‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವು ಎಲ್ಲಾ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸುವ ವೇದಿಕೆ ! – ಶ್ರೀ. ಗಂಗಾಧರ ಕುಲಕರ್ಣಿ, ಶ್ರೀರಾಮ ಸೇನೆ

ಎಡಭಾಗದಿಂದ ಸೌ. ವಿದುಳಾ ಹಳದಿಪುರ, ಮಾತನಾಡುತ್ತಿರುವಾಗ ಶ್ರೀ. ಮೋಹನ ಗೌಡ ಮತ್ತು ಪಕ್ಕದಲ್ಲಿ ಶ್ರೀ. ಗಂಗಾಧರ ಕುಲಕರ್ಣಿ

ಹುಬ್ಬಳ್ಳಿ – ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಎಲ್ಲಾ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸುವ ವೇದಿಕೆಯನ್ನು ಸಿದ್ಧಪಡಿಸಿದೆ, ಎಂದು ಶ್ರೀ. ಗಂಗಾಧರ ಕುಲಕರ್ಣಿ ಇವರು ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಹತ್ತನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ನಿಮಿತ್ತ ಈ ಸುದ್ಧಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಅವರು ‘ವಿದೇಶದಲ್ಲಿಯೂ ಈ ಅಧಿವೇಶನದ ಚರ್ಚೆ ನಡೆಯುತ್ತಿದೆ’, ಎಂದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಮತ್ತು ಸನಾತನ ಸಂಸ್ಥೆಯ ಸೌ. ವಿದುಳಾ ಹಳದಿಪುರ ಇವರೂ ಉಪಸ್ಥಿತರಿದ್ದರು.