ಯುವತಿಗೆ ಲೈಂಗಿಕ ಕಿರುಕುಳ; ತೃಣಮೂಲ ಕಾಂಗ್ರೆಸ್ ನಾಯಕನಿಂದ ಪ್ರಕರಣ ಮುಚ್ಚಿಹಾಕುವ ಪ್ರಯತ್ನ !

  • ಬಂಗಾಳದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಲೈಂಗಿಕ ಕಿರುಕುಳ ಮುಂದುವರಿಕೆ !

  • ಸಂಬಂಧಿಕರ ದ್ವಿಚಕ್ರವಾಹನಗಳೂ ಧ್ವಂಸ

ಉತ್ತರ 24 ಪರಗಣಾ (ಬಂಗಾಳ) – ಕೋಲಕಾತಾದ ರಾಧಾ ಗೋಬಿಂದ ಕರ (ಆರ್.ಜಿ. ಕರ್) ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲೆ ಬಲಾತ್ಕಾರ ಮಾಡಿ ಅವಳ ಹತ್ಯೆ ಮಾಡಿದ ಘಟನೆಯ ನಂತರ ಬೀರಭೂಮನಲ್ಲಿ ಆಸ್ಪತ್ರೆಗೆ ದಾಖಲಾದ ಅಬ್ಬಾಸುದ್ದೀನ್ ಹೆಸರಿನ ರೋಗಿಯು ಓರ್ವ ನರ್ಸ್‌ ಮೇಲೆ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಇದಾದ ನಂತರ ಹೌರಾ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ಈಗ ಉತ್ತರ 24 ಪರಗಣದಲ್ಲಿ 7 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. ರೋಹಾಂಡಾ ಪಂಚಾಯತಿಯ ರಾಜಭರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ನಂತರ, ಆಕ್ರೋಶಗೊಂಡ ಜನರು ಆರೋಪಿಯ ಮನೆಯ ಮೇಲೆ ದಾಳಿ ಮಾಡಿದರು ಮತ್ತು ಅವರ ಸಂಬಂಧಿಕರ ಅಂಗಡಿಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆಯ ತಂದೆ ಮಾತನಾಡಿ, ಅವರ ಮಗಳು ಅಂಗಡಿಯಿಂದ ಮರಳುತ್ತಿರುವಾಗ ಆರೋಪಿಯು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿ ಅದೇ ಗ್ರಾಮದ ನಿವಾಸಿಯಾಗಿದ್ದಾನೆ. ಅವನಿಗೆ ಕಠಿಣಶಿಕ್ಷೆಯಾಗಬೇಕು ಎಂದು ಸಂತ್ರಸ್ಥೆಯ ಕುಟುಂಬದವರು ಒತ್ತಾಯಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕನಿಂದ ಈ ಪ್ರಕರಣವನ್ನು `ರಾಜಿ’ ಮಾಡಿ ಮುಚ್ಚಿಹಾಕುವ ಪ್ರಯತ್ನ !

ವಿಶೇಷವೆಂದರೆ ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ಮುಖಂಡನು ಈ ಪ್ರಕರಣವನ್ನು ರಾಜಿ ಮಾಡಿ ಮುಚ್ಚಿಹಾಕುವಂತೆ ಕರೆ ನೀಡಿದನು. ಆದರೆ ಸ್ಥಳೀಯ ಜನರು ಆ ಮುಖಂಡನ ಮನೆಯನ್ನೂ ಗುರಿ ಮಾಡಿದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ತದನಂತರ ಇಲ್ಲಿ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿದೆ.

ಸಂಪಾದಕೀಯ ನಿಲುವು

‘ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು’, ಎಂದು ಸಲಹೆಗಳನ್ನು ನೀಡುತ್ತಾರೆ; ಆದರೆ ಜನರಿಗೆ ಇಂತಹ ಕೃತ್ಯಗಳನ್ನು ಮಾಡಬೇಕೆಂದು ಏಕೆ ಅನಿಸುತ್ತದೆ? ಎನ್ನುವುದನ್ನು ವಿಚಾರ ಮಾಡುವುದೂ ಆವಶ್ಯಕವಾಗಿದೆ !