ಈ ಕ್ಷಮಾಯಾಚನೆಯು ತೋರಿಕೆಯಾಗಿದ್ದು ಮನದಾಳದ ಸತ್ಯವು ಮೌಲ್ವಿಯ ಬಾಯಿಯಿಂದ ಬಂದಿದೆ, ಎಂಬುದನ್ನು ಗಮನದಲಲ್‌ಇಟ್ಟುಕೊಳ್ಳಬೇಕು ಮತ್ತು ಹಿಂದೂಗಳು ಜಾಗೃತರಾಗಬೇಕು, ಇದರಿಂದ ಗಮನಕ್ಕೆಬರುತ್ತದೆ ! ಹೇಗೆ ಪ್ರಚೋದನಕಾರಿ ಭಾಷಣ ಮಾಡಿದ ಹಿಂದೂ ಮುಖಂಡರನ್ನು ಬಂಧಿಸಲಾಗುತ್ತದೆಯೋ, ಅದರಂತೆ ಮೌಲ್ವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ! |
(ಮೌಲ್ವಿ ಎಂದರೆ ಇಸ್ಲಾಂ ಧರ್ಮದಲ್ಲಿ ಧಾರ್ಮಿಕ ನಾಯಕ)
ರಾಜೌರಿ (ಜಮ್ಮು-ಕಾಶ್ಮೀರ) – ಶುಕ್ರವಾರದ ಪ್ರಾರ್ಥನೆಯ ವೇಳೆ ಜಾಮಾ ಮಸಿದಿಯ ಮೌಲ್ವಿ ಫಾರೂಕ್‌ನು ‘ದ ಕಶ್ಮೀರ ಫೈಲ್ಸ್’ ಚಲನಚಿತ್ರದ ಕುರಿತು ಭಾಷಣ ಮಾಡುವಾಗ ಹಿಂದೂಗಳಿಗೆ ನಾಶ ಮಾಡುವದರ ಬಗ್ಗೆ ಹೇಳಿಕೆ ನೀಡಿದ ಪ್ರಕರಣಕ್ಕಾಗಿ ಕ್ಷಮಾಯಾಚಿಸಿದ್ದಾನೆ. ಮೌಲಾನಾದ ಭಾಷಣದ ವಿಡಿಯೋ ಪ್ರಸಾರ ಮಾಡಿದ ನಂತರ ಅವನ ಮೇಲೆ ಟೀಕೆಗಳಾದವು. ಆನಂತರ ಅವನು ಕ್ಷಮೆಯಾಚಿಸಿದನು. ‘ನಾನು ಯಾವುದೇ ಧರ್ಮದ ವಿರುದ್ಧ ಇಲ್ಲ, ಬದಲಾಗಿ ಸರಕಾರದ ವಿರುದ್ಧ ಮಾತನಾಡಿದ್ದೆನೆ’, ಎಂದು ಸ್ಪಷ್ಟೀಕರಣ ನೀಡಿದರು. ಮೌಲ್ವಿಯು ತಮ್ಮ ಭಾಷಣದಲ್ಲಿ ಈ ಚಲನಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದನು.
ಫಾರೂಕ್‌ನ ಕ್ಷಮೆಯಾಚಿಸುವ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಆತ ಕಾಶ್ಮೀರಿ ಹಿಂದೂಗಳು ಕಾಶ್ಮೀರದ ಹೆಮ್ಮೆಯಾಗಿದ್ದಾರೆ, ಅವರಿಲ್ಲದೆ ಜಮ್ಮು-ಕಾಶ್ಮೀರ ಅಪೂರ್ಣವಾಗಿದೆ. ನನ್ನ ಹೇಳಿಕೆಯನ್ನು ಯಾರಾದರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದರೆ, ಅವರು ದೂರು ನೀಡುತ್ತಿರಲಿಲ್ಲ. ನನ್ನ ಸಿಟ್ಟು ಸರಕಾರದ ಮೇಲಿತ್ತು. ಕಾಶ್ಮೀರಿ ಹಿಂದೂಗಳು ನಮ್ಮ ಸಹೋದರರು, ಆದ್ದರಿಂದ ನಾವು ಅವರ ವಿರುದ್ಧ ಏನನ್ನೂ ಹೇಳಲು ಬಯಸುವದಿಲ್ಲ.
ನಾವೂ ಈ ದೇಶವನ್ನು ೮೦೦ ವರ್ಷಗಳ ಕಾಲ ಆಳಿದ್ದೇವೆ, ಅವರು(ಹಿಂದೂಗಳು) ೭೦ ವರ್ಷ ಆಳಿದ್ದಾರೆ; ಆದರೆ ಅವರು ನಮ್ಮನ್ನು ನಾಶಮಾಡಲು ಸಾಧ್ಯವಿಲ್ಲ !
ಏನು ಹೇಳಿದ್ದನು ಮೌಲ್ವಿ ಫಾರೂಕ್ ?
ಮೌಲಾನಾ ಫಾಕುಖ ತಮ್ಮ ಮಾತನ್ನು ಮುಂದುವರೆಸುತ್ತಾ, ಕಳೆದ ೩೨ ವರ್ಷಗಳಲ್ಲಿ ಅಸಂಖ್ಯಾತ ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು. ಆದರೆ ಯಾರೂ ಅದನ್ನು ಉಲ್ಲೇಖಿಸುವದಿಲ್ಲ. ಕಾಶ್ಮೀರಿ ಮುಸ್ಲಿಮರ ಸಂಕಷ್ಟ ಮರೆತು ಹೋಗಿದ್ದಾರೆ. ಅವರ ರಕ್ತವು ಯಾರಿಗೂ ಕಾಣಿಸುವದಿಲ್ಲ. ನಾವೂ ಶಾಂತಿಯನ್ನು ಪ್ರೀತಿಸುವ ಜನರು. ನಾವೂ ದೇಶವನ್ನು ೮೦೦ ವರ್ಷಗಳ ಕಾಲ ಆಳಿದ್ದೇವೆ, ಆದರೆ ಈ ಜನರು (ಹಿಂದೂಗಳು) ೭೦ ವರ್ಷ ಆಳಿದ್ದಾರೆ; ಆದರೆ ಅವರು ನಮ್ಮ ಗುರುತನ್ನು ನಾಶಮಾಡಲು ಸಾಧ್ಯವಿಲ್ಲ. ನೀವೂ ನಾಶವಾಗುವಿರಿ; ಅದರೆ ನಾವಲ್ಲ.’ ಈ ಭಾಷಣದ ಸಮಯದಲ್ಲಿ ಕುಳಿತಿರುವ ಜನರು ‘ನಾರಾ-ಏ -ತಕ್ಬೀರ್’ (ಅಲ್ಲಾ ಎಲ್ಲರಲ್ಲಿ ಶ್ರೇಷ್ಠ) ಮತ್ತು ‘ಅಲ್ಲಾಹು ಅಕ್ಬರ್’(ಅಲ್ಲಾನೆ ಶ್ರೇಷ್ಠ) ಎಂದು ಘೊಷಿಸುತ್ತಿರುವುದು ಕಂಡುಬರುತ್ತದೆ.
ಮೌಲ್ವಿಯ ಈ ವಿಡಿಯೋದಲ್ಲಿ ‘ದ ಕಶ್ಮೀರ ಫೈಲ್ಸ್’ನ ನಿರ್ದೆಶಕ ವಿವೇಕ ಅಗ್ನಿಹೋತ್ರಿ ಇವರು ಟ್ವೀಟ್ ಮಾಡುತ್ತಾ, ಇದೇ ರೀತಿ ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಮಾಡಲಾಗಿತ್ತು ಎಂದು ಹೇಳಿದ್ದಾರೆ.
Watch this. 1990 vs 2022.
Past. Present. Future? #TheKashmirFiles#RightToJustice pic.twitter.com/U4cCBsNq9k— Vivek Ranjan Agnihotri (@vivekagnihotri) March 27, 2022