ಓಟಿಟಿಯ ಮಾಧ್ಯಮಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ನಿರ್ಬೀಜಗೊಳಿಸುವ ಷಡ್ಯಂತ್ರ ! – ಅಭಿನೇತ್ರಿ ಪಾಯಲ್ ರೊಹತಗೀ

ಬ್ರಿಟಿಷ್ ಸೈನ್ಯದಲ್ಲಿನ ಭಾರತೀಯ ಜನರೇ ಹೇಗೆ ಕ್ರಾಂತಿಕಾರರ ವಿರುದ್ಧ ಹೋರಾಡುತ್ತಿದ್ದರೋ, ಹಾಗೆಯೇ ಇಂದು ಈ ಓಟೀಟೀ (ಓವರ್ ದ ಟಾಪ್) ಮಾಧ್ಯಮಗಳ ಮೂಲಕ ಭಾರತದಲ್ಲಿನ ಜನರೇ ದೇಶವಿರೋಧಿ ವಿಚಾರಸರಣಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಅಮೇಜಾನ್ ಪ್ರೈಮ್ ಇಂಡಿಯಾದ ಕನ್‌ಟೆನ್ಟೆನ್ಟ ವಿಭಾಗದ ಪ್ರಮುಖರಾಗಿರು ಅಪರ್ಣಾ ಪುರೋಹಿತರವರ ಸರಕಾರಿ ವಿರೋಧಿ ವಿಚಾರಸರಣಿಯಿಂದಾಗಿ ಅವರು ಸತತವಾಗಿ ಇಂತಹ ವೆಬ್ ಸಿರೀಜ್‌ಗಳಿಗೆ ಚಾಲನೆಯನ್ನು ನೀಡುತ್ತಿದ್ದಾರೆ. ಓಟೀಟೀ ಮಾಧ್ಯಮಗಳಲ್ಲಿಯೂ ಅಶ್ಲೀಲ ವಿಷಯಗಳನ್ನು ತೋರಿಸಲಾಗುತ್ತಿದೆ. ಈ ಮಾಧ್ಯಮಗಳಿಂದ ಭಾರತೀಯ ಸಂಸ್ಕೃತಿಯನ್ನು ನಿರ್ಬೀಜ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ತಡೆಯಲು ಹಿಂದೂಗಳು ಒಟ್ಟಾಗಬೇಕು.