ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಪರಿಣಾಮ ಮತ್ತು ನ್ಯಾಯಾಲಯಗಳ ತೀರ್ಪುಗಳು

 ಧ್ವನಿವರ್ಧಕಗಳನ್ನು ಬಳಸುವುದು ಸಂವಿಧಾನವು ನೀಡಿದ ಮೂಲಭೂತ ಅಧಿಕಾರವಾಗಿಲ್ಲ ! – ಮುಂಬಯಿ ಉಚ್ಚ ನ್ಯಾಯಾಲಯ

೧. ರಾಜ ಠಾಕರೆಯವರು ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯುವ ಬಗ್ಗೆ ಹಚ್ಚಿದ ಕಿಡಿ ದೇಶದಾದ್ಯಂತ ಹರಡುವುದು

ಯುಗಾದಿಯ ದಿನ ಮಹಾರಾಷ್ಟ್ರದ ನವನಿರ್ಮಾಣ ಸೇನೆಯ ಪ್ರಮುಖ ರಾಜ ಠಾಕರೆಯವರು ಮಹಾರಾಷ್ಟ್ರ ಸರಕಾರಕ್ಕೆ ಮಸೀದಿಗಳ ಮೇಲೆ ಹಚ್ಚಿದ ಧ್ವನಿವರ್ಧಕಗಳನ್ನು ತೆಗೆಯುವ ಬಗ್ಗೆ ಬೇಡಿಕೆಯನ್ನು ಮಾಡಿದರು. ಅನಂತರ ಮಹಾರಾಷ್ಟ್ರ ರಾಜ್ಯದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲಿಯೂ ಈ ಬೇಡಿಕೆಯು ತೀವ್ರವಾಯಿತು. ಕೆಲವೇ ದಿನಗಳಲ್ಲಿ ಕರ್ನಾಟಕದ ಬಜರಂಗ ದಳ ಮತ್ತು ಶ್ರೀರಾಮ ಸೇನೆ ಈ ಹಿಂದುತ್ವನಿಷ್ಠ ಸಂಘಟನೆಗಳೂ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯುವ ಬೇಡಿಕೆಯನ್ನು ಮಾಡಿವೆ.’ಧ್ವನಿವರ್ಧಕಗಳ ಮೇಲಿನ ಅಜಾನ್‌ವನ್ನು ನಿಲ್ಲಿಸದಿದ್ದರೆ, ಮಸೀದಿಗಳ ಎದುರು ದೊಡ್ಡ ಧ್ವನಿಯಲ್ಲಿ ಹನುಮಾನ ಚಾಲೀಸಾ ಹಾಕಲಾಗುವುದು’, ಎಂಬ ಎಚ್ಚರಿಕೆಯನ್ನೂಈ ಸಂಘಟನೆಗಳು ನೀಡಿವೆ. ಈಗ ದೇಶದಾದ್ಯಂತ ಧ್ವನಿವರ್ಧಕಗಳಲ್ಲಿ ಹನುಮಾನ ಚಾಲೀಸಾವನ್ನು ಹಾಕಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಹಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಹನುಮಾನ ಚಾಲೀಸಾ ಹಾಕಿದುದರಿಂದ ಅವರ ಮೇಲೆ ಕಾರ್ಯಾಚರಣೆಯನ್ನು ಮಾಡಲಾಯಿತು. ಇದರ ಹಿನ್ನೆಲೆಯಲ್ಲಿ ‘ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದಕ್ಕೆ ಏನಾದರೂ ನಿಯಮಗಳಿವೆಯೇ ?’ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಮೊದಲೂ ನ್ಯಾಯಾಲಯಗಳಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆಗೆಯಲು ಅರ್ಜಿಗಳನ್ನು ನೀಡಲಾಗಿದೆ ಮತ್ತು ಅವುಗಳಿಗೆ ನ್ಯಾಯಾಲಯವು ತೀರ್ಪಗಳನ್ನೂ ನೀಡಿದೆ.

೨. ಕಾನೂನಿನಂತೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿಯ ಮೇಲೆ ಹಾಕಲಾಗಿರುವ ವಿವಿಧ ನಿರ್ಬಂಧಗಳು

ಈ ಸಂದರ್ಭದಲ್ಲಿ ೨೦೦೦ ನೇ ಇಸವಿಯಲ್ಲಿ ‘ಧ್ವನಿಮಾಲಿನ್ಯ ಕಾಯದೆ ಮತ್ತು ಅದರ ನಿಯಂತ್ರಣ’ ಎಂಬ ಹೆಸರಿನ ಒಂದು ಕಾನೂನನ್ನು ಮಾಡಲಾಯಿತು. ಈ ಕಾನೂನು ೧೯೮೬ ನೇ ಇಸವಿಯಲ್ಲಿ ನಿರ್ಮಿಸಲಾದ ಪರಿಸರ ಸಂರಕ್ಷಣೆ ಕಾನೂನಿನ ಅಡಿಯಲ್ಲಿ ಬರುತ್ತದೆ. ಈ ಕಾಯದೆಯಲ್ಲಿನ ೫ ನೇ ನಿಯಮಕ್ಕನುಸಾರ ಧ್ವನಿವರ್ಧಕಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿನ ಧ್ವನಿ ಇವುಗಳ ಮೇಲೆ ವಿವಿಧ ರೀತಿಯ ನಿರ್ಬಂಧಗಳನ್ನು ಹಾಕಲಾಗಿದೆ.

ಅ. ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಧ್ವನಿಯಲ್ಲಿನ ಯಾವುದೇ ಕಾರ್ಯಕ್ರಮದ ಆಯೋಜನೆಯನ್ನು ಮಾಡಲು ಮತ್ತು ಧ್ವನಿವರ್ಧಕಗಳನ್ನು ಬಳಸಲು ಸರಕಾರದಿಂದ ಲಿಖಿತ ಅನುಮತಿ ಪಡೆಯುವುದು ಆವಶ್ಯಕವಾಗಿದೆ.

ಆ. ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ೧೦ ರಿಂದ ಬೆಳಗ್ಗೆ ೬ ಗಂಟೆಯ ವರೆಗೆ ಯಾವುದೇ ರೀತಿಯ ಧ್ವನಿವರ್ಧಕಗಳನ್ನು ಹಾಕುವಂತಿಲ್ಲ.

ಇ. ನಿಯಮಕ್ಕನುಸಾರ ರಾಜ್ಯ ಸರಕಾರ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ೧೨ ಗಂಟೆಯವರೆಗೆ ಈ ಕಾರ್ಯಕ್ರಮಗಳಿಗಾಗಿ ಅನುಮತಿಯನ್ನು ನೀಡಬಹುದು; ಆದರೆ ವರ್ಷದಲ್ಲಿ ಕೇವಲ ೧೫ ದಿನಗಳಿಗಾಗಿ ಮಾತ್ರ ಈ ರೀತಿಯ ಅನುಮತಿಯನ್ನು ನೀಡಬಹುದಾಗಿದೆ.

ಈ. ರಾಜ್ಯ ಸರಕಾರವು ಕ್ಷೇತ್ರಕ್ಕನುಸಾರ ಯಾವುದೇ ಸ್ಥಳವನ್ನು ಕೈಗಾರಿಕಾ (ಇಂಡಸ್ಟ್ರಿ), ವ್ಯವಸಾಯಿಕ  ಅಥವಾ ವಸತಿ ಕ್ಷೇತ್ರವೆಂದು ಘೋಷಿಸಬಹುದು. ಇಂತಹ ಅಧಿಕಾರ ರಾಜ್ಯ ಸರಕಾರಕ್ಕೆ ಇರುತ್ತದೆ. ಆಸ್ಪತ್ರೆಗಳು, ನ್ಯಾಯಾಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ೧೦೦ ಮೀಟರ್‌ವರೆಗಿನ ಪರಿಸರದಲ್ಲಿ ಯಾವುದೇ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲು ಬರುವುದಿಲ್ಲ; ಏಕೆಂದರೆ ಸರಕಾರವು ಈ ಕ್ಷೇತ್ರಗಳನ್ನು ‘ಶಾಂತ ವಲಯ’ವೆಂದು ಘೋಷಿಸಿರುತ್ತದೆ.

ಉ. ಈ ನಿಯಮಗಳಿಗನುಸಾರ ಈ ಸ್ಥಳಗಳಲ್ಲಿ ಧ್ವನಿ ವರ್ಧಕಗಳ ಧ್ವನಿಯ ಮಿತಿ ೧೦ ಡೆಸಿಬಲ್‌ಗಿಂತ ಹೆಚ್ಚು ಇರಬಾರದು. ಹಾಗೆಯೇ ವಸತಿಗಳ ಭಾಗಗಳಲ್ಲಿ ಧ್ವನಿಯ ಮಟ್ಟವನ್ನು ಬೆಳಗ್ಗೆ ೬ ರಿಂದ ರಾತ್ರಿ ೧೦ ರ ವರೆಗೆ ೫೫ ಡೆಸಿಬಲ್ ಮತ್ತು ರಾತ್ರಿ ೧೦ ರಿಂದ ಬೆಳಗ್ಗೆ ೬ ರವರೆಗೆ ೪೫ ಡೆಸಿಬಲ್‌ವರೆಗೆ ಇಡಬಹುದು.

ಊ. ಈ ಕಾಯದೆಯ ಅಂತರ್ಗತ ಶಿಕ್ಷೆಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ೫ ವರ್ಷಗಳ ಸೆರೆಮನೆ ವಾಸ ಅಥವಾ ೧ ಲಕ್ಷ ರೂಪಾಯಿಗಳ ದಂಡ ಅಥವಾ ಎರಡೂ ಶಿಕ್ಷೆಗಳಾಗಬಹುದು. ದೇಶದಲ್ಲಿನ ವಿವಿಧ ರಾಜ್ಯಗಳು ವಿವಿಧ ಧ್ವನಿಯ ಮಟ್ಟವನ್ನು ನಿಗದಿಪಡಿಸಿದ್ದರೂ, ಎಲ್ಲಿಯೂ ೭೦ ಡೆಸಿಬಲ್‌ಗಿಂತ ಹೆಚ್ಚು ಧ್ವನಿಗೆ ಅನುಮತಿ ಇಲ್ಲ.

೩. ಧ್ವನಿವರ್ಧಕಗಳ ಧ್ವನಿಯ ಮೇಲೆ ನಿಯಂತ್ರಣವನ್ನಿಡುವ ಬಗ್ಗೆ ಭಾರತದ ವಿವಿಧ ನ್ಯಾಯಾಲಯಗಳ ತೀರ್ಪುಗಳು

ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲು ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿನ ಉಚ್ಚ ನ್ಯಾಯಾಲಯಗಳಲ್ಲಿ ವಿವಿಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ದಾಖಲಾಗಿವೆ. ನ್ಯಾಯಾಲಯಗಳು ಈ ಹಿಂದೆಯೂ ಈ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದೆ. ಈ ಬಗ್ಗೆ ದೇಶದ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಅ. ಅಕ್ಟೋಬರ್ ೨೦೦೫ ನೇ ಇಸವಿಯಲ್ಲಿನ ಸರ್ವೋಚ್ಚ ನ್ಯಾಯಾಲಯದ ತೀರ್ಪು : ೨೮ ಅಕ್ಟೋಬರ್ ೨೦೦೫ ರಂದುಸರ್ವೋಚ್ಚ ನ್ಯಾಯಾಲಯವು ವರ್ಷದಲ್ಲಿನ ೧೫ ದಿನಗಳಕಾಲ ಹಬ್ಬ ಹರಿದಿನಗಳ ಪ್ರಸಂಗಗಳಂದು ಮಧ್ಯರಾತ್ರಿಯವರೆಗೆ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡಿತ್ತು. ಆಗಿನ ಮುಖ್ಯ ನ್ಯಾಯಾಧೀಶರಾದ ಆರ್.ಸಿ. ಲಾಹೋಟಿ ಮತ್ತು ನ್ಯಾಯಮೂರ್ತಿ ಅಶೋಕ ಭಾನ ಇವರ ನ್ಯಾಯಪೀಠವು ರಾಜ್ಯಗಳಿಗೆ ಉತ್ಸವ ಮತ್ತು ಧಾರ್ಮಿಕ ಪ್ರಸಂಗಗಳಲ್ಲಿ ಮಧ್ಯರಾತ್ರಿಯ ವರೆಗೆ ಧ್ವನಿವರ್ಧಕದ ಬಳಕೆಯನ್ನು ಮಾಡುವುದರೊಂದಿಗೆ ಧ್ವನಿಮಾಲಿನ್ಯದ ನಿಯಮವನ್ನು ಸಡಿಲುಗೊಳಿಸುವ ಸಾಂವಿಧಾನಿಕ ನಿಯಮವನ್ನು ಶಾಶ್ವತವಾಗಿ ಇಟ್ಟಿತ್ತು.

ಆ. ಅಗಸ್ಟ್ ೨೦೧೬ ರಲ್ಲಿನ ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪು : ಆಗಸ್ಟ್ ೨೦೧೬ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯವು ಧ್ವನಿವರ್ಧಕದ ಬಳಕೆಯು ಮೂಲಭೂತ ಅಧಿಕಾರವಾಗಿಲ್ಲ ಎಂಬ ತೀರ್ಪನ್ನು ನೀಡಿತ್ತು. ಆ ಸಮಯದಲ್ಲಿ ‘ಧ್ವನಿವರ್ಧಕ ಅಥವಾ ‘ಪಬ್ಲಿಕ್ ಅ್ಯಡ್ರೆಸ್ ಸಿಸ್ಟಮ್’ (ಸಾರ್ವಜನಿಕ ಸ್ಥಳದಲ್ಲಿನ ಧ್ವನಿವರ್ಧಕ ವ್ಯವಸ್ಥೆ) ಬಳಸುವ ಅಧಿಕಾರ ಭಾರತೀಯ ಸಂವಿಧಾನದ ಕಲಮ್ ೨೫ ರ ಮೂಲಕ ನೀಡಲಾದ ಮೂಲಭೂತ ಅಧಿಕಾರವಿರುವ ಬಗ್ಗೆ ಮೊಕದ್ದಮೆಯನ್ನು ಯಾವುದೇ ಧರ್ಮ ಅಥವಾ ಸಂಪ್ರದಾಯಕ್ಕೆ ಹೂಡಲು ಆಗುವುದಿಲ್ಲ’, ಎಂದು ನಿರೀಕ್ಷಣೆಯನ್ನು ಮುಂಬಯಿ ಉಚ್ಚ ನ್ಯಾಯಾಲಯವು ದಾಖಲಿಸಿತ್ತು.

ಇ. ಜೂನ್ ೨೦೧೮ ರಲ್ಲಿನ ಉತ್ತರಾಖಂಡ ಉಚ್ಚ ನ್ಯಾಯಾಲಯದ ತೀರ್ಪು : ೨೬ ಜೂನ್ ೨೦೧೮ ಈ ದಿನದಂದು ಉತ್ತರಾಖಂಡ ಉಚ್ಚ ನ್ಯಾಯಾಲಯವು ಧ್ವನಿವರ್ಧಕಗಳಿಗೆ ೫೫ ಡೆಸಿಬಲ್ ಮಿತಿಯನ್ನು ನಿಗದಿಪಡಿಸಿತು. ಧ್ವನಿವರ್ಧಕಗಳ ಹಗಲಿನಲ್ಲಿನ ಬಳಕೆಯು ಬಳಕೆದಾರರ ಮೇಲೆ ಅವಲಂಬಿಸಿರುವುದು ಮತ್ತು ಧ್ವನಿಯಮಟ್ಟವು ೫೫ ಡೆಸಿಬಲ್‌ನ್ನು ಮೀರಬಾರದು ಎಂದು ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.

ಈ. ಸೆಪ್ಟೆಂಬರ್ ೨೦೧೮ ನೇ ಇಸವಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಆಜ್ಞೆ : ಸೆಪ್ಟೆಂಬರ್ ೨೦೧೮ ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ರಾತ್ರಿ ೧೦ ಗಂಟೆಯ ನಂತರ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿತ್ತು. ಕರ್ನಾಟಕ ಉಚ್ಚ ನ್ಯಾಯಾಲಯವು ‘ಅಧಿಕಾರಿಗಳು ಧ್ವನಿವರ್ಧಕಗಳ ಮೇಲೆ ನಿಷೇಧವನ್ನು ಹೇರುವಾಗ ಸರ್ವೋಚ್ಚ ನ್ಯಾಯಾಲಯವು ಧ್ವನಿವರ್ಧಕಗಳನ್ನು ಹಾಕುವ ಬಗ್ಗೆ ಅನುಮತಿಯಲ್ಲಿ ಹೀಗೇ ಹೇಳಿತ್ತು.

‘ಯೋಗ್ಯ ಧ್ವನಿಯ (ಶಬ್ದದ) ಮಾರ್ಗದರ್ಶಕ ತತ್ತ್ವಗಳನ್ನು ಪಾಲಿಸಬೇಕು’, ಎಂಬ ಆದೇಶವನ್ನು ಕರ್ನಾಟಕ ಸರಕಾರಕ್ಕೆ ನೀಡಿತ್ತು.

ಉ. ಜುಲೈ ೨೦೧೯ ರಲ್ಲಿನ ಪಂಜಾಬ ಮತ್ತು ಹರಿಯಾಣಾ ಉಚ್ಚ ನ್ಯಾಯಾಲಯದ ತೀರ್ಪು : ಜುಲೈ ೨೦೧೯ರಲ್ಲಿ ಪಂಜಾಬ ಮತ್ತುಹರಿಯಾಣಾ ಉಚ್ಚ ನ್ಯಾಯಾಲಯವು ಧಾರ್ಮಿಕ ಸಂಸ್ಥೆಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿತು. ನ್ಯಾಯಾಲಯವು, ಧ್ವನಿವರ್ಧಕಗಳನ್ನು ಕೇವಲ ಪೂರ್ವಾನುಮತಿಯಿಂದಲೇ ಬಳಸಬಹುದು ಮತ್ತು ಶಬ್ದದ ಮಟ್ಟವು ಅನುಮತಿಯ ಮಿತಿಗಿಂತ ಹೆಚ್ಚಿಗೆ ಇರಬಾರದು, ಎಂದು ಹೇಳಿತು.

ಊ. ಮೇ ೨೦೨೦ ರಲ್ಲಿ ಅಲಾಹಾಬಾದ ಉಚ್ಚ ನ್ಯಾಯಾಲಯವು ನೀಡಿದ ತೀರ್ಪು : ೧೫ ಮೇ ೨೦೨೦ ಈ ದಿನದಂದು ಅಲಾಹಾಬಾದ ಉಚ್ಚ ನ್ಯಾಯಾಲಯವು, ಮಸೀದಿಗಳಲ್ಲಿ ವ್ಯಕ್ತಿಯು ಯಾವುದೇ ಉಪಕರಣ ಅಥವಾ ಧ್ವನಿವರ್ಧಕ ಬಳಸದೇ ಅಜಾನ್ ಓದಬಹುದು.

ಎ. ನವೆಂಬರ್ ೨೦೨೧ ರಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪು : ನವೆಂಬರ್ ೨೦೨೧ ರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಯಾವ ಕಾನೂನಿನ ಅಡಿಯಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ರಾಜ್ಯ ಸರಕಾರ ಅನುಮತಿ ನೀಡಿದೆ ಮತ್ತು ಅವುಗಳ ಬಳಕೆಯನ್ನು ನಿಷೇಧಿಸಲು ಯಾವ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ? ಎಂಬುದನ್ನು ಸ್ಪಷ್ಟಪಡಿಸಲು ಹೇಳಿತು.

  (ಕೃಪೆ – ದೈನಿಕ ‘ಲೋಕಸತ್ತಾ’ದ ಜಾಲತಾಣ)

೮೫ ಡೆಸಿಬಲ್‌ನ ವರೆಗಿನ ಧ್ವನಿಯನ್ನು ಸತತವಾಗಿ ಕೇಳಿದರೆ ಮನುಷ್ಯನು ಅನೇಕ ರೋಗಗಳಿಗೆ ತುತ್ತಾಗುವ ಸಾಧ್ಯತೆಯಿರುವುದು

ಧ್ವನಿವರ್ಧಕಗಳಿಂದ ದೊಡ್ಡ ಪ್ರಮಾಣದಲ್ಲಿ ಧ್ವನಿ ಬರುತ್ತಿರುತ್ತದೆ. ವಿವಿಧ ಸಂಶೋಧನೆಗಳಿಗನುಸಾರ ಧ್ವನಿವರ್ಧಕಗಳಿಂದ ಸುಮಾರು ೧೦೦ ರಿಂದ ೧೨೦ ಡೆಸಿಬಲ್ ವರೆಗೆ ಧ್ವನಿಯು ನಿರ್ಮಾಣವಾಗುತ್ತದೆ. ಅಮೇರಿಕಾದ ‘ನ್ಯಾಶನಲ್ ಇನ್ಸ್ಟಿಟ್ಯೂಟ್ ಆನ್ ಡೆಫನೆಸ್ ಎಂಡ್ ಅದರ ಕಮ್ಯುನಿಕೆಶನ್ ಡಿಸಾರ್ಡರ್’ ಇದಕ್ಕನುಸಾರ ಮನುಷ್ಯನ ಕಿವಿಗಳಿಗಾಗಿ ೭೦ ಡೆಸಿಬಲ್‌ನ ವರೆಗಿನ ಧ್ವನಿಯು ಸಾಮಾನ್ಯವಾಗಿದೆ, ಅಂದರೆ ಇಷ್ಟು ಧ್ವನಿಯಿಂದ ಯಾವುದೇ ಹಾನಿಯಾಗುವುದಿಲ್ಲ. ಭಾರತದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇದರ ಮಟ್ಟವನ್ನು ೬೫ ಡೆಸಿಬಲ್‌ನ ವರೆಗೆ ನಿಗದಿಪಡಿಸಿದೆ. ಇದಕ್ಕೂ ಹೆಚ್ಚಿನ ಧ್ವನಿಯು ವಿವಿಧ ರೀತಿಯಲ್ಲಿ ಮನುಷ್ಯನಿಗೆ ಹಾನಿಯನ್ನುಂಟು ಮಾಡಬಹುದು. ಅದರಲ್ಲಿ ಆ ವ್ಯಕ್ತಿ ಎಷ್ಟು ಸಮಯ ಮತ್ತು ಎಷ್ಟು ಸಮೀಪದಿಂದ ಆ ಧ್ವನಿಯನ್ನು ಕೇಳುತ್ತಿದ್ದಾನೆ, ಇದೂ ಸಹ ಅದರಲ್ಲಿ ಬರುತ್ತದೆ  .

  ದೊಡ್ಡ  ಧ್ವನಿಯಿಂದ ವ್ಯಕ್ತಿಯ ಮೇಲೆ ಅನೇಕ ಗಂಭೀರ ಪರಿಣಾಮಗಳಾಗಬಹುದು. ಇದರಲ್ಲಿ ಕೇಳುವ ಕ್ಷಮತೆಯನ್ನು ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೆಚ್ಚು ಸಮಯದವರೆಗೆ ದೊಡ್ಡ ಶಬ್ದವನ್ನು ಕೇಳುವುದರಿಂದ ಮಾನಸಿಕ ಸಮಸ್ಯೆಗಳೂ ಉಂಟಾಗಬಹುದು. ಆ ವ್ಯಕ್ತಿ ಸಿಡಿಮಿಡಿಗೊಳ್ಳುವ ಅಥವಾ ಹಿಂಸಕನಾಗಬಹುದು. ೮೫ ಡೆಸಿಬಲ್‌ವರೆಗಿನ ಶಬ್ದವನ್ನು ನಿರಂತರವಾಗಿ ಕೇಳಿದರೆ ಕಿವುಡತನ ಬರಬಹುದು. ಇದರಿಂದ ಶರೀರದಲ್ಲಿನ ರಕ್ತ ಸಂಚಾರದ ಪ್ರಕ್ರಿಯೆಯ ಮೇಲೆಯೂ ಪರಿಣಾಮವಾಗಬಹುದು. ಹಾಗೆಯೇ ‘ಕೊಲೆಸ್ಟ್ರಾಲ್’ನ ಪ್ರಮಾಣ ಹೆಚ್ಚಾಗಬಹುದು, ಇದರಿಂದ ಹೃದಯರೋಗದ ಸಾಧ್ಯತೆ ಹೆಚ್ಚಾಗುತ್ತದೆ. ೧೨೦ ಡೆಸಿಬಲ್‌ಗಿಂತ ಹೆಚ್ಚು ಶಬ್ದವು ಗರ್ಭವತಿ ಮಹಿಳೆಯರ ಮೇಲೆಯೂ ಗಂಭೀರ ಪರಿಣಾಮವಾಗಬಹುದು.

(ಕೃಪೆ – ದೈನಿಕ ‘ಲೋಕಸತ್ತಾ’ದ ಜಾಲತಾಣ)