ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

‘ಕೆಲವು ಸಾಧಕರು ಯಾವುದಾದರೊಂದು ಸೇವೆ ಆಯಿತೆಂದರೆ, ಅದು ‘ಪರಾತ್ಪರ ಗುರು ಡಾ. ಆಠವಲೆಯವರ ಸಂಕಲ್ಪ ಅಥವಾ ಅಸ್ತಿತ್ವದಿಂದ ಆಯಿತು’, ಎಂದು ಹೇಳುತ್ತಾರೆ. ವಾಸ್ತವದಲ್ಲಿ ಆ ಸೇವೆಯು ಈಶ್ವರನ ಇಚ್ಛೆಯಿಂದ ಆಗಿರುತ್ತದೆ; ಏಕೆಂದರೆ ಆ ಸಂದರ್ಭದಲ್ಲಿ ನಾನು ಸಂಕಲ್ಪ ಮಾಡಿರುವುದಿಲ್ಲ ಅಥವಾ ಹಾಗೆ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರವೂ ಇರುವುದಿಲ್ಲ’.

– (ಪರಾತ್ಪರ ಗುರು) ಡಾ. ಆಠವಲೆ (೬.೨.೨೦೨೨)

ವಯಸ್ಸಾದ ಮೇಲೆ ದೈಹಿಕ ಸುಖದ ಬಯಕೆ ಕಡಿಮೆಯಾದ ನಂತರ, ಸಾಕಷ್ಟು ಸುಖಗಳ ಸೆಳೆತ ಇಲ್ಲದಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೪.೨.೨೦೨೨)

ಈಶ್ವರನು ತನ್ನ ಎಲ್ಲೆಡೆಯ ಭಕ್ತರ ಕಾಳಜಿ ವಹಿಸುತ್ತಾನೆ, ಅದೇ ರೀತಿ ಸನಾತನ ಸಂಸ್ಥೆಯೂ ತನ್ನ ಜಗತ್ತಿನಾದ್ಯಂತದ ಸಾಧಕರ ಆಧ್ಯಾತ್ಮಿಕ ಸ್ತರದಲ್ಲಿ ಕಾಳಜಿ ವಹಿಸುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೫.೨.೨೦೨೧)

‘ಕೆಲವು ಜನರು ಏನಾದರೂ ಸ್ವಲ್ಪ ದಾನ ಮಾಡಿದ ನಂತರ ತುಂಬಾ ಚರ್ಚೆ ಮಾಡುತ್ತಾರೆ. ನಿಜವಾಗಿ ಈಶ್ವರನಿಗೆ ಸರ್ವಸ್ವವನ್ನು, ಅಂದರೆ ತನು, ಮನ ಮತ್ತು ಧನ ಇವುಗಳನ್ನು ದಾನ ಮಾಡುವುದು ಅಪೇಕ್ಷಿತ ಇರುತ್ತದೆ; ಆದರೆ ಇದನ್ನು ಮಾತ್ರ ಯಾರೂ ಕೊಡುವುದಿಲ್ಲ, ನಿಜವಾದ ಸಾಧಕರು ಮಾತ್ರ ಕೊಡುತ್ತಾರೆ’.

– (ಪರಾತ್ಪರ ಗುರು) ಡಾ. ಆಠವಲೆ (೧೪.೨.೨೦೨೨)