
ಪನವೆಲ್ – ತತ್ತ್ವನಿಷ್ಠ, ಆಜ್ಞಾಪಾಲನೆ, ಸ್ಥಿರತೆ, ನಮ್ರತೆ, ಅಂತರ್ಮುಖತೆ, ಸಮರ್ಪಣಾ ಭಾವದಿಂದ ಸೇವೆ ಮಾಡುವುದು ಹೀಗೆ ಅನೇಕ ಗುಣರತ್ನಗಳ ಗಣಿಯಾಗಿರುವ ತಿವರೆ (ರಾಜಾಪುರ ತಾಲೂಕು, ರತ್ನಾಗಿರಿ ಜಿಲ್ಲೆ)ಯಲ್ಲಿನ ಹಾಗೂ ಪ್ರಸ್ತುತ ಸನಾತನದ ದೇವದ ಆಶ್ರಮದಲ್ಲಿ ವಾಸವಾಗಿರುವ ಪೂ. (ಸುಶ್ರೀ) ರತ್ನಮಾಲಾ ದಳವಿ (೪೫ ವರ್ಷ) ಇವರು ಮಾರ್ಚ್ ೬ ರಂದು ಸನಾತನದ ೧೧೮ ನೇ ಸಮಷ್ಟಿ ಸಂತ ಪದವಿಯಲ್ಲಿ ವಿರಾಜಮಾನರಾದರು. ಸನಾತನದ ದೇವದ ಆಶ್ರಮದಲ್ಲಿ ನೆರವೇರಿದ ಭಾವ ಸಮಾರಂಭದಲ್ಲಿ ಸನಾತನದ ೬೯ ನೇ ಸಂತ ಪೂ. (ಸೌ.) ಅಶ್ವಿನಿ ಪವಾರ ಇವರು ಈ ಆನಂದವಾರ್ತೆಯನ್ನು ಘೋಷಿಸಿದರು. ಇದನ್ನು ಕೇಳಿ ಎಲ್ಲರಿಗೂ ಆನಂದವಾಯಿತು ಮತ್ತು ಗುರುಗಳ (ಪರಾತ್ಪರ ಗುರು ಡಾ. ಆಠವಲೆ) ಬಗ್ಗೆ ಕೃತಜ್ಞತೆ ವ್ಯಕ್ತವಾಯಿತು.

ಪೂ. (ಸೌ.) ಅಶ್ವಿನಿ ಪವಾರ ಇವರು ಪ್ರತಿಯೊಂದು ಸೇವೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪೂ. (ಸುಶ್ರೀ)ರತ್ನಮಾಲಾ ದಳವಿ ಇವರಿಗೆ ಉಡುಗೊರೆಯನ್ನು ನೀಡಿ ಸನ್ಮಾನಿಸಿದರು. ಈ ಭಾವಸಮಾರಂಭದಲ್ಲಿ ದೇವದ ಆಶ್ರಮದ ಸದ್ಗುರುಗಳು, ಸಂತರು ಹಾಗೂ ಸಾಧಕರು ಉಪಸ್ಥಿತರಿದ್ದರು.

ಈ ಭಾವ ಸಮಾರಂಭದಲ್ಲಿ ಪೂ. (ಸುಶ್ರೀ) ರತ್ನಮಾಲಾ ದಳವಿ ಇವರ ಸಂಬಂಧಿಕರು ‘ಆನ್‌ಲೈನ್’ ಮೂಲಕ ಪಾಲ್ಗೊಂಡಿದ್ದರು.
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !