ಬಂಗಾಲದ ಪ್ರಯಾಣ ಅರಾಜಕತೆಯ ಕಡೆಗೆ !

ಬಂಗಾಲದಲ್ಲಿ ಈಗ ಏನೆಲ್ಲ ನಡೆದಿದೆಯೋ, ಅದನ್ನು ನೋಡಿದರೆ ‘ಈ ರಾಜ್ಯ ಈಗ ಅರಾಜಕತೆಯ ಕಡೆಗೆ ಸಾಗುತ್ತಿದೆ’, ಎಂದು ಹೇಳಬಹುದು. ‘ಬಂಗಾಲದಲ್ಲಿ ಯಾವ ಅರಾಜಕತೆ ನಡೆದಿದೆಯೋ ಅದನ್ನು ನೋಡಿದರೆ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಎಂದು ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಂದ ಬೇಡಿಕೆ ಬರುತ್ತಿದೆ.

೧. ಮಮತಾ ಬ್ಯಾನರ್ಜಿಯವರ ಆಡಳಿತಾವಧಿಯಲ್ಲಿ ಕಾನೂನು-ಸುವ್ಯವಸ್ಥೆಯು ಕುಸಿದಿದೆ !

ಬಂಗಾಲದಲ್ಲಿನ ಬೀರಭೂಮ ಜಿಲ್ಲೆಯ ರಾಮಪೂರಹಾಟದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಒಬ್ಬ ಕಾರ್ಯಕರ್ತನ ಹತ್ಯೆಯಾಯಿತು. ಈ ಘಟನೆಯ ನಂತರ ಆ ಊರಲ್ಲಿ ಯಾವ ಭಯಾನಕ ಹಿಂಸಕ ಕೃತ್ಯಗಳು ನಡೆದವೋ ಅವು ಮನುಷ್ಯತ್ವಕ್ಕೆ ಮಸಿ ಬಳಿಯುವಂತಹವುಗಳಾಗಿವೆ, ಎಂದು ಹೇಳಿದರೆ ಆಶ್ಚರ್ಯವಾಗಲಿಕ್ಕಿಲ್ಲ. ತೃಣಮೂಲ ಕಾರ್ಯಕರ್ತನ ಹತ್ಯೆಯಾದ ನಂತರ ಕೆಲವು ಗಂಟೆಗಳಲ್ಲಿಯೇ ಜನರಗುಂಪು ಸಂಶಯವಿರುವ ಕುಟುಂಬದವರ ಮನೆಗಳ ಮೇಲೆ ಆಕ್ರಮಣ ಮಾಡಿತು. ಆ ಜನರು ಅವರ ಮನೆಗಳನ್ನು ಸುಟ್ಟು ಹಾಕಿದರು ಹಾಗೂ ಆ ಮನೆಯಲ್ಲಿ ವಾಸಿಸುತ್ತಿದ್ದ ೬ ಜನ ಮಹಿಳೆಯರನ್ನು ಮತ್ತು ಇಬ್ಬರು ಮಕ್ಕಳನ್ನು ಜೀವಂತ ಸುಟ್ಟರು. ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಕಾನೂನು-ವ್ಯವಸ್ಥೆಯು ಎಷ್ಟು ಕುಸಿದಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ತಮ್ಮ ವಿರೋಧಿಗಳನ್ನು ಮುಗಿಸಿ ಬಿಡಲು ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ಯಾವ ಹಂತಕ್ಕೆ ಹೋಗುತ್ತಾರೆ, ಎಂಬುದು ಈ ಉದಾಹರಣೆಯಿಂದ ತಿಳಿಯುತ್ತದೆ. ಬಂಗಾಲದಲ್ಲಿ ವಿಧಾನಸಭಾ ಚುನಾವಣೆಯಾದ ನಂತರ ತಮ್ಮ ವಿರುದ್ಧ ಮತದಾನ ಮಾಡಿದವರ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳು ಹೇಗೆ ಸೇಡು ತೀರಿಸಿಕೊಂಡರು, ಎಂಬುದನ್ನು ಜನರು ಮರೆಯುವ ಮೊದಲೇ ಬೀರಭೂಮದ ಘಟನೆ ಘಟಿಸಿತು.

೨. ಬೀರಭೂಮದಲ್ಲಿನ ಘಟನೆಯ ಸಂದರ್ಭದಲ್ಲಿ ಕೋಲಕಾತಾ ಉಚ್ಚ ನ್ಯಾಯಾಲಯದ ನಿರ್ಣಯದ ಮೂಲಕ ರಾಜ್ಯ ಸರಕಾರಕ್ಕೆ ಛಡಿಯೇಟು

ಬಂಗಾಲದಲ್ಲಿ ರಾಜಕೀಯ ಹಿಂಸಾಚಾರಗಳಾಗುವುದು ನಿತ್ಯದ ವಿಷಯಗಳೇ ಆಗಿವೆ. ೧೯೬೦ ರ ಮಧ್ಯದಿಂದ ಬಂಗಾಲ ರಾಜ್ಯದಲ್ಲಿ ರಾಜಕೀಯ ಹಿಂಸಾಚಾರಗಳು ಆಗಿಲ್ಲ, ಎಂಬ ಒಂದು ದಿನವೂ ಇಲ್ಲ. ಈಗ ಬೀರಭೂಮದ ಘಟನೆಯನ್ನು ‘ಸಿ.ಬಿ.ಐ.’ ತನಿಖೆ ಮಾಡುತ್ತಿದೆ; ಆದರೆ ಈ ತನಿಖೆಗೆ ಮಮತಾ ಸರಕಾರ ಪರೋಕ್ಷವಾಗಿ ವಿರೋಧಿಸುತ್ತಿದೆ. ‘ಸಿ.ಬಿ.ಐ.’ ಭಾಜಪದ ಆದೇಶವನ್ನು ಪಾಲಿಸಿದರೆ ನಾವು ಅದನ್ನು ವಿರೋಧಿಸುವೆವು’, ಎಂಬ ಎಚ್ಚರಿಕೆಯನ್ನು ಮಮತಾ ಬ್ಯಾನರ್ಜಿಯವರು ನೀಡಿದ್ದಾರೆ. ಹೀಗಿದ್ದರೂ ನ್ಯಾಯಾಲಯ ಈ ಪ್ರಕರಣದಲ್ಲಿ ಕೂಡಲೇ ಹೆಜ್ಜೆಗಳನ್ನಿಡಲು ಆದೇಶವನ್ನು ನೀಡಿದುದರಿಂದ ‘ಸಿ.ಬಿ.ಐ.’ಯ ತಂಡದವರು ತಕ್ಷಣ ಘಟನಾಸ್ಥಳಕ್ಕೆ ಹೋದರು. ಕೋಲಕಾತಾ ಉಚ್ಚ ನ್ಯಾಯಾಲಯವು ಈ ಘಟನೆಗೆ ಸಂಬಂಧಿಸಿದ ವಿಶೇಷ ಸಮಿತಿಯನ್ನು ರದ್ದುಪಡಿಸಿ ಈ ಘಟನೆಯನ್ನು ‘ಸಿ.ಬಿ.ಐ.’ಯ ಮೂಲಕ ವಿಚಾರಣೆ ಮಾಡುವ ನಿರ್ಣಯವನ್ನು ತೆಗೆದುಕೊಂಡು ‘ಒಂದು ಒಳ್ಳೆಯ ಹೆಜ್ಜೆಯನ್ನಿಟ್ಟಿದೆ’, ಎನ್ನಬಹುದು; ಏಕೆಂದರೆ ರಾಜ್ಯ ಸರಕಾರದಿಂದ ಈ ಘಟನೆಯ ವಿಚಾರಣೆ ನಿಷ್ಪಕ್ಷವಾಗಿ ಆಗಬಹುದೆಂದು ಬಂಗಾಲದ ವಿರೋಧ ಪಕ್ಷದವರಿಗೆ ವಿಶ್ವಾಸವಿಲ್ಲ.

೩. ತೃಣಮೂಲ ಕಾಂಗ್ರೆಸ್ ಶಾಸಕರ ವಿಧಾನಸಭೆಯಲ್ಲಿ ಗೂಂಡಾಗಿರಿ

ಬಂಗಾಲದಲ್ಲಿ ಯಾವ ರೀತಿ ಗೂಂಡಾಗಿರಿ ನಡೆಯುತ್ತದೆ ? ಎಂಬುದರ ಅನುಭವ ಮಾರ್ಚ್ ೨೮ ರಂದು ಬಂಗಾಲ ವಿಧಾನಸಭೆಯಲ್ಲಿ ಅಧಿಕಾರರೂಢರು ಮತ್ತು ವಿರೋಧಿಗಳ ನಡುವೆ ನಡೆದ ಹೊಡೆದಾಟದಿಂದ ದೇಶವಾಸಿಗಳಿಗೆ ಬಂದಿತು. ವಿಧಾನಸಭೆಯಲ್ಲಿ ಹೊಡೆದಾಡುವ ತೃಣಮೂಲ ಕಾಂಗ್ರೆಸ್ಸಿನ ಶಾಸಕರ ವಿರುದ್ಧ ಕ್ರಮಕೈಗೊಳ್ಳುವ ಬದಲು ಭಾರತೀಯ ಜನತಾ ಪಕ್ಷದ ೫ ಮಂದಿ ಶಾಸಕರನ್ನು ಅಮಾನತುಗೊಳಿಸಲಾಯಿತು. ವಿಧಾನಸಭೆಯಲ್ಲಿನ ಭಾಜಪದ ಶಾಸಕರು ‘ರಾಜ್ಯದ ಕುಸಿದಿರುವ ಕಾನೂನು-ವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹೇಳಿಕೆಯನ್ನು ನೀಡಬೇಕು ಎಂದು ಆಗ್ರಹಿಸುತ್ತಿದ್ದರು; ಆದರೆ ಈ ಬೇಡಿಕೆಯೂ ತೃಣಮೂಲ ಕಾಂಗ್ರೆಸ್ಸಿನ ಶಾಸಕರಿಗೆ ಸಹಿಸಲಾಗಲಿಲ್ಲ. ಅವರು ವಿಷಯವನ್ನು ದುರ್ಲಕ್ಷಿಸಿ ಹೊಡೆದಾಡಲು ತಯಾರಾದರು,  ಆದರೆ ತೃಣಮೂಲ ಶಾಸಕರ ಮೇಲೆ ಯಾವುದೇ ಕಾರ್ಯಾಚರಣೆ ಆಗಲಿಲ್ಲ. ‘ಸಭಾಗೃಹದಲ್ಲಿ ಘಟಿಸಿದ ಘಟನೆಯಿಂದ ಪ್ರಜಾಪ್ರಭುತ್ವದ ಅವಮಾನವಾಗಿದೆ’, ಎಂದು ಭಾಜಪ ನೇತಾರರು ಹೇಳಿದ್ದಾರೆ. ‘ಸಭಾಗೃಹದಲ್ಲಿ ಶಾಸಕರೂ ಸುರಕ್ಷಿತರಿಲ್ಲ. ಸುಮಾರು ೮-೧೦ ಜನ ಶಾಸಕರಿಗೆ ತೃಣಮೂಲನ ಶಾಸಕರು ಹೊಡೆದಿದ್ದಾರೆ’, ಎಂದು ಭಾಜಪ ಹೇಳಿದೆ.

೪. ಮಮತಾ ಸರಕಾರದ ಈ ವರ್ತನೆಯನ್ನು ಎಷ್ಟು ದಿನ ಸಹಿಸುವುದು ?

‘ಬಂಗಾಲದಲ್ಲಿ ಏನೆಲ್ಲ ನಡೆದಿದೆಯೊ, ಅದನ್ನು ನೋಡಿದರೆ ಈ ರಾಜ್ಯವು ಅರಾಜಕತೆಯ ಕಡೆಗೆ  ನಡೆದಿದೆ’, ಎಂದು ಹೇಳಬಹುದು. ಬಂಗಾಲದಲ್ಲಿ ಯಾವ ಅವ್ಯವಸ್ಥೆ ನಡೆದಿದೆಯೋ, ಅದನ್ನು ನೋಡಿದರೆ ‘ಅಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕು’, ಎಂದು ಭಾಜಪದ ನೇತಾರ ಕೈಲಾಸ ವಿಜಯವರ್ಗೀಯವರು ಹೇಳಿದ್ದಾರೆ. ‘ಬೀರಭೂಮ ಹತ್ಯಾಕಾಂಡವನ್ನು ಗಮನದಲ್ಲಿ ತೆಗೆದುಕೊಂಡು ಅಲ್ಲಿ ತುರ್ತುಪರಿಸ್ಥಿತಿಯನ್ನು ಜ್ಯಾರಿಗೊಳಿಸಬೇಕು. ರಾಜ್ಯದಲ್ಲಿನ ಕಾನೂನು-ವ್ಯವಸ್ಥೆಯು ಕುಸಿದಿರುವುದರಿಂದ ‘ಕಲಮ್ ೩೫೫ ರ ಅಂತರ್ಗತ ಕ್ರಮತೆಗೆದುಕೊಳ್ಳಬೇಕು’, ಎಂದು ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಅಧೀರ ರಂಜನ ದಾಸ ಇವರು ಕೂಡ ಹೇಳದ್ದಾರೆ. ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರ ಸ್ವೈರಾಚಾರ ನಡೆದಿದೆ. ಇದರಿಂದ ಅಮಾಯಕರ ಹತ್ಯೆಗಳಾಗುತ್ತಿವೆ ಮತ್ತು ವಿರೋಧ ಪಕ್ಷದವರ ಅವಮಾನ ಹಾಗೆಯೇ ಅವರನ್ನು ಹೊಡೆದುಬಡಿದು ಬಂಗಾಲದಲ್ಲಿನ ಪ್ರಜಾಪ್ರಭುತ್ವನ್ನು ದುರ್ಲಕ್ಷಿಸುವುದು ಕಂಡು ಬರುತ್ತಿದೆ. ಮಮತಾ ಸರಕಾರದ ಈ ವರ್ತನೆಯನ್ನು ಎಷ್ಟು ದಿನ ಸಹಿಸಿಕೊಳ್ಳುವುದು ?

– ದತ್ತಾ ಪಂಚವಾಘ, ಹಿರಿಯ ಪತ್ರಕರ್ತ  (ಆಧಾರ : ದೈನಿಕ ‘ಮುಂಬಯಿ ತರುಣ ಭಾರತ’)