“ಕರ್ನಾಟಕ ರಾಜ್ಯದಿಂದ ಆರಂಭವಾದ ‘ಹಿಜಾಬ್ ವಿರೋಧಿ ಆಂದೋಲನ’ವು ಅನಂತರ ರಾಷ್ಟ್ರಮಟ್ಟದ ವಿಷಯವಾಯಿತು. ಅದರಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ‘ಹಿಜಾಬ್’ ಕೋರಿ ಅರ್ಜಿ ಸಲ್ಲಿಸಿದ್ದರು. ನನ್ನ ಅನೇಕ ನ್ಯಾಯವಾದಿ ಸ್ನೇಹಿತರ ಕೋರಿಕೆಯ ಮೇರೆಗೆ, ನಾನು ಈ ಪ್ರಕರಣವನ್ನು ಹೋರಾಡಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದ ತೀರ್ಪು ಬಹಳ ಅಭ್ಯಾಸಪೂರ್ಣವಾಗಿತ್ತು. ಹೀಗಿದ್ದರೂ ಮುಸಲ್ಮಾನರು ಇದನ್ನು ಒಪ್ಪದೆ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದಲ್ಲಿ ಖಟ್ಲೆಯನ್ನು ನಡೆಸಲು ಬಹಳಷ್ಟು ಹಣ ಬೇಕಾಗುತ್ತದೆ. ಮುಸಲ್ಮಾನ ಅರ್ಜಿದಾರರು ಈ ನಿಧಿಯನ್ನು ಖರ್ಚು ಮಾಡಲು ಸಿದ್ಧರಾಗಿದ್ದಾರೆ. ಇದರಿಂದ ಇದರ ಹಿಂದಿನ ಷಡ್ಯಂತ್ರ ಗಮನಕ್ಕೆ ಬರುತ್ತದೆ. ಆದರೆ ಇದಾದ ನಂತರ ಕರ್ನಾಟಕದ ಹಿಂದೂಗಳು ಅಭೂತಪೂರ್ವ ಒಗ್ಗಟ್ಟು ಪ್ರದರ್ಶಿಸಿ ಅವರಿಗೆ ಪ್ರತ್ಯುತ್ತರ ನೀಡಿದರು. ಹಿಂದೂ ಉತ್ಸವಗಳಂದು ದೇವಸ್ಥಾನಗಳ ಪರಿಸರದಲ್ಲಿ ಅನ್ಯ ಧರ್ಮದವರ ಅಂಗಡಿಗಳನ್ನು ತೆರೆಯದಂತೆ ನಿರ್ಧಾರ ಕೈಗೊಂಡರು. ನ್ಯಾಯಾಲಯದ ತೀರ್ಪನ್ನು ಒಪ್ಪದವರಿಗೆ ಕರ್ನಾಟಕ ರಾಜ್ಯದ ಹಿಂದೂಗಳು ತಕ್ಕ ಪಾಠ ಕಲಿಸಿದ್ದಾರೆ
ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳನ್ನು ‘ಎರಡನೇ ದರ್ಜೆಯ ಪ್ರಜೆ’ಯೆಂಬಂತೆ ವರ್ತಿಸಲಾಗುತ್ತಿದೆ ! – ಎಂ. ನಾಗೇಶ್ವರ ರಾವ, ಮಾಜಿ ಪ್ರಭಾರಿ ಮಹಾನಿರ್ದೇಶಕರು, ಸಿಬಿಐಸಂವಿಧಾನಕ್ಕನುಸಾರ ಸಿಗುವ ೫ ಹಕ್ಕುಗಳ ಪೈಕಿ ಹಿಂದೂಗಳಿಗೆ ಕೇವಲ ರಾಜಕೀಯ ಹಕ್ಕುಗಳು ಮಾತ್ರ ಇವೆ; ಆದರೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಈ ಕ್ಷೇತ್ರಗಳಲ್ಲಿ ಹಿಂದೂಗಳಿಗೆ ಸಮಾನ ಸಾಂವಿಧಾನಿಕ ಹಕ್ಕುಗಳ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಹಿಂದೂಗಳನ್ನು ಎರಡನೇ ಶ್ರೇಣಿಯ ನಾಗರಿಕರನ್ನಾಗಿ ಮಾಡಲಾಗಿದೆ. ಆದ್ದರಿಂದ ಹಿಂದೂಗಳಿಗೆ ಸಮಾನ ಹಕ್ಕು ನೀಡಲು ಪ್ರಯತ್ನಿಸಬೇಕು. ಕಾಶ್ಮೀರದಲ್ಲಿ ೯೦ ನೇ ದಶಕದಲ್ಲಿ ಹಿಂದೂಗಳ ನರಮೇಧ ಮಾಡಲಾಯಿತು. ಲಕ್ಷಗಟ್ಟಲೆ ಹಿಂದೂಗಳು ಅಲ್ಲಿಂದ ಪಲಾಯನ ಗೈಯ್ಯುವಂತೆ ಒತ್ತಾಯಿಸಲಾಯಿತು; ಆದರೆ ಅವರನ್ನು ರಕ್ಷಿಸಲು ಯಾರೂ ಪ್ರಯತ್ನಿಸಲಿಲ್ಲ. ಯಾವ ಸಮಯದಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವರೋ, ಆಗ ದೇಶದ ಸಂವಿಧಾನದಲ್ಲಿನ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ. ಸರಕಾರ ಹಿಂದೂಗಳನ್ನು ಸಮರ್ಥಿಸುವುದೂ ಇಲ್ಲ. ಮಿಝೊರಾಮ್‌ನಲ್ಲಿ ಹಿಂದೂಗಳ ದೇವಸ್ಥಾನಗಳಿಲ್ಲ, ಅಲ್ಲಿ ಶೇ. ೧೦೦ ರಷ್ಟು ಕ್ರಿಶ್ಚಿಯನ್ ಜನಸಂಖ್ಯೆ ಇದೆ. ರಾಜ್ಯ, ಜಿಲ್ಲೆ, ಗ್ರಾಮಗಳಿಂದ ಹಿಂದೂಗಳು ಪಲಾಯನ ಗೈಯ್ಯುತ್ತಿದ್ದಾರೆ; ಆದರೆ ‘ಈ ಹಿಂದೂಗಳು ಇತರ ಸ್ಥಳಕ್ಕೆ ಎಲ್ಲಿಗೆ ಹೋಗುವರು ?’, ಎಂಬ ವಿಚಾರ ಮಾಡಬೇಕು. ಸಂವಿಧಾನದ ಕಲಂ ೧೨, ೨೫ ಮತ್ತು ೨೬ ಗಳನ್ನು ತೆಗೆದು ಕೇಂದ್ರ ಸರಕಾರದ ಮೂಲಕ ‘ಸೆಂಟ್ರಲ್ ಟೆಂಪಲ್ ಆಕ್ಟ’ (ಕೇಂದ್ರ ದೇವಸ್ಥಾನ ನಿರ್ವಹಣಾ ಕಾಯ್ದೆ) ಜಾರಿಗೆ ತರಬೇಕು. ಆ ಮೂಲಕ, ದೇವಾಲಯಗಳನ್ನು ಸರಕಾರದ ನಿಯಂತ್ರಣದಿಂದ ಮುಕ್ತ ಮಾಡಿ ಅವುಗಳನ್ನು ಹಿಂದೂಗಳಿಗೆ ನೀಡಬೇಕು. |