ಗೋಮಾಂಸದ ಆಹಾರ ತಂದು ಶಿಕ್ಷಕರಿಗೆ ಕೊಡಲು ಪ್ರಯತ್ನಿಸಿದ ಮುಖ್ಯೋಪಾಧ್ಯಾಯಿನಿಯ ಬಂಧನ

ಗೌಹತಿ (ಅಸ್ಸಾಂ)- ಅಸ್ಸಾಂನ ಲಖಿಪುರದ ಹರ್ಕಾಚುಂಗಿ ಮಾಧ್ಯಮಿಕ ಆಂಗ್ಲ ಶಾಲೆಯ ಮುಖ್ಯೋಪಾಧ್ಯಾಯಿನಿ ದಲಿಮಾ ನೇಸಾ ಅವರನ್ನು ಶಾಲೆಯ ಊಟದ ಡಬ್ಬಿಯಲ್ಲಿ ಗೊಮಾಂಸದ ಖಾದ್ಯ ತಂದು ಇತರ ಶಿಕ್ಷಕರಿಗೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನೇಸಾ ಇತರ ಶಿಕ್ಷಕರಿಗೆ ಗೋಮಾಂಸ ನೀಡಲು ಪ್ರಯತ್ನಿಸಿದಾಗ ರಾಜ್ಯ ಶಿಕ್ಷಣ ಇಲಾಖೆ ಅಧಿಕಾರಿಗಳ ಬಳಿ ಕೆಲವು ಶಿಕ್ಷಕರು ಮುಖ್ಯೋಪಾಧ್ಯಾಯಿನಿಯ ಬಗ್ಗೆ ದೂರು ನೀಡಿದರು. ನಂತರ ನೇಸಾ ಅವರನ್ನು ಬಂಧಿಸಲಾಯಿತು. ವಾಸ್ತವವಾಗಿ ಅಸ್ಸಾಂನಲ್ಲಿ ಗೋಮಾಂಸ ಖರೀದಿಸಲು ಮತ್ತು ಮಾರಾಟ ಮಾಡಲು ಯಾವುದೇ ನಿಷೇಧವಿಲ್ಲ; ಆದರೆ ಹಿಂದೂ, ಜೈನ, ಸಿಖ ಮತ್ತು ಇತರ ಗೋಮಾಂಸ ನಿಷಿದ್ದವಿರುವ ಸಮುದಾಯಗಳ ವಸತಿ ಪ್ರದೇಶದಿಂದ ೫ ಕಿ. ಮೀ ಅಂತರದಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.