ಮುಂದುವರಿದ ಹಿಂದೂಗಳ ನರಮೇಧ !

ಎಲ್ಲಿ ಜಿಹಾದಿ ಉಗ್ರವಾದ ಬೇರೂರುತ್ತದೋ, ಅಲ್ಲಿ ಅದು ಎಲ್ಲೆಡೆ ಹರಡುತ್ತದೆ ಹಾಗೂ ಎಲ್ಲರ ತಲೆನೋವಿಗೆ ಕಾರಣವಾಗುತ್ತದೆ, ಇದರ ಅನುಭವ ಸಂಪೂರ್ಣ ಜಗತ್ತಿಗೆ, ವಿಶೇಷವಾಗಿ ಭಾರತಕ್ಕೆ ಪ್ರತಿದಿನ ಆಗುತ್ತಿದೆ. ಸ್ವಾತಂತ್ರ್ಯದ ನಂತರ ಕಾಂಗ್ರೆಸ್ಸಿನ ಆಡಳಿತದಲ್ಲಿ ಆರಂಭವಾದ ಹಾಗೂ ಹರಡಿದ ಜಿಹಾದಿ ಉಗ್ರವಾದವನ್ನು ಇಂದಿನ ವರೆಗೆ ಯಾವುದೇ ಆಡಳಿತದವರಿಗೂ ನಿಲ್ಲಿಸಲು ಸಾಧ್ಯವಾಗಿಲ್ಲ. ಅದರಿಂದ ಅತೀ ಹೆಚ್ಚು ಬಿಸಿ ತಟ್ಟಿರುವುದು ಈ ಉಗ್ರವಾದಿಗಳಿಗೆ ‘ಕಾಫೀರ’ರಾಗಿರುವ ಬಹುಸಂಖ್ಯಾತ ಹಿಂದೂಗಳಿಗೆ ! ಜಮ್ಮು-ಕಾಶ್ಮೀರದಿಂದ ಕಲಮ್ ೩೭೦ ರದ್ದುಪಡಿಸಿದ ನಂತರ ಅಲ್ಲಿ ಜಿಹಾದಿ ಉಗ್ರವಾದಕ್ಕೆ ಕಡಿವಾಣ ಬೀಳುವುದು ಎಂದು ನಿರಂತರವಾಗಿ ಹೇಳಲಾಗುತ್ತಿತ್ತು ನಿಜ; ಆದರೆ ಹಾಗೆ ಆಗುವುದಿರಲಿ, ತದ್ವಿರುದ್ಧ ಉಗ್ರವಾದ ಹೆಚ್ಚಾಗಿರುವುದೇ ಪ್ರತಿದಿನ ನಡೆಯುವ ಕಾಶ್ಮಿರಿ ಹಿಂದೂಗಳ ಹತ್ಯೆಯಿಂದ ಬೆಳಕಿಗೆ ಬರುತ್ತಿದೆ. ಈಗಲೂ ಜಿಹಾದಿ ಉಗ್ರವಾದಿಗಳು ಕುಲಗಾಮ್‌ನಲ್ಲಿನ ಗೋಪಾಲಪೋರಾ ಭಾಗದಲ್ಲಿನ ಒಂದು ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ರಜನಿ ಭಲ್ಲಾ ಇವರನ್ನು ಗುಂಡಿಕ್ಕಿ ಹತ್ಯೆಗೈದರು. ರಜನಿ ಭಲ್ಲಾ ಇವರು ಜಮ್ಮು ವಿಭಾಗದ ಸಾಂಬಾದ ನಿವಾಸಿಯಾಗಿದ್ದರು. ಈ ಹಿಂದೆ ಮೇ ೧೨ ರಂದು ಬಡಗಾಮ್ ಜಿಲ್ಲೆಯ ಆದಾಯ ತೆರಿಗೆ ವಿಭಾಗದ ಸಿಬ್ಬಂದಿ ರಾಹುಲ ಭಟ್ ಇವರನ್ನು ಉಗ್ರವಾದಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ೭ ಅಕ್ಟೋಬರ್ ೨೦೨೧ ರಂದು ಶ್ರೀನಗರದ ಸಿಕ್ಖ್ ಶಾಲೆಯ ಓರ್ವ ಮುಖ್ಯಾಧ್ಯಾಪಕಿ ಸುಪಿಂದರ್ ಕೌರ್ ಮತ್ತು ಒಬ್ಬ ಕಾಶ್ಮೀರಿ ಹಿಂದೂ ಶಾಲೆಯ ಶಿಕ್ಷಕ ದೀಪಕ ಚಂದ್ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅದಕ್ಕೂ ಮೊದಲು ೫ ಅಕ್ಟೋಬರ್ ೨೦೨೧ ರಂದು ಉಗ್ರವಾದಿಗಳು ಮಾಖನ ಲಾಲ್ ಬಿಂದ್ರು ಇವರ ಹತ್ಯೆ ಮಾಡಿದ್ದರು. ಇಷ್ಟು ಮಾತ್ರವಲ್ಲ, ಶ್ರೀನಗರದಲ್ಲಿ ಕೈಗಾಡಿಯಲ್ಲಿ ಪಾನಿಪುರಿಯ ವ್ಯವಸಾಯ ಮಾಡುವ ಬಿಹಾರದ ವಿರೇಂದರ ಪಾಸ್ವಾನ ಹಾಗೂ ಇಂತಹ ಸಣ್ಣ ವ್ಯವಸಾಯ ಮಾಡುವ ಬಿಹಾರದ ಅರವಿಂದ ಕುಮಾರ ಸಾಹಾ ಇವರನ್ನು ಕೂಡ ಉಗ್ರವಾದಿಗಳು ಅಕ್ಟೋಬರ್ ೨೦೨೧ ರಂದು ಗುಂಡು ಹೊಡೆದು ಹತ್ಯೆ ಮಾಡಿದ್ದರು. ೪ ಎಪ್ರಿಲ್ ೨೦೨೨ ರಂದು ಬಾಲಕೃಷ್ಣ ಭಟ್ ಇವರನ್ನು ಮತ್ತು ೧೩ ಎಪ್ರಿಲ್ ೨೦೨೨ ರಂದು ಸತೀಶ ಕುಮಾರ ಸಿಂಹ ರಜಪೂತರನ್ನು ಹತ್ಯೆ ಮಡಿದರು. ಈ ಪಟ್ಟಿ ಇಲ್ಲಿಗೆ ಮುಗಿಯುವುದಿಲ್ಲ. ಇಂತಹ ಪ್ರತಿಯೊಂದು ಹತ್ಯೆಯೆಂದರೆ ಸರಕಾರದ ಮುಖ್ಯ ವೈಫಲ್ಯವೇ ಆಗಿದೆ. ಇದರಿಂದ ಸರಕಾರ ೩೭೦ ಕಲಮ್ ರದ್ದುಪಡಿಸುವುದರಲ್ಲಿ ಯಶಸ್ವಿಯಾಯಿತು; ಆದರೆ ಉಗ್ರವಾದವನ್ನು ನಿರ್ನಾಮಗೊಳಿಸುವುದರಲ್ಲಿ ಮಾತ್ರ ಯಶಸ್ವಿಯಾಗಲಿಲ್ಲ, ಎಂಬುದೇ ಪುನಃ ಪುನಃ ಸಿದ್ಧವಾಗುತ್ತಿದೆ. ಸ್ವಾತಂತ್ರ್ಯದ ೭೪ ವರ್ಷಗಳ ನಂತರವೂ ಒಂದು ರಾಜ್ಯದಲ್ಲಿನ ಜಿಹಾದಿ ಉಗ್ರವಾದವನ್ನು ತಡೆಯಲು ಸಾಧ್ಯವಾಗದಿರುವುದೆಂದರೆ ಇದು ಎಲ್ಲ ಪಕ್ಷಗಳ ಆಡಳಿತದವರಿಗೆ ಲಜ್ಜಾಸ್ಪದವಾಗಿದೆ. ಕಲಮ್ ೩೭೦ ರದ್ದುಪಡಿಸಿದ ನಂತರ ಸೈನ್ಯದ ಮೇಲಿನ ಕಲ್ಲುತೂರಾಟ ನಿಲ್ಲುವುದು, ಒಂದು ಸಕಾರಾತ್ಮಕ ಭಾಗವಾಗಿದ್ದರೂ ನಾಗರಿಕರ ಭದ್ರತೆಯ ವಿಶೇಷವಾಗಿ ಕಾಶ್ಮೀರಿ ಹಿಂದೂಗಳ ಭದ್ರತೆಯ ಸಮಸ್ಯೆಯು ಯಥಾಸ್ಥಿತಿಯಲ್ಲಿದೆ. ಕಾಶ್ಮೀರದಲ್ಲಿ ೧೯೮೯ ರಲ್ಲಿ ನಡೆದ ಹಿಂದೂಗಳ ನರಮೇಧವನ್ನು ಸರಕಾರವು ದುರ್ಲಕ್ಷಿಸಿತು. ಇಂದು ಅದಕ್ಕಿಂತ ಬೇರೆ ಏನು ಘಟಿಸುತ್ತಿದೆ ? ಹಿಂದೂಗಳ ಹತ್ಯೆಗಳ ಕೇವಲ ವಾರ್ತೆಗಳು ಬರುತ್ತಿವೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತದೆ. ಮುಂದೆ ಕೆಲವೇ ದಿನಗಳಲ್ಲಿ ಇನ್ನೊಬ್ಬ ಹಿಂದೂವಿನ ಹತ್ಯೆಯಾಗುತ್ತದೆ. ಪುನಃ ಇಂತಹದ್ದೆ ವಾರ್ತೆ ಮತ್ತು ಚರ್ಚೆಯಾಗುತ್ತದೆ. ಈ ಮಾರಣಾಂತಿಕ ಸಂಕಷ್ಟದಿಂದ ಹಿಂದೂಗಳು ನುಚ್ಚುನೂರಾಗುತ್ತಾರೆ. ಆದರೆ ಸರಕಾರಿ ವ್ಯವಸ್ಥೆಗೆ ಈ ಬಗ್ಗೆ ಏನೂ ಅನಿಸುವುದಿಲ್ಲ. ಯಾವುದೇ ಸರಕಾರಕ್ಕೂ ಈ ಉಗ್ರವಾದವನ್ನು ಸದೆಬಡಿಯಬೇಕೆಂದು ಅನಿಸುವುದಿಲ್ಲ. ಬಹುಶಃ ಯಾರಲ್ಲಿಯೂ ಅಷ್ಟು ಧೈರ್ಯ ಇಲ್ಲವೆಂಬುದನ್ನೇ ಈ ಹತ್ಯೆಗಳ ಸರಣಿಯು ಹೇಳುತ್ತದೆ.

‘ಲಷ್ಕರ-ಎ-ಇಸ್ಲಾಮ್’ನ ಬೆದರಿಕೆ

ಉಗ್ರವಾದಿಗಳು ಸತೀಶ ಕುಮಾರ ಸಿಂಹ ರಜಪೂತರ ಹತ್ಯೆಯ ನಂತರ ಅವರ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿದರು. ಈ ಹತ್ಯೆಯನ್ನು ‘ಲಷ್ಕರ-ಎ-ಇಸ್ಲಾಮ್’ ಈ ಉಗ್ರವಾದಿ ಸಂಘಟನೆಯು ಮಾಡಿತ್ತು. ರಜಪೂತರ ಹತ್ಯೆಯ ನಂತರ ಈ ಸಂಘಟನೆಯು ‘ಕಾಫೀರ’ರಿಗೆ ಪತ್ರ ಬರೆಯಿತು. ಅದರಲ್ಲಿ ಈ ಸಂಘಟನೆಯು ‘ಕಾಶ್ಮೀರವನ್ನು ತೊರೆಯಿರಿ, ಇಲ್ಲದಿದ್ದರೆ ಸಾಯಲು ಸಿದ್ಧರಾಗಿ’, ಎಂದು ಸ್ಪಷ್ಟವಾಗಿ ಬೆದರಿಕೆ ಹಾಕಿತ್ತು. ಇದು ೧೯೮೯ ರಲ್ಲಿ ಇಸ್ಲಾಮೀ ಉಗ್ರವಾದಿಗಳು ಕಾಶ್ಮೀರಿ ಹಿಂದೂಗಳಿಗೆ ನೀಡಿರುವ ಬೆದರಿಕೆಯಂತೆಯೇ ಇತ್ತು. ಇದರಿಂದ ಕಲಮ್ ೩೭೦ ರದ್ದು ಪಡಿಸಿಯೂ ಕಾಶ್ಮೀರದಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ, ಎಂಬುದು ಮತ್ತೊಮ್ಮೆ ಸಿದ್ಧವಾಗುತ್ತದೆ. ಮೇಲಿನ ಹತ್ಯೆಗಳ ಪಟ್ಟಿಯನ್ನು ನೋಡಿದರೆ ಇನ್ನೊಂದು ವಿಷಯ ಅರಿವಾಗುತ್ತದೆ, ಅದೆಂದರೆ, ಉಗ್ರವಾದಿಗಳಿಗೆ ಇತರ ರಾಜ್ಯಗಳಲ್ಲಿನ ಹಿಂದೂಗಳು ಕಾಶ್ಮೀರಕ್ಕೆ ಬಂದು ನೆಲೆಸುವುದು ಬೇಡವಾಗಿದೆ. ಅವರನ್ನು ಕೂಡ ಗುರಿಯಾಗಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಸರಕಾರ ಕಾಶ್ಮೀರ ಕಣಿವೆಯಲ್ಲಿ ಕಾಶ್ಮೀರಿ ಹಿಂದೂಗಳಿಗಾಗಿ ಪ್ರತ್ಯೇಕ ವಸತಿಯನ್ನು ನಿರ್ಮಿಸಿ ಅವರನ್ನು ಅಲ್ಲಿ ಬಂದು ನೆಲೆಸಲು ಕರೆ ನೀಡಿತ್ತು, ಆಗ ಕಾಶ್ಮೀರಿ ಹಿಂದೂಗಳು ಅವರಿಗೆ ಭದ್ರತೆಯನ್ನು ನೀಡಬೇಕೆಂದು ವಿನಂತಿಸಿದ್ದರು. ಈ ವಿನಂತಿ ಎಷ್ಟು ಯೋಗ್ಯವಾಗಿತ್ತು ಎಂಬುದನ್ನು ಈ ಹತ್ಯಾಸರಣಿ ಹೇಳುತ್ತದೆ. ಸ್ವಾತಂತ್ರ್ಯದ ೭೪ ವರ್ಷಗಳ ನಂತರವೂ ಒಂದು ರಾಜ್ಯದ ಉಗ್ರವಾದವನ್ನು ತಡೆಗಟ್ಟಲು ಸಾಧ್ಯವಾಗದಿರುವುದು ಎಲ್ಲ ಪಕ್ಷಗಳ ಆಡಳಿತದವರಿಗೆ ಲಜ್ಜಾಸ್ಪದವಾಗಿದೆ.

ಸರಕಾರಕ್ಕೆ ನೇರ ಸವಾಲು !

ಒಂದೊಂದೇ ಹಿಂದೂಗಳನ್ನು ಹೆಕ್ಕಿ ಹೆಕ್ಕಿ ಕೊಲ್ಲುವ ಉಗ್ರರು ಸರಕಾರಕ್ಕೆ ನೇರವಾಗಿ ಸವಾಲೊಡ್ಡುತ್ತಿದ್ದಾರೆ. ಈ ಉಗ್ರರು ಆಡಳಿತದವರನ್ನೂ ಅಣಕಿಸುತ್ತಾ ಕಾಶ್ಮೀರದಲ್ಲಿ ಇಸ್ಲಾಮೀ ಧ್ವಜವನ್ನು ಹಾರಿಸಲು ಪ್ರಯತ್ನಿಸುತ್ತಿದ್ದಾರೆ. ದುರ್ದೈವದಿಂದ ಇಷ್ಟರವರೆಗಿನ ಯಾವುದೇ ಆಡಳಿತದವರಿಗೆ ಉಗ್ರರ ಸವಾಲನ್ನು ಎದುರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈಗ ಪ್ರಸ್ತುತ ಸರಕಾರವಾದರೂ ಉಗ್ರವಾದವನ್ನು ಅದೇ ಭೂಮಿಯಲ್ಲಿ ಹುಗಿಯುವ ಚಮತ್ಕಾರವನ್ನು ಮಾಡಿ ತೋರಿಸಬೇಕು; ಏಕೆಂದರೆ ಕಾಂಗ್ರೆಸ್ ಸಹಿತ ಯಾರಿಂದಲೂ ಅಂತಹ ಅಪೇಕ್ಷೆಯನ್ನು ಮಾಡುವುದು ಆತ್ಮಘಾತಕವಾಗಬಹುದು. ಇಷ್ಟರ ವರೆಗಿನ ಕಾಶ್ಮೀರಿ ಹಿಂದೂಗಳ ಹತ್ಯೆಗಳನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ವೈ.ಎಸ್.ಆರ್. ಕಾಂಗ್ರೆಸ್ ಇತ್ಯಾದಿ ಕಾಂಗ್ರೆಸ್ಸಿನ ವಂಶಜರು ಒಂದು ಮಾತಿನಿಂದಲೂ ಖಂಡಿಸಿಲ್ಲ, ಇದನ್ನು ಹಿಂದೂಗಳು ಎಂದಿಗೂ ಮರೆಯುವ ಹಾಗಿಲ್ಲ. ಈಗ ಭಲ್ಲಾ ಇವರ ಹತ್ಯೆಯಾದಾಗ ನ್ಯಾಶನಲ್ ಕಾನ್ಫರೆನ್ಸ್‌ನ ಮುಖಂಡ ಓಮರ ಅಬ್ದುಲ್ಲಾ ದುಃಖವನ್ನು ವ್ಯಕ್ತ ಪಡಿಸಿರುವುದು ನಿಜ; ಆದರೆ ಇದರ ಜೊತೆಗೆ ಅವರು ಕೇಂದ್ರ ಸರಕಾರವನ್ನು ಟೀಕಿಸುವುದನ್ನು ಮರೆಯಲಿಲ್ಲ, ಬಹುಶಃ ಅದಕ್ಕಾಗಿ ನಿಷೇಧದ ಮಾರ್ಗವನ್ನು ಅವಲಂಬಿಸಿದರು. ಸರಕಾರಕ್ಕೆ ಟೀಕೆ ಮಾಡುವ ಅಬ್ದುಲ್ಲಾ ಈ ಹತ್ಯೆಗಳಿಗೆ ಹೊಣೆಯಾಗಿರುವ ಅವರ ಧರ್ಮಬಾಂಧವರ ವಿರುದ್ಧ ಅಂದರೆ ಜಿಹಾದಿ ಉಗ್ರವಾದಿಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಅಪ್ಪಿತಪ್ಪಿಯೂ ಹೇಳುವುದಿಲ್ಲ ಎಂಬುದನ್ನು ಗಮನಿಸಬೇಕು. ಇದರಲ್ಲಿಯೇ ಎಲ್ಲವೂ ಅಡಕವಾಗಿದೆ. ಆದ್ದರಿಂದ ಈಗ ಸರಕಾರ ಟೊಂಕಕಟ್ಟಿ ನಿಲ್ಲುವ ಅವಶ್ಯಕತೆಯಿದೆ. ಉಗ್ರವಾದಿಗಳು ಒಬ್ಬ ಹಿಂದೂವನ್ನು ಹತ್ಯೆಗೊಳಿಸಿದರೆ ಸರಕಾರ ೧೦ ಉಗ್ರವಾದಿಗಳನ್ನು ‘ಜನ್ನತ್’ಗೆ ಕಳುಹಿಸಬೇಕು. ಉಗ್ರವಾದಿಗಳು ಹಿಂದೂಗಳ ಕೊಲೆ ಮಾಡುವ ವಿಚಾರವನ್ನೂ ಮಾಡದಂತಹ ಭಯವನ್ನು ಅವರಲ್ಲಿ ನಿರ್ಮಿಸಬೇಕು. ಒಂದು ಮುಷ್ಟಿಯಷ್ಟು ಉಗ್ರವಾದಿಗಳು ಅಣ್ವಸ್ತ್ರಧಾರಿ ದೇಶಕ್ಕೆ ತಲೆನೋವೆನಿಸುತ್ತಿದ್ದರೆ ಇದು ಸರಕಾರಕ್ಕೆ ಅತ್ಯಂತ ಲಜ್ಜಾಸ್ಪದವಾಗಿದೆ. ಈ ಉಗ್ರವಾದವನ್ನು ನಾವು ಇನ್ನೆಷ್ಟು ದಿನ ನಡೆಯಲು ಬಿಡಬೇಕಾಗಿದೆ ? ಇನ್ನೆಷ್ಟು ಅಮಾಯಕ ಹಿಂದೂಗಳ ಹತ್ಯೆಯಾಗಲು ಬಿಡಬೇಕಾಗಿದೆ ? ಎಂಬುದನ್ನು ಸರಕಾರ ನಿರ್ಧರಿಸಬೇಕಾಗಿದೆ ಹಾಗೂ ಸರಕಾರ ಹಾಗೆ ಮಾಡುವುದಿಲ್ಲವಾದರೆ, ಹಿಂದೂಗಳು ಅವರಿಗೆ ಹಾಗೆ ಮಾಡುವಂತೆ ಒತ್ತಡ ಹೇರಬೇಕು. ಅದುವೇ ಪ್ರಜಾಪ್ರಭುತ್ವವೆನಿಸುವುದು !