ಹಿಂದೂ ರಾಷ್ಟ್ರದ ಸ್ಥಾಪನೆಗೆ ಮುಂದಾಳತ್ವ ವಹಿಸಿ ಕಾರ್ಯ ಮಾಡಿ

ಹಿಂದೂರಾಷ್ಟ್ರ ಅಧಿವೇಶನದ ಸಮಾರೋಪ ಭಾಷಣದಲ್ಲಿ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರ ಕರೆ !

೬ ದೇಶಗಳ ಸಹಿತ ಭಾರತದ ೨೬ ರಾಜ್ಯಗಳಲ್ಲಿನ ಹಿಂದುತ್ವನಿಷ್ಠರ ಸಹಭಾಗ !

ಸದ್ಗುರು ಡಾ. ಚಾರುದತ್ತ ಪಿಂಗಳೆ

ರಾಮನಾಥಿ – ಹಿಂದೂ ರಾಷ್ಟ್ರದ ಸ್ಥಾಪನೆಯು ಧರ್ಮಸಂಸ್ಥಾಪನೆಯ ಈಶ್ವರಿ ಕಾರ್ಯವಾಗಿದೆ. ಈಶ್ವರನು ಅವತರಿಸಿ ಕಾರ್ಯ ಮಾಡುತ್ತಾನೆ, ಆಗ ಭಕ್ತರು ಈ ಕಾರ್ಯದಲ್ಲಿ ತನ್ನ ಸಾಧನೆಯೆಂದು ಸಹಭಾಗಿಯಾಗುತ್ತಾರೆ. ಯಾರು ಕಾರ್ಯದಲ್ಲಿ ಸಹಭಾಗಿಯಾಗುತ್ತಾರೆ ಅವರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ ಹಾಗೂ ಮೃತ್ಯುವಿನ ನಂತರ ಪಾರಮಾರ್ಥಿಕ ಉನ್ನತಿಯು ಸುಲಭವಾಗಿ ಆಗುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯತ್ತ ತಟಸ್ಥರಾಗಿ ನೋಡುವುದನ್ನು ಬಿಟ್ಟು ಮುಂದಾಳತ್ವ ವಹಿಸಿ ಕಾರ್ಯ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಹತ್ತನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಸಮಾರೋಪ ಮಾರ್ಗದರ್ಶನದಲ್ಲಿ ಕರೆ ನೀಡಿದರು. ಅಧಿವೇಶನದಲ್ಲಿ ಭಾರತದ ೨೬ ರಾಜ್ಯಗಳ ಸಹಿತ, ಅಮೇರಿಕಾ, ನೇಪಾಳ, ಹಾಂಕಾಂಗ್, ಫಿಜಿ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡಿನಿಂದ ೧೧೭ ಹಿಂದುತ್ವನಿಷ್ಠ ಸಂಘಟನೆಗಳ ೪೦೦ ಕ್ಕೂ ಹೆಚ್ಚು ಹಿಂದುತ್ವನಿಷ್ಠರು ಸಹಭಾಗಿಯಾಗಿದ್ದರು.

ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಭಾವಿ ವಿಷಯ ಮಂಡನೆ ಮಾಡುವ ವಕ್ತಾರರಾಗಿ

ಪ್ರಸ್ತುತ ಎಲ್ಲೆಡೆ ವೈಚಾರಿಕ ಮಟ್ಟದಲ್ಲಿ ಧೃವೀಕರಣವಾಗುತ್ತಿರುವಾಗ ನಾವು ಸ್ವತಃ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಭಾವಿ ವಿಷಯ ಮಂಡಿಸಲು ವಕ್ತಾರರಾಗಬೇಕು ಹಾಗೂ ಲೇಖನ, ಸಾಮಾಜಿಕ ಜಾಲತಾಣ ಮಾಧ್ಯಮಗಳು ಮುಂತಾದ ಮಾಧ್ಯಮದಿಂದ ವೈಚಾರಿಕ ಕಾರ್ಯ ಮಾಡಬೇಕೆಂದು ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಈ ಸಮಯದಲ್ಲಿ ಕರೆ ನೀಡಿದರು.

ಜೂನ್ ೧೨ ರಿಂದ ನಡೆದ ಈ ಅಧಿವೇಶನದ ಜೂನ್ ೧೮ ರಂದು ಸಮಾರೋಪವಾಯಿತು. ಅಧಿವೇಶನ ಮುಗಿದ ನಂತರ ತಮ್ಮ ತಮ್ಮ ಪ್ರದೇಶಕ್ಕೆ ಹೋದ ಮೇಲೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮರ್ಪಿತರಾಗಿ ಕಾರ್ಯ ಮಾಡುವುದಾಗಿ ಉಪಸ್ಥಿತ ಎಲ್ಲಾ ಹಿಂದುತ್ವನಿಷ್ಠರು ನಿರ್ಧರಿಸಿದರು.

ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮಾತು ಮುಂದುವರೆಸುತ್ತಾ,

೧. ಪ್ರಾಂತ, ಭಾಷೆ, ಸಂಸ್ಥೆ, ಕಾರ್ಯಶೈಲಿ ಇತ್ಯಾದಿಗಳು ಭಿನ್ನವಾಗಿದ್ದರೂ ‘ಹಿಂದೂ ರಾಷ್ಟ್ರ’ವೇ ನಮ್ಮೆಲ್ಲರ ಗುರಿಯಾಗಿದೆ. ಪ್ರಸ್ತುತ ಅತ್ಯಲ್ಪ ಸಮಯದಲ್ಲಿ ೧೦೦ ಕೋಟಿ ಹಿಂದೂಗಳ ಸಂಘಟನೆ ಅಸಾಧ್ಯವಾಗಿದೆ. ಆದ್ದರಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮವಿಚಾರಿ ಹಿಂದೂ ಶಕ್ತಿಗಳನ್ನು ಒಗ್ಗೂಡಿಸುವುದು ಮುಖ್ಯವಾಗಿದೆ.

೨. ಹಿಂದೂ ರಾಷ್ಟ್ರದಿಂದ ಪ್ರೇರಿತರಾದ ಎಲ್ಲಾ ಹಿಂದೂಶಕ್ತಿ ಒಗ್ಗಟ್ಟಾದಾಗ ಹಿಂದೂ ರಾಷ್ಟ್ರ ಆಗುವುದು. ಅದಕ್ಕಾಗಿ ಯಾವುದೇ ಚುನಾವಣೆ ಅಥವಾ ಯಾರ ಬೌದ್ಧಿಕ ಪ್ರಶ್ನೆಗಳಿಗೆ ಉತ್ತರಿಸುವ ಅವಶ್ಯಕತೆ ಇರುವುದಿಲ್ಲ.

೩. ಕೇವಲ ಭಾರತ ಸಾಂವಿಧಾನಿಕವಾಗಿ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ ಹಿಂದೂಗಳ ಗೌರವ ರಕ್ಷಣೆ ಆಗುವುದಿಲ್ಲ. ನಾವು ಧರ್ಮಾಧಾರಿತ ಹಿಂದೂ ರಾಷ್ಟ್ರದ ಬೀಜ ಬಿತ್ತಬೇಕಾಗುವುದು. ಧರ್ಮಾಧಾರಿತ ರಾಜ್ಯಭಾರ ಆಗುವುದಿಲ್ಲವೋ ಅಲ್ಲಿಯವರೆಗೆ ಗೋವು, ಗಂಗೆ, ವೇದ, ದಾನಶೂರ ಮುಂತಾದವರ ಪೂರ್ಣ ರಕ್ಷಣೆಯಾಗದು.

೪. ಕಾಲಪ್ರವಾಹ ಹಿಂದೂ ರಾಷ್ಟ್ರಕ್ಕಾಗಿ ಅನುಕೂಲವಾಗುತ್ತಿದೆ, ಎಂಬುದನ್ನು ಗಮನದಲ್ಲಿಡಿ. ೧೦ ವರ್ಷಗಳ ಮೊದಲು ಆಯೋಜಿಸಲಾದ ಹಿಂದೂ ರಾಷ್ಟ್ರದ ಮೊದಲ ಅಧಿವೇಶನದ ಸಮಯದಲ್ಲಿ ಎಲ್ಲರೂ ‘ಹಿಂದೂ ರಾಷ್ಟ್ರ’ ಶಬ್ದ ಪ್ರಯೋಗದ ಕಡೆಗೆ ಸಂಶಯದ ದೃಷ್ಟಿಯಿಂದ ನೋಡುತ್ತಿದ್ದರು.  ಆದರೆ ಇಂದು ಸಂಸತ್ತಿನಲ್ಲಿ ಇರಲಿ ಅಥವಾ ಜನಸಮೂಹದಲ್ಲಿ ಹಿಂದೂ ರಾಷ್ಟ್ರ ಈ ಶಬ್ದ ಪ್ರಚಲಿತವಾಗಿದೆ. ಇದು ಕಾಲದ ಮಹಿಮೆಯಾಗಿದೆ.

೫. ಭಾರತ ಅಂತರರಾಷ್ಟ್ರೀಯ ಮಟ್ಟದಲ್ಲಿ ತಟಸ್ಥವಾಗಿದ್ದರು, ಭವಿಷ್ಯದಲ್ಲಿ ಯಾವುದಾದರೂ ಒಂದು ಕಡೆಗೆ ಯುದ್ಧದಲ್ಲಿ ಸಹಭಾಗಿಯಾಗಬೇಕಾಗುವುದು. ವರ್ತಮಾನ ಸ್ಥಿತಿ ನೋಡಿದರೆ ಯುದ್ಧ ಬಹಳ ದೂರವಾಗಿಲ್ಲ ಎಂದು ಅನಿಸುತ್ತದೆ.

೬. ‘ಕಾಶ್ಮೀರಿ ಫೈಲ್ಸ್’ ಚಲನಚಿತ್ರ ಪ್ರದರ್ಶಿತವಾದ ನಂತರ ನಡೆದಿರುವ ದಂಗೆ ಹಾಗೂ ಶ್ರೀರಾಮನವಮಿ ಮತ್ತು ಹನುಮ ಜಯಂತಿಯ ದಿನದಂದು ನಡೆದಿರುವ ಮೆರವಣಿಗೆಯ ಮೇಲೆ ಮತಾಂಧರಿಂದಾದ ದಾಳಿ, ಇದೆಲ್ಲಾ ಭವಿಷ್ಯದಲ್ಲಿನ ಗೃಹ ಯುದ್ಧದ ತಾಲೀಮಾಗಿದೆ ಇದನ್ನು ಗಮನಿಸಬೇಕು.

೭. ಅರಾಜಕತೆ ನಿರ್ಮಾಣವಾದರೆ ಆಗ ದೇಶದ ಆಂತರಿಕ ಮತ್ತು ಬಾಹ್ಯ ಗಡಿಗಳು ಅಸುರಕ್ಷಿತವಾಗುತ್ತದೆ, ಇಂತಹ ಸಮಯದಲ್ಲಿ ಗಡಿಯ ಹೊರಗಿನಿಂದ ಆಕ್ರಮಣ ಮತ್ತು ಗೃಹಯುದ್ಧದ ಅಪಾಯ ಇರುತ್ತದೆ. ಗಡಿಯಲ್ಲಿ ಸೈನಿಕರು ಭಾರತದ ರಕ್ಷಣೆ ಮಾಡುವರು, ಆದರೆ ಆಂತರಿಕ ಭದ್ರತೆಗಾಗಿ ದೇಶಭಕ್ತ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಇವರಿಗೆ ಶಾರೀರಿಕ ಮಟ್ಟದಲ್ಲಿ ಕಾರ್ಯ ಮಾಡಬೇಕಾಗುತ್ತದೆ.