ತಾವೇ ರಚಿಸಿದ ಕಥೆ ಮತ್ತು ಸುಂದರ ಚಿತ್ರಗಳ ಮೂಲಕ ತಮ್ಮ ಮರಿಮಗ ಸನಾತನದ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ (೪ ವರ್ಷ) ಇವರಿಗೆ ವಿವಿಧ ಕಥೆಗಳನ್ನು ಕಲಿಸುವ ಪೂ. (ಶ್ರೀಮತಿ) ರಾಧಾ ಪ್ರಭು (೮೪ ವರ್ಷ) !

ಪೂ. (ಶ್ರೀಮತಿ) ರಾಧಾ ಪ್ರಭು

 

ಪೂ. ಭಾರ್ಗವರಾಮ ಪ್ರಭು

ಮಂಗಳೂರಿನ ಸನಾತನದ ೪೪ ನೇ ಸಂತ ಪೂ. ರಾಧಾ ಪ್ರಭು ಇವರು ತಮ್ಮ ಮರಿಮಗ ಸನಾತನದ ಮೊದಲ ಬಾಲಕ ಸಂತ ಪೂ. ಭಾರ್ಗವರಾಮ ಪ್ರಭು ಇವರಿಗಾಗಿ ಕೆಲವು ಕಥೆಗಳನ್ನು ತಯಾರು ಮಾಡಿದ್ದಾರೆ. ಒಂದು ವಹಿಯಲ್ಲಿ ಅವರು ನಿರ್ಜೀವ ವಸ್ತು, ವೃಕ್ಷಗಳು, ಹೂವು, ಪ್ರಾಣಿ-ಪಕ್ಷಿ ಇತ್ಯಾದಿಗಳ ಸುಂದರವಾದ ಚಿತ್ರಗಳನ್ನು ಚಿತ್ರಿಸಿದ್ದಾರೆ. ಪೂ. ಭಾರ್ಗವರಾಮರಿಗೆ ವಿವಿಧ ಕಥೆಗಳ ಜ್ಞಾನವಾಗಬೇಕೆಂದು, ಪೂ. ರಾಧಾ ಪ್ರಭು (ಪೂ.ಭಾರ್ಗವರಾಮರ ಮುತ್ತಜ್ಜಿ) ಇವರು ಚಿತ್ರಗಳ ಮೂಲಕ ತಾವೇ ರಚಿಸಿದ ಅನೇಕ ಕಥೆಗಳನ್ನು ಪೂ. ಭಾರ್ಗವರಾಮರಿಗೆ (೨೦೧೯ ರಲ್ಲಿ ಅವರ ವಯಸ್ಸು ೨ ವರ್ಷ) ವಿವರಿಸಿ ಹೇಳುತ್ತಿದ್ದರು. ಇದರಿಂದ ಪೂ. ಭಾರ್ಗವರಾಮರ ಮನಸ್ಸಿನಲ್ಲಿ ನಿಸರ್ಗ, ಪ್ರಾಣಿ-ಪಕ್ಷಿ, ಹೂವು ಇತ್ಯಾದಿ ಅನೇಕ ವಿಷಯಗಳ ಜಿಜ್ಞಾಸೆ ನಿರ್ಮಾಣವಾಗಿ ಅವರಿಗೆ ಅನೇಕ ವಿಷಯಗಳ ಜ್ಞಾನವೂ ಪ್ರಾಪ್ತಿಯಾಗಲು ಆರಂಭವಾಯಿತು. ಇದರಿಂದ ‘ಓರ್ವ ಸಂತರು ಇನ್ನೋರ್ವ ಸಂತರಿಗೆ ಜ್ಞಾನದ ಅಮೂಲ್ಯ ಕೊಡುಗೆಯನ್ನು ಹೇಗೆ ಒಪ್ಪಿಸುತ್ತಾರೆ ? ಹಾಗೂ ಸುಸಂಸ್ಕಾರವನ್ನು ಹೇಗೆ ಮಾಡುತ್ತಾರೆ ?’, ಎಂಬುದು ಕಲಿಯಲು ಸಿಗುತ್ತದೆ. ಪೂ. ರಾಧಾ ಪ್ರಭು ಇವರು ಚಿತ್ರಗಳಿಂದ ಸಾತ್ತ್ವಿಕ ಹಾಗೂ ಅಸಾತ್ತ್ವಿಕ ವಿಷಯಗಳ ಬೋಧನೆಯನ್ನು ಮಾಡಿದ್ದಾರೆ. ಅವರು ಚಿತ್ರಿಸಿದ ಈ ಚಿತ್ರಗಳನ್ನು ನೋಡಿ ಭಾವಜಾಗೃತಿಯಾಗುತ್ತದೆ ಹಾಗೂ ವಹಿಯನ್ನು ಕೈಗೆ ತೆಗೆದುಕೊಂಡಾಗ ಧ್ಯಾನ ತಗಲುತ್ತದೆ. ಈ ಚಿತ್ರಗಳನ್ನು ಗಮನಪೂರ್ವಕ ನೋಡಿ ಅದರ ಬಗ್ಗೆ ಪ್ರಶ್ನೆ ಕೇಳುವ ಪೂ. ಭಾರ್ಗವರಾಮರ ಬುದ್ಧಿಶಕ್ತಿಯ ಅರಿವಾಗುತ್ತದೆ ಹಾಗೂ ಪ್ರತಿಯೊಂದು ವಿಷಯದ ಹಿಂದಿನ ಕಾರಣವನ್ನು ತಿಳಿದುಕೊಳ್ಳುವ ಅವರ ಜಿಜ್ಞಾಸುವೃತ್ತಿಯೂ ಕಾಣಿಸುತ್ತದೆ. ವಹಿಯಲ್ಲಿನ ಅಸಾತ್ತ್ವಿಕ ವಿಷಯಗಳು ಮತ್ತು ವಸ್ತುಗಳ ಚಿತ್ರಗಳ ಮೇಲೆ ಅವರು ಅಡ್ಡರೇಖೆ ಹಾಕಿದ್ದಾರೆ ಅಥವಾ ಆ ಚಿತ್ರವನ್ನೇ ಹರಿದು ಹಾಕಿದ್ದಾರೆ.

ಪೂ. ರಾಧಾಪ್ರಭು ಇವರು ಚಿತ್ರಿಸಿದ ಚಿತ್ರಗಳು ಮತ್ತು ಅದನ್ನು ನೋಡುತ್ತಿರುವ ಪೂ. ಭಾರ್ಗವರಾಮ ಮತ್ತು ಪೂ. ರಾಧಾ ಪ್ರಭು ಇವರ ನಡುವಿನ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

೧. ಪೂ. ರಾಧಾ ಪ್ರಭುಅಜ್ಜಿ ಇವರು ವಹಿಯಲ್ಲಿ ೩ ಭಾಷೆಗಳಲ್ಲಿ ಪೂ. ಭಾರ್ಗವರಾಮರ ಹೆಸರನ್ನು ಬರೆದಿದ್ದಾರೆ ಹಾಗೂ ಅವರಿಗೆ ಆಕಳು-ಕರು ಇವುಗಳ ಮೂಲಕ ಕಲಿಸುತ್ತಾರೆ

ಚಿತ್ರಗಳನ್ನು ಚಿತ್ರಿಸಿದ ದಿನಾಂಕ : ಮೇ ೨೦೧೯

ಚಿತ್ರಗಳ ವರ್ಣನೆ : ಈ ಚಿತ್ರಗಳಲ್ಲಿ ಪೂ. ಭಾರ್ಗವರಾಮರ ಹೆಸರನ್ನು ಮೂರು ಭಾಷೆಗಳಲ್ಲಿ ಬರೆದಿದ್ದು ಚಿತ್ರದಲ್ಲಿ ಒಂದು ಆಕಳು ಇದೆ ಹಾಗೂ ಅದರ ಸಣ್ಣ ಕರುವು ಆಕಳಿನ ಹಾಲು ಕುಡಿಯುತ್ತಿದೆ. ಈ ಚಿತ್ರವನ್ನು ನೋಡುವ ಮೊದಲು ಮತ್ತು ನೋಡುತ್ತಿರುವ ಪೂ. ಭಾರ್ಗವರಾಮ ಹಾಗೂ ಪೂ. ರಾಧಾ ಪ್ರಭು ಇವರಲ್ಲಿ ನಡೆದಿರುವ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

ಪೂ. ಭಾರ್ಗವರಾಮ : ಅಜ್ಜಮ್ಮ (ಪೂ. ಭಾರ್ಗವರಾಮರು ಪೂ. ರಾಧಾ ಪ್ರಭು ಇವರನ್ನು ‘ಅಜ್ಜಮ್ಮ’ ಎಂದು ಕರೆಯುತ್ತಾರೆ.), ನನಗೆ ಕಥೆ ಹೇಳಿರಿ.

ಪೂ. ರಾಧಾ ಪ್ರಭು : ನೀನು ನಿನ್ನ ವಹಿಯನ್ನು ತೆಗೆದುಕೊಂಡು ಬಾ. ನಾನು ನಿನ್ನ ಚಿತ್ರಗಳ ವಹಿಯಲ್ಲಿನ ಕಥೆಗಳನ್ನು ಹೇಳುತ್ತೇನೆ.

ಪೂ. ಭಾರ್ಗವರಾಮ : ಇದು ನನ್ನ ವಹಿ.

ಪೂ. ರಾಧಾ ಪ್ರಭು : ಹೌದು. ‘ಇದು ನಿನ್ನ ವಹಿ ಆಗಿದೆ, ಎಂಬುದು ನಿನಗೆ ತಿಳಿಯುವ ಸಲುವಾಗಿ ನಾನು ನಿನ್ನ ಹೆಸರನ್ನು ‘ಕನ್ನಡ’, ‘ಹಿಂದಿ’ ಮತ್ತು ‘ಆಂಗ್ಲ’ ಈ ಮೂರು ಭಾಷೆಗಳಲ್ಲಿ ಬರೆದಿದ್ದೇನೆ.

ಪೂ. ಭಾರ್ಗವರಾಮ (ಚಿತ್ರದಲ್ಲಿನ ಆಕಳಿನ ಕಡೆಗೆ ಬೆರಳು ತೋರಿಸಿ) : ಇದು ಆಕಳು. ಇದು ಕೃಷ್ಣನ ಆಕಳು. ಅದರ ಕರು ತನ್ನ ತಾಯಿಯ ಹಾಲನ್ನು ಕುಡಿಯುತ್ತಿದೆ. ನಾನು ಕೂಡ ನನ್ನ ತಾಯಿಯ ಹಾಲನ್ನು ಕುಡಿಯುತ್ತೇನೆ.

೨. ಉರಿಯುತ್ತಿರುವ ಹಣತೆಯ ಮೂಲಕ ಪ್ರಕಾಶದ, ಶಂಖದ, ದೇವತೆಗಳ ಶಸ್ತ್ರಗಳ ಮತ್ತು ಶ್ರೀ ಲಕ್ಷ್ಮೀದೇವಿಯ ಕಮಲ ಇತ್ಯಾದಿಗಳ ಮೂಲಕ ದೇವತೆಗಳ ಜ್ಞಾನವನ್ನು ನೀಡುವುದು

ಚಿತ್ರವನ್ನು ಚಿತ್ರಿಸಿದ ದಿನಾಂಕ : ೬.೭.೨೦೧೯

ಚಿತ್ರಗಳ ವರ್ಣನೆ : ಜುಲೈ ೨೦೧೯ ರಲ್ಲಿ ಪೂ. ರಾಧಾ ಪ್ರಭು ರಾಮನಾಥಿ ಆಶ್ರಮಕ್ಕೆ ಬಂದಿದ್ದರು. ಆಗ ಆಶ್ರಮದ ಒಂದು ಫಲಕದಲ್ಲಿ ಒಬ್ಬ ಯುವ-ಸಾಧಕನು ಚಿತ್ರಿಸಿದ ಚಿತ್ರವನ್ನು ನೋಡಿ ಪೂ. ರಾಧಾ ಪ್ರಭು ಇವರು ಈ ಚಿತ್ರವನ್ನು ಚಿತ್ರಿಸಿದ್ದಾರೆ. ಈ ಚಿತ್ರದಲ್ಲಿ ಅವರು ಉರಿಯುತ್ತಿರುವ ಹಣತೆ, ಶಂಖ. ಚಕ್ರ, ಗದೆ ಮತ್ತು ಪದ್ಮ (ಕಮಲ) ವನ್ನು ಚಿತ್ರಿಸಿದ್ದಾರೆ.

೧. ಉರಿಯುವ ಹಣತೆ (ದೀಪಾವಳಿಯ ಸಮಯದಲ್ಲಿ ಇಂತಹ ಹಣತೆಗಳನ್ನು ಎಲ್ಲೆಡೆ ಉರಿಸಲಾಗುತ್ತದೆ.)

೨. ಶಂಖ (ಶ್ರೀಕೃಷ್ಣನ ಶಂಖ)

೩. ಚಕ್ರ (ಶ್ರೀಕೃಷ್ಣನ ಚಕ್ರ)

೪. ಗದೆ (ಇದು ದೇವತೆಗಳ ಕೈಯಲ್ಲಿರುತ್ತದೆ.)

ಪೂ. ಭಾರ್ಗವರಾಮ : ಈ ಗದೆ ಹನುಮಂತನ ಕೈಯಲ್ಲಿರುತ್ತದೆಯಲ್ಲವೆ ?

ಪೂ. ರಾಧಾ ಪ್ರಭು : ಹೌದು. ದುಷ್ಟರನ್ನು ಸಂಹಾರ ಮಾಡಲು ಹನುಮಂತನು ಇದನ್ನು ಉಪಯೋಗಿಸುತ್ತಾನೆ.

೩. ಚಿತ್ರವನ್ನು ನೋಡುವಾಗ ಪೂ. ಭಾರ್ಗವರಾಮರಲ್ಲಿ ಕಾಣಿಸುವ ಜಿಜ್ಞಾಸುವೃತ್ತಿ ಮತ್ತು ಅವರ ಪ್ರೇಮಭಾವ !

ಚಿತ್ರವನ್ನು ಚಿತ್ರಿಸಿದ ದಿನಾಂಕ : ೩.೫.೨೦೧೯

ಚಿತ್ರಗಳ ವರ್ಣನೆ : ಈ ಚಿತ್ರದಲ್ಲಿ ತೆಂಗಿನಮರ, ಏಣಿ, ಕತ್ತಿ, ಚೂರಿ, ಎಳನೀರು, ಹಣ್ಣುಗಳ ರಸ, ಚಮಚೆ, ಐಸ್ಕ್ರೀಮ್ ಇತ್ಯಾದಿ ಎಲ್ಲವನ್ನೂ ಸುಂದರವಾಗಿ ಚಿತ್ರಿಸಲಾಗಿದೆ.

ಪೂ. ಭಾರ್ಗವರಾಮ : ಇದೆಲ್ಲ ಏನು ?

ಪೂ. ರಾಧಾ ಪ್ರಭು : ಇದು ತೆಂಗಿನಮರ, ಏಣಿ, ಕತ್ತಿ, ಚೂರಿ, ಎಳನೀರು, ಹಣ್ಣಿನ ರಸ, ಚಮಚಾ, ಐಸ್ಕ್ರೀಮ್ ಇತ್ಯಾದಿ ಎಲ್ಲವೂ ಇದೆ.

 ಪೂ. ಭಾರ್ಗವರಾಮ : ಈ ಏಣಿ ಯಾಕೆ ?

ಪೂ. ರಾಧಾ ಪ್ರಭು : ತೆಂಗಿನ ಮರದಲ್ಲಿ ಎಳನೀರು ತುಂಬಾ ಮೇಲೆ ಇರುತ್ತದೆ; ಆದ್ದರಿಂದ ಮರಕ್ಕೆ ಏಣಿ ಇಟ್ಟು ಎಳನೀರನ್ನು ತೆಗೆದು ಕೆಳಗೆ ಹಾಕಬೇಕಾಗುತ್ತದೆ.

ಪೂ. ಭಾರ್ಗವರಾಮ : ಇಲ್ಲಿ ೩ ಎಳನೀರು ಇದೆ. ಇದು ಯಾರಿಗಾಗಿ ಇದೆ ?

ಪೂ. ರಾಧಾ ಪ್ರಭು : ೧ ಎಳನೀರು ನಿನಗೆ, ಒಂದು ನಿನ್ನ ತಾಯಿಗೆ ಮತ್ತು ಒಂದು ತಂದೆಗೆ.

ಪೂ. ಭಾರ್ಗವರಾಮ : ನಿಮಗೆ ಎಳನೀರು ?

ಪೂ. ರಾಧಾ ಪ್ರಭು : ಇಲ್ಲಿ ಇರುವ ಐಸ್ಕ್ರೀಮ್ ನನಗಾಗಿ ಇದೆ.

ಪೂ. ಭಾರ್ಗವರಾಮ : ಇಲ್ಲಿ ಇನ್ನೂ ಒಂದು ಐಸ್ಕ್ರೀಮ್ ಇದೆ, ಅದು ನನಗಾಗಿ ಇದೆ. ಇಲ್ಲಿ ಚಮಚವೂ ಇದೆ. ಇಲ್ಲಿ ೫ ಲೋಟ ಹಣ್ಣುಗಳ ರಸವೂ ಇದೆ. ಆ ರಸ ಅಜ್ಜಿ, ತಂದೆ, ತಾಯಿ, ಮಾಮಾ ಮತ್ತು ನನಗಾಗಿ ಇದೆ. (೨೦೧೯)