ಶಿಕ್ಷಕನ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ
ಭಾರತದಲ್ಲಿ ಹಿಂದೂದ್ವೇಷಿ ಚಿತ್ರಕಾರ ಮ. ಫಿ. ಹುಸೇನರವರು ಹಿಂದೂಗಳ ದೇವತೆಗಳ ಅನೇಕ ಅಶ್ಲೀಲ ಚಿತ್ರಗಳನ್ನು ಬಿಡಿಸಿಯೂ ಅವರನ್ನು ಯಾವಾಗಲೂ ಬಂಧಿಸಲಿಲ್ಲ. ಆದರೆ ಇಸ್ಲಾಮಿ ದೇಶದಲ್ಲಿ ಕಥಿತ ಆರೋಪದಲ್ಲಿ ಹಿಂದೂಗಳ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ !
ಮುಂಶೀಗಂಜ (ಬಾಂಗ್ಲಾದೇಶ) – ಇಲ್ಲಿ ಓರ್ವ ಹಿಂದೂ ಶಿಕ್ಷಕನಿಗೆ ಮಹಮ್ಮದ ಪೈಗಂಬರರವರ ಕಥಿತ ಅಪಮಾನ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಲ್ಲಿನ ಬಿನೋದಪುರ ರಾಮಕುಮಾರ ಶಾಲೆಯಲ್ಲಿ ಈ ಘಟನೆಯು ನಡೆದಿದ್ದು ಆ ಶಿಕ್ಷಕನ ಹೆಸರು ಹೃದಯಚಂದ್ರ ಮಂಡಲ ಎಂದು ಇದೆ. ಅವರು ವಿಜ್ಞಾನ ಕಲಿಸುತ್ತಾರೆ. ಅವರು ತರಗತಿಯಲ್ಲಿ ಕಲಿಸುವಾಗ ಪೈಗಂಬರ ಮತ್ತು ಕುರಾನಿನ ಅಪಮಾನ ಮಾಡಿರುವ ಬಗ್ಗೆ ವಿದ್ಯಾರ್ಥಿಗಳು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಶಾಲೆಯ ಅಧಿಕಾರಿಗಳೂ ವಿದ್ಯಾರ್ಥಿಗಳೊಂದಿಗೆ ರಾಜಿ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ವಿದ್ಯಾರ್ಥಿಗಳು ನಿರಾಕರಿಸಿದರು. ಮಂಡಲರವರ ವಿರುದ್ಧ ಪ್ರತಿಭಟನೆಯನ್ನೂ ಮಾಡಲಾಯಿತು.
बांग्लादेश में ईशनिंदा के नाम पर विज्ञान शिक्षक ह्रदय मंडल गिरफ्तार, इस्लाम और पैगबंर के अपमान का आरोप: जानें क्या है मामला#Bangladesh https://t.co/GPIsDBto6v
— ऑपइंडिया (@OpIndia_in) April 7, 2022
೧. ಮಂಡಲರವರು ತಮ್ಮ ಮೇಲಿನ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದಾರೆ. ಅವರು ಮಾತನಾಡುತ್ತ ‘ವಿಜ್ಞಾನ ಕಲಿಸುವಾಗ ನಾನು ಕೆಲವು ಸಂಗತಿಗಳನ್ನು ಹೇಳಿದ್ದೆನು,ಆ ದರೆ ಇಸ್ಲಾಂ ಮತ್ತು ಪೈಗಂಬರರ ಬಗ್ಗೆ ಏನೂ ಹೇಳಿಲ್ಲ’ ಎಂದು ಹೇಳಿದರು.
೨. ಮಂಡಲರವರು ಪತ್ನಿ ಬಬಿತಾರವರು ‘ನಮ್ಮ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಇದರಿಂದಾಗಿ ನನ್ನ ಮಕ್ಕಳು ಶಾಲೆಗೆ ಹೋಗುವುದೂ ನಿಂತುಹೋಗಿದೆ. ನಮ್ಮ ನರೆಯವರು ನಮಗೆ ಬೈಯ್ಯುತ್ತಾರೆ. ನಾವು ನಮ್ಮನ್ನು ಅಸುರಕ್ಷಿತರೆಂದು ಭಾವಿಸುತ್ತಿದ್ದೇವೆ’ ಎಂದು ಹೇಳಿದರು.