ಹಳಿಯಾಳದಲ್ಲಿ ಹಿಂದೂ ಐಕ್ಯತಾ ಮೆರವಣಿಗೆ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೮೦ ನೆಯ ಜನ್ಮೋತ್ಸವದ ನಿಮಿತ್ತ…

ಪರಾತ್ಪರ ಗುರು ಡಾ. ಆಠವಲೆ

ಹಳಿಯಾಳ – ಸನಾತನ ಸಂಸ್ಥೆಯ ಸಂಸ್ಥಾಪಕರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೮೦ ನೆಯ ಜನ್ಮೋತ್ಸವದ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಭಾರತದಾದ್ಯಂತ ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನವನ್ನು ನಡೆಸಲಾಗುತ್ತಿದೆ. ಅದರ ಅಂತರ್ಗತ ಮೇ ೭ ರಂದು ‘ಹಿಂದೂ ಐಕ್ಯತಾ ಮೆರವಣಿಗೆ’ ನಡೆಸಲಾಯಿತು. ಇಲ್ಲಿನ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಬೆಳಗಾವಿ ರಸ್ತೆಯ ಮೂಲಕ ಮರಾಠಾ ಭವನದವರೆಗೆ ಈ ಮೆರವಣಿಗೆ ಸಾಗಿತು. ಈ ವೇಳೆ  ಶಿವಪ್ರತಿಷ್ಠಾನ ಹಿಂದುಸ್ಥಾನ, ಶ್ರೀರಾಮ ಸೇನೆ ಹಿಂದುಸ್ಥಾನ, ಭಜನಾ ಮಂಡಳಿ ದುಸ್ಗಿ ಸೇರಿದಂತೆ ಇನ್ನು ಅನೇಕ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. ಮೆರವಣಿಗೆ ಉದ್ದಕ್ಕೂ ಹಿಂದೂ ರಾಷ್ಟ್ರ, ಧರ್ಮಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು.

ಹಳಿಯಾಳದಲ್ಲಿ ಸಾಗಿದ ಹಿಂದೂ ಐಕ್ಯತಾ ಮೆರವಣಿಗೆ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೮೦ ನೆಯ ಜನ್ಮೋತ್ಸವದ ನಿಮಿತ್ತ ರಾಜ್ಯದ ವಿವಿಧೆಡೆ ದೇವಸ್ಥಾನಗಳ ಸ್ವಚ್ಛತೆ, ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ, ಸಾಧನಾ ಪ್ರವಚನ ಇತ್ಯಾದಿ ಉಪಕ್ರಮಗಳನ್ನು ನಡೆಸಲಾಗುತ್ತಿದೆ.