ರಷ್ಯಾದಲ್ಲಿ ಸಕ್ಕರೆಯನ್ನು ಖರೀದಿಗಾಗಿ ಜಗಳ !

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ರಷ್ಯಾದ ಮೇಲೆ ಹೇರಿದ್ದ ನಿಷೇಧದ ಪರಿಣಾಮ !

ಮಾಸ್ಕೋ (ರಷ್ಯಾ) – ಕಳೆದ 28 ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಉಕ್ರೇನಿನ ನಾಗರಿಕರ ಮೇಲೆ ಹೇಗೆ ಗಂಭೀರ ಪರಿಣಾಮ ಆಗಿದೆ ಅದೇ ರೀತಿ ಈಗ ರಷ್ಯಾದ ನಾಗರಿಕರ ಮೇಲೆ ಕೆಲವು ಪ್ರಮಾಣದಲ್ಲಿ ಪರಿಣಾಮ ಆಗುತ್ತಿರುವುದು ಕಂಡುಬರುತ್ತಿದೆ.

1. ರಷ್ಯಾದ ಒಂದು ವ್ಯಾಪಾರ ಸಂಕೀರ್ಣದಲ್ಲಿ ಕೆಲವು ಜನರು ಸಕ್ಕರೆಗಾಗಿ ಪರಸ್ಪರರಲ್ಲಿ ಜಗಳವಾಡಿದರು. ಈ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಈ ಯುದ್ಧದಿಂದ ರಷ್ಯಾದ ಮೇಲೆ ಅನೇಕ ಆರ್ಥಿಕ ನಿರ್ಬಂಧಗಳು ಹೇರಲಾಗಿದೆ. ಇದರಿಂದ ರಷ್ಯಾದ ಮೇಲೆ ಪರಿಣಾಮ ಆಗುತ್ತಿರುವುದು ಕಂಡುಬರುತ್ತಿದೆ. ಕೆಲವು ವ್ಯಾಪಾರ ಸಂಕೀರ್ಣದಲ್ಲಿ ಪ್ರತಿಯೊಂದು ವ್ಯಕ್ತಿಗೆ ಕೇವಲ 10 ಕೆಜಿ ಸಕ್ಕರೆ ಖರೀದಿಸಲು ಸೀಮಿತಗೊಳಿಸಲಾಗಿದೆ. ರಷ್ಯಾದಲ್ಲಿ ಸಕ್ಕರೆ ಬೆಲೆ ಶೇ. 31 ರಷ್ಟು ಹೆಚ್ಚಾಗಿದೆ.

2. ರಷ್ಯಾದ ಸರಕಾರಿ ಅಧಿಕಾರಿಗಳು, ದೇಶದಲ್ಲಿ ಸಕ್ಕರೆಯ ಕೊರತೆಯಿಲ್ಲ ಮತ್ತು ಅಂಗಡಿಗಳಲ್ಲಿ ಖರೀದಿಸಿರುವ ಗ್ರಾಹಕರಿಂದ ಹಾಗೂ ಸಕ್ಕರೆ ಕಾರ್ಖಾನೆಯಿಂದ ಬೆಲೆ ಹೆಚ್ಚಿಸಲು ಕಾಳಸಂತೇಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರದಿಂದ ದೇಶಗಳಿಂದ ಸಕ್ಕರೆಯ ಆಮದಿನ ಮೇಲೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

3. ಪಾಶ್ಚಾತ್ಯ ದೇಶಗಳ ನಿರ್ಬಂಧದಿಂದ ಇತರ ಅನೇಕ ಉತ್ಪಾದನೆಗಳು ತುಟ್ಟಿಯಾಗಿದೆ. ಅನೇಕ ಪಾಶ್ಚಿಮಾತ್ಯ ಉದ್ಯಮಿಗಳು ರಷ್ಯಾವನ್ನು ತ್ಯಜಿಸಿದ್ದಾರೆ ಮತ್ತು ಆದ್ದರಿಂದ ಚತುಷ್ಚಕ್ರ ವಾಹನಗಳು, ಗೃಹಪಯೋಗಿ ವಸ್ತುಗಳು ಹಾಗೂ ಟಿವಿಯಂತಹ ವಿದೇಶಿ ಆಮದು ವಸ್ತುಗಳ ತೀವ್ರ ಕೊರತೆಯಾಗಿದೆ.