ಅಕ್ಷಯ ತೃತೀಯಾ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್‌ಲೈನ್ ವಿಶೇಷ ಪ್ರವಚನ !

ಸನಾತನ ಸಂಸ್ಥೆ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರಿಂದ ಮಾರ್ಗದರ್ಶನ

ಪೂ. ರಮಾನಂದ ಗೌಡ

ಮಂಗಳೂರು –  ಅಕ್ಷಯ ತೃತೀಯಾದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಆನ್‌ಲೈನ್ ವಿಶೇಷ ಸತ್ಸಂಗವನ್ನು ಆಯೋಜಿಸಲಾಗಿತ್ತು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್‌ಲೈನ್ ಮೂಲಕ ಮಾರ್ಗದರ್ಶನ ಮಾಡಿದರು. ಸುಮಾರು ೩ ಸಾವಿರದ ೭೦೦ ಕ್ಕೂ ಅಧಿಕ ಜಿಜ್ಞಾಸುಗಳು ಈ ಸತ್ಸಂಗದ ಲಾಭ ಪಡೆದರು.

ಗುರುಪೂರ್ಣಿಮೆ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಶಿಬಿರ

ಉಡುಪಿ – ಜುಲೈ ೧೩ ರಂದು ಇರುವ ಗುರುಪೂರ್ಣಿಮೆ ನಿಮಿತ್ತ ಸನಾತನ ಸಂಸ್ಥೆಯ ವತಿಯಿಂದ ಆನ್‌ಲೈನ್ ಶಿಬಿರವನ್ನು ಆಯೋಜಿಸಲಾಗಿತ್ತು. ಈ ವೇಳೆ ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡುತ್ತಾ, ‘ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೇ ಗುರುಪೂರ್ಣಿಮೆಯಾಗಿದೆ. ಇದು ಸಾಧಕರ, ಭಕ್ತರ ಜೀವನದಲ್ಲಿ ಬರುವ ದೊಡ್ಡ ಹಬ್ಬವೇ ಆಗಿದೆ. ಈ ದಿನ ನಿತ್ಯಕ್ಕಿಂತ ೧ ಸಾವಿರ ಪಟ್ಟು ಹೆಚ್ಚು ಪ್ರಮಾಣದಲ್ಲಿ ಬರುವ ಗುರುತತ್ತ್ವದ ಹೆಚ್ಚೆಚ್ಚು ಲಾಭ ಪಡೆಯೋಣ’, ಎಂದರು

‘ಗುರುಗಳಿಗೆ  ಕೃತಜ್ಞತೆಯನ್ನು ಅರ್ಪಿಸಲು ಗುರುಗಳಿಗೆ  ಅಪೇಕ್ಷಿತ ರೀತಿಯಲ್ಲಿ ಸೇವೆ ಮತ್ತು ಪ್ರಯತ್ನವನ್ನು ಮಾಡಿ ಗುರುಕೃಪೆಯನ್ನು ಪಡೆಯಬೇಕೆಂದು ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭುರವರು ಶಿಬಿರದ ಉದ್ದೇಶವನ್ನು ತಿಳಿಸಿದರು.

ಪ್ರವಾಹದೊಂದಿಗೆ ಹರಿದುಕೊಂಡು ಹೋಗುವವರು ಶವವಾಗಿರುತ್ತಾರೆ. ಅದೇ ಪ್ರವಾಹದಲ್ಲಿ ತಮ್ಮ ದಿಕ್ಕನ್ನು ನಿರ್ಧರಿಸುವವರು ಜೀವಂತವಿರುತ್ತಾರೆ. – ಡಾ. ಸಚ್ಚಿದಾನಂದ ಶೆವಡೆ, ರಾಷ್ಟ್ರೀಯ ಪ್ರವಚನಕಾರರು ಹಾಗೂ ಸಾಹಿತ್ಯಕಾರರು, ಡೊಂಬಿವಲೀ, ಠಾಣೆ. (ದೈನಿಕ ಸನಾತನ ಪ್ರಭಾತ, ಆಷಾಡ ಶುಕ್ಲಪಕ್ಷ ಷಷ್ಠಿ, ಕಲಿಯುಗ ವರ್ಷ ೫೧೧೨ (೧೭.೭.೨೦೧೦))