ಮುಜಾಫರ್‌ನಗರ (ಉತ್ತರ ಪ್ರದೇಶ): ಮದರಸಾದಲ್ಲಿ ಹಿಂದೂಗಳ ಮತಾಂತರ
ಮದರಸಾ ಮೌಲಾನಾ ವಿಚ್ಛೇದಿತ ಸೊಸೆಯ ಗಂಭೀರ ಆರೋಪ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ವಿದ್ವಾಂಸ)
ಲಕ್ನೋ (ಉತ್ತರ ಪ್ರದೇಶ) – ಫುಲತ್ ಗ್ರಾಮದ ‘ದಾರುಲ್ ಉಲೂಮ್ ರಹೀಮಿಯಾ’ ಮದರಸಾದಲ್ಲಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿದೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ. ಈಗ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮದರಸಾದ ನಿರ್ವಾಹಕ ಮೌಲಾನಾ ಹಫೀಜುರ್ರಹಮಾನ್ ಅನ್ಸಾರಿಯ ಮಗ ಜುನೈದ್ ಅನ್ಸಾರಿಯ ವಿಚ್ಛೇದಿತ ಪತ್ನಿ ನಾಜಿಯಾ, ಪೊಲೀಸ್ ಪ್ರಧಾನ ಕಚೇರಿಗೆ ಹೋಗಿ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಮದರಸಾದಲ್ಲಿ ಹಿಂದೂಗಳನ್ನು ಹೇಗೆ ಮತಾಂತರ ಮಾಡಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ನೀಡಿದ್ದಾಳೆ. ಮದರಸಾದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ನಡೆಯುತ್ತಿದೆ ಮತ್ತು ಮತಾಂತರದ ಕೆಲಸಕ್ಕೆ ವಿದೇಶದಿಂದ ಹಣ ಪೂರೈಕೆಯಾಗುತ್ತಿದೆ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ.
🚨 Muzaffarnagar, Uttar Pradesh: Serious allegations emerge against a madrasa.
The divorced daughter-in-law of the madrasa's Maulana has alleged that Hindus are being converted, women are sexually exploited, and the madrasa receives foreign funding.
With frequent reports of… pic.twitter.com/Gm810N01Iz
— Sanatan Prabhat (@SanatanPrabhat) July 11, 2026
1. ಮದರಸಾದ ನಿರ್ವಾಹಕ ಮೌಲಾನಾ ಹಫೀಜುರ್ರಹಮಾನ್ ಅನ್ಸಾರಿ ಮತ್ತು ಆತನ ಮಗ ಜುನೈದ್ ಅನ್ಸಾರಿ ವಿರುದ್ಧ ಈಗಾಗಲೇ ಮತಾಂತರಕ್ಕೆ ಸಂಬಂಧಿಸಿದ ದೂರುಗಳ ಆಧಾರದ ಮೇಲೆ ರತನ್ಪುರಿ ಪೊಲೀಸ್ ಠಾಣೆಯಲ್ಲಿ ಗಂಭೀರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
2. ನಾಜಿಯಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮದರಸಾಗೆ ಬರುವ ಮಹಿಳೆಯರ ಲೈಂಗಿಕ ಶೋಷಣೆ ಮತ್ತು ಅವರನ್ನು ‘ಬ್ಲ್ಯಾಕ್ಮೇಲ್’ ಮಾಡಿ ಮತಾಂತರ ಮಾಡಲಾಗುತ್ತಿತ್ತು ಎಂದು ಹೇಳಿದ್ದಾಳೆ.
3. ನಾಜಿಯಾ ಹೇಳಿಕೆ ಪ್ರಕಾರ, ಕಳೆದ 10-12 ವರ್ಷಗಳಿಂದ ಈ ಗುಂಪು ಸಕ್ರಿಯವಾಗಿದೆ. ಈ ಗುಂಪು ಮೊದಲು ಹಿಂದೂ ಯುವಕ-ಯುವತಿಯರಿಗೆ ವಿವಿಧ ಕಾರಣಗಳನ್ನು ನೀಡಿ ಮತ್ತು ಆಮಿಷವೊಡ್ಡಿ ಮದರಸಾಗೆ ತರುತ್ತಿತ್ತು. ನಂತರ ಗುಪ್ತ ಕ್ಯಾಮೆರಾಗಳ ಮೂಲಕ ಅವರ ಅಶ್ಲೀಲ ವಿಡಿಯೋಗಳನ್ನು ಮಾಡಲಾಗುತ್ತಿತ್ತು. ಈ ವಿಡಿಯೋಗಳ ಆಧಾರದ ಮೇಲೆ ಅವರನ್ನು ಬೆದರಿಸಿ ಮತಾಂತರಕ್ಕೆ ಒತ್ತಾಯಿಸಲಾಗುತ್ತಿತ್ತು. ಒಂದು ವೇಳೆ ಯಾರಾದರೂ ಮತಾಂತರಕ್ಕೆ ನಿರಾಕರಿಸಿದರೆ, ಅವರ ವಿಡಿಯೋವನ್ನು ಸಾರ್ವಜನಿಕ ಮಾಡುವುದಾಗಿ ಬೆದರಿಕೆ ಹಾಕಲಾಗುತ್ತಿತ್ತು.
ಮದರಸಾದ ನಿರ್ವಾಹಕನ ಕುಟುಂಬ ಮತಾಂತರ ಮಾಡುವ ತಂಡವಾಗಿದೆ!
ನಾಜಿಯಾ ಹೇಳುವ ಪ್ರಕಾರ, ಹಿಂದೂಗಳನ್ನು ಮತಾಂತರ ಮಾಡುವ ಈ ತಂಡದಲ್ಲಿ ಆಕೆಯ ಮಾಜಿ ಪತಿ ಮತ್ತು ಮಾವ ಮೌಲಾನಾ ಹಫೀಜುರ್ರಹಮಾನ್ ಅನ್ಸಾರಿ, ಮೈದುನ ಜುಬೇರ್ ಮತ್ತು ಉಬೈದ್, ಸೋದರ ಸಂಬಂಧಿ ಇಮ್ರಾನ್ ಮತ್ತು ಅನ್ಸಾರಿಯ ಅಳಿಯ ಮುಜಮ್ಮಿಲ್ ಸೇರಿದಂತೆ ಇತರ ಅನೇಕರು ಭಾಗಿಯಾಗಿದ್ದಾರೆ. ಈ ತಂಡವು ಬಹಳ ಕಾಲದಿಂದ ಸಕ್ರಿಯವಾಗಿದ್ದು, ಅನೇಕ ಜನರನ್ನು ಗುರಿಯಾಗಿಸಿದ್ದಾರೆ.
ಯುನಾನಿ ಔಷಧಿಗಳ ಹೆಸರಿನಲ್ಲಿ ಮಾದಕ ದ್ರವ್ಯಗಳ ಮಾರಾಟ!
ಈ ತಂಡವು ಯುನಾನಿ ಮತ್ತು ಆಯುರ್ವೇದ ಔಷಧಿಗಳ ಹೆಸರಿನಲ್ಲಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದೆ. ಔಷಧಿಗಳ ಸಣ್ಣ ಬಾಟಲಿಗಳ ಮೂಲಕ ಔಷಧಿಗಳ ಹೆಸರಿನಲ್ಲಿ ಮಾದಕ ವಸ್ತು ನೀಡಲಾಗುತ್ತದೆ.
ಸ್ವಾಮಿ ಯಶವೀರ್ ಮಹಾರಾಜ್ ಅವರಿಂದ ನಿಷ್ಪಕ್ಷಪಾತ ತನಿಖೆಗೆ ಒತ್ತಾಯ!
‘ಯೋಗ ಸಾಧನಾ’ ಆಶ್ರಮದ ಮಹಂತ್ ಸ್ವಾಮಿ ಯಶವೀರ್ ಜಿ ಮಹಾರಾಜ್ ಅವರು ಈ ಮದರಸಾದಲ್ಲಿ ಮತಾಂತರ ನಡೆಯುತ್ತಿದೆ ಎಂದು ಮೊದಲ ಬಾರಿಗೆ ಆರೋಪಿಸಿದ್ದರು. ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ, ಫುಲತ್ ಮದರಸಾದ ಮತಾಂತರದ ಕುರಿತು ನಾನು ಪ್ರಸ್ತಾಪಿಸಿದ ವಿಷಯವನ್ನು ಈಗ ಅದೇ ಕುಟುಂಬದ ವಿಚ್ಛೇದಿತ ಸೊಸೆಯು ಬಹಿರಂಗವಾಗಿ ಅನೇಕ ಗಂಭೀರ ಆರೋಪ ಮಾಡಿದ್ದಾಳೆ ಎಂದು ಹೇಳಿದರು. ಇಂತಹ ಪರಿಸ್ಥಿತಿಯಲ್ಲಿ, ಈ ಸಂಪೂರ್ಣ ಪ್ರಕರಣದ ನಿಷ್ಪಕ್ಷಪಾತ ಮತ್ತು ಕೂಲಂಕುಷ ತನಿಖೆಯಾಗಬೇಕು, ಇದರಿಂದ ಸತ್ಯ ಹೊರಬರಬಹುದು ಎಂದು ಮಹಾರಾಜ್ ಹೇಳಿದ್ದಾರೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ