‘ಕ್ಷಮಾ ವೀರಸ್ಯ ಭೂಷಣಮ್ |’ ಇದರ ಬಗ್ಗೆ ಯೋಗ್ಯ ದೃಷ್ಟಿಕೋನ !

ಪೂ. ತನುಜಾ ಠಾಕೂರ

‘ಕ್ಷಮಾ ವೀರಸ್ಯ ಭೂಷಣಮ್ |’ ಅಂದರೆ ‘ಕ್ಷಮಾಶೀಲತೆಯು ವೀರರ ಅಲಂಕಾರವಾಗಿದೆ.’

ವ್ಯಷ್ಟಿ ಸ್ತರದಲ್ಲಿ ಯಾರಾದರೂ ನಿಮಗೆ ಮಾನಸಿಕ ನೋವನ್ನುಂಟು ಮಾಡಿದರೆ ಅಥವಾ ನಿಮ್ಮನ್ನು ತಿರಸ್ಕರಿಸಿದರೆ, ನೀವು ಅವನನ್ನು ಖಂಡಿತವಾಗಿಯೂ ಕ್ಷಮಿಸಬಹುದು; ಆದರೆ ಸಮಷ್ಟಿ ಸ್ತರದಲ್ಲಿ ಕೆಟ್ಟ ಪ್ರವೃತ್ತಿಯ ಜನರಿಂದ ಅತ್ಯಾಚಾರವಾಗುತ್ತಿದ್ದರೆ, ಅವರಿಗೆ ತಕ್ಷಣ ಅತ್ಯಂತ ಕಠೋರ ದಂಡವನ್ನು ವಿಧಿಸಬೇಕು; ಇಲ್ಲದಿದ್ದರೆ ಸಮಾಜದಲ್ಲಿ ಅಧರ್ಮ ಹೆಚ್ಚಾಗಲು ಸಮಯ ತಗಲಲಾರದು. ಇದರ ಒಂದು ಉದಾಹರಣೆಯನ್ನು ನೋಡೋಣ.

ಪಾಕಿಸ್ತಾನದ ದುಷ್ಕೃತ್ಯಗಳನ್ನು ನಾವು ಕ್ಷಮಿಸುತ್ತಾ ಬಂದಿದ್ದೇವೆ. ಅದರಿಂದ ಅವರ ಮನೋಬಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ನಾಲ್ಕೂ ಬದಿಗಳಿಂದ ದುಷ್ಕರ್ಮ (ಮಹಿಳೆಯರ ಮೇಲೆ ಅತ್ಯಾಚಾರ) ಗಳಾಗುತ್ತಿವೆ. ವಾಸ್ತವದಲ್ಲಿ ‘ದುಷ್ಕರ್ಮಗಳನ್ನು ಮಾಡುವವರಿಗೆ ೨ ದಿನಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಚಾವಟಿಯೇಟು ಕೊಟ್ಟು ಅವರಿಗೆ ಮೃತ್ಯು ದಂಡವನ್ನೇ ವಿಧಿಸಬೇಕು’, ಎಂದು ಸಾಮಾಜಿಕ ತಿಳುವಳಿಕೆ (ಅರಿವು) ಮತ್ತು ಜವಾಬ್ದಾರಿಯ ಅರಿವಿರುವ ಯಾವುದೇ ವ್ಯಕ್ತಿಗೆ ಅನಿಸಿದರೆ, ಅದರಲ್ಲಿ ಆಶ್ಚರ್ಯವೇನಿದೆ ? ಹೀಗೆ ಮಾಡಿದರೆ ಮಾತ್ರ ವಾಸನಾಂಧರ ಈ ಕೃತ್ಯಗಳು ತಕ್ಷಣ ನಿಲ್ಲುವವು. ‘ಯಾವ ಸಮಯದಲ್ಲಿ ಯಾವ ಗುಣದ ಆಧಾರ ಪಡೆಯಬೇಕು ?’,  ಇದನ್ನು ಶಾಸ್ತ್ರದ ಅಧ್ಯಯನಕಾರರಲ್ಲಿ ಕೇಳಿ ಅದನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜ ಮತ್ತು ರಾಷ್ಟ್ರಕ್ಕೆ ಕೇಡು ಬಗೆಯುವವನನ್ನು ಕ್ಷಮಿಸುವವನು ಷಂಢನಾಗಿರುತ್ತಾನೆ. ಇಂತಹ ಜನರು ಸಮಾಜ ಮತ್ತು ರಾಷ್ಟ್ರವನ್ನು ನಾಶ ಮಾಡುವವರಾಗಿರುತ್ತಾರೆ, ಇದನ್ನು ಗಮನದಲ್ಲಿಡಬೇಕು.’

– ಪೂ. ತನುಜಾ ಠಾಕೂರ, ಸಂಸ್ಥಾಪಕಿ, ವೈದಿಕ ಉಪಾಸನಾ ಪೀಠ (೨೦.೩.೨೦೧೩)