ಜಮ್ಮೂ-ಕಾಶ್ಮೀರದಲ್ಲಿ ೩ ಜಿಹಾದಿ ಭಯೋತ್ಪಾದಕರ ಬಂಧನ

ಇಂತಹ ಭಯೋತ್ಪಾದಕರನ್ನು ಸಾಕುವ ಬದಲು ಅವರ ಮೇಲೆ ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ಖಟ್ಲೆಯನ್ನು ನಡೆಸಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕು !

ಬಡಗಾಮ (ಜಮ್ಮೂ-ಕಾಶ್ಮೀರ) – ಸೈನ್ಯವು ಇಲ್ಲಿ ಲಷ್ಕರ-ಎ-ತೊಯಬಾದ ೩ ಜಿಹಾದಿ ಭಯೋತ್ಪಾದಕರನ್ನು ಬಂಧಿಸಿದೆ. ಆಶಿಕ ಹುಸೈನ ಹಾಜಮ ಗುಲಾಮ, ಮೋಹಿ ದೀನ ಡಾರ ಹಾಗೂ ತಾಹಿರ ಬಿನ ಅಹಮದ ಇವು ಅವರ ಹೆಸರುಗಳಾಗಿವೆ. ಘಟನಾಸ್ಥಳದಿಂದ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಜಪ್ತು ಮಾಡಲಾಗಿದೆ. ಇದರಲ್ಲಿ ಚೀನಾ ನಿರ್ಮಿತ ಒಂದು ಪಿಸ್ತೂಲ, ಹಾಗೆಯೇ ೧ ಮೋಟರ ಸೈಕಲ ಕೂಡ ಸೇರಿವೆ. ಈ ಭಯೋತ್ಪಾದಕರು ಸ್ಫೋಟಕಗಳ ಸಾಗಾಟದ ಕೆಲಸದಲ್ಲಿ ಸಹಭಾಗಿಯಾಗಿರುವುದು ತಿಳಿದು ಬಂದಿದೆ. ಲಷ್ಕರ-ಎ-ತೋಯಬಾದಿಂದ ಇವರಿಗೆ ಆರ್ಥಿಕ ಸಹಾಯ ದೊರೆಯುತ್ತಿತ್ತು.