ಭಾವಪೂರ್ಣ ಮತ್ತು ಪರಿಪೂರ್ಣ ಸೇವೆ ಮಾಡುವ ಶ್ರೀಮತಿ ಮಂದಾಕಿನಿ ಡಗವಾರ (೫೯) ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನ !

ರಾಮನಾಥಿ (ಗೋವಾ) – ಶ್ರೀರಾಮ ನವಮಿಯಂದು ಸಾಧಕರು ಚೈತನ್ಯ ಮತ್ತು ಆನಂದವನ್ನು ಅನುಭವಿಸುತ್ತಿರುವಾಗ ಈ ಆನಂದವನ್ನು ದ್ವಿಗುಣಗೊಳಿಸುವ ಆನಂದ ವಾರ್ತೆಯು ಸಾಧಕರಿಗೆ ಲಭಿಸಿತು ! ಶ್ರೀರಾಮ ನವಮಿಯ ಮಂಗಳದಿನದಂದು ಸಮಷ್ಟಿ ಸಾಧನೆಯ ತೀವ್ರ ತಳಮಳವಿರುವ ಸನಾತನದ ಸಾಧಕಿ ಶ್ರೀಮತಿ ಮಂದಾಕಿನಿ ಡಗವಾರ (೫೯ ವರ್ಷ) ಇವರು ಸನಾತನದ ೧೧೯ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು. ಶ್ರೀಸತ್‍ಶಕ್ತಿ ಸೌ. ಬಿಂದಾ ಸಿಂಗಬಾಳ ಇವರು ಉಡುಗೊರೆಯನ್ನು ನೀಡಿ ಪೂ. (ಶ್ರೀಮತಿ) ಮಂದಾಕಿನಿ ಡಗವಾರ ಇವರನ್ನು ಸನ್ಮಾನಿಸಿದರು.