ಸನಾತನದ ೪೪ ನೇ ಸಂತರಾದ ಪೂ. (ಶ್ರೀಮತಿ) ರಾಧಾ ಪ್ರಭುಅಜ್ಜಿಯವರು ಶ್ರೀ ಗುರುಪರಂಪರೆಯಲ್ಲಿನ ಶ್ರೀ ಗುರುಗಳ ಚಿತ್ರಗಳನ್ನು ಬಿಡಿಸುವಾಗ ಅನುಭವಿಸಿದ ಶ್ರೀ ಗುರುಗಳ ಅಪಾರ ಪ್ರೀತಿ !

ಪೂ. ರಾಧಾ ಪ್ರಭು

ಚೈತ್ರ ಕೃಷ್ಣ ಚತುರ್ಥಿ (೨೦ ಏಪ್ರಿಲ್)ಯಂದು ಸನಾತನದ ೪೪ ನೇ ಸಂತರಾದ ಮಂಗಳೂರಿನ ಪೂ. (ಶ್ರೀಮತಿ) ರಾಧಾ ಪ್ರಭು ಇವರ ಹುಟ್ಟುಹಬ್ಬವಿದೆ. ಆ ನಿಮಿತ್ತ ಅವರು ಚಿತ್ರಗಳನ್ನು ಬಿಡಿಸುತ್ತಿರುವಾಗ ಅನುಭವಿಸಿದ ಶ್ರೀ ಗುರುಗಳ ಪ್ರೀತಿಯನ್ನು ಇಲ್ಲಿ ನೋಡೋಣ.

(ಶ್ರೀಮತಿ) ರಾಧಾ ಪ್ರಭು ಇವರಿಗೆ ಹುಟ್ಟುಹಬ್ಬದ ನಿಮಿತ್ತ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು !

‘ನಾನು ಇದುವರೆಗೆ ಮನುಷ್ಯನ ಚಿತ್ರವನ್ನು ಯಾವತ್ತೂ ಬಿಡಿಸಿರಲಿಲ್ಲ. ಪ್ರಾರ್ಥಮಿಕ ಶಾಲೆಯಲ್ಲಿನ ಶಿಕ್ಷಕರು ಆ ಸಮಯದಲ್ಲಿ ನಮಗೆ ಕಲಿಸಿದ ಮಾವಿನಹಣ್ಣು, ಗೋಡಂಬಿಹಣ್ಣು, ತೆಂಗಿನಮರ, ಎಲೆಗಳು, ಹಂಸಪಕ್ಷಿ, ನವಿಲು, ಗಿಳಿ ಇತ್ಯಾದಿ ಚಿತ್ರಗಳನ್ನು ನಾನು ಬಿಡಿಸುತ್ತಿದ್ದೆನು. ಚಿಕ್ಕ ಮಕ್ಕಳು ಅಳುತ್ತಿರುವಾಗ ಅವರನ್ನು ಸಮಾಧಾನಪಡಿಸಲು ನಾನು ಮೇಲೆ ಉಲ್ಲೇಖಿಸಿದಂತಹ ಚಿತ್ರಗಳನ್ನು ಬಿಡಿಸುತ್ತಿದ್ದೆನು. ಪೂ. ಭಾರ್ಗವರಾಮರು ಜನಿಸಿದ ನಂತರ ಅವರ ಆನಂದಕ್ಕಾಗಿ ನಾನು ಇದೇ ಚಿತ್ರಗಳನ್ನೇ ಬಿಡಿಸುತ್ತಿದ್ದೆನು’.

೧. ಮೊಮ್ಮಗನು (ಭರತನು) ಆ ಚಿತ್ರಗಳನ್ನು ನೋಡಿ ‘ಚಿತ್ರಗಳು ಒಳ್ಳೆಯದಾಗಿವೆ ಮತ್ತು ಅವುಗಳನ್ನು ನೋಡುವಾಗ ಭಾವಜಾಗೃತವಾಗುತ್ತದೆ’, ಎಂದು ಹೇಳುವುದು

ಒಮ್ಮೆ ನಾವೆಲ್ಲರೂ ರಾಮನಾಥಿ ಆಶ್ರಮಕ್ಕೆ ಹೋಗುವ ಆಯೋಜನೆಯನ್ನು ಮಾಡಿದೆವು. ನನ್ನ ಮೊಮ್ಮಗ ಭರತನು ನಾನು ಬಿಡಿಸಿದ ಈ ಚಿತ್ರಗಳನ್ನು ನೋಡಿದನು ಮತ್ತು ಅವನು ನನಗೆ, “ಈ ಚಿತ್ರಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ನೋಡುವಾಗಲೇ ಭಾವಜಾಗೃತವಾಗುತ್ತದೆ. ರಾಮನಾಥಿ ಆಶ್ರಮಕ್ಕೆ ಹೋಗುವಾಗಲೂ ಈ ಚಿತ್ರಗಳು ಜೊತೆಯಲ್ಲಿರಲಿ. ಪೂ. ಭಾರ್ಗವರಾಮ ಇವರಿಗೆ ಅಲ್ಲಿ ಆ ಚಿತ್ರಗಳನ್ನು ತೋರಿಸಬಹುದು ಮತ್ತು ಪ.ಪೂ. ಗುರುದೇವರಿಗೂ ತೋರಿಸಿ” ಎಂದು ಹೇಳಿದನು. ಆಗ ನಾನು ಅವನಿಗೆ, “ನಾನು ವೃದ್ಧಾಪ್ಯದಲ್ಲಿ ಬಿಡಿಸಿದ ಈ ಚಿತ್ರಗಳನ್ನು ನೋಡಿ ಪ.ಪೂ. ಗುರುದೇವರು ನಗುವರು. ನಾನು ಬಿಡಿಸಿದ ಚಿತ್ರಗಳನ್ನು ನೋಡಿ ಅವರಿಗೆ ಆನಂದವಾಗುವುದೇ” ಎಂದು ಕೇಳಿದೆನು.

‘ಪ.ಪೂ. ಗುರುದೇವರು ಆಂತರ್ಯದಲ್ಲಿದ್ದಾರೆ’, ಎಂದು ಅನುಭವಿಸುವ ಬಾಲಸಂತ ಪೂ. ಭಾರ್ಗವರಾಮ ಪ್ರಭು !

ಪೂ. ಭಾರ್ಗವರಾಮ ಪ್ರಭು

ಪೂ. ರಾಧಾ ಪ್ರಭು ಅಜ್ಜಿ ಇವರು ಬಿಡಿಸಿದ ಪರಾತ್ಪರ ಗುರು ಡಾ. ಆಠವಲೆ ಇವರ ಚಿತ್ರವನ್ನು ನೋಡಿ ತನ್ನ ಎದೆಯ ಮೇಲೆ ಕೈ ಇಟ್ಟು ‘ಪ.ಪೂ.ರು ಇಲ್ಲಿದ್ದಾರೆ’, ಎಂದು ಹೇಳುವ ಪೂ. ಭಾರ್ಗವರಾಮ ! : ‘ಪೂ. ರಾಧಾ ಪ್ರಭು ಅಜ್ಜಿ ಇವರು ಬಿಡಿಸಿದ ಪರಾತ್ಪರ ಗುರು ಡಾ. ಆಠವಲೆಯವರ ಚಿತ್ರವನ್ನು ಪೂ. ಭಾರ್ಗವರಾಮ ಇವರಿಗೆ ತೋರಿಸಿದರು. ಆಗ ಅವರು ಒಂದು ಕ್ಷಣ ಕಣ್ಣು ಮುಚ್ಚಿ ಏನನ್ನೊ ಅನುಭವಿಸಿದರು. ಆಗ ‘ನೀವು ಏನು ಮಾಡಿದ್ದೀರಿ ?’, ಎಂದು ನಾನು ವಿಚಾರಿಸಿದೆ. ಆಗ ಅವರು ತಮ್ಮ ಅನಾಹತ ಚಕ್ರದ ಮೇಲೆ ಕೈಯನ್ನು ಇಟ್ಟು ಪರಾತ್ಪರ ಗುರು ಡಾಕ್ಟರರ ಚಿತ್ರವನ್ನು ನೋಡಿ ‘ಪರಮ ಪೂಜ್ಯರು ಇಲ್ಲಿದ್ದಾರೆ’, ಎಂದು ನನಗೆ ಹೇಳಿದರು. ‘ಪೂ. ಭಾರ್ಗವರಾಮ ಇವರು ತಮ್ಮ ಆಂತರ್ಯದಲ್ಲಿ ಪ.ಪೂ.ಗುರುದೇವರನ್ನು ಅನುಭವಿಸುತ್ತಿದ್ದಾರೆ’, ಎಂಬುದನ್ನು ನೋಡಿ ನನಗೆ ತುಂಬಾ ಭಾವಜಾಗೃತಿ ಆಯಿತು. ಪ.ಪೂ. ಗುರುದೇವರು ಪೂ. ಭಾರ್ಗವರಾಮ ಇವರ ಮನಸ್ಸಿನಲ್ಲಿ ಈ ಸಂಸ್ಕಾರವನ್ನು ದೃಢವಾಗಿಸುತ್ತಿದ್ದಾರೆ. ಅದಕ್ಕಾಗಿ ನನಗೆ ಪ.ಪೂ. ಗುರುಗಳ ಬಗ್ಗೆ ಅಪಾರ ಕೃತಜ್ಞತೆ ವ್ಯಕ್ತವಾಯಿತು.’

– ಸೌ. ಭವಾನಿ ಪ್ರಭು, ಮಂಗಳೂರು (೩.೭.೨೦೨೦)

೨. ಸ್ವತಃ ಬಿಡಿಸಿದ ಚಿತ್ರಗಳನ್ನು ಸೂಕ್ಷ್ಮದ ಅರಿವಾಗುವ ಸಾಧಕಿಗೆ ತೋರಿಸುವುದು, ಅವಳು ‘ಆ ಚಿತ್ರದಲ್ಲಿ ತುಂಬಾ ಭಾವವು ಅರಿವಾಗುತ್ತದೆ’, ಎಂದು ಹೇಳುವುದು

ನಾನು ಪ.ಪೂ. ಗುರುದೇವರಿಗೆ ಚಿತ್ರಗಳ ವಹಿಯನ್ನು ತೋರಿಸುವ ಮೊದಲು ಸೂಕ್ಷ್ಮ-ಪರೀಕ್ಷಣೆ ಮಾಡುವ ಸಾಧಕಿಗೆ ತೋರಿಸಿದೆನು. ಅವರು ಪ್ರತಿಯೊಂದು ಚಿತ್ರಕ್ಕೆ ಆಧ್ಯಾತ್ಮಿಕ ಅಂಶ ಮತ್ತು ಸಿದ್ಧಾಂತವನ್ನು ಹೇಳಿ ಪ.ಪೂ. ಗುರುದೇವರು ಅಧ್ಯಾತ್ಮದ ಬಗ್ಗೆ ಗ್ರಂಥದಲ್ಲಿ ವಿವೇಚನೆ ಮಾಡಿರುವಂತೆ ದೊಡ್ಡ ವ್ಯತ್ಯಾಸವನ್ನು ತೋರಿಸಿದರು. ಅವರು ನನಗೆ, “ಈ ಚಿತ್ರಗಳು ಚಿಕ್ಕ ಬಾಲಕನಿಗಾಗಿ ಬಿಡಿಸಿದ್ದರೂ, ಅದರಲ್ಲಿ ಒಳ್ಳೆಯ ಭಾವವಿದೆ. ನಾನು ಪ.ಪೂ. ಗುರುದೇವರಿಗೆ ತೋರಿಸಲು ಹೇಳುತ್ತೇನೆ” ಎಂದು ಹೇಳಿದರು. ಅವರು ಆ ವಹಿಯನ್ನು ತೆಗೆದುಕೊಂಡು ಹೋದರು.

೩. ಪ.ಪೂ. ಗುರುದೇವರು ಆ ಚಿತ್ರಗಳನ್ನು ನೋಡಿ ‘ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ನನ್ನನ್ನು ಪ್ರಶಂಸಿಸಿ ಚಿತ್ರಗಳನ್ನು ಬಿಡಿಸಲು ವಹಿಗಳು ಮತ್ತು ಪೆನ್ಸಿಲ್‌ಗಳನ್ನು ಕೊಡುವುದು’, ಅವರ ಪ್ರೀತಿ ಮತ್ತು ಪ್ರೋತ್ಸಾಹ ನೋಡಿ ತುಂಬಾ ಕೃತಜ್ಞತೆ ಎನಿಸುವುದು

ನನ್ನ ಚಿತ್ರಗಳನ್ನು ನೋಡಿ ಗುರುದೇವರು ನಗಬಹುದೇನೋ ಎಂದು ಅನಿಸಿತು; ಆದರೆ ಹಾಗೇನು ಆಗಲಿಲ್ಲ. ಯಾರಾದರೊಬ್ಬ ಉಚ್ಚ ಮಟ್ಟದ ಕಲಾಕಾರನನ್ನು ಪ್ರಶಂಸಿಸುವಂತೆ ಪ.ಪೂ. ಗುರುದೇವರು ನನ್ನ ಪ್ರಶಂಸೆಯನ್ನು ಮಾಡಿದರು. ‘ಈ ಮುಂದೆಯೂ ಪೂ. ಭಾರ್ಗವರಾಮ ಇವರಿಗಾಗಿ ಚಿತ್ರಗಳನ್ನು ಬಿಡಿಸುತ್ತಿರಿ. ಆ ಚಿತ್ರಗಳನ್ನು ನೋಡಿ ಅವರು ಏನು ಹೇಳುತ್ತಾರೆ ? ಅವರ ಪ್ರತಿಕ್ರಿಯೆ ಏನಿದೆ ? ಎಂಬುದನ್ನು ಪ್ರತಿಯೊಂದು ಚಿತ್ರದ ಕೆಳಗೆ ಬರೆಯಬೇಕು ಮತ್ತು ತಾರೀಕು ಹಾಕಬೇಕು’, ಎಂದು ಹೇಳಿ ಅವರು ನನಗೆ ಕೆಲವು ವಹಿಗಳು ಮತ್ತು ಪೆನ್ಸಿಲ್‌ಗಳನ್ನು ಕಳುಹಿಸಿದರು. ಅವರು ನನಗೆ ಚಿತ್ರ ಬಿಡಿಸಿದ ಪುಸ್ತಕಗಳನ್ನು ತೋರಿಸಿ ‘ನಾನು ಈ ವಹಿಗಳನ್ನು ಇಟ್ಟುಕೊಳ್ಳಲೇ ?’, ಎಂದು ಕೇಳಿದರು. ನಾನು ತಕ್ಷಣ ಆಗಲಿ ಎಂದು ಹೇಳಿದೆನು; ಆದರೆ ನನಗೆ ನಾಚಿಕೆ ಎನಿಸಿತು, ಹಾಗೆಯೇ ಆನಂದವೂ ಆಯಿತು. ‘ಪರಮ ಪೂಜ್ಯರ ದೊಡ್ಡತನ, ಸಾಧಕರಿಗೆ ಪ್ರೋತ್ಸಾಹ ನೀಡಿ ಸಾಧನೆಯಲ್ಲಿ ಮುಂದೆ ಕರೆದುಕೊಂಡು ಹೋಗುವ ರೀತಿ, ಅವರ ಪ್ರೇಮಭಾವ’, ಇದೆಲ್ಲವನ್ನು ನೋಡಿ ನನ್ನ ಭಾವಜಾಗೃತವಾಯಿತು. ನನಗೆ ಅವರ ಬಗ್ಗೆ ತುಂಬಾ ಕೃತಜ್ಞತೆ ಎನಿಸಿತು.

೪. ಚಿತ್ರಗಳನ್ನು ಬಿಡಿಸುವಾಗ ಅರಿವಾದ ಅಂಶಗಳು

೪ ಅ. ಈ ಪ್ರಸಂಗಗಳ ನಂತರ ಚಿತ್ರಗಳನ್ನು ಬಿಡಿಸಲು ಪ್ರಾರಂಭಿಸುವುದು, ‘ಆ ಚಿತ್ರಗಳು ಸರಿಯಾಗಿ ಬರಲಿಲ್ಲ’ ಎಂದು ಅನಿಸುವುದು, ಮನೆಯಲ್ಲಿನ ಸದಸ್ಯರಿಗೆ ಕೇಳಿದ ನಂತರ ಅವರೆಲ್ಲರೂ ಚಿತ್ರಗಳು ಒಳ್ಳೆಯದಾಗಿರುವುದೆಂದು ಹೇಳುವುದು : ಆ ದಿನದಿಂದ ಸನಾತನ ನಿಯತಕಾಲಿಕೆ ಮತ್ತು ಇತರ ಅನೇಕ ಗ್ರಂಥಗಳಲ್ಲಿನ ಸಂತರ ಚರಿತ್ರೆಗಳನ್ನು ಹುಡುಕಿ ನಾನು ಚಿತ್ರಗಳನ್ನು ಬಿಡಿಸತೊಡಗಿದೆನು. ಮನೆಯ ಸದಸ್ಯರಿಗೆ ನಾನು ಬಿಡಿಸಿರುವ ಚಿತ್ರದಲ್ಲಿ ‘ಏನು ತಪ್ಪಾಗಿದೆ ?’, ಎಂದು ಮನಃಪೂರ್ವಕವಾಗಿ ಹೇಳಲು ನಾನು ವಿನಂತಿಸಿದೆನು. ನಾನು ದೇವರ ಮತ್ತು ಸಂತರ ಭಾವಪೂರ್ಣ ಚಿತ್ರಗಳನ್ನು ಬಿಡಿಸಿದೆನು; ಆದರೆ ಅವು ಇದ್ದ ಹಾಗೆ ಬಿಡಿಸಲು ನನಗೆ ಬರುತ್ತಿರಲಿಲ್ಲ. ‘ಬೇರೆಯವರ ಚಿತ್ರವಾಗಿದೆ’, ಎಂದು ನನಗೆ ಅನಿಸುತ್ತಿತ್ತು. ನಗುಮುಖ ಇರುವ ಚಿತ್ರವು ಸಿಟ್ಟಿನಲ್ಲಿದ್ದಂತೆ, ಸಂತೋಷವಾಗಿರುವ ಮುಖವು ಬೇಸರ ಬಂದಂತೆ, ಸಾಹಸಚಿತ್ರಗಳು ನಿರುತ್ಸಾಹದಂತೆ ಕಾಣಿಸುತ್ತಿದ್ದವು.

೪ ಆ. ಪೂ. ಭಾರ್ಗವರಾಮ ಇವರಿಗೆ ಚಿತ್ರವನ್ನು ತೋರಿಸಿದ ನಂತರ ಅವರು ‘ಚಿತ್ರವು ಚೆನ್ನಾಗಿ ಆಗಿದೆ’, ಎಂದು ಹೇಳುವುದು ಮತ್ತು ಮನೆಯಲ್ಲಿನ ಇತರ ಸದಸ್ಯರೂ ಹಾಗೆಯೇ ಹೇಳುವುದು : ನಾನು ಪ್ರತಿಯೊಂದು ಚಿತ್ರವನ್ನು ಬಿಡಿಸಿದ ನಂತರ ಮೊದಲು ಪೂ. ಭಾರ್ಗವರಾಮ ಇವರಿಗೆ ತೋರಿಸುತ್ತಿದ್ದೆನು. ಮೂಲ ಚಿತ್ರ ಮತ್ತು ಬಿಡಿಸಿದ ಚಿತ್ರವನ್ನು ಒಟ್ಟಿಗೆ ಹಿಡಿದು ‘ಇದರಲ್ಲಿ ಯಾವ ಚಿತ್ರವು ಒಳ್ಳೆಯದಿದೆ ?’, ಎಂದು ಕೇಳಿದ ನಂತರ ಆ ಚಿಕ್ಕ ಮಗುವೂ ‘ಇದು (ನಾನು ಬಿಡಿಸಿದ) ಚಿತ್ರವು ಒಳ್ಳೆಯದಿದೆ’, ಎಂದು ನನಗೆ ಹೇಳುತ್ತಿದ್ದರು. ಆಗ ‘ಒಂದೂವರೆ ವರ್ಷದ ಮಗುವಿಗೆ ಏನು ತಿಳಿಯುತ್ತದೆ ?’, ಎಂದು ಅನಿಸಿ ನನಗೆ ಸಮಾಧಾನ ಅನಿಸುತ್ತಿರಲಿಲ್ಲ. ಅನಂತರ ನಾನು ಅಶ್ವಿನಿ (ಸೊಸೆ), ಭರತ (ಮೊಮ್ಮಗ), ಸೌ. ಭವಾನಿ (ಮೊಮ್ಮಗನ ಪತ್ನಿ) ಇವರಿಗೆ ಆ ಚಿತ್ರಗಳನ್ನು ತೋರಿಸಿದ ನಂತರ ಅವರೂ ಪೂ. ಭಾರ್ಗವರಾಮ ಹೇಳಿದಂತೆಯೇ ಹೇಳುತ್ತಿದ್ದರು.

೪ ಇ. ‘ಚಿತ್ರದಲ್ಲಿ ಬಂದಿರುವ ಚೈತನ್ಯದಿಂದ ಚಿತ್ರವು ಒಳ್ಳೆಯದು ಅನ್ನಿಸುತ್ತದೆ’, ಎಂದು ಎಲ್ಲರೂ ಹೇಳಿದ ನಂತರ ಪ.ಪೂ. ಗುರುದೇವರ ಬಗ್ಗೆ ತುಂಬಾ ಕೃತಜ್ಞತೆ ಎನಿಸುವುದು : ನಾನು ಮನೆಯಲ್ಲಿ ಎಲ್ಲರಿಗೂ, “ನೀವು ನನ್ನ ತಪ್ಪುಗಳನ್ನು ಹೇಳಿದರೆ, ನನಗೆ ಕೆಡುಕೆನಿಸುವುದಿಲ್ಲ” ಎಂದು ಹೇಳಿದೆನು. ಅನಂತರ ‘ನೀವು ಬಿಡಿಸಿದ ಚಿತ್ರಗಳಲ್ಲಿ ಚೈತನ್ಯವಿದೆ. ಆ ಮೂಲ ಚಿತ್ರದಲ್ಲಿ ಚೈತನ್ಯವೇ ಇಲ್ಲ’, ಎಂದು ಅವರು ನನಗೆ ಹೇಳುತ್ತಿದ್ದರು. ಆಗ ನಾನು ‘ಈ ಚಿತ್ರಗಳಿಗೆ ಪ.ಪೂ. ಗುರುದೇವರ ಆಶೀರ್ವಾದವಿದೆ’, ಎಂದು ಹೇಳಿದೆನು. ಆದುದರಿಂದ ನನಗೆ ಪ.ಪೂ. ಗುರುದೇವರ ಬಗ್ಗೆ ತುಂಬಾ ಕೃತಜ್ಞತೆ ಎನಿಸುತ್ತಿತ್ತು. ಅನಂತರ ನಾನು ಚಿತ್ರಗಳ ನಿರೀಕ್ಷಣೆಯನ್ನು ಮಾಡಲು ಪ್ರಾರಂಭಿಸಿದೆನು. ಸ್ವಲ್ಪ ಸುಧಾರಣೆ ಆಗುತ್ತಿತ್ತು. ‘ಇದೆಲ್ಲವು ಗುರುದೇವರ ಕೃಪೆಯೇ ಆಗಿದೆ’, ಎಂದು ನನಗೆ ಹೆಜ್ಜೆಹೆಜ್ಜೆಗೆ ಅರಿವಾಗುತ್ತಿತ್ತು.

೫. ಗುರುಪೂರ್ಣಿಮೆಯ ಸಮಯದಲ್ಲಿ ಸನಾತನದ ನಿಯತಕಾಲಿಕೆಯಲ್ಲಿ ಬಂದಿದ್ದ ‘ಸನಾತನದ ಗುರುಪರಂಪರೆ’ಯ ಛಾಯಾಚಿತ್ರಗಳನ್ನು ನೋಡಿ ಎಂಟು ಗುರುಗಳ ಚಿತ್ರ ಬಿಡಿಸಲು ನಿರ್ಧರಿಸುವುದು

೫ ಅ. ‘ಸನಾತನ ಪ್ರಭಾತ’ ನಿಯತಕಾಲಿಕೆಯ ಒಂದು ಬಣ್ಣದ ಸಂಚಿಕೆಯನ್ನು ತೆಗೆದುಕೊಂಡು ಚಿತ್ರ ಬಿಡಿಸಲು ಆರಂಭಿಸುವುದು : ಈ ವರ್ಷ ಗುರುಪೂರ್ಣಿಮೆ ನಿಮಿತ್ತ ನಾನು ‘ಗುರುಪರಂಪರೆಯ ಶ್ರೀ ಗುರುಗಳ ಚಿತ್ರ ಬಿಡಿಸಬೇಕು’, ಎಂದು ನಿರ್ಧರಿಸಿದೆ. ಗುರುಪೂರ್ಣಿಮೆಯ ಸಮಯದಲ್ಲಿ ‘ಸನಾತನ ಗುರುಪರಂಪರೆಯ ಚಿತ್ರ ‘ಸನಾತನ ಪ್ರಭಾತದಲ್ಲಿ ಬರುತ್ತಿತ್ತು; ಆದ ಕಾರಣ ನಾನು ‘ಸನಾತನ ಪ್ರಭಾತ ನಿಯಕಾಲಿಕೆಯ ಒಂದು ಬಣ್ಣದ ಸಂಚಿಕೆಯನ್ನು ತೆಗೆದುಕೊಂಡು ಚಿತ್ರವನ್ನು ಬಿಡಿಸಲು ಆರಂಭಿಸಿದೆ. ಎಂಟು ಗುರುಗಳ ಚಿತ್ರ ಎದುರಿನಲ್ಲಿಟ್ಟು ನಾನು ಶ್ರೀಕೃಷ್ಣ ಮತ್ತು ಗುರುಗಳಲ್ಲಿ ಪ್ರಾರ್ಥನೆ ಮಾಡಿದೆ, ‘ಹೇ ಶ್ರೀಕೃಷ್ಣ, ಹೇ ಗುರುದೇವಾ, ಪ್ರತಿಯೊಂದು ಗುರುಗಳ ಪ್ರತಿಯೊಂದು ಅಂಗ ಸುಂದರವಾಗಿ ಬಿಡಿಸಲು ಬರಲಿ, ಎಂದು ನನಗೆ ಆಶೀರ್ವಾದವನ್ನು ನೀಡಿರಿ. ನಂತರ ನಾನು ಒಂದೊಂದು ಚಿತ್ರ ಬಿಡಿಸಲು ಆರಂಭಿಸಿದೆ.

೫ ಆ. ‘ಗುರುಪರಂಪರೆಯಲ್ಲಿ ತಾನೂ ಇರಬೇಕು’, ಎಂದೆನಿಸಿ ಪರಾತ್ಪರಗುರು ಡಾ. ಆಠವಲೆ ಇವರಲ್ಲಿ ಪ್ರಾರ್ಥನೆ ಮಾಡುವುದು : ಆ ಸಮಯದಲ್ಲಿ ಶರಣಾಗತಭಾವದಿಂದ ನಾನು ನನ್ನ ಒಂದು ಆಸೆಯನ್ನು ದೇವರ ಮುಂದಿಟ್ಟೆನು. ‘ಹೇ ಶ್ರೀಕೃಷ್ಣ, ಹೇ ಗುರುದೇವಾ, ‘ಮುಂದಿನ ಈ ೮ ಗುರುಗಳ ಸಾಲಿನಲ್ಲಿ ನನ್ನನ್ನು ಸೇರಿಸಿಕೊಳ್ಳಿರಿ. ಆಗ ‘ಈ ೮ ಗುರುಗಳು ಅಪಾರ ಕಷ್ಟಪಟ್ಟು ಸಾಧನೆಯನ್ನು ಮಾಡಿದ್ದಾರೆ. ನೀನು ಸಂಪೂರ್ಣ ಸಮರ್ಪಣಾಭಾವದಿಂದ ಹಾಗೂ ಅಷ್ಟೇ ಭಕ್ತಿಯಿಂದ ಶರಣಾಗಿ ಪ್ರಯತ್ನಿಸಿದರೆ ನೀನೂ ಕೂಡ ಆ ಸಾಲಿನಲ್ಲಿ ಬರಬಹುದು’, ಎಂದು ನನಗೆ ಉತ್ತರ ಸಿಕ್ಕಿತು.

೫ ಇ. ಸನಾತನದ ಗುರು ಪರಂಪರೆಯ ಪ್ರತಿಯೊಂದು ಗುರುಗಳ ಚಿತ್ರವನ್ನು ಬಿಡಿಸುವಾಗ ಇಟ್ಟಿದ್ದ ಭಾವ ಮತ್ತು ಮಾಡಿದ ಪ್ರಾರ್ಥನೆ !

೫ ಇ ೧. ಶಂಕರಾಚಾರ್ಯ : ನಾನು ಅವರ ಜೀವನ ಚರಿತ್ರೆಯನ್ನು ೨-೩ ಸಲ ಓದಿದ್ದೇನೆ ಮತ್ತು ಚಲನಚಿತ್ರವನ್ನೂ ನೋಡಿದ್ದೇನೆ. ಅದನ್ನೇ ಕಣ್ಮುಂದೆ ತಂದು ನಾನು ಭಾವಪೂರ್ಣವಾಗಿ ಅವರ ಚಿತ್ರ ಬಿಡಿಸಿದೆ.

೫ ಇ ೨. ಶ್ರೀಮತ್ಪರಮಹಂಸ ಚಂದ್ರಶೇಖರಾನಂದ : ನಾವೆಲ್ಲರೂ ಅವರ ಚರಿತ್ರೆಯನ್ನು ಓದಿದ್ದರಿಂದ ‘ಇವರು ಗುರುಗಳಾಗಿದ್ದಾರೆ, ಎಂಬ ಭಾವವನ್ನು ಇಟ್ಟೆನು.

೫ ಈ ೩. ಶ್ರೀ ಅನಂತಾನಂದ ಸಾಯಿಶ : ಇವರು ಪ.ಪೂ. ಭಕ್ತರಾಜ ಮಹಾರಾಜ (ಪ.ಪೂ. ಬಾಬಾ) ಇವರ ಗುರುಗಳಾಗಿದ್ದರು. ಆದ್ದರಿಂದ ಪ.ಪೂ. ಬಾಬಾರವರು ಇವರ ಮೇಲೆ ಇಟ್ಟಿರುವ ಶ್ರದ್ಧೆ ಹಾಗೂ ಭಕ್ತಿಯನ್ನು ಕಣ್ಮುಂದೆ ತಂದು ‘ಅದೇ ಭಾವಭಕ್ತಿ ನನ್ನಲ್ಲಿಯೂ ನಿರ್ಮಾಣವಾಗಲಿ’, ಎಂದು ಯಾಚಿಸುತ್ತಾ ನಾನು ಚಿತ್ರವನ್ನು ಬಿಡಿಸಿದೆ.

೫ ಇ ೪. ಪ.ಪೂ. ಭಕ್ತರಾಜ ಮಹಾರಾಜ : ಪ.ಪೂ. ಭಕ್ತರಾಜ ಮಹಾರಾಜರು ಶ್ರೀ ಗುರುಗಳ ಮುಂದೆ ಯಾವಾಗಲೂ ನಿಂತು ಕೊಂಡೇ ಇರುತ್ತಿದ್ದರು. ಅವರು ಅವರ ಗುರುಗಳ ಭಜನೆ ಹೇಳುತ್ತಾ ನೃತ್ಯ ಮಾಡುತ್ತಿದ್ದರು. ಅವರ ಚಿತ್ರವನ್ನು ಬಿಡಿಸುವಾಗ ನನ್ನ ಮನಸ್ಸು ಸಹ ನರ್ತಿಸುತ್ತಿತ್ತು. ‘ನನಗೂ ನಿಮ್ಮಂತೆ ಶ್ರೀ ಗುರುಗಳ ಮೇಲೆ ಅಚಲ ಹಾಗೂ ನಿರ್ಮಲ ಭಕ್ತಿ ಮಾಡಲು ಬರಲಿ’, ಎಂದು ನಾನು ಅವರಲ್ಲಿ ಬೇಡಿದೆ.

೫ ಇ ೫. ಪ.ಪೂ. ರಾಮಾನಂದ ಮಹಾರಾಜ : ನನಗೆ ಪ.ಪೂ. ರಾಮಾನಂದ ಮಹಾರಾಜ ಇವರ ಬಗ್ಗೆ ಹೆಚ್ಚು ತಿಳಿದಿಲ್ಲ. ನಾನು ಅವರನ್ನು ಪ್ರತ್ಯಕ್ಷವಾಗಿ ೨-೩ ಸಲ ನೋಡಿದ್ದೇವೆ ಮತ್ತು ಅವರ ಚರಣಗಳನ್ನು ಸ್ಪರ್ಶಿಸಿದೆ. ಆ ಸಮಯದಲ್ಲಿ ಅವರು ನನಗೆ ಆಶೀರ್ವಾದ ನೀಡಿದರು.

೫ ಇ ೬. ಪರಾತ್ಪರ ಗುರು ಡಾ. ಆಠವಲೆ : ಪರಾತ್ಪರ ಗುರು ಡಾ. ಆಠವಲೆ ಇವರ ಮೊದಲ ದರ್ಶನ ನನಗೆ ಬೆಳಗಾವಿಯಲ್ಲಿ ಆಯಿತು. ಅವರ ಕೃಪಾಶೀರ್ವಾದದಿಂದಲೇ ನನ್ನ ಸಾಧನೆಯಾಗುತ್ತಿದೆ. ‘ಕುಳಿತಲ್ಲಿಂದಲೇ ಸಪ್ತಲೋಕಗಳಲ್ಲಿ ತಿರುಗಾಡಿ ಬರುವ ಅವರ ದೃಷ್ಟಿಯನ್ನು ನನ್ನ ಕೈಗಳಿಂದ ಬಿಡಿಸುವಾಗ ಅದು ಸುಂದರವಾಗಿ ಬಿಡಿಸಲು ಬರಲಿ. ಅವರ ಹಲ್ಲು, ತುಟಿ, ಕಿವಿ ಎಲ್ಲವೂ ನನ್ನ ಕೈಗಳಿಂದ ಸುಂದರವಾಗಿ ಬಿಡಿಸಲು ಬರಲಿ. ಅವರ ಶಿರ ಮತ್ತು ತಿಲಕ ಬಿಡಿಸುವಾಗ ‘ಅಜ್ಞಾನಿಯಾಗಿರುವ ನನಗೆ ಅಧ್ಯಾತ್ಮದ ಜ್ಞಾನ ಲಭಿಸಲಿ. ಹೇ ಗುರುದೇವಾ, ನನ್ನ ಕೈಗಳಿಂದ ತಮ್ಮ ಕಣ್ಣುಗಳು, ಕಿವಿಗಳು, ತುಟಿ, ಸುಂದರವಾಗಿ ಬಿಡಿಸಲು ಬರಲಿ’, ಎಂದು ನೀವು ನನ್ನ ಮೇಲೆ ಕೃಪೆ ತೋರಿ. ‘ನಿಮ್ಮ ಸುಂದರವಾದ ಮುಖ ವಿಕೃತಿಯಾಗಿ ಬಿಡಿಸಿದ್ದಲ್ಲಿ ನನ್ನಿಂದ ಅದು ನೋಡಲು ಆಗುವುದಿಲ್ಲ, ಹೀಗೆ ಬೇರೆ ಬೇರೆ ರೀತಿಯಲ್ಲಿ ಅವರ ಅನುಸಂಧಾನದಲ್ಲಿದ್ದು ‘ನನ್ನ ಕೈಗಳಿಂದ ಸುಂದರ ರೀತಿಯಲ್ಲಿ ತಮ್ಮ ಚಿತ್ರ ಬಿಡಿಸುವಂತಾಗಲಿ’, ಎಂದು ಪ್ರಾರ್ಥಿಸುತ್ತಾ ನಾನು ಅವರ ಚಿತ್ರವನ್ನು ಬಿಡಿಸಿದೆ.

೫ ಇ ೭. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ : ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಹಸನ್ಮುಖವು ಸದೈವ ನನ್ನ ಕಣ್ಣೆದುರು ಬರುತ್ತದೆ. ಅದೇ ಕಲ್ಪನೆಯಿಂದ ನಾನು ಚಿತ್ರವನ್ನು ಬಿಡಿಸಿದೆ. ನಾನು ‘ಅವರ ಆಶೀರ್ವಾದ ಸದಾಕಾಲ ನನ್ನ ಮೇಲೆ ಇರಲಿ. ಅವರ ಕಣ್ಣು, ತುಟಿ ಮತ್ತು ಹಲ್ಲುಗಳು ಸುಂದರವಾಗಿ ಮೂಡಿಬರಲಿ’, ಎಂದು ಪ್ರಾರ್ಥಿಸುತ್ತಾ ಚಿತ್ರ ಬಿಡಿಸಿದೆ.

೫ ಇ ೮. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ : ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನಗುನಗುತ್ತಾ ಎಲ್ಲ ಸಾಧಕರೊಂದಿಗೆ ಮಾತನಾಡುವ ಪದ್ಧತಿ ಅತ್ಯಂತ ಆಕರ್ಷಣೀಯವಾಗಿದೆ. ಅವರ ಕಣ್ಣು, ಮೂಗು, ತುಟಿ, ಹಲ್ಲು ಎಲ್ಲವೂ ಸುಂದರವಾಗಿದೆ. ಅದರಂತೆ ನನಗೆ ಚಿತ್ರ ಬಿಡಿಸಲು ಆಗಲಿ, ಎಂದು ನಾನು ಚಿತ್ರ ಬಿಡಿಸುವಾಗ ಪ್ರಾರ್ಥನೆ ಮಾಡಿದೆ.

೫ ಈ. ಚಿತ್ರದ ಬಗ್ಗೆ ಮನೆಯ ಸದಸ್ಯರು ವ್ಯಕ್ತಪಡಿಸಿದ ಮನೋಗತ !

೧. ಶ್ರೀಮತಿ ಅಶ್ವಿನಿ : ಎಲ್ಲ ಚಿತ್ರಗಳು ಸುಂದರವಾಗಿವೆ. ಪ.ಪೂ. ಗುರುದೇವರು ನಿಮ್ಮಂತೆಯೇ ಕಾಣಿಸುತ್ತಿದ್ದಾರೆ.

ನಾನು ((ಪೂ.) ರಾಧಾ ಪ್ರಭು) : ನಾನು ಸದಾಕಾಲ ಅವರ ರೂಪದ ಕಲ್ಪನೆಯನ್ನು ಮಾಡಿ ಅವರ ಅನುಸಂಧಾನದಲ್ಲಿದ್ದರಿಂದ ‘ಅವರೊಂದಿಗೆ ಏಕರೂಪವಾಗಿದ್ದೆ’, ಎಂದು ನನಗೆ ಅನಿಸಿತು.

೨. ಶ್ರೀಮತಿ ಅಶ್ವಿನಿ : ಶಂಕರಾಚಾರ್ಯ ಪೂ. ಭಾರ್ಗವರಾಮ ಇವರಂತೆ ಕಾಣಿಸುತ್ತಿದ್ದಾರೆ.

ನಾನು : ‘ಪೂ. ಭಾರ್ಗವರಾಮ ಶಂಕರಾಚಾರ್ಯರೊಂದಿಗೆ ಏಕರೂಪ ಆಗಿರಬೇಕು’, ಎಂದು ನನಗೆ ಅನಿಸುತ್ತದೆ.

೩. ಸೌ. ಭವಾನಿಯೂ ಸಹ ಅಶ್ವಿನಿಯವರಂತೆ ಅಭಿಪ್ರಾಯ ನೀಡಿದರು.

೪. ಭರತ, “ಎಲ್ಲಾ ಚಿತ್ರಗಳು ಸುಂದರವಾಗಿತ್ತು. ಅದರಲ್ಲಿ ಪ.ಪೂ. ಬಾಬಾ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚಿತ್ರ ತುಂಬಾ ಚೆನ್ನಾಗಿತ್ತು ಎಂದು ಹೇಳಿದರು.

೫. ಪೂ. ಭಾರ್ಗವರಾಮ ಇವರೂ ನಾವು ಯಾರ ಹೆಸರನ್ನು ಉಚ್ಚರಿಸುತ್ತೇವೆಯೋ ಅದರತ್ತ ಬೊಟ್ಟು ಮಾಡುತ್ತಿದ್ದರು.

೬. ಕೃತಜ್ಞತೆಗಳು

ಪರಾತ್ಪರ ಗುರು ಡಾ. ಆಠವಲೆಯವರು ನನ್ನ ಮಹಾಮೃತ್ಯು ಯೋಗವನ್ನು ತಪ್ಪಿಸಿ ನನಗೆ ಜೀವದಾನ ನೀಡಿ ಪುನರ್ಜನ್ಮ ನೀಡಿದ್ದಾರೆ. ಬಾಲ್ಯದಲ್ಲಿಯೇ ತಂದೆಯ ನೆರಳು ಕಳೆದುಕೊಂಡಿದ್ದ ನನಗೆ ಅವರು ತಂದೆಯಂತೆ ಪ್ರೀತಿ, ಆಶೀರ್ವಾದ, ಪ್ರೋತ್ಸಾಹ ಮತ್ತು ಚೈತನ್ಯವನ್ನು ನೀಡಿ ನನಗೆ ಸಾಧನೆಯಲ್ಲಿ ಮುಂದೆ ಕರೆದುಕೊಂಡು ಬಂದರು. ಅವರ ಚರಣಗಳಲ್ಲಿ ಎಷ್ಟೇ ಕೃತಜ್ಞತೆಯನ್ನು ಅರ್ಪಿಸಿದರೂ ಅದು ಕಡಿಮೆಯೇ ಆಗಿದೆ. ಈ ೮ ಚಿತ್ರಗಳು ನನ್ನ ಮನಸ್ಸಿನಲ್ಲಿ ಮನೆ ಮಾಡಿದಂತೆ ಬಿಡಿಸುವ ಭಾಗ್ಯವನ್ನು ನೀಡಿ ಹಾಗೂ ಆ ಚಿತ್ರಗಳನ್ನು ನಿರ್ಮಲ ಮನಸ್ಸಿನಿಂದ ಬಿಡಿಸಿಕೊಂಡು ನನ್ನ ಮನಸ್ಸಿನಲ್ಲಿನ ಭಾವನೆಗಳನ್ನು ವ್ಯಕ್ತಪಡಿಸಿಕೊಂಡ ಶ್ರೀಕೃಷ್ಣ ಮತ್ತು ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಪೂ. ರಾಧಾ ಪ್ರಭು, ಮಂಗಳೂರು, ಕರ್ನಾಟಕ (೩.೭.೨೦೨೦)