ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಸಂಪತ್ತು !

೧. ಉಚ್ಚ ವಿಚಾರಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆಯಿರುತ್ತದೆ ಮತ್ತು ಅವುಗಳಿಂದ ದೈವೀ ಕಾರ್ಯ ನಡೆಯುವುದರಿಂದ ಮನಸ್ಸಿಗೆ ಅವುಗಳ ಆಹಾರವನ್ನು ನೀಡಿ ಮನಸ್ಸನ್ನು ಆರೋಗ್ಯವಂತವಾಗಿಡಬೇಕು !

ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ

‘ಜೀವನದಲ್ಲಿ ಎಂದಿಗೂ ತಮ್ಮನ್ನು ಕಡಿಮೆ ಎಂದು ತಿಳಿದುಕೊಳ್ಳಬೇಡಿರಿ. ಕನಿಷ್ಠ ವಿಚಾರಗಳನ್ನು ಮಾಡಬೇಡಿ. ನಕಾರಾತ್ಮಕತೆಯತ್ತ ಹೋಗಬೇಡಿ. ಅದರ ಬದಲು ಉಚ್ಚ ಮತ್ತು ವ್ಯಾಪಕ ವಿಚಾರಗಳಿಂದ ದೊಡ್ಡವರಾಗಿರಿ. ಉಚ್ಚ ವಿಚಾರಗಳಲ್ಲಿ ಬಹಳಷ್ಟು ಸಕಾರಾತ್ಮಕ ಊರ್ಜೆ ಸಂಗ್ರಹವಾಗಿರುತ್ತದೆ. ಈ ಊರ್ಜೆಯು ನಿಮ್ಮ ಮನಸ್ಸಿಗೆ ಒಳ್ಳೆಯ ಕಾರ್ಯವನ್ನು ಮಾಡಲು ಪ್ರಭಾವ ಬೀರುವಂತಹದ್ದಾಗಿರುತ್ತದೆ. ಕೇವಲ ಒಳ್ಳೆಯ ವಿಚಾರಗಳಿಂದಲೂ ನಮ್ಮಿಂದ ದೈವೀ ಕಾರ್ಯಗಳಾಗುತ್ತವೆ. ಆಹಾರಕ್ಕಿಂತ ಶರೀರದ ಮೇಲೆ ಬೀಳುವ ವಿಚಾರಗಳ ಪ್ರಭಾವ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಯಾರ ಮನಸ್ಸು ಚೆನ್ನಾಗಿರುತ್ತದೆಯೋ, ಅವರ ಆರೋಗ್ಯವೂ ತಾನಾಗಿಯೇ ಚೆನ್ನಾಗಿರುತ್ತದೆ. ಆದುದರಿಂದ ಶರೀರದೊಂದಿಗೆ ಮನಸ್ಸಿಗೂ ಒಳ್ಳೆಯ ದೈವೀ ವಿಚಾರಗಳ ಆಹಾರವನ್ನು ನೀಡಿರಿ ಮತ್ತು ಆರೋಗ್ಯವಂತರಾಗಿರಿ’.

೨. ತಳಮಳದಿಂದ ಸಾಧನೆಯನ್ನು ಮಾಡಿ ಭಗವಂತನ ಲೀಲೆಯನ್ನು ಅನುಭವಿಸುವುದರಲ್ಲಿಯೇ ನಿಜವಾದ ಆನಂದವಿದೆ

‘ನಾವು ಎಂದಿಗೂ ಏನನ್ನೂ ಗಳಿಸುವುದೂ ಇಲ್ಲ ಮತ್ತು ಏನನ್ನೂ ಕಳೆದುಕೊಳ್ಳುವುದೂ ಇಲ್ಲ; ಏಕೆಂದರೆ ಪ್ರತಿಯೊಂದು ಕರ್ಮವನ್ನು ಮಾಡುವವನು ಮತ್ತು ಮಾಡಿಸಿಕೊಳ್ಳುವವನು ಈಶ್ವರನೇ ಆಗಿದ್ದಾನೆ. ಹಾಗಾದರೆ ನಮಗೆಂತಹ ದುಃಖವಿದೆ ? ಆ ಜಗತ್ತಿನ ಪಾಲನಕರ್ತನ ಮೇಲೆ ಎಲ್ಲವನ್ನೂ ಬಿಟ್ಟು ಬಿಡಿ ಮತ್ತು ಯಾವುದೇ ಚಿಂತೆ ಅಥವಾ ಹೆದರಿಕೆ ಇಲ್ಲದ ಮನಸ್ಸಿನಿಂದ ಸಾಧನೆಯನ್ನು ಮಾಡಿರಿ, ಆಮೇಲೆ ಅವನು ನಮಗಾಗಿ ಏನೆಲ್ಲ ಮಾಡುತ್ತಾನೆ ಎಂಬುದನ್ನು ನೋಡಿರಿ ! ಭಗವಂತನ ಲೀಲೆಯನ್ನು ಅನುಭವಿಸುವುದರಲ್ಲಿಯೇ ನಿಜವಾದ ಆನಂದವಿದೆ. ತಳಮಳದಿಂದ ಸಾಧನೆಯನ್ನು ಮಾಡುವ ಜವಾಬ್ದಾರಿ ಮಾತ್ರ ನಮ್ಮದಾಗಿದೆ. ಅನಂತರ ಅವನೇ ನಮ್ಮನ್ನು ಹೂವಿನಂತೆ ಜೋಪಾನ ಮಾಡುತ್ತಾನೆ. ನೀವು ಅವನವನಾದರೆ, ಅವನು ಶಾಶ್ವತವಾಗಿ ನಿಮ್ಮವನಾಗುತ್ತಾನೆ’

೩. ಈಶ್ವರನ ಸಗುಣ ರೂಪವಾಗಿರುವ ಸಂತರಲ್ಲಿ ದೇವರೇ ಇರುವುದರಿಂದ ಅವರು ಇತರರಿಗಾಗಿ ಆಧಾರ ಸ್ತಂಭವಾಗುವರು, ನಾವೂ ಅವರಂತೆ ಸಾಧನೆಯಿಂದ ಸಕ್ಷಮರಾಗಿ ಇತತರಿಗೆ ಆಧಾರವಾಗುವುದು ಆವಶ್ಯಕ !

‘ನಮ್ಮನ್ನು ಎಷ್ಟೊಂದು ಸಕ್ಷಮರನ್ನಾಗಿ ಮಾಡಬೇಕೆಂದರೆ, ನಮ್ಮಿಂದ ಇತರರಿಗೆ ಆಧಾರವೆನಿಸಬೇಕು. ಎಷ್ಟು ಒಳ್ಳೆಯ ಪ್ರಯತ್ನವನ್ನು (ಸಾಧನೆಯನ್ನು ಮಾಡಬೇಕೆಂದರೆ ನೀವು ಇತರರಿಗೆ ಆಧಾರವಾಗಬೇಕು; ಏಕೆಂದರೆ ನಿಮ್ಮ ಸಾಧನೆಯಿಂದ ಇತರರಿಗೆ ನಿಮ್ಮಲ್ಲಿರುವ ಈಶ್ವರೀ ತತ್ತ್ವದ ಆಧಾರವೆನಿಸತೊಡಗುತ್ತದೆ. ಮನುಷ್ಯನು ಮನುಷ್ಯನಿಗೆ ಆಧಾರ ನೀಡಲಾರನು. ಸಾಧಕನು ಸಾಧಕನಿಗೆ ಆಧಾರ ನೀಡಲಾರನು; ಆದರೆ ಸಂತರು ಮಾತ್ರ ಎಲ್ಲರಿಗೆ ಆಧಾರ ನೀಡುತ್ತಾರೆ; ಏಕೆಂದರೆ ಅವರು ಈಶ್ವರನ ಸಗುಣ ರೂಪವಾಗಿರುತ್ತಾರೆ. ಸಂತರಲ್ಲಿನ ಈಶ್ವರನೇ ಇತರರ ಆಧಾರಸ್ತಂಭವಾಗುತ್ತಾನೆ.’

೪. ‘ಆಪತ್ಕಾಲದಲ್ಲಿ ಈಶ್ವರನು ನಮ್ಮನ್ನು ನೆನಪಿಸಬೇಕೆಂದು ಈಗಿನಿಂದಲೇ ಸಾಧನೆಯನ್ನು ಮಾಡಿರಿ !’

‘ಆಪತ್ಕಾಲದಲ್ಲಿ ನಮಗೆ ಮುಖಂಡರ, ರಾಜಕಾರಣಿಗಳ, ನಟನಟಿಯರ, ಕಲಾವಿದರ, ಸಾಹಿತಿಗಳ ಅಥವಾ ಗಾಯಕರ ನೆನಪಾಗುವುದಿಲ್ಲ, ಕೇವಲ ಈಶ್ವರನ ನೆನಪಾಗುತ್ತದೆ; ಆದರೆ ಆಪತ್ಕಾಲದಲ್ಲಿ ಆ ಈಶ್ವರನೂ ನಿಮ್ಮನ್ನು ನೆನಪಿಸಬೇಕೆಂದು ಈಗಿನಿಂದಲೇ ಸಾಧನೆಯನ್ನು ಮಾಡಿರಿ !’

೫. ಮನಸ್ಸು ಮತ್ತು ಬುದ್ಧಿ ಇವುಗಳ ಸಂಗಮದಿಂದ ಮಾಡಿದ ಸೇವೆಯು ‘ಪರಿಪೂರ್ಣ ಸೇವೆ’ಯಾಗಿ ಆನಂದ ಸಿಗುವುದು ಮತ್ತು ಅದರಿಂದ ಈಶ್ವರನು ಹೆಚ್ಚೆಚ್ಚು ಹತ್ತಿರಕ್ಕೆ ಬರುವನು

‘ನಾವು ತತ್ತ್ವರೂಪದಿಂದ ಏನು ಕಲಿತೆವೋ, ಅದನ್ನು ಈಗ ಕೃತಿಯಲ್ಲಿ ತರುವುದು ಆವಶ್ಯಕವಾಗಿದೆ. ಕೇವಲ ಕಲಿಯುವುದರಿಂದ ಮನಸ್ಸು ಸಕಾರಾತ್ಮಕವಾಗುತ್ತದೆ; ಆದರೆ ಕಲಿತದ್ದನ್ನು ಪ್ರತ್ಯಕ್ಷ ಕೃತಿಯಲ್ಲಿ ತಂದರೆ, ಬುದ್ಧಿಯೂ ಮನಸ್ಸಿನೊಂದಿಗೆ ಸೇವೆಯನ್ನು ಮಾಡತೊಡಗುತ್ತದೆ. ‘ಮನಸ್ಸು ಮತ್ತು ಬುದ್ಧಿ’ ಇವುಗಳ ಒಟ್ಟು ಸಂಗಮದಿಂದ ನಿರ್ಮಾಣವಾದ ಊರ್ಜೆಯು ನಿಮಗೆ ಸೇವೆಯಿಂದ ಪೂರ್ಣ ಫಲನಿಷ್ಪತ್ತಿಯನ್ನು ದೊರಕಿಸಿಕೊಡುತ್ತದೆ. ಇದನ್ನೇ ‘ಪರಿಪೂರ್ಣ ಸೇವೆಯನ್ನು ಮಾಡುವುದು’, ಎಂದು ಹೇಳುತ್ತಾರೆ. ಪರಿಪೂರ್ಣ ಸೇವೆಯನ್ನು ಮಾಡುವ ಸಂಸ್ಕಾರವನ್ನು ಅಳವಡಿಸಿಕೊಂಡರೆ ‘ಮನಸ್ಸು ಮತ್ತು ಬುದ್ಧಿ’ ತೀರಾ ಒಳ್ಳೆಯ ತಿಳುವಳಿಕೆಯ ಸ್ನೇಹಿತರಂತೆ ಕೈಯಲ್ಲಿ ಕೈ ಹಾಕಿ ಸೇವೆಯನ್ನು ಮಾಡತೊಡಗುತ್ತವೆ. ಇದರಿಂದ ನಮಗೆ ಸಿಗುವ ಸೇವೆಯಲ್ಲಿನ ಆನಂದದ ಪ್ರಮಾಣವೂ ಹೆಚ್ಚಾಗುತ್ತದೆ. ಸೇವೆಯಲ್ಲಿನ ಆನಂದ ಹೆಚ್ಚಾದರೆ, ದೇವರು ಹೆಚ್ಚೆಚ್ಚು ನಿಮ್ಮ ಸಮೀಪಕ್ಕೆ ಬರುತ್ತಾನೆ.’

೬. ಯಾವ ಗುರುಗಳು ಜನ್ಮಜನ್ಮಾಂತರಗಳಲ್ಲಿ ನಮಗಾಗಿ ತೊಂದರೆಗಳನ್ನು ತೆಗೆದುಕೊಂಡಿದ್ದಾರೆಯೋ, ಅವರಿಗೆ ನಾವು ಸ್ವತಃ ಉತ್ತಮ ಶಿಷ್ಯರಾಗಿ ತೋರಿಸುವುದೇ ಇಷ್ಟವಾಗುವ ನಿಜವಾದ ಗುರುದಕ್ಷಿಣೆಯಾಗಿದೆ

‘ಇಲ್ಲಿಯವರೆಗೆ ಗುರುಗಳು ನಮಗಾಗಿ ಬಹಳ ಕಷ್ಟಪಟ್ಟಿದ್ದಾರೆ. ‘ನಮ್ಮ ಅನೇಕ ಪೂರ್ವಜನ್ಮಗಳಲ್ಲಿ ಗುರುಗಳು ನಮ್ಮನ್ನು ಹೇಗೆ ಸಂಭಾಳಿಸಿರಬಹುದು ?’, ಇದರ ಬಗ್ಗೆ ಕಲ್ಪನೆಯನ್ನು ಮಾಡುವುದೂ ಕಠಿಣವಾಗಿದೆ. ಅವರೇ ನಮ್ಮನ್ನು ಜೀವನದಲ್ಲಿ ಕ್ಷಣಕ್ಷಣಕ್ಕೂ ಸಂಭಾಳಿಸಿದ್ದಾರೆ. ಅವರ ಅನಂತ ಜನ್ಮಗಳ ಕೃಪೆಯಿಂದಲೇ ಇಂದು ನಾವು ಈ ಸಾಧನೆಯ ಮಾರ್ಗದಲ್ಲಿ ಬಂದಿದ್ದೇವೆ. ನಮ್ಮ ಗುರುಗಳು ಇಲ್ಲಿಯವರೆಗೆ ನಮ್ಮನ್ನು ಸಾಧನೆಯಲ್ಲಿ ತರಲು ಎಷ್ಟೊಂದು ಅಪಾರ ತೊಂದರೆಗಳನ್ನು ತೆಗೆದುಕೊಂಡಿರಬಹುದು, ತೊಂದರೆಗಳನ್ನು ಸಹಿಸಿರಬಹುದು, ಇದು ಕೇವಲ ಅವರಿಗೇ ಗೊತ್ತು ! ಅವರು ಎಂದಿಗೂ ಈ ಕುರಿತು ಹೇಳುವುದಿಲ್ಲ; ಆದರೆ ಸಾಧನೆಯನ್ನು ಮಾಡುವ ಯಾವ ಅವಕಾಶವು ಗುರುಗಳ ಕೃಪೆಯಿಂದ ನಮಗೆ ಲಭಿಸಿದೆಯೋ, ಅದನ್ನು ಈಗ ಸಾರ್ಥಕಪಡಿಸುವ ಸಮಯ ಬಂದಿದೆ. ಇಲ್ಲಿಯವರೆಗೆ ಶ್ರೀ ಗುರುಗಳು ನಮಗಾಗಿ ಏನೆಲ್ಲ ತೊಂದರೆಗಳನ್ನು ತೆಗೆದುಕೊಂಡಿ ದ್ದಾರೆಯೋ, ಅದನ್ನು ಸಾರ್ಥಕ ಮಾಡುವ ಸಮಯ ಬಂದಿದೆ. ಅವರ ಬಗ್ಗೆ ಕೃತಜ್ಞತೆಯೆಂದಾದರೂ ನಾವು ಸಾಧನೆಯಲ್ಲಿ ಮುಂದೆ ಹೋಗಲು ಎಷ್ಟೇ ಸಂಘರ್ಷವಾದರೂ ತೀವ್ರ ಪ್ರಯತ್ನಗಳನ್ನು ಮಾಡಬೇಕಾಗಿದೆ, ಗುರುಗಳಿಗೆ ನಾವು ಅವರ ‘ಉತ್ತಮ ಶಿಷ್ಯ’ರಾಗಿ ತೋರಿಸಬೇಕು. ಇದಕ್ಕಿಂತಲೂ ಅವರಿಗೆ ಇಷ್ಟವಾಗುವ ‘ಗುರುದಕ್ಷಿಣೆ’ ಬೇರೆ ಏನಿರುವುದಿಲ್ಲ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ