ಗುರುಪೂರ್ಣಿಮೆಯ ನಂತರ ಬರುವ ಭೀಕರ ವಿಪತ್ತಿನಲ್ಲಿ ಸುರಕ್ಷಿತವಾಗಿರಲು ಗುರುರೂಪಿ ಸಂತರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿ !

ಗುರುಪೂರ್ಣಿಮೆ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆಯವರ ಸಂದೇಶ

ಪರಾತ್ಪರ ಗುರು ಡಾ. ಆಠವಲೆ

‘ಶ್ರೀಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವ ಭಕ್ತರಿಗೆ, ಸಾಧಕರಿಗೆ, ಶಿಷ್ಯರಿಗೆ ಹೀಗೆ ಅನೇಕರಿಗೆ ಗುರುಪೂರ್ಣಿಮಾ ಮಹೋತ್ಸವವು ‘ಕೃತಜ್ಞತಾ ಉತ್ಸವ’ವಾಗಿರುತ್ತದೆ. ಗುರುಗಳಿಂದಾಗಿಯೇ ಆಧ್ಯಾತ್ಮಿಕ ಸಾಧನೆಯು ಆರಂಭವಾಗಿ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ. ಸಾಧನೆ ಮಾಡದಿರುವ ವ್ಯಕ್ತಿಯು ಮಾತ್ರ ವ್ಯವಹಾರಿಕ ಜೀವನ ನಡೆಸುತ್ತಿರುವುದರಿಂದ ಅವರಿಗೆ ‘ಅಧ್ಯಾತ್ಮ’, ‘ಸಾಧನೆ’, ‘ಗುರು’, ‘ಗುರುಪೂರ್ಣಿಮೆ’ ಇಂತಹ ಪದಗಳೊಂದಿಗೆ ಏನೂ ಸಂಬಂಧವಿರುವುದಿಲ್ಲ. ಇವರೆಲ್ಲರಿಗೆ ಅಧ್ಯಾತ್ಮದ ಮಹತ್ವವು ಸ್ವಲ್ಪವಾದರೂ ಗಮನಕ್ಕೆ ಬರಲಿ, ಎಂದು ಮುಂಬರುವ ಭೀಕರ ವಿಪತ್ತಿನ ಬಗ್ಗೆ ಹೇಳುವ ಅವಶ್ಯಕತೆಯಿದೆ.

ಈ ಗುರುಪೂರ್ಣಿಮೆಯ ನಂತರ ಕೆಲವೇ ತಿಂಗಳಲ್ಲಿ ಕೇವಲ ಭಾರತದಲ್ಲಿ ಮಾತ್ರವಲ್ಲ; ಜಗತ್ತಿಗೇ ಭೀಕರ ವಿಪತ್ತಿನ ಅನುಭವವಾಗಲಿದೆ. ಕೆಲವು ದೇಶಗಳಲ್ಲಿ ಯುದ್ಧಜನ್ಯ ಪರಿಸ್ಥಿತಿಯಿಂದಾಗಿ ಪೆಟ್ರೋಲ್-ಡಿಸೆಲ್‌ನ ದರ ಹೆಚ್ಚಾಗಿ ಎಲ್ಲೆಡೆ ತೀವ್ರ ಬೆಲೆ ಏರಿಕೆ ಆಗಲಿದೆ. ದವಸಧಾನ್ಯ, ಔಷಧಗಳು, ಇಂಧನ ಇತ್ಯಾದಿಗಳ ತೀವ್ರ ಕೊರತೆ ಉಂಟಾಗಲಿದೆ. ಅನೇಕ ದೇಶಗಳಿಗೆ ಹಸಿವಿನ ಸಮಸ್ಯೆ ಎದುರಾಗಬಹುದು. ಯುದ್ಧಜನ್ಯ ಸ್ಥಿತಿಯಿಂದಾಗಿ ಉದ್ಭವಿಸಿದ ಆರ್ಥಿಕ ಕುಸಿತದಿಂದ ಬ್ಯಾಂಕ್‌ಗಳಿಗೆ ಪೆಟ್ಟು ಬೀಳಲಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಪ್ರತಿಯೊಂದು ಕುಟುಂಬವು ಆರ್ಥಿಕ ವಿಪತ್ತನ್ನು ಎದುರಿಸಬೇಕಾಗಬಹುದು ಇಂತಹ ಸ್ಥಿತಿ ಬರಲಿದೆ. ಮುಂದೆ ಈ ಯುದ್ಧವು ವಿಶ್ವ ಮಹಾಯುದ್ಧದಲ್ಲಿ ರೂಪಾಂತರವಾಗಲಿದೆ. ಆದ್ದರಿಂದ ಮೂರನೇ ಮಹಾಯುದ್ಧವು ಈಗ ಇನ್ನು ಹೆಚ್ಚು ದೂರವಿಲ್ಲ.

ಭಾರತದಲ್ಲಿಯೂ ಧಾರ್ಮಿಕ ಒಡಕಿನಿಂದಾಗಿ ಎಲ್ಲಾ ಕಡೆಗಳಲ್ಲಿ ಗಲಭೆ ಅಥವಾ ಪ್ರಚಂಡ ಹಿಂಸಾತ್ಮಕ ಘಟನೆಗಳು ನಡೆಯಲಿವೆ. ಇದರಿಂದಾಗಿ ಸಾಮಾಜಿಕ ಅಸುರಕ್ಷಿತತೆಯ ಪ್ರಶ್ನೆ ಉದ್ಭವಿಸಲಿದೆ. ಸದ್ಯ ಯಾರೇ ಅಧಿಕಾರದಲ್ಲಿದ್ದರೂ ದೇಶದ ಸ್ಥಿತಿ ಅರಾಜಕಸದೃಶ್ಯವಾಗಲಿದೆ. ಈ ಅರಾಜಕತೆಯನ್ನು ತಡೆಗಟ್ಟಲು ಯಾವುದೇ ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ಆದ್ದರಿಂದ ಈ ವಿಪತ್ತಿನಲ್ಲಿ ಇಂತಿಂತಹ ರಾಜಕೀಯ ಪಕ್ಷ ನಿಮ್ಮನ್ನು ಕಾಪಾಡುವುದು ಎಂಬ ಭ್ರಮೆಯಲ್ಲಿರಬೇಡಿ !

ಮುಂಬರುವ ಭೀಕರ ಕಾಲದಲ್ಲಿ ಆಧ್ಯಾತ್ಮಿಕ ರಕ್ಷಣಾಕವಚ ಇಲ್ಲದೇ ಸುರಕ್ಷಿತ ಜೀವನ ನಡೆಸಲು ಸಾಧ್ಯವಿಲ್ಲ; ಆದ್ದರಿಂದಲೇ ವಿಪತ್ತಿನ ಕಾಲದಲ್ಲಿ ಕೇವಲ ಭಗವಂತನಿಗೆ ಶರಣಾಗುತ್ತಾರೆ. ಈಶ್ವರನ ಸಗುಣ ರೂಪವಾಗಿರುವ ಸಂತರು ಸದಾಕಾಲ ಪೃಥ್ವಿಯ ಮೇಲಿರುತ್ತಾರೆ. ಈ ಗುರುರೂಪಿ ಸಂತರಿಗೆ ಶರಣಾಗಿ ಹಾಗೂ ಅವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿರಿ. ಗುರುರೂಪಿ ಸಂತರ ಕೃಪೆಯ ಕವಚ ಅಥವಾ ಸಾಧನೆಯ ಆಧ್ಯಾತ್ಮಿಕ ಬಲ ಇವುಗಳೇ ಮುಂದಿನ ೪-೫ ವರ್ಷಗಳ ಕಾಲ ಪೃಥ್ವಿಯ ಮೇಲಿನ ಎಲ್ಲಾ ಕೆಟ್ಟ ಕಾಲದಿಂದ ನಮ್ಮನ್ನು ಪಾರು ಮಾಡಲಿವೆ, ಈ ಬಗ್ಗೆ ಶ್ರದ್ಧೆಯನ್ನು ಇಡಿರಿ !

– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ.