ಭಗವಂತನ ಪ್ರಾಪ್ತಿಯೇ ಮನುಷ್ಯ ಜನ್ಮದ ಏಕೈಕ ಧ್ಯೇಯವಾಗಿದ್ದು, ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ ! – ಶ್ರೀ. ಕಾಶಿನಾಥ ಪ್ರಭು, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಬಾಗಲಕೋಟ ಜಿಲ್ಲೆಯ ಹಿಂದೂ ಸಂಘಟಕ ಕಾರ್ಯಶಾಲೆ

ಶ್ರೀ. ಕಾಶಿನಾಥ ಪ್ರಭು

ವಿಜಯಪುರ : ಭಗವಂತನ ಪ್ರಾಪ್ತಿಯೇ ಮನುಷ್ಯ ಜನ್ಮದ ಏಕೈಕ ಧ್ಯೇಯವಾಗಿದ್ದು, ಮೋಕ್ಷಪ್ರಾಪ್ತಿಯು ಅಂತಿಮ ಧ್ಯೇಯವಾಗಿದೆ. ೮೪ ಲಕ್ಷ ಜೀವಿಗಳಲ್ಲಿ ಮನುಷ್ಯ ಜನ್ಮ ಬಿಟ್ಟರೆ ಬೇರೆ ಪ್ರಾಣಿಗಳಿಗೆ ಮೋಕ್ಷ ಇಲ್ಲ. ಪ್ರಾಣಿಗಳಿಗೆ ಭೋಗಜೀವನ ಮಾತ್ರ ಇದೆ. ಆಮೆ ಅತ್ಯಂತ ಸಾತ್ತ್ವಿಕ ಪ್ರಾಣಿ ಆಗಿದ್ದರೂ ಅದಕ್ಕೆ ಮೋಕ್ಷ ಇಲ್ಲ, ಇತರ ಸಾತ್ತ್ವಿಕ ಪ್ರಾಣಿಗಳಾದ ಗಜ ಮತ್ತು ಗೋವುಗಳಿಗೂ ಮೋಕ್ಷ ಇಲ್ಲ. ಈ ಕಲಿಯುಗದಲ್ಲಿ ಸಮಾಜದ ಬಹುತೇಕ ಜನರಿಗೆ ಮೋಕ್ಷ ಪ್ರಾಪ್ತಿಗಾಗಿ ಸಾಧನೆ ಮಾಡಬೇಕೆಂದು ಗೊತ್ತಿಲ್ಲ. ಮನುಷ್ಯನು ಸಹ ಪ್ರಾಣಿಗಳಂತೆ ಊಟ, ನಿದ್ರೆಗಳಂತ ಇಚ್ಚೆಯನ್ನು ಭೋಗಿಸುವ ಜೀವನವನ್ನು ಮಾತ್ರ ಮಾಡುತ್ತಿದ್ದಾನೆ. ಭಗವಂತ ಮನುಷ್ಯನಿಗೆ ನಾಲ್ಕು ಪುರುಷಾರ್ಥಗಳನ್ನು ಕೊಟ್ಟಿದ್ದಾನೆ. ಧರ್ಮ, ಅರ್ಥ, ಕಾಮ, ಮೋಕ್ಷ ಅಂದರೆ ಧರ್ಮದಂತೆ ವ್ಯವಹಾರ ಮತ್ತು ಸಂಸಾರಿಕ ಜೀವನ ಮತ್ತು ಭಗವತ್ ಪ್ರಾಪ್ತಿಗಾಗಿ ಸಾಧನೆ ಮಾಡಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಶೇ. ೬೯ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭುರವರು ಹೇಳಿದರು. ಅವರು ವಿಜಯಪುರ ನಗರದ ಮಾಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಮಾರ್ಚ ೨೮ ಮತ್ತು ೨೯ ರಂದು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ೨ ದಿನದ ಹಿಂದೂ ರಾಷ್ಟ್ರ ಸಂಘಟಕ ಕಾರ್ಯಶಾಲೆಯಲ್ಲಿ ಉಪಸ್ಥಿತರಿದ್ದ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಕರ್ನಾಟಕದ ಸಮನ್ವಯಕರಾದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿಜಯ ರೇವಣಕರ ಇವರು ಮಾತನಾಡುತ್ತ್ತಾ, ಈ ಸದ್ಯ ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂ ಸಮಾಜ ಧರ್ಮಾಚರಣೆ ಬಿಟ್ಟಿದೆ. ಇದರಿಂದಾಗಿ ದೇಶದಲ್ಲಿ ಭಯೋತ್ಪಾದನೆ, ಮತಾಂತರ, ಭ್ರಷ್ಟಾಚಾರ, ಲವ್ ಜಿಹಾದ್, ಲ್ಯಾಂಡ್ ಜಿಹಾದ ಮುಂತಾದವುಗಳು ಹೆಚ್ಚಾಗಿವೆ. ಅದಕ್ಕಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು, ಹಿಂದೂಗಳನ್ನು ಸಂಘಟಿತರನ್ನಾಗಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಯಶಾಲೆಯಲ್ಲಿ ಸಹಭಾಗಿಯಾದ ಧರ್ಮಪ್ರೇಮಿಗಳ ಅಭಿಪ್ರಾಯ

೧. ಸೌ. ಜಯಶ್ರೀ ಶಾಂತಪ್ಪನವರ, ಬದಾಮಿ ಕೇಂದ್ರ – ಸನಾತನ ಆಶ್ರಮ ಮತ್ತು ಅಲ್ಲಿಯ ವ್ಯವಸ್ಥೆ ಕುರಿತು ಸಾಧಕರು ಹೇಳುತ್ತಿದ್ದರು. ಆದರೆ ಈ ಶಿಬಿರದಲ್ಲಿ ನನಗೆ ಆಶ್ರಮದಲ್ಲಿರುವಂತೆ ಅನಿಸಿತು.

೨. ಸೌ. ರುತುಜಾ ಗಾಯದನಕರ, ಕಲಬುರ್ಗಿ –  ಪ್ರಾಯೋಗಿಕವಾಗಿ ‘ಓಂ ನಮೋ ಭಗವತೇ ವಾಸುದೇವಾಯ’ ನಾಮಜಪ ಮಾಡುವಾಗ ಸಾಕ್ಷಾತ್ ಶ್ರೀಕೃಷ್ಣನ ದರ್ಶನವಾಯಿತು.

೩. ಶ್ರೀ. ಮಂಜುನಾಥ ಜುಮ್ಮಣ್ಣವರ, ಬದಾಮಿ – ಪೂರ್ವಜನ್ಮದ ಪುಣ್ಯ ಮತ್ತು ಗುರುಕೃಪೆಯಿಂದ ನನಗೆ ಇಲ್ಲಿನ ಜ್ಞಾನಾಮೃತ ಸಿಕ್ಕಿದ್ದು ನನ್ನ ಸೌಭಾಗ್ಯ. ಶ್ರೀ ಗುರುಗಳ ಹಿಂದೂ ರಾಷ್ಟ್ರದ ಮಹಾನ ಕಾರ್ಯದಲ್ಲಿ ಭಾಗವಹಿಸುತ್ತೇನೆ.