ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಭಕ್ತರು ಯೋಗ್ಯ ಉಡುಪು ಧರಿಸಿಯೇ ದೇವಸ್ಥಾನವನ್ನು ಪ್ರವೇಶಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯದ ತೀರ್ಪು

ಈ ತೀರ್ಪು ದೇಶದ ಪ್ರತಿಯೊಂದು ದೇವಸ್ಥಾನದಲ್ಲಿ ಜಾರಿಯಾಗಬೇಕೆಂದು ಭಕ್ತರ ಅನಿಸಿಕೆ !

ಚೆನ್ನೈ (ತಮಿಳುನಾಡು) – ದೇವಸ್ಥಾನಗಳ ಪಾವಿತ್ರ್ಯವನ್ನು ಕಾಪಾಡಲು ಭಕ್ತರು ಯೋಗ್ಯವಾದ ಉಡುಪನ್ನು ಧರಿಸಿಯೇ ದೇವಸ್ಥಾನವನ್ನು ಪ್ರವೇಶಿಸಬೇಕು. ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ಸಮಾಜದ ಮೇಲೆ ಹೇರಲು ಸಾಧ್ಯವಿಲ್ಲ. ಪೂಜಾ ಸ್ಥಳಗಳಲ್ಲಿ ಪ್ರವೇಶಿಸುವಾಗ ಮತ್ತು ಅಲ್ಲಿಯ ಪರಂಪರೆಗೆ ಅನುಗುಣವಾಗಿ ಯಾವುದಾದರೂ ಉಡುಪು ಅವಶ್ಯಕವಾಗಿದ್ದರೆ ಆಗ ಅದೇ ಉಡುಪನ್ನು ಧರಿಸಬೇಕು, ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ತೀರ್ಪು ನೀಡಿದೆ. ‘ಯಾವ ದೇವಸ್ಥಾನಗಳಲ್ಲಿ ಉಡುಪಿನ ಬಂಧನವಿದೆ, ಅವರು ದೇವಸ್ಥಾನದ ಹೊರಗೆ ಸೂಚನಾ ಫಲಕಗಳಲ್ಲಿ ಮಾಹಿತಿ ನೀಡಬೇಕು’ ಎಂದು ನ್ಯಾಯಾಲಯ ಹೇಳಿದೆ. ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಅನಿವಾರ್ಯಗೊಳಿಸಲು, ಆದೇಶಿಸುವಂತೆ ಒಂದು ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಪುರುಷರಿಗೆ ಪಂಚೆ-ಕುರ್ತಾ, ಮಹಿಳೆಯರಿಗಾಗಿ ಸೀರೆ ಅಥವಾ ಸಲ್ವಾರ್ ಕಮೀಜ್ ಮತ್ತು ಹಣೆಯ ಮೇಲೆ ಸನಾತನ ಧರ್ಮದ ಚಿಹ್ನೆ ಕಡ್ಡಾಯ ಮಾಡಲು ಒತ್ತಾಯಿಸಲಾಗಿತ್ತು. ಈ ಬಗ್ಗೆ ನ್ಯಾಯಾಲಯವು ತೀರ್ಪು ನೀಡಿದೆ.