‘ಸಕಲ ಹಿಂದೂ ಸಮಾಜ’ದ ಆಕ್ರಮಣಕಾರಿ ನಿಲುವಿನ ಪರಿಣಾಮ

ಜಯಸಿಂಗಪುರ (ಕೊಲ್ಲಾಪುರ ಜಿಲ್ಲೆ) – ಇಲ್ಲಿನ ದೈನಿಕವೊಂದರ ವರದಿಗಾರ ಹುಸೇನ್ ಶೇಖ್ ಅವರು ಹಿಂದೂ ಧರ್ಮದ ದೇವತೆಗಳ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರು ‘ಹಿಂದೂಗಳ ದೇವತೆಗಳು ಕಲ್ಲುಗಳಾಗಿವೆ. ಅವರು ದೇವಸ್ಥಾನಕ್ಕೆ ಏಕೆ ಹೋಗುತ್ತಾರೆ?, ದಾನ ಏಕೆ ಮಾಡುತ್ತಾರೆ?, ಅದಕ್ಕಿಂತ ಹೆಚ್ಚಾಗಿ ಜೀವಂತ ಮನುಷ್ಯನಿಗೆ ಸಹಾಯ ಮಾಡಿ’, ಎಂದು ಹಿಂದೂದ್ವೇಷದ ಹೇಳಿಕೆ ನೀಡಿದ್ದರು. ಇದರ ವಿರುದ್ಧ ‘ಸಕಲ ಹಿಂದೂ ಸಮಾಜ’ವು ತಕ್ಷಣವೇ ಪತ್ರಕರ್ತ ಹುಸೇನ್ ಶೇಖ್ ವಿರುದ್ಧ ಜಯಸಿಂಗಪುರ ಪೊಲೀಸ್ ಠಾಣೆಯಲ್ಲಿ ಮನವಿ ಸಲ್ಲಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ಸಕಲ ಹಿಂದೂ ಸಮಾಜದ ಆಕ್ರಮಣಕಾರಿ ನಿಲುವಿನಿಂದಾಗಿ ಹುಸೇನ್ ಶೇಖ್ ಅವರು ಲಿಖಿತ ವಿವರಣೆ ನೀಡಿ ಹಿಂದೂಗಳ ಕ್ಷಮೆಯಾಚಿಸಬೇಕಾಯಿತು.
ಪೊಲೀಸ್ ಠಾಣೆಗೆ ದೂರು ಸಲ್ಲಿಸುವಾಗ ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದ ಧಾರಕರಿಗಳಾದ ಶ್ರೀ. ರಾಜೇಂದ್ರ ಗಾಡಿವಡರ್, ಶ್ರೀ. ಶೈಲೇಂದ್ರ ಲೋಹಿಯಾ, ನಗರಸಭಾ ಸದಸ್ಯ ಶ್ರೀ. ಸಂತೋಷ್ ಜಾಧವ್, ಭಾಜಪದ ಶ್ರೀ. ಮಹೇಂದ್ರ ದಾಯಿಂಗಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಮಹೇಂದ್ರ ರಜಪೂತ್, ಶ್ರೀ. ಸುನಿಲ್ ಭೋರೆ, ಶ್ರೀ. ಧೀರಜ್‌ಲಾಲ್ ಪಟೇಲ್, ಶ್ರೀ. ಕೈಲಾಸ್ ದೇಶ್‌ಮುಖ್ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸಂಜಯ್ ಘಾಟ್ಗೆ ಉಪಸ್ಥಿತರಿದ್ದರು. ಹುಸೇನ್ ಶೇಖ್ ಅವರು ನೀಡಿದ ಕ್ಷಮಾಪಣಾ ಪತ್ರದಲ್ಲಿ, ‘ನಾನು ನನ್ನ ಹಿಂದೂ ಬಾಂಧವರಲ್ಲಿ ಕ್ಷಮೆಯಾಚಿಸುತ್ತೇನೆ. ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯಿಂದ ಸಕಲ ಹಿಂದೂ ಸಮಾಜದ ಮನಸ್ಸಿಗೆ ನೋವಾಗದಂತೆ ನಾನು ಇನ್ನು ಮುಂದೆ ಎಚ್ಚರ ವಹಿಸುತ್ತೇನೆ’, ಎಂದು ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !