ರಾಹುಲ ಗಾಂಧಿ ಅವರ ವಿಚಾರಣೆಯನ್ನು ನಿಷೇಧಸುತ್ತಾ ದೆಹಲಿಯಲ್ಲಿ ಆಂದೋಲನ ಮಾಡುತ್ತಿದ್ದರು
ಕಾಂಗ್ರೆಸ್ಸಿನವರು ವಿಕೃತಿ ! ಪೊಲೀಸರ ಜೊತೆ ಈ ರೀತಿ ವರ್ತಿಸುವವರು ಜನರ ಜೊತೆ ಹೇಗೆ ವರ್ತಿಸುವರು, ಇದನ್ನು ಯೋಚಿಸದೆ ಇರುವುದೇ ಒಳ್ಳೆಯದು !
ನವದೆಹಲಿ – ‘ನ್ಯಾಷನಲ್ ಹೇರಾಲ್ಡ’ಗೆ ಸಂಬಂಧಿಸಿದಂತೆ ಜಾರಿ ನಿರ್ದೆಶನಾಲಯ(‘ಇಡಿ’)ವು ಆರ್ಥಿಕ ದುರುಪಯೋಗದ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿಯವರ ವಿಚಾರಣೆ ನಡೆಸಲಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ. ಪೊಲೀಸರು ಅವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಕೂಡಿಸುವ ಪ್ರಯತ್ನ ಮಾಡಲಾಗುತ್ತಿತ್ತು. ಆಗ ನೆಟ್ಟ ಡಿಸೋಜರವರು ಪೊಲೀಸ್ ಸಿಬ್ಬಂದಿಯ ಮೇಲೆ ಉಗಳಿದರು. ಈ ವಿಷಯವಾಗಿ ಸ್ಪಷ್ಟೀಕರಣ ನೀಡುತ್ತಾ ಅವರು ಒಂದು ವಿಡಿಯೋ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು, ಪ್ರಸಾರ ಮಾಧ್ಯಮಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ನನ್ನ ಕೂದಲು ಹೇಗೆ ಏಳದಿದ್ದರೆ ? ಕೆಸರಿನಲ್ಲಿ ಹೇಗೆ ತಳ್ಳಿದ್ದಾರೆ ? ಇದನ್ನು ತೋರಿಸಲಾಗಿದೆ. ಕೆಸರು, ಧೂಳು ಮತ್ತು ಕೂದಲು ನನ್ನ ಬಾಯಿಯಲ್ಲಿ ಹೋಗಿತ್ತು. ಅದನ್ನು ನಾನು ನನ್ನ ಬಾಯಿಂದ ಹೊರ ತೆಗೆದೆ. ಭದ್ರತಾ ಪಡೆಗಳನ್ನು ಅವಮಾನಿಸುವ ನನ್ನ ಯಾವುದೇ ಉದ್ದೇಶ ಇರಲಿಲ್ಲ ಎಂದು ಹೇಳಿದರು.