ಗುರುಕೃಪೆಯ ಬೆಂಬಲವಿಲ್ಲದೇ ಆದರ್ಶ ರಾಷ್ಟ್ರ ನಿರ್ಮಾಣವಾಗಲಾರದು !

(ಪೂ.) ಸಂದೀಪ ಆಳಶಿ

‘ಆರ್ಯ ಚಾಣಕ್ಯ, ಸ್ವಾಮಿ ವಿದ್ಯಾರಣ್ಯ ಮತ್ತು ಸಮರ್ಥ ರಾಮದಾಸಸ್ವಾಮಿಗಳು ಆದರ್ಶ ಮತ್ತು ಸಮರ್ಥ ರಾಜ್ಯದ ನಿರ್ಮಿತಿಯ ಧ್ಯೇಯವನ್ನಿಟ್ಟುಕೊಂಡಿದ್ದರು ಮತ್ತು ಅವರ ಶಿಷ್ಯರು ಅನುಕ್ರಮವಾಗಿ ಸಾಮ್ರಾಟ ಚಂದ್ರಗುಪ್ತ ಮೌರ್ಯ, ಹರಿಹರ-ಬುಕ್ಕರಾಯ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಇವರು ಅದನ್ನು ಪೂರ್ಣಗೊಳಿಸಿದರು. ಈ ಶಿಷ್ಯರು ನಿಃಸ್ವಾರ್ಥ ವೃತ್ತಿಯಿಂದ ಮತ್ತು ಸೇವಾಭಾವದಿಂದ ಈ ಕಾರ್ಯವನ್ನು ಮಾಡಿದುದರಿಂದ ಈ ಕಾರ್ಯಕ್ಕೆ ಗುರುಕೃಪೆಯ ಬೆಂಬಲ ಸಿಕ್ಕಿತು, ಆದುದರಿಂದ ಈ ಕಾರ್ಯವು ಯಶಸ್ವಿಯಾಯಿತು. ಆದುದರಿಂದಲೇ ಪ್ರಾಚೀನ ಕಾಲದಿಂದ ಭಾರತದಲ್ಲಿನ ರಾಜರ ರಾಜ್ಯಸಭೆಯಲ್ಲಿ ರಾಜಗುರುಗಳು (ಉದಾ. ರಾಜಾ ದಶರಥರ ರಾಜಗುರು ವಸಿಷ್ಠ ಋಷಿಗಳು) ಇರುತ್ತಿದ್ದರು. ಇಂದಿನ ಧರ್ಮನಿರಪೇಕ್ಷ ರಾಜ್ಯದಲ್ಲಿ ಎಲ್ಲಿ ಧರ್ಮಕ್ಕೇ ಸ್ಥಾನವಿಲ್ಲವೋ, ಅಲ್ಲಿ ರಾಜಗುರುಗಳಿಗೆ ಸ್ಥಾನ ಎಲ್ಲಿರುವುದು ? ರಾಜ್ಯಾಡಳಿತಕ್ಕೆ ಧರ್ಮಾಡಳಿತದ ಅಧಿಷ್ಠಾನ ಇಲ್ಲದೇ ಇರುವುದರಿಂದಲೇ ಇಂದು ರಾಷ್ಟ್ರದ ಅಧಃಪತನವಾಗಿದೆ’, ಇದನ್ನು ಆಡಳಿತದವರು ಗಮನದಲ್ಲಿಡುವರೇ  ?

ಇಂದು ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಆದರ್ಶ ಹಿಂದೂ ರಾಷ್ಟ್ರದ (ಸನಾತನ ಧರ್ಮ ರಾಜ್ಯದ) ಧ್ಯೇಯವನ್ನು ಇಟ್ಟುಕೊಂಡಿದ್ದಾರೆ. ಕೇವಲ ಸನಾತನ ಸಂಸ್ಥೆಯ ಸಾಧಕರಷ್ಟೇ ಅಲ್ಲ, ಅನೇಕ ಧರ್ಮಪ್ರೇಮಿಗಳು, ರಾಷ್ಟ್ರಪ್ರೇಮಿಗಳು ಮತ್ತು ಹಿಂದುತ್ವನಿಷ್ಠರು ಅದಕ್ಕಾಗಿ ನಿಃಸ್ವಾರ್ಥ ವೃತ್ತಿಯಿಂದ ಮತ್ತು ಸೇವಾಭಾವದಿಂದ ಪರಿಶ್ರಮ ಪಡುತ್ತಿರುವುದರಿಂದಲೇ ಈ ಕಾರ್ಯಕ್ಕೆ ಈಶ್ವರನ ಆಶೀರ್ವಾದ ಲಭಿಸಿದೆ. ಆದುದರಿಂದಲೇ ಈ ಕಾರ್ಯ ಯಶಸ್ವಿ ಆಗುವುದೇ ಇದೆ, ಇದರ ಭರವಸೆಯನ್ನು ಇಟ್ಟುಕೊಳ್ಳಿರಿ !’

– (ಪೂ.) ಶ್ರೀ. ಸಂದೀಪ ಆಳಶಿ (ವರ್ಷ ೨೦೧೭)