥಿಸಬೇಕು ಎಂದು ಹೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ನೂಪುರ ಶರ್ಮಾರ ವಿಷಯದಲ್ಲಿ ಮಾಡಿರುವ ಟೀಕೆಯ ಬಗ್ಗೆ ಟ್ವೀಟ !

ಇನ್ನೊಂದು ಟ್ವೀಟ್ ಮೂಲಕ ಭಾರತದ ಸರ್ವೋಚ್ಚ ನ್ಯಾಯಾಲಯದ ಹೆಸರನ್ನು ಹೇಳದೇ ಗಿಲ್ಡರ್ಸ ‘ಒಂದು ವೇಳೆ ನಿಮ್ಮ ಹೇಳಿಕೆಗಳನ್ನು ತಾಲಿಬಾನಿಗಳಂತಹ ಮುಸ್ಲಿಂ ಸಂಘಟನೆಗಳು ಸಮರ್ಥಿಸುತ್ತಿದ್ದರೆ, ನೀವು ಏನೋ ದೊಡ್ಡ ತಪ್ಪು ಮಾಡಿದ್ದೀರಿ ಎಂದು ತಿಳಿದುಕೊಳ್ಳಿ’ ಎಂದು ಹೇಳಿದರು.