ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮದ ಅವಮಾನ ಮಾಡುವವರ ವಿರುದ್ಧ ನ್ಯಾಯಾಂಗ ಹೋರಾಟ ಮಾಡಿ ! – ಪ್ರಶಾಂತ ಸಂಬರಗೀ, ಉದ್ಯಮಿ, ಬೆಂಗಳೂರು

ಶ್ರೀ ಪ್ರಶಾಂತ ಸಂಬರಗೀ

ವಿವಿಧ ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮದ ಅಪಹಾಸ್ಯ ಮಾಡಿದರೆ ಅದರ ಬಗ್ಗೆ ಆಕ್ಷೇಪವೆತ್ತುವುದಿಲ್ಲ. ಎಲ್ಲಿಯ ವರೆಗೆ ಪ್ರೇಕ್ಷಕರು ಜಾಗೃತರಾಗುವುದಿಲ್ಲ ಅಲ್ಲಿಯ ವರೆಗೆ ಜಾಗೃತ ಹಿಂದೂಗಳು ಇದರ ವಿರುದ್ಧ ಧ್ವನಿ ಎತ್ತುವುದಿಲ್ಲ ಅಲ್ಲಿಯವರೆಗೆ ವಿವಿಧ ಕಾರ್ಯಕ್ರಮದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮದ ಅವಮಾನವಾಗುತ್ತಿರಬಹುದು. ಈ ದೇಶದಲ್ಲಿ ಹಿಂದೂ ಹಾಗೂ ಮುಸಲ್ಮಾನರಿಗಾಗಿ ಎರಡು ಬೇರೆ ಬೇರೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ! ಜಗತ್ತಿನಲ್ಲಿ ಕೇವಲ ಇಸ್ಲಾಮ್ ಧರ್ಮವಿದೆ ಎಂದು ಮೂಲಭೂತವಾದಿ ಮತಾಂಧರು ತಿಳಿದಿದ್ದಾರೆ. ಜಗತ್ತಿನಲ್ಲಿ ಮೊಹಮ್ಮದ್ ಪೈಗಂಬರ ಅಥವಾ ಇಸ್ಲಾಮ್‌ನ ವಿಷಯದಲ್ಲಿ ಯಾರಾದರೂ ಮಾತನಾಡಿದರೆ ಅವರ ಹತ್ಯೆಯನ್ನು ಮಾಡಲಾಗುತ್ತದೆ ಅಥವಾ ಮನೆಯನ್ನು ಸುಟ್ಟು ಹಾಕಲಾಗುತ್ತದೆ. ಹಿಂದೂ ಧರ್ಮದ ಅವಮಾನ ಮಾಡುವುದಕ್ಕಾಗಿ ಬಾಲಿವುಡ್ಗೆ ದೊಡ್ಡ ಪ್ರಮಾಣದಲ್ಲಿ ಹಣದ ಪೂರೈಕೆಯಾಗುತ್ತದೆ ಹಾಗೂ ಈ ಚಲನಚಿತ್ರಗಳಿಂದ ಹಿಂದೂ ಹಾಗೂ ಹಿಂದೂ ಧರ್ಮ ಇವುಗಳ ಸುಳ್ಳು ಚಿತ್ರಣವನ್ನು ತೋರಿಸಲಾಗುತ್ತದೆ ಈ ಷಡ್ಯಂತ್ರದ ವಿರೋಧದಲ್ಲಿ ನಾವು ಜಾಗೃತರಾಗಿ ಅದಕ್ಕೆ ವಿರೋಧಿಸಬೇಕಿದೆ. ಹಿಂದೂಗಳು ಈಗ ಮುಂದೆ ಬಂದು ಇದರ ವಿರುದ್ಧ ದೂರನ್ನು ನೀಡಿ ನ್ಯಾಯಾಂಗ ಹೋರಾಟ ಮಾಡಬೇಕು.