ಗೋಮೂತ್ರ ಮಿಶ್ರಿತ ನೀರನ್ನು ಕುಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕ ಇವರ ಮೇಲೆ ಆಗಿರುವ ಸಕಾರಾತ್ಮಕ ಪರಿಣಾಮ

ಬಾಟಲಿಬಂದ್ ನೀರು ಮತ್ತು ಗೋಮೂತ್ರ ಮಿಶ್ರಿತ ನೀರು ಇವುಗಳ ಬಗ್ಗೆ ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್.(ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

‘ಆಯುರ್ವೇದದಲ್ಲಿ ಗೋಮೂತ್ರಕ್ಕೆ ಧನ್ವಂತರಿಯ ಉಪಮೆಯನ್ನು ನೀಡಲಾಗಿದೆ. ಆಧುನಿಕ ವಿಜ್ಞಾನಿಗಳಿಗನುಸಾರ ಶರೀರದಲ್ಲಿ ಸೋಡಿಯಮ್, ಪೊಟ್ಯಾಶಿಯಮ್, ಲೋಹ, ತಾಮ್ರ ಇತ್ಯಾದಿ ಒಟ್ಟು ೨೪ ತತ್ತ್ವಗಳಿರುತ್ತವೆ. ಈ ತತ್ತ್ವಗಳು ಹೆಚ್ಚು ಕಡಿಮೆಯಾದರೆ (ಅಸಮತೋಲನವಾದರೆ) ರೋಗಗಳು ಉತ್ಪನ್ನವಾಗುತ್ತವೆ. ಗೋಮೂತ್ರದಲ್ಲಿ ಈ ೨೪ ತತ್ತ್ವಗಳೊಂದಿಗೆ ಒಟ್ಟು ೩೨ ತತ್ತ್ವಗಳಿರುತ್ತವೆ. ಗೋಮೂತ್ರದ ನಿತ್ಯ ಸೇವನೆಯಿಂದ ಶರೀರದಲ್ಲಿ ಈ ತತ್ತ್ವಗಳ ಸಮತೋಲನ ಇರುವುದರಿಂದ ರೋಗಗಳು ಉತ್ಪನ್ನವಾಗುವುದಿಲ್ಲ, ಹಾಗೆಯೇ ಇರುವ ರೋಗಗಳೂ ಗುಣಮುಖವಾಗುತ್ತವೆ. (ಆಧಾರ : ಸನಾತನದ ಗ್ರಂಥ ‘ಗೋಸಂವರ್ಧನ’)

‘ಗೋಮೂತ್ರ ಕುಡಿಯುವ ವ್ಯಕ್ತಿಯ ಮೇಲೆ ಆಧ್ಯಾತ್ಮಿಕದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ ?’, ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೨೦೧೮ ರಲ್ಲಿ ಗೋವಾದ ರಾಮನಾಥಿಯ, ಸನಾತನ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದಿಂದ ಒಂದು ಪರೀಕ್ಷಣೆ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್)’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪರೀಕ್ಷಣೆಯ ನಿರೀಕ್ಷಣೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ. ಹಾಗೆಯೇ ಗೋಮಾತೆಯ ಆಧ್ಯಾತ್ಮಿಕ ಮಹತ್ವವನ್ನೂ ನೀಡಲಾಗಿದೆ.

೧. ಪರೀಕ್ಷಣೆಯಲ್ಲಿನ ನಿರೀಕ್ಷಣೆ

ಶ್ರೀ. ಅರುಣ ಡೊಂಗರೆ

ಈ ಪರೀಕ್ಷಣೆಯಲ್ಲಿ ಮುಂದಿನಂತೆ ೨ ಪ್ರಯೋಗಗಳನ್ನು ಮಾಡಲಾಯಿತು. ಎರಡೂ ಪ್ರಯೋಗಗಳಿಗಾಗಿ ಬಾಟಲಿಬಂದ್ ನೀರನ್ನು (Mineral Water) ಉಪಯೋಗಿಸಲಾಯಿತು. ಮೊದಲನೇ ಪ್ರಯೋಗದಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕ ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದಿರುವ ಸಾಧಕರಿಗೆ ಬಾಟಲಿಬಂದ್ ನೀರನ್ನು ಕುಡಿಯಲು ಹೇಳಿದೆವು. ಅವರು ಬಾಟಲಿಬಂದ್ ನೀರನ್ನು ಕುಡಿಯುವ ಮೊದಲು ಮತ್ತು ಕುಡಿದ ನಂತರ ‘ಯು.ಎ.ಎಸ್.’ ಉಪಕರಣದ ಮೂಲಕ ಅವರ ಪರೀಕ್ಷಣೆಯನ್ನು ಮಾಡಲಾಯಿತು.

ಇನ್ನೊಂದು ಪ್ರಯೋಗದಲ್ಲಿ ಬಾಟಲಿಬಂದ್ ನೀರಿನಲ್ಲಿ ಗೋಮೂತ್ರದ (ಸನಾತನ-ನಿರ್ಮಿತ ಗೋಅರ್ಕದ) ೩ ಹನಿಗಳನ್ನು ಸೇರಿಸಿ ಆ ನೀರನ್ನು ಕುಡಿಯುವ ಮೊದಲು ಮತ್ತು ಕುಡಿದ ನಂತರ ಪುನಃ ಆ ಇಬ್ಬರು ಸಾಧಕರ ಪರೀಕ್ಷಣೆಯನ್ನು ಮಾಡಲಾಯಿತು.

೧ ಅ. ಬಾಟಲಿಬಂದ್ ನೀರನ್ನು ಕುಡಿನದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಮತ್ತು ಅವನು ಗೋಮೂತ್ರ ಮಿಶ್ರಿತ ನೀರನ್ನು ಕುಡಿದ ನಂತರ ಅವನಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಯಿತು :

ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿ ಸಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಈ ಸಾಧಕನಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆಗಳಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ಇತ್ತು. ಅವನು ಬಾಟಲಿಬಂದ್ ನೀರನ್ನು ಕುಡಿದ ನಂತರ ಅವನಲ್ಲಿನ ‘ಇನ್ಪ್ರಾರೆಡ್’ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು; ಆದರೆ ಅವನು ಗೋಮೂತ್ರ ಸೇರಿಸಿದ ನೀರನ್ನು ಕುಡಿದ ನಂತರ ಅವನಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಯಿತು. ಇದು ಮುಂದೆ ನೀಡಿದ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ.

೧ ಆ. ಬಾಟಲಿಬಂದ್ ನೀರನ್ನು ಕುಡಿದ ನಂತರ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆ ಆಗುವುದು ಮತ್ತು ಅವನು ಗೋಮೂತ್ರ ಮಿಶ್ರಿತ ನೀರನ್ನು ಕುಡಿದ ನಂತರ ಅವನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು

ಭಾರತೀಯರೇ, ಗೋಮಾತೆಯ ಆಧ್ಯಾತ್ಮಿಕ ಮಹತ್ವವನ್ನು ತಿಳಿದುಕೊಳ್ಳಿರಿ !

ಸೌ. ಮಧುರಾ ಕರ್ವೆ

‘ಗೋಮಾತೆಯು ಸಾತ್ತ್ವಿಕವಾಗಿದ್ದಾಳೆ. ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಅವುಗಳ ಪೂಜೆಯನ್ನು ಮಾಡಲಾಗುತ್ತದೆ. ಗೋಮಾತೆಯಲ್ಲಿ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಕ್ಷಮತೆ ಇದೆ. ಆದುದರಿಂದ ಅದರ ಹಾಲು, ಗೋಮೂತ್ರ ಮತ್ತು ಗೋಮಯ (ಸೆಗಣಿ) ಇವುಗಳಲ್ಲಿ ಆ ಸಾತ್ತ್ವಿಕತೆ ಬರುತ್ತದೆ. ಗೋಮೂತ್ರದಿಂದ ವಾಸ್ತುಶುದ್ಧಿ ಮಾಡಿದರೆ, ವಾಸ್ತುವಿನಲ್ಲಿನ ನಕಾರಾತ್ಮಕ ಸ್ಪಂದನಗಳು ನಾಶವಾಗುತ್ತವೆ. ಆಕಳ ಸೆಗಣಿಯಿಂದ ನೆಲವನ್ನು ಸಾರಿಸಿದರೆ ಭೂಮಿಯಲ್ಲಿನ ನಕಾರಾತ್ಮಕ ಸ್ಪಂದನಗಳು ನಾಶವಾಗುತ್ತವೆ. ಗೋಮಾತೆಯ ಹಾಲೆಂದರೆ ಅಮೃತವೇ ಆಗಿದೆ !

ಗೋಮಾತೆಯ ಮಹತ್ವ ಗೊತ್ತಿರುವ ನಮ್ಮ ಪೂರ್ವಜರು ಆರೋಗ್ಯವಂತರಾಗಿ ಮತ್ತು ಆನಂದದಿಂದ ಬದುಕಿದರು. ಇದರ ವಿರುದ್ಧ ಗೋಮಾತೆ, ಗೋಮಾತೆಯ ಹಾಲು, ಗೋಮೂತ್ರ ಮತ್ತು ಸೆಗಣಿ ಇವುಗಳಿಂದ ದೂರ ಹೋಗಿದ್ದರಿಂದ ಇಂದಿನ ವಿಜ್ಞಾನಯುಗದಲ್ಲಿನ ಪೀಳಿಗೆಯು ನಿಜವಾದ ಆಧ್ಯಾತ್ಮಿಕ ಸಂಪತ್ತುಗಳಿಂದ ವಂಚಿತವಾಗಿದೆ, ಇದು ಭಾರತೀಯರ ದುರ್ದೈವವೇ ಆಗಿದೆ !

– ಸೌ. ಮಧುರಾ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಸಂಶೋಧನೆ.

೨. ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಬಾಟಲಿಬಂದ್ ನೀರನ್ನು ಕುಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು, ಹಾಗೆಯೇ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಗುವುದು, ಇವುಗಳ ಹಿಂದಿನ ಶಾಸ್ತ್ರ : ಸದ್ಯದ ಕಲಿಯುಗದಲ್ಲಿನ ವಾತಾವರಣದಲ್ಲಿ ರಜ-ತಮವು ಹೆಚ್ಚು ಪ್ರಮಾಣದಲ್ಲಿದೆ. ಆದುದರಿಂದ ಸಾಮಾನ್ಯ ವ್ಯಕ್ತಿ, ವಾಸ್ತು ಮತ್ತು ವಸ್ತು ಇವುಗಳ ಮೇಲೆ ನಕಾರಾತ್ಮಕ ಸ್ಪಂದನಗಳ ಪರಿಣಾಮವಾಗುವುದು ಸಹಜವೇ ಆಗಿದೆ. ಪರೀಕ್ಷಣೆಯಲ್ಲಿನ ಬಾಟಲಿಬಂದ್ ನೀರನ್ನು ಭೌತಿಕದೃಷ್ಟಿಯಿಂದ ಶುದ್ಧವೆಂದು ನಂಬಲಾದರೂ, ಅದು ರಜ-ತಮಪ್ರಧಾನ ವಾತಾವರಣದ ಸಂಪರ್ಕದಲ್ಲಿರುವುದರಿಂದ ಆ ನೀರಿನಲ್ಲಿ ನಕಾರಾತ್ಮಕ ಸ್ಪಂದನಗಳಿರುತ್ತವೆ. ಬಾಟಲಿಬಂದ್ ನೀರನ್ನು ಕುಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕನಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು, ಹಾಗೆಯೇ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆ ಕಡಿಮೆಯಾಗುವುದು, ಇದು ಆ ನೀರು ನಕಾರಾತ್ಮಕ ಸ್ಪಂದನಗಳಿಂದ ತುಂಬಿರುವುದನ್ನು ತೋರಿಸುತ್ತದೆ.

೨ ಆ. ಗೋಮೂತ್ರ ಮಿಶ್ರಿತ ನೀರನ್ನು ಕುಡಿದ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಗುವುದು, ಹಾಗೆಯೇ ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಉರ್ಜೆಯಲ್ಲಿ ಹೆಚ್ಚಳವಾಗುವುದು, ಇವುಗಳ ಹಿಂದಿನ ಶಾಸ್ತ್ರ : ಪರೀಕ್ಷಣೆಯಲ್ಲಿನ ಇಬ್ಬರೂ ಸಾಧಕರಿಗೆ ಬಾಟಲಿಬಂದ್ ನೀರಿನಲ್ಲಿ ೩ ಹನಿ ಗೋಮೂತ್ರವನ್ನು ಸೇರಿಸಿ ಆ ನೀರನ್ನು ಕುಡಿಯಲು ಕೊಟ್ಟೆವು. ಆಗ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆ ಆಯಿತು ಮತ್ತು ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು. ಇದು ವೈಶಿಷ್ಟ್ಯಪೂರ್ಣವಾಗಿದೆ. ಇದರ ಕಾರಣವೆಂದರೆ ಗೋಮೂತ್ರದಲ್ಲಿನ ಸಾತ್ತ್ವಿಕತೆಯಿಂದ ಬಾಟಲಿಬಂದ್ ನೀರಿನಲ್ಲಿನ ನಕಾರಾತ್ಮಕ ಉರ್ಜೆ ಕಡಿಮೆಯಾಗಿ ಆ ನೀರು ನಿಜವಾಗಿ ಶುದ್ಧ ಮತ್ತು ಸಾತ್ತ್ವಿಕವಾಯಿತು. ಗೋಮೂತ್ರದಲ್ಲಿನ ಸಾತ್ತ್ವಿಕತೆಯಿಂದಾಗಿ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕನ ದೇಹದ ಸುತ್ತಲಿನ ನಕಾರಾತ್ಮಕ ಸ್ಪಂದನಗಳ ಪ್ರಮಾಣ ಕಡಿಮೆ ಆಯಿತು, ಆಧ್ಯಾತ್ಮಿಕ ತೊಂದರೆ ಇಲ್ಲದ ಸಾಧಕನಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.

೩. ನಿಷ್ಕರ್ಷ

‘ನೀರಿನ ಮೇಲೆ ಪ್ರಕ್ರಿಯೆಯನ್ನು ಮಾಡಿ ಅದರಲ್ಲಿನ ಅಣುಜೀವಿಗಳನ್ನು (ಬ್ಯಾಕ್ಟೇರಿಯಾ) ಮತ್ತು ಆರೋಗ್ಯಕ್ಕೆ ಹಾನಿಕರವಾಗಿರುವ ಘಟಕಗಳನ್ನು ತೆಗೆದರೂ, ಆ ನೀರಿನಲ್ಲಿ ಚೈತನ್ಯ ನಿರ್ಮಾಣ ಮಾಡಲು ವಿಜ್ಞಾನಕ್ಕೆ ಸಾಧ್ಯವಾಗುವುದಿಲ್ಲ; ಆದರೆ ಆ ನೀರಿನಲ್ಲಿ ಗೋಮೂತ್ರದ ಕೆಲವು ಹನಿಗಳನ್ನು ಬೆರೆಸಿದರೆ, ಆ ನೀರು ನಿಜವಾಗಿಯೂ ಶುದ್ಧ ಮತ್ತು ಪವಿತ್ರವಾಗಿ ಆ ನೀರಿನಿಂದ ಆಧ್ಯಾತ್ಮಿಕ ಲಾಭವಾಗುತ್ತವೆ, ಎಂಬುದು ಈ ವೈಜ್ಞಾನಿಕ ಪರೀಕ್ಷಣೆಯಿಂದ ಸ್ಪಷ್ಟವಾಯಿತು.’

– ಶ್ರೀ. ಅರುಣ ಡೊಂಗರೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೮.೧೨.೨೦೧೮)

ಈ- ಮೇಲ್ : [email protected]

ಆಧುನಿಕ ವೈದ್ಯಕೀಯಶಾಸ್ತ್ರವು (ಅಲೋಪಥಿ) ಗುಣಪಡಿಸಲು ಅಸಾಧ್ಯವೆಂದು ನಂಬಿದ ರೋಗಗಳೂ ಗೋಮೂತ್ರದಿಂದ ಗುಣವಾಗಬಹುದು

‘ಎಲ್ಲ ಪ್ರಕಾರದ ಮೂತ್ರಗಳಲ್ಲಿ ಗೋಮೂತ್ರವು ಹೆಚ್ಚು ಗುಣಯುಕ್ತವಾಗಿದೆ ಎಂದು ನಂಬಲಾಗಿದೆ. ಗೋಮೂತ್ರದಿಂದ ಶರೀರದ ಬಾವು (ಯಿಡಿಮಾ) ಇಳಿಯುತ್ತದೆ. ತ್ವಚೆರೋಗಗಳಿಗಾಗಿ ಗೋಮೂತ್ರವು ತುಂಬಾ ಉತ್ತಮ ಔಷಧಿಯಾಗಿದೆ. ಯಕೃತ್ (ಲಿವರ್) ಮತ್ತು ಪ್ಲಿಹಾ (ಸ್ಪ್ಲೀನ್) ದೊಡ್ಡದಾದರೆ (ಎನಲಾರ್ಜ ಆದರೆ) ಗೋಮೂತ್ರವನ್ನು ಕುಡಿಯುವುದರಿಂದ ಮತ್ತು ಹೊಟ್ಟೆಯ ಮೇಲೆ ಅದರ ಕಾವನ್ನು ಕೊಡುವುದರಿಂದ ತುಂಬಾ ಲಾಭವಾಗುತ್ತದೆ. ಆಲೋಪಥಿಯು ಅಸಾಧ್ಯವೆಂದು ನಂಬಿದ ಅರ್ಬುದರೋಗ (ಕ್ಯಾನ್ಸರ್), ಮಧುಮೇಹ, ರಕ್ತದೊತ್ತಡ (ಬಿ.ಪಿ), ‘ಥೈರಾಯ್ಡ್’ ಗ್ರಂಥಿಯ ರೋಗ, ಅಸ್ತಮಾದಂತಹ ರೋಗಗಳನ್ನು ಗೋಮೂತ್ರದಿಂದ ಗುಣಪಡಿಸಬಹುದು. ಗೋಮೂತ್ರದಿಂದ ರಕ್ತದಲ್ಲಿನ ಬಿಳಿ ರಕ್ತಕಣಗಳ ಸಮತೋಲನವಾಗಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಗೋಮೂತ್ರದಲ್ಲಿನ ‘ಯುರಿಯಾ’ ಇದು ಕ್ರಿಮಿನಾಶಕವಾಗಿರುತ್ತದೆ, ಅದು ಹೊಟ್ಟೆಯಲ್ಲಿನ ಜಂತುಗಳನ್ನು ನಾಶ ಮಾಡುತ್ತದೆ’.

(ಆಧಾರ : ಸನಾತನದ ಗ್ರಂಥ ‘ಗೋಸಂವರ್ಧನ’)

* ಆಧ್ಯಾತ್ಮಿಕ ತೊಂದರೆ : ಇದರರ್ಥ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ರಷ್ಟು ಅಥವಾ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿರುವುದು ಎಂದರೆ ತೀವ್ರ ತೊಂದರೆ, ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ಶೇ ೪೯ ರಷ್ಟು ಇರುವುದು ಎಂದರೆ ಮಧ್ಯಮ ತೊಂದರೆ, ಶೇ. ೩೦ ಕ್ಕಿಂತ ಕಡಿಮೆಯಿರುವುದು ಅಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದಾಗಿದೆ. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಇತ್ಯಾದಿ ಆಧ್ಯಾತ್ಮಿಕ ಸ್ತರದ ಕಾರಣಗಳಿಂದ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗಳನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ಅರಿಯುವ ಸಾಧಕರು ಕಂಡು ಹಿಡಿಯಬಲ್ಲರು.