ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಪಾಲ್ಗೊಂಡು ಮಂಡಿಸಿದ ಸಂಶೋಧನಾ ಪ್ರಬಂಧಗಳು

ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ಸೆಪ್ಟೆಂಬರ್ ೨೦೨೩ ರಲ್ಲಿ ನಡೆದ ೧೦ ನೇ ಅಂತಾರಾಷ್ಟ್ರೀಯ ಪರಿಷತ್ತಿನಲ್ಲಿ ಮಾತನಾಡುತ್ತಿರುವ ಸೌ. ಶ್ವೇತಾ

‘ಭಾರತದಲ್ಲಿ ದೆಹಲಿ, ಮುಂಬೈ, ಪುಣೆ ಇತ್ಯಾದಿ ಸ್ಥಳಗಳಲ್ಲಿ ನಡೆದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಮತ್ತು ವಿದೇಶಗಳಲ್ಲಿಯೂ ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಪಾಲ್ಗೊಂಡು ಪರಾತ್ಪರ ಗುರು ಡಾ. ಆಠವಲೆ ಅವರ ಅಧ್ಯಾತ್ಮದ ಸಂಶೋಧನೆಯ ಆಧಾರದಲ್ಲಿ ಅವರು ಬರೆದ ಸಂಶೋಧನಾಪ್ರಬಂಧಗಳನ್ನು ಮಂಡಿಸಿದರು. ಅಧ್ಯಾತ್ಮ, ಸಾತ್ತ್ವಿಕ ಸಂಸ್ಕೃತ ಭಾಷೆ, ಜಪ, ಮಂತ್ರಜಪ, ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ, ಮೂರ್ತಿಕಲೆ ಇತ್ಯಾದಿಗಳ ಬಗ್ಗೆ ಈ ಸಂಶೋಧನಾ ಪ್ರಬಂಧಗಳ ವಿಷಯಗಳಿವೆ. ಈ ಸಂಶೋಧನಾ ಪ್ರಬಂಧಗಳ ಮಾಧ್ಯಮದಿಂದ ವಿವಿಧ ವೈಜ್ಞಾನಿಕ ಉಪಕರಣಗಳಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ಸಂಶೋಧನೆ ಮಾಡಿ ಸತ್ಯತೆ ಪರಿಶೀಲಿಸಲಾಗಿದೆ.

ಈ ವಿಷಯದಿಂದ ವಿಜ್ಞಾನ ಮತ್ತು ಅಧ್ಯಾತ್ಮ ಇವು ಗಳನ್ನು ಸಂಯೋಜಿಸುವ ಮೂಲಕ ಜಗತ್ತಿಗೆ ವೈಜ್ಞಾನಿಕ  ಪರಿಭಾಷೆಯಲ್ಲಿ ಅಧ್ಯಾತ್ಮವನ್ನು ನೀಡುವ ಅಮೂಲ್ಯವಾದ ಕಾರ್ಯವನ್ನು ಪರಾತ್ಪರ ಗುರು ಡಾ. ಆಠವಲೆ ಅವರು ಮಾಡಿದರು. ಮುಂದೆಯೂ ಅವರ ಈ ಕಾರ್ಯ ನಿರಂತರವಾಗಿ ಮುಂದುವರಿಯುತ್ತಿದೆ. ‘ಅಧ್ಯಾತ್ಮಶಾಸ್ತ್ರವನ್ನು ಅರ್ಥ ಮಾಡಿಕೊಳ್ಳುವುದು, ಎಂದರೆ ಜೀವನದಲ್ಲಿ ಸಾಧನೆಗಳ ಮಹತ್ವ, ಸಾತ್ತ್ವಿಕ ಮತ್ತು ಅಸಾತ್ತ್ವಿಕ ನಡುವಿನ ವ್ಯತ್ಯಾಸ ಇತ್ಯಾದಿ. ತಿಳಿದುಕೊಂಡು ಜಗತ್ತಿನ ಜನರು ಸಾತ್ತ್ವಿಕರಾಗಬೇಕು,’ ಎಂಬುದು ಅವರ ಉದ್ದೇಶವಾಗಿದೆ. ಅಕ್ಟೋಬರ್ ೨೦೧೬ ರಿಂದ ಸಪ್ಟೆಂಬರ್ ೨೦೧೭ ರ ವರೆಗಿನ ೮ ರಾಷ್ಟ್ರೀಯ  ಪರಿಷತ್ತುಗಳಲ್ಲಿ ಮತ್ತು ೧೪ ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದೆ.