ದೇವಿಹಸೊಳ(ರತ್ನಾಗಿರಿ ಜಿಲ್ಲೆ) ಇಲ್ಲಿಯ ಸನಾತನದ ೬೫ ನೇ ಸಂತರಾದ ಪೂ. ಜನಾರ್ಧನ ಕೃಷ್ಣಾಜಿ ವಾಗಳೆ ಅಜ್ಜ (೧೦೦ ವರ್ಷ) ಇವರ ದೇಹತ್ಯಾಗ !

ಪೂ. ಜನಾರ್ಧನ ಕೃಷ್ಣಾಜಿ ವಾಗಳೆ

ರತ್ನಾಗಿರಿ, ಮಾರ್ಚ್ ೨೦ (ವಾರ್ತೆ) – ರಾಜಾಪುರ ತಾಲೂಕಿನ ದೇವಿಹಸೊಳದಲ್ಲಿನ ಸನಾತನದ ೬೫ ನೇ ಸಂತ ಪೂ. ಜನಾರ್ಧನ ಕೃಷ್ಣಾಜಿ ವಾಗಳೆ ಅಜ್ಜ (ವಯಸ್ಸು ೧೦೦) ಇವರು ೧೯ ಮಾರ್ಚ್ ೨೦೨೨ ರಂದು ಬೆಳಿಗ್ಗೆ ೭ ಗಂಟೆಗೆ ತಮ್ಮ ನಿವಾಸಸ್ಥಾನದಲ್ಲಿ ದೇಹತ್ಯಾಗ ಮಾಡಿದರು. ಮಾರ್ಚ್ ೨೦ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ಅವರ ಅಂತ್ಯಕ್ರಿಯೆ ಮಾಡಲಾಯಿತು. ಈ ಸಮಯದಲ್ಲಿ ಪೂ. ವಾಗಳೆ ಅಜ್ಜ ಇವರ ಮನೆಯಲ್ಲಿನ ಸಂಬಂಧಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

‘ಪೂ. ವಾಗಳೆ ಅಜ್ಜ ಇವರು ದೇಹತ್ಯಾಗ ಮಾಡಿದ ನಂತರವೂ ಅವರ ವಾಸಸ್ಥಾನದ ವಾತಾವರಣ ಅಹ್ಲಾದಕರವಾಗಿತ್ತು’ ಎಂದು ಅನೇಕರಿಗೆ ಅನುಭವವಾಯಿತು. ‘ಪೂ. ವಾಗಳೆ ಅಜ್ಜ ತೀರಿಕೊಂಡರು, ಎಂದು ಅನಿಸುತ್ತಿರಲಿಲ್ಲ. ಅವರ ಮುಖ ಸಜೀವದಂತೆ ಅರಿವಾಗುತ್ತಿತ್ತು. ವಾತಾವರಣದಲ್ಲಿ ಬೃಹತ್ಪ್ರಮಾಣದಲ್ಲಿ ಚೈತನ್ಯದ ಅರಿವಾಗುತ್ತಿತ್ತು. ಆ ಚೈತನ್ಯ ಮನೆಯಲ್ಲಿಯೂ ಹರಡಿತ್ತು. ಅನೇಕರ ನಾಮಜಪ ಒಳ್ಳೆಯದಾಗಿ ಆಗುತ್ತಿತ್ತು’, ಎಂದು ಅವರ ಮೊಮ್ಮಗ ಶ್ರೀ. ಪುರುಷೋತ್ತಮ ವಾಗಳೆ ಇವರು ಹೇಳಿದರು.

೧೫ ಫೆಬ್ರವರಿ ೨೦೧೭ ರಂದು ಪೂ. ಜನಾರ್ದನ ವಾಗಳೆ ಅಜ್ಜ ಇವರು ಸನಾತನದ ೬೫ ನೇ ಸಂಪ ಪದವಿಯಲ್ಲಿ ವಿರಾಜಮಾನರಾಗಿದ್ದರು.