ಐಸ್‌ಕ್ರೀಮ್ ತಿನ್ನುವ ಮೊದಲು ಆರೋಗ್ಯದ ದೃಷ್ಟಿಯಿಂದ ವಿಚಾರ ಮಾಡಿರಿ !

ಬೇಸಿಗೆಯಲ್ಲಿ ಉಷ್ಣತೆಯನ್ನು ದೂರಗೊಳಿಸಲು ಐಸ್‌ಕ್ರೀಮ್, ಕುಲ್ಫಿಯಂತಹ ತಂಪು ಪದಾರ್ಥಗಳನ್ನು ತಿನ್ನಲಾಗುತ್ತದೆ. ಹೆಚ್ಚಿನ ಜನರಿಗೆ ಐಸಕ್ರೀಮ್ ಇಷ್ಟವಾಗುವುದರಿಂದ ಬೇಸಿಗೆಯಲ್ಲಿ ಅದರ ಬೇಡಿಕೆ ಹೆಚ್ಚಿರುತ್ತದೆ; ಆದರೆ ಈ ತಂಪು ಪದಾರ್ಥವು ವಾಸ್ತವದಲ್ಲಿ ನಿಮಗೆ ತಂಪು ನೀಡುವುದೇ ? ಇದರ ಉತ್ತರ ‘ಇಲ್ಲ’ ಎಂದಾಗಿದೆ.  ಐಸ್‌ಕ್ರೀಮ್‌ನಿಂದ ನಿಮಗೆ ತೀವ್ರ ಬಿಸಿಲಿನಲ್ಲಿ ತಂಪು ಅನಿಸಬಹುದು, ಆದರೆ ಐಸ್‌ಕ್ರೀಮ್‌ನ್ನು ಮಿತಿಮೀರಿ ತಿಂದರೆ ಅನೇಕ ಆರೋಗ್ಯದ ಸಮಸ್ಯೆಗಳು ನಿರ್ಮಾಣವಾಗಬಹುದು.

ಐಸ್‌ಕ್ರೀಮ್ ಶರೀರವನ್ನು ತಂಪು ಮಾಡದೇ, ಶರೀರದ ಉಷ್ಣತೆಯನ್ನು ಹೆಚ್ಚಿಸುತ್ತದೆ

ನಿಜವಾಗಿಯೂ ಐಸ್‌ಕ್ರೀಮ್ ನಿಮ್ಮ ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆಯೇ, ತಂಪು ಪದಾರ್ಥ ಶರೀರವನ್ನು ಹೇಗೆ ಬಿಸಿ ಮಾಡುತ್ತದೆ ? ಇದರ ಕಾರಣ ಮುಂದಿನಂತಿದೆ. ಯಾವಾಗ ನಾವು ಏನಾದರೂ ತಿನ್ನುತ್ತೇವೆಯೋ, ಆಗ ನಮ್ಮ ಶರೀರ ಅದನ್ನು ಪಚನ ಮಾಡುವ ಕೆಲಸವನ್ನು ಮಾಡುತ್ತದೆ. ಈ ಪ್ರಕ್ರಿಯೆಯನ್ನು ಮಾಡುವಾಗ ಊರ್ಜೆಯನ್ನು ಬಳಸಲಾಗುತ್ತದೆ ಮತ್ತು ಊರ್ಜೆಯಿಂದ ಶರೀರದ ತಾಪಮಾನ ಹೆಚ್ಚಾಗುತ್ತದೆ. ಕೆಲವು ಆಹಾರ ಪದಾರ್ಥಗಳನ್ನು ಪಚನಮಾಡಲು ಹೆಚ್ಚು ಮತ್ತು ಕೆಲವು ಆಹಾರಪದಾರ್ಥಗಳನ್ನು ಪಚನ ಮಾಡಲು ಕಡಿಮೆ ಊರ್ಜೆ ಬೇಕಾಗುತ್ತದೆ, ಉದಾ. ಹೆಚ್ಚು ಕೊಬ್ಬು (ಫ್ಯಾಟ್), ಪ್ರೋಟಿನ್ (ಪಿಷ್ಟಮಯಪದಾರ್ಥ) ಗಳಿರುವ ಆಹಾರವನ್ನು ಪಚನ ಮಾಡಲು ಶರೀರಕ್ಕೆ ಹೆಚ್ಚು ಶ್ರಮಪಡಬೇಕಾಗುತ್ತದೆ. ಐಸ್‌ಕ್ರೀಮ್ ತಿನ್ನುವಾಗ ಅದು ಎಷ್ಟೇ ತಂಪು ಅನಿಸುತ್ತಿದ್ದರೂ, ಅದು ಶರೀರಕ್ಕೆ ತಂಪನ್ನು ನೀಡುವುದಿಲ್ಲ, ತದ್ವಿರುದ್ಧ ಶರೀರದ ಉಷ್ಣತೆಯನ್ನು ನಿರ್ಮಿಸುತ್ತದೆ.

ಐಸ್‌ಕ್ರೀಮ್‌ನ ಅತಿಸೇವನೆ ಆಪಾಯಕಾರಿ !

ಐಸ್‌ಕ್ರೀಮ್‌ನಲ್ಲಿ ಹಾಲು, ಚಾಕಲೇಟ್, ಅನೇಕ ವಿಧದ ಡ್ರೈಫ್ರುಟ್ಸ್ (ಒಣ ಹಣ್ಣುಗಳು), ಚೆರಿ ಇತ್ಯಾದಿಗಳನ್ನು  ಬಳಸಲಾಗುತ್ತದೆ. ಅವುಗಳ ಹಲವು ಆರೋಗ್ಯದಾಯಕ ಲಾಭಗಳೂ ಇವೆ, ಆದರೆ ಐಸ್‌ಕ್ರೀಮ್ ಹೆಚ್ಚು ತಿಂದರೆ ಏನು ಹಾನಿಯಾಗುತ್ತದೆ ? ಎಂಬುದು ಗೊತ್ತಿರುವುದು ಆವಶ್ಯಕವಾಗಿದೆ.

೧. ಐಸ್‌ಕ್ರೀಮ್‌ನಲ್ಲಿ ಸಕ್ಕರೆ, ಕೊಬ್ಬು (ಫ್ಯಾಟ್) ಮತ್ತು ಹೆಚ್ಚು ಕ್ಯಾಲೋರೀಸ್ (ಉಷ್ಮಾಂಕ) ಇರುವುದರಿಂದ ಅವು ಆರೋಗ್ಯಕ್ಕೆ ಲಾಭದಾಯಕವಲ್ಲ. ಇದರಿಂದ ಸ್ಥೂಲಕಾಯ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ.

೨. ಐಸ್‌ಕ್ರೀಮ್‌ನಲ್ಲಿ ಪಿಷ್ಟಮಯ ಪದಾರ್ಥಗಳ ಪ್ರಮಾಣ ಹೆಚ್ಚಿರುತ್ತದೆ. ಇದರಿಂದ ‘ರಿಫೈಂಡ್ ಕಾರ್ಬೋಹೈಡ್ರೆಟ್ಸ್’ಗಳ ಅತಿ ಸೇವನೆಯಿಂದ ಶರೀರದಲ್ಲಿ ಕೊಬ್ಬು ಸಂಗ್ರಹವಾಗತೊಡಗುತ್ತದೆ.  ‘ಕಾರ್ಬೋಹೈಡ್ರೆಟ್ಸ್’ ಇವು ಊರ್ಜೆಯ (ಕ್ಯಾಲೋರೀಸ್) ಒಂದು ಉತ್ತಮ ಸ್ರೋತವಾಗಿವೆ, ಆದುದರಿಂದ ನೀವು ಐಸ್‌ಕ್ರೀಮ್‌ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.

೩. ಐಸ್‌ಕ್ರೀಮ್‌ನಲ್ಲಿ ‘ಸ್ಯಾಚುರೆಟೆಡ್ ಫ್ಯಾಟ್’ ಇರುತ್ತದೆ. (ಯಾವ ಎಣ್ಣೆಯ ಪದಾರ್ಥಗಳನ್ನು ಸಾಮಾನ್ಯ ತಾಪಮಾನದಲ್ಲಿಟ್ಟರೆ ಗಟ್ಟಿ ಆಗುತ್ತವೆಯೋ, ಅವುಗಳಿಗೆ ‘ಸ್ಯಾಚುರೆಟೆಡ್ ಫ್ಯಾಟ್’ ಎನ್ನುತ್ತಾರೆ.) ಐಸ್‌ಕ್ರೀಮ್ ತಿಂದರೆ ‘ಟ್ರೈಗ್ಲಿಸರೈಡ್’ ಮತ್ತು ‘ಕೊಲೆಸ್ಟ್ರಾಲ್’ನ ಪ್ರಮಾಣ ಹೆಚ್ಚಾಗುತ್ತದೆ. ಒಂದು ವೇಳೆ ಯಾವುದಾದರೊಬ್ಬ ವ್ಯಕ್ತಿಗೆ ಉಚ್ಚ ರಕ್ತದೊತ್ತಡ (ಬಿ.ಪಿ.) ಮತ್ತು ಹೆಚ್ಚು ತೂಕವಿದ್ದರೆ (ಸ್ಥೂಲಕಾಯವಿದ್ದರೆ) ಮತ್ತು ಅವನು ಪ್ರತಿದಿನ ಬಹಳಷ್ಟು ಐಸ್‌ಕ್ರೀಮ್ ತಿಂದರೆ ಹೃದ್ರೋಗದ ಅಪಾಯ ಹೆಚ್ಚಾಗಬಹುದು.

೪. ಒಂದು ಸಂಶೋಧನೆಗನುಸಾರ ‘ಸ್ಯಾಚುರೆಟೆಡ್ ಫ್ಯಾಟ್’ ಮತ್ತು ಸಕ್ಕರೆಯುಕ್ತ ಆಹಾರದಿಂದ ವಿಶಿಷ್ಟ ಕೌಶಲ್ಯ ಮತ್ತು ಸ್ಮರಣಶಕ್ತಿ ಕಡಿಮೆಯಾಗುತ್ತದೆ ಎಂದಿದೆ. ಇದು ಕೇವಲ ಒಂದು ಕಪ್ ಐಸ್‌ಕ್ರೀಮ್ ತಿಂದರೂ ಆಗಬಹುದು.

೫. ಐಸ್‌ಕ್ರೀಮ್‌ನಲ್ಲಿ ಬಹಳಷ್ಟು ಸಕ್ಕರೆ ಇರುತ್ತದೆ, ಆದುದರಿಂದ ಐಸ್‌ಕ್ರೀಮ್ ತಿಂದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹವಿರುವವರು ಐಸ್‌ಕ್ರೀಮ್ ಸೇವಿಸಬಾರದು.

೬. ಐಸ್‌ಕ್ರೀಮ್‌ನಲ್ಲಿ ಫ್ಯಾಟ್ ಹೆಚ್ಚಿರುತ್ತದೆ. ಫ್ಯಾಟ್ ಪಚನವಾಗಲು ಹೆಚ್ಚು ಸಮಯ ಮತ್ತು ಹೆಚ್ಚು ಊರ್ಜೆ ಬೇಕಾಗುತ್ತದೆ. ಸಾಮಾನ್ಯವಾಗಿ ಇದರಿಂದ ಬಾವು ಬರುವುದು, ಅಜೀರ್ಣವಾಗುವುದು ಮುಂತಾದ ಸಮಸ್ಯೆಗಳು ಉದ್ಭವಿಸಬಹುದು.

. ರಾತ್ರಿ ಐಸ್‌ಕ್ರೀಮ್ ತಿಂದರೆ ಅದು ಬೇಗನೆ ಪಚನವಾಗದ ಕಾರಣ ಒಳ್ಳೆಯ ನಿದ್ದೆ ಬರುವುದಿಲ್ಲ.

(ಆಧಾರ : ದೈನಿಕ ‘ಲೋಕಸತ್ತಾ’)