ಗುರುಪೂರ್ಣಿಮಾ ನಿಮಿತ್ತ ಕರ್ನಾಟಕದ ಸಾಧಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಮಾರ್ಗದರ್ಶನ !
ಮಂಗಳೂರು – ಶಿಷ್ಯನ ಜನ್ಮ-ಜನ್ಮದ ಅಜ್ಞಾನ, ಅಂಧಃಕಾರವನ್ನು ದೂರ ಮಾಡಿ ಜ್ಞಾನರೂಪಿ ಬೆಳಕನ್ನು ನೀಡಿ ಶಿಷ್ಯನನ್ನು ಮೋಕ್ಷದ ದಾರಿಯಲ್ಲಿ ಮುಂದೆ ಕರೆದುಕೊಂಡು ಹೋಗುವವರೇ ಗುರುಗಳು. ಅದಕ್ಕಾಗಿ ನಮ್ಮನ್ನು ನಾವು ಗುರುಗಳಿಗೆ ಸಮರ್ಪಣೆ ಮಾಡಿಕೊಳ್ಳಬೇಕು. ಗುರುಪೂರ್ಣಿಮೆಯ ಸೇವೆಯು ಪ್ರಾರಂಭ ಆಗುತ್ತದೆ ಅಗಲೇ ೧೦೦೦ ಪಟ್ಟು ಗುರುತತ್ತ್ವವು ಜಾಗೃತವಾಗುತ್ತದೆ. ನಾವೆಲ್ಲರೂ ಗುರುಗಳಿಗೆ ನಮ್ಮ ತನು, ಮನ, ಧನದ ತ್ಯಾಗವನ್ನು ಮಾಡಿ ಇತರರಿಂದಲೂ ತ್ಯಾಗವನ್ನು ಮಾಡಿಸಿಕೊಂಡು ಗುರುಪೂರ್ಣಿಮೆಯ ಪೂರ್ಣ ಲಾಭವನ್ನು ಪಡೆಯೋಣ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು. ಅವರು ಇತ್ತೀಚೆಗೆ ಗುರುಪೂರ್ಣಿಮಾ ಮಹೋತ್ಸವದ ನಿಮಿತ್ತದ ಪೂರ್ವಭಾವಿಯಾಗಿ ನೆರವೇರಿದ ಆನ್ಲೈನ್ನಲ್ಲಿ ಶಿಬಿರದಲ್ಲಿ ಮಾರ್ಗದರ್ಶನ ಮಾಡುತ್ತಿದ್ದರು. ಶಿಬಿರದ ಉದ್ದೇಶವನ್ನು ಕರ್ನಾಟಕ ರಾಜ್ಯದ ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಅವರು ತಿಳಿಸಿದರು. ಶಿಬಿರದಿಂದಾಗಿ ಸಾಧಕರಲ್ಲಿ ಗುರುಪೂರ್ಣಿಮೆ ನಿಮಿತ್ತ ಹೆಚ್ಚೆಚ್ಚು ಗುರುಸೇವೆಯನ್ನು ಮಾಡುವ ಉತ್ಸಾಹ ದೊರಕಿತು.