ಹಿಂದೂಗಳು ಮತಾಂತರ ಆಗುವುದೆಂದರೆ ಈಶ್ವರಪ್ರಾಪ್ತಿಯ ಅವಕಾಶವನ್ನು ಕಳೆದುಕೊಳ್ಳುವುದು !
‘ಪ್ರತಿಯೊಂದು ಜೀವವೂ ಉದ್ಧಾರವಾಗಬೇಕೆಂಬ ವಿಚಾರವನ್ನು ಮಾಡುವ ಏಕೈಕ ಧರ್ಮ ಎಂದರೆ ಹಿಂದೂ ಧರ್ಮ. ಆದುದರಿಂದ ಹಿಂದೂ ಧರ್ಮದಲ್ಲಿ ಜನ್ಮ ಪಡೆದರೆ ಅವನು ತನ್ನ ಕ್ರಿಯಮಾಣವನ್ನು ಉಪಯೋಗಿಸಿ ಈ ಜನ್ಮದಲ್ಲಿಯೇ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳಬಹುದು. ತದ್ವಿರುದ್ಧ ಇತರ ಪಂಥಗಳು ಮಾನವ ನಿರ್ಮಿತವಾಗಿದ್ದರಿಂದ ಅವರು ತಮ್ಮ ಧರ್ಮದಲ್ಲಿ ಹೇಳಿದಂತೆ ಎಷ್ಟೇ ಸಾಧನೆ ಮಾಡಿದರೂ, ಒಂದು ವಿಶಿಷ್ಟ ಹಂತದ ವರೆಗೆ ಅವರ ಆಧ್ಯಾತ್ಮಿಕ ಪ್ರಗತಿಯಾಗಹುದು. ಆದುದರಿಂದ ‘ಈ ಜನ್ಮದಲ್ಲಿಯೇ ಈಶ್ವರಪ್ರಾಪ್ತಿಯಾಗಬೇಕು ಎಂಬ ಉದ್ದೇಶದಿಂದ ಈಶ್ವರನು ಹಿಂದೂ ಧರ್ಮದಲ್ಲಿ ಜನ್ಮ ಕೊಟ್ಟರೂ ಆ ವ್ಯಕ್ತಿಯು ಮತಾಂತರವಾಗುತ್ತಿದ್ದರೆ, ಅವನು ‘ಈಶ್ವರಪ್ರಾಪ್ತಿಯ ಬಹುದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾನೆ’ ಎಂಬುದನ್ನು ಗಮನದಲ್ಲಿಡಬೇಕು!
– (ಪರಾತ್ಪರ ಗುರು) ಡಾ. ಆಠವಲೆ
ಶ್ರದ್ಧೆಯಿಲ್ಲದ ಮತ್ತು ಬುದ್ಧಿವಾದಿ ಸಮಾಜಕ್ಕೆ ವಿಜ್ಞಾನದ ಆಧಾರದಿಂದಲೇ ಅಧ್ಯಾತ್ಮವನ್ನು ಮನವರಿಕೆ ಮಾಡಿಕೊಡಬೇಕಾಗಿದೆ !
ಹಿಂದಿನ ಕಾಲದಲ್ಲಿ ‘ಶಬ್ದಪ್ರಮಾಣ’ (ಹೇಳಿದ್ದು ಪೂರ್ಣ ಸ್ವೀಕರಿಸುವುದು) ಇದ್ದುದರಿಂದ ಋಷಿಮುನಿಗಳು ಮತ್ತು ಗುರುಗಳು ನೀಡಿದ ಜ್ಞಾನದ ಬಗ್ಗೆ ಶ್ರದ್ಧೆ ಇತ್ತು. ಆದರೆ ಈಗ ಅದರ ಮೇಲೆ ಶ್ರದ್ಧೆಯನ್ನಿಡದೇ ವಿಜ್ಞಾನದ ಮೇಲೆ ಶ್ರದ್ಧೆಯನ್ನು ಇಡುವುದರಿಂದ ಸನಾತನ ಸಂಸ್ಥೆ ಮತ್ತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾನಿಲಯ’ ಇವುಗಳಿಗೆ ವೈಜ್ಞಾನಿಕ ಉಪಕರಣಗಳ ಆಧಾರದಲ್ಲಿ ಸಾವಿರಾರು ಪ್ರಯೋಗಗಳನ್ನು ಮಾಡುವ ಮೂಲಕ ಅಧ್ಯಾತ್ಮವನ್ನು ಸಿದ್ಧ ಪಡಿಸಬೇಕಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ
ರಾಮ ಮತ್ತು ಕೃಷ್ಣ ಇವರ ಯುಗದಲ್ಲಿ ಗಾಂಧಿವಾದಿಗಳು ಇದ್ದಿದ್ದರೆ. . .
‘ರಾಮ ಮತ್ತು ಕೃಷ್ಣ ಇವರ ಯುಗದಲ್ಲಿ ಗಾಂಧಿವಾದಿಗಳು ಇದ್ದಿದ್ದರೆ ರಾಮ-ಕೃಷ್ಣರಿಗೂ ಅಹಿಂಸಾವಾದವನ್ನು ಕಲಿಸಲು ಪ್ರಯತ್ನಿಸುತ್ತಿದ್ದರು ಮತ್ತು ರಾವಣ ಹಾಗೂ ಕಂಸರನ್ನು ಜೀವಂತವಾಗಿಡುತ್ತಿದ್ದರು. ಅದರಿಂದ ಹಿಂದೂಗಳು ನಾಶವೇ ಆಗುತ್ತಿದ್ದರು’.
– (ಪರಾತ್ಪರ ಗುರು) ಡಾ. ಆಠವಲೆ
ಶಿಷ್ಯನಿಗೆ ಗುರುಗಳು ಹೇಳುವುದನ್ನು ಕೇಳುವ ಅಭ್ಯಾಸವಾದ ಮೇಲೆಯೇ ಶಿಷ್ಯನು ದೇವರು ಹೇಳುವುದನ್ನು ಕೇಳುತ್ತಾನೆ ಹಾಗಿರುವುದರಿಂದ ಇಂತಹ ಶಿಷ್ಯನಿಗೆ ದೇವರು ದರ್ಶನವನ್ನು ನೀಡುತ್ತಾನೆ, ಹಾಗಾಗಿಯೇ ದೇವರು ಬುದ್ಧಿಜೀವಿಗಳಿಗೆ ದರ್ಶನವನ್ನು ನೀಡುವುದಿಲ್ಲ.
– (ಪರಾತ್ಪರ ಗುರು)ಡಾ.ಆಠವಲೆ