ವಿಜ್ಞಾನವಾದಿ ಮನುಷ್ಯನಿಗೆ ಸಂತರ ಸಂತತ್ವವನ್ನು ಮನವರಿಕೆ ಮಾಡಲು ವೈಜ್ಞಾನಿಕ ಉಪಕರಣಗಳೇ ಸಹಾಯ ಮಾಡುತ್ತವೆ !

‘ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಸಾಮರ್ಥ್ಯವು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ನಂಬಿಕೆಯೂ ಇಲ್ಲದಂತಾಗಿದೆ. ಅವನು ಕೇವಲ ವಿಜ್ಞಾನವನ್ನು ನಂಬುತ್ತಾನೆ. ಆದ್ದರಿಂದ ಒಬ್ಬಾತನು ಸಾಧನೆ ಮಾಡಿ ‘ಸಂತ’ ಪದವಿ ಪಡೆದರೂ, ಇತರರು ‘ಅವರು ಸಂತರು’ ಎಂದು ಹೇಳಲು ಅದರ ಮಾನದಂಡವೇನು ?’, ಎಂದು ಕೇಳುತ್ತಾರೆ. ಆದ್ದರಿಂದ, ‘ಅವರು ಸಂತರು’, ಎಂದು ಈಗ ‘ಸನಾತನಸಂಸ್ಥೆ’ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಗಳು ‘ಎಲೆಕ್ಟ್ರೋಸೊಮ್ಯಾ ಟೋಗ್ರಾಫಿಕ್ ಸ್ಕ್ಯಾನಿಂಗ್’, ‘ಯುನಿವರ್ಸಲ್ ಔರಾ ಸ್ಕ್ಯಾನರ್ (UAS)’, ‘ಪಾಲಿಕಾಂಟ್ರಾಸ್ಟ್ ಇಂಟರ್‌ಫರೆನ್ಸ್ ಫೋಟೋಗ್ರಾಫಿ (ಪಿಪ್)’, ‘ಥರ್ಮಲ್ ಇಮೇಜಿಂಗ್’, ‘ಗ್ಯಾಸ್ ಡಿಸ್ಚಾರ್ಜ್ ವಿಜುವಲೈಸೇಶನ್ (GDV), ಇತ್ಯಾದಿ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಸಾಬೀತು ಪಡಿಸುತ್ತಿವೆ.
– (ಪರಾತ್ಪರ ಗುರು) ಡಾ. ಆಠವಲೆ
ಬುದ್ಧಿವಾದಿ ಮನುಷ್ಯನಿಗೆ ಬುದ್ಧಿಯಿಂದ ದೇವರನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನದ ಸೃಷ್ಟಿಯಾಗಿರುವುದು
‘ಕಾಲಕ್ರಮೇಣ ಆಧ್ಯಾತ್ಮಿಕ ಮಟ್ಟ ಕಡಿಮೆಯಾದಂತೆ ಮನುಷ್ಯನಿಗೆ ಈಶ್ವರನ ಅನುಸಂಧಾನವನ್ನಿಟ್ಟು ಭಾವದ ಸ್ಥಿತಿಗೆ ಹೋಗಲು, ದೇವರನ್ನು ಅನುಭವಿಸಲು ಅಸಾಧ್ಯವಾಗತೊಡಗಿತು. ಬುದ್ಧಿಯ ಮಟ್ಟದಲ್ಲಿ ಪ್ರತಿಯೊಂದರ ಅಧ್ಯಯನ ಪ್ರಾರಂಭವಾಯಿತು. ಆದುದರಿಂದ, ‘ಮನುಷ್ಯನಿಗೆ ತನ್ನ ಬುದ್ಧಿಯಿಂದಾದರೂ ದೇವರನ್ನು ತಿಳಿದುಕೊಳ್ಳಲಿ’ ಎಂದು ವಿಜ್ಞಾನದ ಸೃಷ್ಟಿಯಾಯಿತು.’
– (ಪರಾತ್ಪರ ಗುರು) ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ