ಮತಾಂತರವು ಭಾರತವನ್ನು ವಿಭಜನೆಯತ್ತ ಕರೆದೊಯ್ಯುವುದರಿಂದ ಅದನ್ನು ತಡೆಂiಲು ಹಿಂದೂ ಧರ್ಮ ಪ್ರಸಾರ ಮಾಡುವುದು ಆವಶ್ಯಕವಾಗಿದೆ ! – ಮೋಹನ ಗೌಡ, ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾನೂನು ಬರಬಾರದೆಂದು ಕ್ರೈಸ್ತ ಮಿಶನರಿಗಳು ಪ್ರಯತ್ನಿಸುತ್ತಿದ್ದಾರೆ. ಮತಾಂತರ ನಿಷಧೇ ಕಾನೂನು ತರುವುದಕ್ಕಾಗಿ ಇಲ್ಲಿನ ಹಿಂದುತ್ವನಿಷ್ಠ ಸಂಘಟನೆಗಳು ಆಗ್ರಹಿಸುತ್ತಿವೆ. ಕೇವಲ ಕರ್ನಾಟಕವಲ್ಲದೆ ಸಂಪೂರ್ಣ ದೇಶದೆಲ್ಲೆಡೆ ಮತಾಂಧನಿಷೇಧ ಕಾನೂನು ತರಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ವಿವಿಧ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ ಕಾರ್ಯ ಮಾಡುತ್ತಿದೆ. ಮತಾಂತರವು ಭಾರತವನ್ನು ವಿಭಜನೆಯ ದಿಕ್ಕಿನಲ್ಲಿ ಕೊಂಡೊಯ್ಯಬಹುದು ಇದನ್ನು ಗಮನದಲ್ಲಿಡಬೇಕು. ಮತಾಂತರವನ್ನು ನ್ಯಾಯಯುತ ಮಾರ್ಗದಿಂದ ವಿರೋಧಿಸಲು ಹಿಂದೂಗಳು ಮುಂದೆ ಬರಬೇಕು. ಹಿಂದೂ ಧರ್ಮದ ಪ್ರಸಾರವನ್ನು ಎಲ್ಲೆಡೆ ಮಾಡಿ ಧರ್ಮಶಿಕ್ಷಣವನ್ನು ಪಡೆದು ಧರ್ಮಾಭಿಮಾನವಿಟ್ಟುಕೊಂಡರೆ ಮತಾಂತರದಂತಹ ಸಮಸ್ಯೆಗಳಿಗೆ ಪೂರ್ಣವಿರಾಮ ಸಿಗಬಹುದು.