ಹಿಂದೂ ಎಂದು ಹೇಳಿಕೊಂಡು ಹಿಂದು ಯುವತಿಯನ್ನು ವಂಚಿಸಿ ಮದುವೆಯಾಗಿದ್ದಕ್ಕಾಗಿ ಜುಬೇರ ಬಂಧನ


ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿನ ಮಹಮ್ಮದ ಶಮಿ ಅಲಿಯಾಸ್ ಜುಬೇರನು ತನ್ನನ್ನು ಸುರೇಶ ಎಂದು ಪರಿಚಯಿಸಿ ಒಬ್ಬ ಹಿಂದೂ ಯುವತಿಯನ್ನು ವಿವಾಹ ಮಾಡಿಕೊಂಡಿರುವ ಪ್ರಕರಣದಲ್ಲಿ ಬಂಧಿತ. ಯುವತಿಯೊಬ್ಬಳಿಗೆ ವಂಚನೆ, ಲೈಂಗಿಕದೌರ್ಜನ್ಯ ಮತ್ತು ನಂತರ ಗರ್ಭಪಾತ ಮಾಡುವಂತೆ ಒತ್ತಾಯಿಸಿದ ಆರೋಪ ಅವನ ಮೇಲಿದೆ. ಈ ಯುವತಿಯನ್ನು ಮದುವೆಯಾದ ನಂತರ ಜುಬೇರ ಎರಡನೇ ಮದುವೆಯಾಗಿದ್ದ. ಜುಬೇರ ಸಂತ್ರಸ್ತೆಯನ್ನು ಫೇಸಬುಕನಲ್ಲಿ ಭೇಟಿಯಾಗಿದ್ದ. ಫೇಸಬುಕನಲ್ಲಿ ಸುರೇಶ ಪಾಲ ಎಂದು ಹೆಸರು ಇಟ್ಟುಕೊಂಡಿದ್ದ. ೨೦೧೮ರಲ್ಲಿ ಯುವತಿಯೊಂದಿಗೆ ಇಲ್ಲಿನ ಮಂಕಮೇಶ್ವರ ದೇವಸ್ಥಾನಕ್ಕೆ ತೆರಳಿ ಯುವತಿಯನ್ನು ವಿವಾಹವಾಗಿದ್ದನು. ನಂತರ ಆಕೆಗೆ ಚಿತ್ರಹಿಂಸೆ ಕೊಟ್ಟು ಎರಡು ಸಲ ಗರ್ಭಪಾತ ಮಾಡುವಂತೆ ಒತ್ತಾಯಿಸಲಾಯಿತು. ಆಕೆಯ ಮೇಲೆ ಮತಾಂತರವಾಗುವುದಕ್ಕೆ ಒತ್ತಡವನ್ನೂ ಹೇರಿದ್ದನು.

ಸಂಪಾದಕೀಯ ನಿಲುವು

ಲವ ಜಿಹಾದ ವಿರುದ್ಧದ ಕಾನೂನು ಜಾರಿಯಲ್ಲಿದ್ದರೂ ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ನಿಂತಿಲ್ಲ. ‘ಕೇವಲ ಕಾನೂನು ಮಾಡುವುದರಿಂದ ಅಪರಾಧಗಳು ನಿಲ್ಲುವದಿಲ್ಲ’ ಎಂಬುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಆರೋಪಿಗಳಿಗೆ ತಕ್ಷಣ ಕಠಿಣ ಶಿಕ್ಷೆಯಾದರೆ ಇತರ ಆರೋಪಿಗಳಲ್ಲಿ ಭಯ ಹುಟ್ಟುತ್ತದೆ!