ಭಾರತದಲ್ಲಿ ಮೇಲಿಂದ ಮೇಲೆ ನಿರುದ್ಯೋಗದ ಅಂಶಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಇದಕ್ಕೆ ಆಡಳಿತ ಪಕ್ಷವನ್ನು ದೂಷಿಸುವ ರಾಜಕೀಯ ಸಂಪ್ರದಾಯ ಹೊಸದೇನಲ್ಲ. ಭಾಜಪ ಮತ್ತು ಇತರ ಆಗಿನ ವಿರೋಧಿ ಪಕ್ಷಗಳು ಅದನ್ನೇ ಮಾಡಿವೆ ಮತ್ತು ಇಂದು ಕಾಂಗ್ರೆಸ್ ಮತ್ತು ಇತರ ವಿರೋಧಿ ಪಕ್ಷಗಳೂ ಅದನ್ನೇ ಮಾಡುತ್ತಿವೆ. ಅಂದರೆ ಕೇಂದ್ರ ಸರಕಾರದಿಂದ ಯಾವೆಲ್ಲ ಒಳ್ಳೆಯ ಪ್ರಯತ್ನಗಳಾಗುತ್ತವೋ, ಅದರ ಶ್ರೇಯಸ್ಸು ಆಡಳಿತಾರೂಢ ಪಕ್ಷಗಳಿಗೆ ಸಿಗಬಾರದೆಂದು ಸಮಾಜದ್ರೋಹಿ ರಾಜಕಾರಣ ಮಾಡಲಾಗುತ್ತದೆ. ಸದ್ಯ ‘ಹಿಂದೂಪರ ವಿಚಾರಧಾರೆ ಹೊಂದಿರುವ ಮೋದಿ ಸರಕಾರ ಕೇಂದ್ರದಲ್ಲಿರುವಾಗ ಈ ರಾಜಕಾರಣವು ಉದ್ರೇಕದ ಸ್ಥಿತಿಗೆ ಹೋಗಿದೆ’, ಎಂದು ಹೇಳಲು ಅಡ್ಡಿಯಿಲ್ಲ. ಇದರಲ್ಲಿ ಮೂಲ ವಿಷಯ ಬದಿಗಿರುತ್ತದೆ ಮತ್ತು ಅದಕ್ಕೆ ವಿಚಿತ್ರ ಸ್ವರೂಪವು ಪ್ರಾಪ್ತವಾಗುತ್ತಿರುತ್ತದೆ. ಈ ಮಾಧ್ಯಮದಿಂದ ಸಮಾಜದ ದೊಡ್ಡ ವರ್ಗವೂ ದಾರಿ ತಪ್ಪುತ್ತಿದೆ. ಅನೇಕ ದಶಕಗಳ ಕಾಲ ತೊಳಲಾಡಿದ ‘ವನ್ ರ‍್ಯಾಂಕ್ ವನ್ ಪೆನ್ಶನ್’ ಈ ಸೈನ್ಯದ ನಿವೃತ್ತ ಅಧಿಕಾರಿಗಳಿಗಾಗಿ ಇರುವ ಮಹತ್ವಪೂರ್ಣ ಯೋಜನೆಯ ಪ್ರತ್ಯಕ್ಷ ಕಾರ್ಯಾಚರಣೆ ಮಾಡುವ ಭಾಜಪ ಸರಕಾರಕ್ಕೆ ಅನೇಕ ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು, ಅದು ಈ ಕಾರಣಕ್ಕಾಗಿಯೇ !
ರಕ್ಷಣಾತ್ಮಕ ಸವಾಲುಗಳು !
ಇಂದಿನ ವಿಷಯವೂ ಸೈನ್ಯಕ್ಕೆ ಸಂಬಂಧಿಸಿದೆ. ರಕ್ಷಣಾ ಸಚಿವಾಲಯವು ಯುವಕರಿಗಾಗಿ ‘ಅಗ್ನಿಪಥ’ವೆಂಬ ಸೈನ್ಯನೇಮಕಾತಿ ಅಭಿಯಾನವನ್ನು ಯೋಜಿಸಿದೆ. ಇದರ ಅಂತರ್ಗತ ಹದಿನೇಳುವರೆ ವರ್ಷದಿಂದ ೨೩ ವರ್ಷಗಳ ವಯೋಗುಂಪಿನ ಯುವಕರಿಗೆ ಸೈನ್ಯದಲ್ಲಿ ಭರ್ತಿಯಾಗಲು ಅನುಮತಿ ಇದೆ. ಅವರನ್ನು ‘ಅಗ್ನಿವೀರ’ ಎಂದು ಕರೆಯಲಾಗುವುದು. ಅವರ ಪೈಕಿ ಶೇ. ೭೫ ರಷ್ಟು ಯುವಕರನ್ನು ೪ ವರ್ಷಗಳ ನಂತರ ನಿವೃತ್ತ ಮಾಡಲಾಗುತ್ತದೆ. ಈ ಶೇ. ೭೫ ರಷ್ಟು ಯುವಕರಿಗೆ ನಂತರ ೧೦ ರಿಂದ ೧೨ ಲಕ್ಷ ರೂಪಾಯಿಗಳನ್ನು ನೀಡಲಾಗುವುದು; ಆದರೆ ನಿವೃತ್ತಿವೇತನದ ಸೌಲಭ್ಯವಿರುವುದಿಲ್ಲ. ಈ ಯೋಜನೆಯಿಂದ ಯುವಕರಲ್ಲಿ ಒಂದು ರೀತಿಯ ಶಿಸ್ತು ನಿರ್ಮಾಣವಾಗುವುದು, ಎಂದು ಹಲವರ ಹೇಳಿಕೆ ಇದೆ. ‘೨೦೧೪ ಕ್ಕೆ ಹೋಲಿಸಿದರೆ ಕಳೆದ ೮ ವರ್ಷಗಳಲ್ಲಿ ಭಾರತದಲ್ಲಿ ನಿರುದ್ಯೋಗವು ಹೆಚ್ಚು ಪ್ರಮಾಣದಲ್ಲಿ ಏರಿದೆ ಎಂದು ಕಾಂಗ್ರೆಸ್ ವಕ್ತಾರರು ಆರೋಪಿಸಿದ್ದಾರೆ. ಇದು ಎಷ್ಟರವರೆಗೆ ಸತ್ಯವಿದೆ, ಎಂಬುದು ಪತ್ತೆ ಹಚ್ಚುವ ವಿಷಯವಾಗಿದೆ; ಆದರೆ ‘ಅಗ್ನಿಪಥ’ದ ಮಾಧ್ಯಮದಿಂದ ಯುವಕರಿಗೆ ನಿಶ್ಚಿತವಾಗಿ ಉದ್ಯೋಗ ಲಭ್ಯವಾಗುವುದು. ಈ ಯೋಜನೆಯಲ್ಲಿ ಸಕಾರಾತ್ಮಕ ಅಂಶಗಳಿದ್ದರೂ ಅದರ ಬಗ್ಗೆ ಪ್ರಶ್ನೆಗಳನ್ನೂ ಕೇಳಲಾಗುತ್ತಿವೆ.
ಮೇಜರ್ ಜನರಲ್ (ನಿವೃತ್ತ) ಎ.ಕೆ. ಸಿವಾಚ ಇವರು, ಸರಕಾರ ಈ ಯೋಜನೆಯನ್ನು ಎಲ್ಲರಿಗೂ ನೇರವಾಗಿ ತೆರೆಯುವ ಮೊದಲು ಪ್ರಾಯೋಗಿಕ ಹಂತದಲ್ಲಿ ಅಂತರ್ಗತ ಯೋಜನೆ (ಪೈಲಟ್ ಪ್ರೊಜೆಕ್ಟ್)ಯನ್ನು ಹಮ್ಮಿಕೊಂಡು ಅದರ ಲಾಭ ಮತ್ತು ಹಾನಿಯ ಅಧ್ಯಯನ ಮಾಡುವುದು ಆವಶ್ಯಕವಾಗಿತ್ತು ಎಂದು ಹೇಳಿದ್ದಾರೆ. ಮೇಜರ್ ಜನರಲ್ (ನಿವೃತ್ತ) ಡಾ. ಜಿ.ಡಿ. ಬಕ್ಷಿ ಇವರು ಈ ಸಂದರ್ಭದಲ್ಲಿ ಮಹತ್ವಪೂರ್ಣ ನಿರೀಕ್ಷಣೆಗಳನ್ನು ದಾಖಲಿಸಿದ್ದಾರೆ. ವಿವಿಧ ಟ್ವಿಟ್ಸ್ ಮಾಡುತ್ತಾ ಅವರು, ಚೀನಾ ಮತ್ತು ಪಾಕ್‌ನಿಂದ ದೇಶಕ್ಕೆ ಅಪಾಯವಿರುವಾಗ ಸೈನ್ಯ ನೇಮಕಾತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವುದು ಆತ್ಮಘಾತವಾಗಿದೆ. ‘ಅಗ್ನಿಪಥ’ ಯೋಜನೆಯ ಮಾಧ್ಯಮದಿಂದ ಸರಕಾರದ ಹಣವನ್ನು ಉಳಿಸಬಹುದಾದರೂ ಅದರಿಂದ ಸೈನಿಕರಲ್ಲಿ ಅಸ್ಥಿರತೆ ನಿರ್ಮಾಣವಾಗಬಹುದು ಎಂದು ಹೇಳಿದರು. ಬಕ್ಷಿಯವರು ಮುಂದೆ ವಿವರಿಸುತ್ತಾ, ‘೪ ವರ್ಷಗಳ ಕಾಲ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಿದ ಇದೇ ಯುವಕರು ನಿವೃತ್ತರಾದಾಗ ಭಯೋತ್ಪಾದಕ ಸಂಘಟನೆಗಳಲ್ಲಿ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಿದೆ’, ಎಂದು ಹೇಳಿದರು. ಈ ಸಮಯದಲ್ಲಿ ಅವರು ‘ಒಟ್ಟು ದೇಶೀಯ ಉತ್ಪನ್ನದ ಪೈಕಿ (‘ಜಿಡಿಪಿ’ಯಲ್ಲಿನ) ಶೇ. ೩ ರಷ್ಟು ಭಾಗವನ್ನು ಈ ಸೈನ್ಯದ ಖರ್ಚಿಗಾಗಿ ಬಳಸಬೇಕೆಂದೂ ಆಗ್ರಹಿಸಿದರು. ಬಕ್ಷಿ ಇವರು ಪ್ರಸ್ತುತ ಪಡಿಸಿದ ಪ್ರಶ್ನೆಯು ಅಧ್ಯಯನಪೂರ್ಣ ಮತ್ತು ವಸ್ತುನಿಷ್ಠವಾಗಿದೆ. ಕೇಂದ್ರವು ಈ ಬಗ್ಗೆ ಅಧ್ಯಯನ ಮಾಡಿಲ್ಲ ಅಥವಾ ಈ ಯೋಜನೆಯು ಏಕಾಂಗಿಯಾಗಿದೆ, ಎಂದು ಹೇಳುವ ಹಾಗಿಲ್ಲ; ಆದರೆ ಈ ಸಮಸ್ಯೆಗಳಿಗೆ ಯೋಗ್ಯ ಪರಿಹಾರ ಕಂಡು ಹಿಡಿಯುವುದು ದೇಶದ ಅಖಂಡತೆಯನ್ನು ಉಳಿಸಲು ಅತ್ಯಂತ ಆವಶ್ಯಕವಾಗಿದೆ. ಈ ಸೇವಾನಿವೃತ್ತ ಹಿರಿಯ ಸೈನ್ಯಾಧಿಕಾರಿಗಳನ್ನು ದಿಗಿಲುಗೊಳಿಸುವ ಗಂಭೀರ ಮತ್ತು ಸಂಭಾವ್ಯ ಸಮಸ್ಯೆಗಳಿಗೆ ರಕ್ಷಣಾ ಸಚಿವಾಲಯವು ಸ್ಪಷ್ಟೀಕರಣ ನೀಡುವುದೂ ಆವಶ್ಯಕವಾಗಿದೆ.
ಇಂತಹ ‘ಅಗ್ನಿವೀರರು’ ಎಂದಿಗೂ ಬೇಡ !
ಇನ್ನೊಂದೆಡೆ ಅಗ್ನಿಪಥ ಯೋಜನೆಗೆ ಯುವಕರಿಂದ ದೊಡ್ಡ ಪ್ರಮಾಣದಲ್ಲಿ ವಿರೋಧವಾಗುತ್ತಿದೆ. ೧೬ ಜೂನ್ ಈ ದಿನದಂದು ಬಿಹಾರನ ಜಹಾನಾಬಾದ್, ನವಾದಾ, ಬಕ್ಸರ್, ಭಭುವಾ, ಆರಾ, ಮುಂಗೆರ, ಸಹರಸಾ, ಗಯಾ, ಸಿವಾನ ಮುಂತಾದ ಅನೇಕ ಸ್ಥಳಗಳಲ್ಲಿ ಯುವಕರು ಒಟ್ಟಾಗಿ ಹಿಂಸಾಚಾರ ಮಾಡಿದರು. ಕೆಲವು ಸ್ಥಳಗಳಲ್ಲಿ ಬೆಂಕಿ ಹಚ್ಚಿದರು ಮತ್ತು ಕೆಲವು ಸ್ಥಳಗಳಲ್ಲಿ ಬಸ್‌ಗಳನ್ನು ಧ್ವಂಸ ಮಾಡಿದರು. ನವಾದಾದಲ್ಲಿ ಭಾಜಪದ ಕಾರ್ಯಾಲಯಕ್ಕೆ ಮತ್ತು ಛಪ್ರಾದಲ್ಲಿ ಒಂದು ರೈಲು ಬೋಗಿಗೆ ಬೆಂಕಿಯನ್ನು ಹಚ್ಚಲಾಯಿತು. ಈ ಯೋಜನೆಯು ಹರಿಯಾಣಾ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳ ಮೇಲೂ ಪರಿಣಾಮ ಬೀರಿತು. ಇಷ್ಟು ಸ್ಥಳಗಳಲ್ಲಿ ಒಂದೇ ದಿನ ಏಕ ಕಾಲಕ್ಕೆ ವಿರೋಧ ಪ್ರದರ್ಶನ, ಇದು ಸಾಮಾನ್ಯ ವಿಷಯವಲ್ಲ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ನೋಡಬೇಕು; ಆದರೆ ಪ್ರತಿಭಟನಾನಿರತ ಯುವಕರು ಪ್ರದರ್ಶಿಸಿದ ವಿರೋಧಿಸುವ ಪದ್ಧತಿಯು ನಿಶ್ಚಿತವಾಗಿ ಖಂಡನೀಯವಾಗಿದೆ. ಭಿನ್ನಾಭಿಪ್ರಾಯವಿರುವುದು ನೈಸರ್ಗಿಕ ವಿಷಯವಾಗಿದೆ. ಅದನ್ನು ವಿರೋಧಿಸುವುದು ಪ್ರತಿಯೊಬ್ಬ ನಾಗರಿಕನಿಗೆ ಪ್ರಜಾಪ್ರಭುತ್ವವು ನೀಡಿದ ಮೂಲಭೂತ ಅಧಿಕಾರವಾಗಿದೆ; ಆದರೆ ವಿರೋಧಿಸುವ ಕೆಲವು ಪದ್ಧತಿಗಳಿವೆ. ನಮ್ಮಲ್ಲಿ ‘ಹಿಂಸಾಚಾರ ಮಾಡಿದರೆ ಮಾತ್ರ ಸರಕಾರವು ಆ ಕಡೆಗೆ ಗಮನ ನೀಡುತ್ತದೆ’, ಎಂಬ ತಪ್ಪು ಅಡಿಪಾಯ ಹಾಕಲಾಗಿದೆ. ಇಂದು ಕಾನೂನು-ವ್ಯವಸ್ಥೆಯನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಗಲಭೆ ನಡೆಸುತ್ತಿರುವ ಮುಸಲ್ಮಾನರ ವಿರುದ್ಧ ಕ್ರಮ ಕೈಗೊಳ್ಳುವಾಗ ಅವರ ಅಕ್ರಮ ಮನೆಗಳನ್ನು ಬುಲಡೋಝರ್‌ನಿಂದ ಕೆಡಹುತ್ತಿದೆ. ಇಂತಹ ಸಮಯದಲ್ಲಿ ಈ ಯುವಕರ ಮೇಲೆಯು ಸಹ ಕಾರ್ಯಾಚರಣೆಯಾಗಲೇಬೇಕು. ಪ್ರತಿಭಟನಾನಿರತ ಯುವಕರ ಹೇಳಿಕೆಗನುಸಾರ, ೪ ವರ್ಷಗಳ ನಂತರದ ನಿವೃತ್ತಿಯ ನಂತರ ಶೇ. ೭೫ ರಷ್ಟು ಯುವಕರ ಭವಿಷ್ಯ ಏನಾಗಬಹುದು, ಎಂಬ ಚಿಂತೆ ಅವರಿಗಿದೆ. ಅಂತಹ ಯುವಕರಿಗೆ ಸರಕಾರಿ ನೌಕರಿಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಭಾಜಪದ ಆಡಳಿತವಿರುವ ರಾಜ್ಯಗಳು ಸ್ಪಷ್ಟಪಡಿಸಿವೆ. ಯೋಗಿ ಆದಿತ್ಯನಾಥ ಇವರು, ‘ಯುವಕರು ದಿಕ್ಕಿತಪ್ಪಿಸುವವರಿಗೆ ಬಲಿಯಾಗಬಾರದು. ಉತ್ತರಪ್ರದೇಶ ಸರಕಾರ ‘ಅಗ್ನಿವೀರ’ರಿಗೆ ಪೊಲೀಸ್ ಮತ್ತು ಇತರ ಖಾತೆಗಳಲ್ಲಿ ಹಿರಿತನ ನೀಡಲಾಗುವುದು’, ಎಂದು ಹೇಳಿದ್ದಾರೆ. ಕೇಂದ್ರ ಹಾಗೂ ಇತರ ರಾಜ್ಯಗಳೂ ಈ ಬಗ್ಗೆ ಯುವಕರಿಗೆ ಭರವಸೆ ನೀಡುವುದು ಆವಶ್ಯಕವಾಗಿದೆ. ಹೀಗಿದ್ದರೂ ಹಿಂಸಾಚಾರ ಮಾಡಿದ ಯುವಕರ ಮೇಲೆ ಅಪರಾಧವನ್ನು ದಾಖಲಿಸಿ ಅವರನ್ನು ‘ಅಗ್ನಿವೀರ’ರಾಗದಂತೆ ತಡೆಗಟ್ಟಬೇಕು. ಯಾವ ಯುವಕರು ಸ್ವಾರ್ಥಕ್ಕಾಗಿ ದೇಶದ ಆಸ್ತಿ-ಪಾಸ್ತಿಗೆ ಹಾನಿ ಮಾಡುವರೋ, ಅವರು ‘ಅಗ್ನಿವೀರ’ರಾಗಿ ಯಾವ ದೇಶಹಿತವನ್ನು ಸಾಧಿಸುವರು ? ಅದಕ್ಕಾಗಿ ಅವರಿಗೆ ಅರ್ಹತೆಯಾದರೂ ಇದೆಯೇ ? ತದ್ವಿರುದ್ಧ ಮೇಜರ್ ಜನರಲ್ ಬಕ್ಷಿ ಇವರು ವ್ಯಕ್ತಪಡಿಸಿದ ಭೀತಿಯಂತೆ ಇದೇ ಪ್ರತಿಭಟನಾನಿರತ; ಆದರೆ ‘ಪ್ರಶಿಕ್ಷಿತ’ ಅಗ್ನಿವೀರರು ೪ ವರ್ಷಗಳ ನಂತರ ಭಯೋತ್ಪಾದಕ ಅಥವಾ ದೇಶವಿರೋಧಿ ಸಂಘಟನೆಗಳಲ್ಲಿ ಪಾಲ್ಗೊಳ್ಳಲಾರರು, ಎಂದು ಯಾರು ಖಾತರಿ ನೀಡುತ್ತಾರೆ ? ‘ಅಗ್ನಿ ವೀರ’ರು ದೇಶದ ವೀರಪುತ್ರರಾಗಬೇಕು, ಹೀನ ಸ್ವಾರ್ಥಕ್ಕಾಗಿ ಅಲ್ಲ, ಅವರು ದೇಶದ ಐಕ್ಯತೆ ಮತ್ತು ಅಖಂಡತೆಗಾಗಿ ಹೋರಾಡಬೇಕು.
ಭಯೋತ್ಪಾದನೆಯ ವಿರುದ್ಧ ಆಕ್ರಮಕರಾಗದಿದ್ದರೆ ವೀರ ಹಿಂದೂ ಹುತಾತ್ಮರು ಇಂದಿನ ಭಾರತೀಯ ನಾಯಕರನ್ನು ಧಿಕ್ಕರಿಸುವರುನಾವು ವಿದ್ವಂಸಕ ಹಾಗೂ ಸ್ಫೋಟಕ ಅಮಾನವೀಯ ಸಂಸ್ಕೃತಿಯ ವಾಹಕರಾಗಿರದೇ ಸೃಜನಾತ್ಮಕ ನಿರ್ಮಿತಿ ಹಾಗೂ ರಚನಾತ್ಮಕ ಕಾರ್ಯದ ಸಂಸ್ಕೃತಿಯಿರುವ ಸಮಾಜದ ಅಂಗವಾಗಿರುವುದು ಹೌದು. ಇಂತಹ ಸಮಯದಲ್ಲಿ ನಾವು ನಮ್ಮ ವಿರೋಧಕರ ಹಾಗೂ ಶತ್ರುಗಳೊಂದಿಗೆ ಸಹಿಷ್ಣುತೆಯಿಂದ ಉಳಿಯುವ ಹಾಗೂ ಅದರೊಂದಿಗೆ ಯಾವುದೇ ವೈಮನಸ್ಸನ್ನು ಇಟ್ಟುಕೊಳ್ಳುವುದಿಲ್ಲ, ಹೀಗೇಕೆ ? ನಮ್ಮ ಅಸ್ತಿತ್ವ ಹಾಗೂ ಶ್ರದ್ಧೆಯ ರಕ್ಷಣೆಗಾಗಿ ಆಗುವ ಲಕ್ಷಾವಧಿ ಬಲಿದಾನಗಳಿಂದ ಪ್ರೇರಿತರಾಗಿ ಭಯೋತ್ಪಾದನೆಯ ವಿರುದ್ಧ ಆಕ್ರಮಕರಾಗದಿದ್ದರೆ ನಮಗೆ ಎಂದಾದರೂ ಸಂತೋಷವಾಗುವುದೇ ? – ಶ್ರೀ. ವಿನೋದಕುಮಾರ ಸರ್ವೋದಯ, ಉತ್ತರಪ್ರದೇಶ (ಕೃಪೆ : ಸಾಪ್ತಾಹಿಕ ಹಿಂದೂ ಸಭಾ ವಾರ್ತಾ, ೧೧ ರಿಂದ ೧೭ ಎಪ್ರಿಲ್ ೨೦೧೮) |