ಉಕ್ರೇನ್ ರಷ್ಯಾ ಯುದ್ಧದಿಂದ ಭಾರತೀಯರು ಕಲಿಯಬೇಕಾದ ಪಾಠ !

೨೮ ಫೆಬ್ರುವರಿ ಈ ದಿನದಂದು ನಡೆದ ಉಕ್ರೇನ್ ಮತ್ತು ರಷ್ಯಾ ನಿಯೋಗಗಳ ಚರ್ಚೆಯು ವಿಫಲವಾಗಿದೆಯೆಂದು ಸಿದ್ಧವಾದ ನಂತರ ರಷ್ಯಾ ಕೂಡಲೇ ಪುನಃ ಆಕ್ರಮಣವನ್ನು ಆರಂಭಿಸಿತು ಮತ್ತು ಮಾರ್ಚ್ ೧ ರ ಬೆಳಗ್ಗೆಯವರೆಗೆ ಉಕ್ರೇನ್‌ನ ೭೦ ಸೈನಿಕರು ಕೊಲ್ಲಲ್ಪಟ್ಟಿದ್ದರು. ಇಲ್ಲಿಯವರೆಗೆ ನಿಧಾನವಾಗಿ ಆಕ್ರಮಣ ಮಾಡುವ ರಷ್ಯಾ ಈಗ ದೊಡ್ಡ ಸಾಮರ್ಥ್ಯದೊಂದಿಗೆ ಆಕ್ರಮಣ ಮಾಡಬಹುದೆಂಬ ಸಾಧ್ಯತೆ ಮಾರ್ಚ್ ೧ ರ ಮಧ್ಯಾಹ್ನದ ವರೆಗೆ ನಿರ್ಮಾಣವಾಗಿತ್ತು. ಮಹಾಯುದ್ಧವು ಈಗ ಹೆಚ್ಚು ಗಂಭೀರವಾದ ತಿರುವನ್ನು ತೆಗೆದುಕೊಳ್ಳುತ್ತದೆ ಎಂಬ ಸ್ಪಷ್ಟವಾದ ಚಿಹ್ನೆಗಳಿವೆ; ಏಕೆಂದರೆ ‘ರಷ್ಯಾ ಈಗ ನೌಕಾಪಡೆಯನ್ನು ಬಳಸಿಕೊಳ್ಳುತ್ತದೆ’, ಎಂಬ ವಾರ್ತೆ ಇದೆ. ಇದುವರೆಗೆ ಎಲ್ಲ ಬದಿಗಳಿಂದ ಸುತ್ತುವರೆದಿರುವ ಉಕ್ರೇನ್‌ನಲ್ಲಿ ಸೇನಾನೆಲೆಗಳ ನಂತರ ರಷ್ಯಾ ನಗರದಲ್ಲಿ ವಸತಿ ಕಟ್ಟಡಗಳನ್ನು ಗುರಿಯಾಗಿಸಿದೆ ಮತ್ತು ಈಗ ಸರಕಾರಿ ಕಟ್ಟಡಗಳ ಮೇಲೆ ‘ವ್ಯಾಕ್ಯೂಮ್ ಬಾಂಬ’ನ್ನು (ಪ್ರಾಣವಾಯುವನ್ನು ಹೀರಿಕೊಳ್ಳುವ ಬಾಂಬ್) ಬೀಳಿಸಿತು. ಈ ಬಾಂಬ್ ಮಾರಣಾಂತಿಕವೇ ಆಗಿದೆ.

ತೈಲವೇ ಯುದ್ಧದ ಮೂಲ ಕಾರಣ !

ಈ ಯುದ್ಧಕ್ಕೆ ಮೇಲ್ನೋಟಕ್ಕೆ ಹಲವು ಸ್ಟಷ್ಟ ಕಾರಣಗಳಿದ್ದರೂ, ತಜ್ಞರ ಪ್ರಕಾರ ಹಲವು ವರ್ಷಗಳಿಂದ ಭುಗಿಲೆದ್ದ ಮೂರನೇಯ ಮಹಾಯುದ್ಧಕ್ಕೆ ‘ತೈಲ’ವೇ ಮೂಲ ಕಾರಣವಾಗಿದೆ ಎಂದು ಸಿದ್ಧವಾಗಿದೆ. ಇಂದು ಸೌದಿ ಅರೇಬಿಯಾವು ವಿಶ್ವದ ಕಚ್ಚಾ ತೈಲದ ಶೇ. ೫೦ ರಷ್ಟು ಪ್ರಮಾಣ ಹೊಂದಿದೆ ಮತ್ತು ರಷ್ಯಾ ಹಾಗೂ ಅದರ ನೆರೆಹೊರೆಯ ದೇಶಗಳು ಶೇ. ೫೦ ರಷ್ಟು ಪ್ರಮಾಣ ಹೊಂದಿವೆ. ಸೌದಿ ಕಡೆಯ ತೈಲವನ್ನು ರಫ್ತು ಮಾಡುವ ದೇಶಗಳ ‘ಓಪೆಕ್’ ಈ ಸಂಘಟನೆಯ ಮೇಲೆ ಅಮೇರಿಕಾದ ವರ್ಚಸ್ಸಿದೆ, ಆದರೆ ರಷ್ಯಾದ ಭಾಗದಲ್ಲಿ ಸಂಗ್ರಹವಿರುವ ತೈಲದ ಮೇಲೆ ರಷ್ಯಾದ ಪ್ರಭುತ್ವವಿದೆ. ಎರಡೂ ಭಾಗಗಳಲ್ಲಿರುವ ದೇಶಗಳ ಆರ್ಥಿಕವ್ಯವಸ್ಥೆಯು ತೈಲ ರಫ್ತಿನ ಮೇಲೆ ಅವಲಂಬಿಸಿದೆ. ರಷ್ಯಾ ತೈಲದ ಬೆಲೆಯನ್ನು ಕಡಿಮೆ ಮಾಡಿದರೆ, ಸೌದಿ ಅರೇಬಿಯಾ ಅದೇ ರೀತಿ ಮಾಡಬೇಕಾಗುತ್ತದೆ. ರಷ್ಯಾ ಸದ್ಯ ಎಲ್ಲ ಶಸ್ತ್ರಾಸ್ತ್ರಗಳ ದೃಷ್ಟಿಯಿಂದ ಸಾಮರ್ಥ್ಯಶಾಲಿಯಾಗಿದೆ. ಅದರ ಬಳಿ ೬ ಸಾವಿರಗಳಿಗಿಂತ ಹೆಚ್ಚು ಅಣುಬಾಂಬ್‌ಗಳಿದ್ದು ಈ ಸಂಖ್ಯೆಯು ಅಮೇರಿಕಾಗಿಂತ ಹೆಚ್ಚಿದೆ. ರಷ್ಯಾ ಸಹ ಅಣುಬಾಂಬ್‌ಅನ್ನು ನಿಖರವಾದ ಸ್ಥಳದಲ್ಲಿ ಸ್ಫಟಿಸಲು ಮತ್ತು ಅದರ ದಾಳಿಯನ್ನು ಹಿಮ್ಮೆಟ್ಟಿಸಲು ಸಮರ್ಥವಾಗಿದೆ. ಅಮೇರಿಕಾವು ರಷ್ಯಾವನ್ನು ಯಾವಾಗಲೂ ತಗ್ಗಿಸಲು ನೋಡುತ್ತಿರುತ್ತದೆ. ಈ ಯುದ್ಧದಿಂದ ರಷ್ಯಾಗೆ ಆರ್ಥಿಕ ದಿಗ್ಭಂಧನ ಹಾಕಲು ಅಮೇರಿಕಾ, ಬ್ರಿಟನ್‌ನೊಂದಿಗೆ ಯುರೋಪ್‌ನ ಮಹಾಸಂಘವು (‘ಈಯು’ವು) ಆಯ್ದ ರಷ್ಯಾದ ಬ್ಯಾಂಕ್‌ಗಳ ‘ಸ್ವಿಫ್ಟ್’ ಈ ಜಾಗತಿಕ ಆರ್ಥಿಕ ಸಂದೇಶ ತಂತ್ರಾಂಶದಿಂದ ಹೊರದಬ್ಬಿದೆ. ರಷ್ಯಾದ ಮಧ್ಯಂತರ ಬ್ಯಾಂಕ್‌ಅನ್ನು ಸಹ ನಿಷೇಧಿಸಲಾಗಿದೆ. ರಷ್ಯಾದ ಆರ್ಥಿಕ ಕ್ಷಮತೆಯನ್ನು ನಿಯಂತ್ರಿಸಿ ರಷ್ಯಾಗೆ ಯುದ್ಧಕ್ಕಾಗಿ ಬೇಕಾಗುವ ಹಣಕಾಸು ಪೂರೈಕೆಯಲ್ಲಿ ಅಡ್ಡಿಯನ್ನುಂಟು ಮಾಡಬೇಕೆಂದು ಅಮೇರಿಕಾ ಮತ್ತು ಮಿತ್ರರಾಷ್ಟ್ರಗಳ ಉದ್ದೇಶವಾಗಿದೆ.

ಝೆಲೆಂಸ್ಕಿಯವರ ಮಾನಸಿಕತೆ !

ಉಕ್ರೇನ್ ಅಂತರರಾಷ್ಟ್ರೀಯ ಸ್ತರದಲ್ಲಿ ಇಲ್ಲಿಯವರೆಗೆ ಸತತ ಭಾರತದ ವಿರುದ್ಧ ನಿಲುವನ್ನು ತಾಳಿದೆ; ಆದರೂ ಸಂಕಟ ಬಂದಾಗ ಯಾವುದೇ ದಾಕ್ಷಿಣ್ಯ ಅಥವಾ ಮುಜುಗರ ಪಡದೇ, ಮಹಾಭಾರತ, ಚಾಣಕ್ಯನಂತಹ ಪ್ರಾಚೀನ ಭಾರತೀಯ ಸಿದ್ಧಾಂತಗಳ ಉದಾಹರಣೆಗಳನ್ನು ಉಲ್ಲೇಖಿಸಿ ವ್ಲೋದಿಮಿರ್ ಝೆಲೆಂಸ್ಕಿ ಇವರು ಭಾರತಕ್ಕೆ ಸಹಾಯ ಮಾಡಲು ಭಾವನಾತ್ಮಕ ಕರೆ ನೀಡಿದರು. ಅರ್ಥಾತ್ ಭಾರತವು ಅದಕ್ಕೆ ಬಲಿಯಾಗದಿರುವುದು ಯೋಗ್ಯವೇ ಆಗಿದೆ. ಸಾಮರ್ಥ್ಯಶಾಲಿ ರಷ್ಯಾ ಹಿಮ್ಮೆಟ್ಟದೇ ಎಲ್ಲ ಬದಿಗಳಿಂದ ಮುಂದೆ ಬರುತ್ತಿದೆ ಮತ್ತು ರಾಜಧಾನಿಯನ್ನು ಕಬಳಿಸುತ್ತಿದೆ, ಆದರೂ ರಷ್ಯಾದ ಸೈನ್ಯವನ್ನು ಹಿಮ್ಮೆಟ್ಟುವಂತೆ ಕರೆ ನೀಡುವ ಮೂಲಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಾಧ್ಯಕ್ಷರು ಸ್ವತಃ ಯುದ್ಧಭೂಮಿಯಲ್ಲಿ ಪ್ರವೇಶಿಸುವುದು ಸರಿಯೋ ತಪ್ಪೋ ? ಇದರ ಅಧ್ಯಯನವು ವಿಭಿನ್ನ ವಿಷಯವಾಗಿರಬಹುದು; ಆದರೂ ಝೆಲೆಂಸ್ಕಿಯ ಪ್ರವೇಶವನ್ನು ಕಡಿಮೆಯಾಗಿ ಅಂದಾಜಿಸಲಾಗುವುದಿಲ್ಲ. ಪರಾಜಯ ಎದುರಿಗೆ ಕಾಣಿಸುತ್ತಿದ್ದರೂ ಅವರು ನೆಲಕಚ್ಚಿಲ್ಲವೆಂಬುದು, ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಭಾರತೀಯರು ಏನು ಕಲಿಯಬೇಕು ?

‘ಯುದ್ಧಸ್ಯ ಕಥಾ ರಮ್ಯಃ’ (ಯುದ್ಧದ ಕಥೆ ಮನೋರಂಜನೆ ನೀಡುತ್ತದೆ), ಹೀಗೆ ಕಾಲವು ಉರುಳಿದ ನಂತರ ಅನಿಸುತ್ತಿದ್ದರೂ, ಯಾರು ಅದನ್ನು ಸ್ವತಃ ಅನುಭವಿಸಿದರೋ ಅವರಿಗೆ ಅದು ಧಗಧಗಿಸುವ ನೆನಪಿಗಿಂತ ಭಿನ್ನವಾಗಿರುವುದಿಲ್ಲ. ರಷ್ಯಾ ಎಲ್ಲ ದೃಷ್ಟಿಯಿಂದಲೂ ಸಾಮರ್ಥ್ಯಶಾಲಿಯಾಗಿರುವುದರಿಂದ ಉಕ್ರೇನ್‌ನ ಸ್ಥಿತಿ ಆರಂಭದಿಂದಲೂ ದುರ್ಬಲವಿರುವುದು ಸ್ಪಷ್ಟವಿದ್ದರೂ ಅನೇಕ ಪ್ರಸಂಗಗಳಲ್ಲಿ ‘ಯುದ್ಧದಲ್ಲಿ ಉಕ್ರೇನಿಯನ್ ಜನರ ಸ್ವಪ್ರೇರಣೆಯ ಪಾಲ್ಗೊಳ್ಳುವಿಕೆಯ ಭಾಗವು ಕಲಿಯುವಂತಿದೆ. ಝೆಲೆಂಸ್ಕಿ ಇವರು ಕರೆ ನೀಡಿದಾಗ ಎಂದಿಗೂ ಕೈಯಲ್ಲಿ ಶಸ್ತ್ರವನ್ನು ಹಿಡಿಯದ ಜನರು ಕೈಯಲ್ಲಿ ಶಸ್ತ್ರವನ್ನು ತೆಗೆದುಕೊಂಡು ಅವುಗಳನ್ನು ನಡೆಸುವ ಪ್ರಶಿಕ್ಷಣ ಪಡೆದರು. ಉಕ್ರೇನ್‌ನ ‘ಮಿಸ್ ಯುನಿವರ್ಸ್’ (ಸೌಂದರ್ಯಸ್ಪರ್ಧೆಯಲ್ಲಿ ವಿಜೇತೆ) ಕೈಯಲ್ಲಿ ದೊಡ್ಡ ಆಯುಧವನ್ನು ಹಿಡಿದು ಬೀದಿಗಿಳಿದರು. ನಾಳೆ ಭಾರತದಲ್ಲಿ ಇಂತಹ ಪ್ರಮೇಯ ಬಂದರೆ, ಎಷ್ಟು ನಟಿಯರಿಗೆ ಈ ಧೈರ್ಯ ಬರಬಹುದು ? ಉಕ್ರೇನ್‌ನ ಮಹಿಳೆಯೊಬ್ಬರು ರಸ್ತೆಯಲ್ಲಿರುವ ರಷ್ಯಾ ಯುದ್ಧದ ಟ್ಯಾಂಕ್‌ನಲ್ಲಿ ಕುಳಿತು, ಅದನ್ನು ಹೇಗೆ ನಡೆಸಬೇಕು ಎಂದು ಕಲಿತು ಅದರ ವಿಡಿಯೋವನ್ನು ಪ್ರಸಾರ ಮಾಡಿದರು. ಉಕ್ರೇನ್‌ನಲ್ಲಿ ಪ್ರಸಾರವಾದ ಇಂತಹ ಕೆಲವು ವಿಡಿಯೋಗಳು ಉಕ್ರೇನ್‌ನ ಜನತೆಯ ದೇಶಪ್ರೇಮವನ್ನು ತೋರ್ಪಡಿಸುತ್ತದೆ. ಯುದ್ಧದ ಸಮಯದಲ್ಲಿ ಈ ನಾಗರಿಕರು ಸ್ವಪ್ರೇರಣೆಯಿಂದ ದೇಶವನ್ನು ಬೆಂಬಲಿಸಿದ್ದಾರೆ. ಭಾರತದಲ್ಲಿ ಯುದ್ಧ ಆರಂಭವಾದಾಗ ‘ದೇಶವಿರೋಧಿಗಳು ಬಾಯಿ ಮುಚ್ಚಿಕೊಂಡಿದ್ದರೂ ಅದು ಬಹಳಷ್ಟಾಯಿತು’, ಎಂಬಂತಹ ಸ್ಥಿತಿ ಇದೆ. ಯುದ್ಧದ ಸಮಯದಲ್ಲಿ ಅನೇಕ ಗುಣಗಳೊಂದಿಗೆ ‘ಆಜ್ಞಾಪಾಲನೆ’ ಎಂಬ ಗುಣವು ಎಲ್ಲಕ್ಕಿಂತ ಮಹತ್ವದೆಂದು ಸಿದ್ಧವಾಗುತ್ತದೆ. ನಮ್ಮಲ್ಲಿ ನೆರೆಯ ನೀರು ತುಂಬಿದರೂ ಜನರು ಮನೆಯನ್ನು ಬಿಡಲು ಸಿದ್ಧರಿರುವುದಿಲ್ಲ, ಹಾಗಾದರೆ ಯುದ್ಧದ ಸಮಯದಲ್ಲಿ ಏನು ಮಾಡುವರು ? ವಿದ್ಯಾರ್ಥಿಗಳಿಗೆ ಉಕ್ರೇನ್‌ಅನ್ನು ಬಿಟ್ಟು ಭಾರತಕ್ಕೆ ಹಿಂದಿರುಗುವ ಬಗ್ಗೆ ಅನೇಕ ದಿನಗಳಿಂದ ಹೇಳಲಾಗುತ್ತಿದ್ದರೂ ‘ಅಂತಹ ಕೃತಿಯಾಗಿಲ್ಲ’ ಎಂದು ಸಹ ಈಗ ಗಮನಕ್ಕೆ ಬರುತ್ತಿದೆ.

‘ಮೂರನೇಯ ಮಹಾಯುದ್ಧವು ಆರಂಭವಾಗುವ ದಿನಗಳು ಹತ್ತಿರ ಬಂದಿವೆ’, ಎಂದು ಅನೇಕ ಭಾರತೀಯರಿಗೆ ಹೇಳಿದರೂ ನಿಜವೆನಿಸುತ್ತಿರಲಿಲ್ಲ. ಈಗ ಆರಂಭವಾದ ಯುದ್ಧದ ಕಾರ್ಮೋಡ ಭಾರತದವರೆಗೆ ಬರಲು ಹೆಚ್ಚು ಸಮಯ ತಾಗಲಾರದು, ಇಲ್ಲಿಯವರೆಗೆ ೩ ಲಕ್ಷಗಳಿಗಿಂತ ಹೆಚ್ಚು ನಾಗರಿಕರು ಉಕ್ರೇನ್‌ಅನ್ನು ತೊರೆದಿದ್ದಾರೆ. ನಾಳೆ ಮೂರನೇಯ ಮಹಾಯುದ್ಧದ ಕಾಡ್ಗಿಚ್ಚು ಹೆಚ್ಚಾದರೆ, ಭಾರತೀಯರು ವಿವಿಧ ರೀತಿಯ ಪೂರ್ವಸಿದ್ಧತೆ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಅದಕ್ಕಾಗಿ ಭಾರತೀಯರು ವೈಯಕ್ತಿಕ ಸ್ತರದಲ್ಲಿ ಏನು ಸಿದ್ಧತೆ ಮಾಡಿದ್ದಾರೆ ? ಕಟ್ಟಡದ ಮೇಲೆ ಬಾಂಬ್ ದಾಳಿ ಮಾಡಿದ್ದರಿಂದ ಉಂಟಾಗುವ ಬೆಂಕಿಯಿಂದಾಗಿ ಯುದ್ಧದಲ್ಲಿ ಹೆಚ್ಚಿನ ಜನರು ಸಾಯುತ್ತಿದ್ದಾರೆ. ಭಾರತದಲ್ಲಿ ಎಷ್ಟು ಜನರು ಅಗ್ನಿಶಾಮಕ ಪ್ರಶಿಕ್ಷಣವನ್ನು ಪಡೆದಿದ್ದಾರೆ ? ಎಷ್ಟು ಜನರಿಗೆ ಪ್ರಥಮ ಚಿಕಿತ್ಸೆ ಮಾಡಲು ಬರುತ್ತದೆ ? ಯುದ್ಧ ಹೆಚ್ಚು ಕಾಲ ನಡೆದರೆ, ಧಾನ್ಯ, ಔಷಧಿಗಳು, ಅತ್ಯಾವಶ್ಯಕ ವಸ್ತುಗಳನ್ನು ಸಂಗ್ರಹಿಸುವ ಬಗ್ಗೆ ಏನಾದರೂ ಪೂರ್ವಸಿದ್ಧತೆಯ ಅಧ್ಯಯನವಾಗಿದೆಯೇ ? ಲಯದ ದೇವತೆಯಾಗಿರುವ ಮಹಾದೇವನ ಉಪಾಸನೆಯನ್ನು ಮಾಡುವ ಭಾರತೀಯರು ನಿಜವಾಗಿಯೂ ದೇವರು, ಅವತಾರಿ ಸಂತರು ಮತ್ತು ಋಷಿಮುನಿಗಳ ಕೃಪೆಯಿಂದಲೇ ಪಾರಾಗಲಿದ್ದಾರೆ. ಬರುವ ಯುದ್ಧಕಾಲದಲ್ಲಿಯೂ ಭಕ್ತನು ಬದುಕುಳಿಯುತ್ತಾನೆ; ಆದರೆ ಭಾರತೀಯರು ಪ್ರಸ್ತುತ ಯುದ್ಧದಿಂದ ಕಲಿತು ಎಲ್ಲ ಸ್ತರಗಳಲ್ಲಿ ತಮ್ಮ ಸಿದ್ಧತೆಯನ್ನಿಟ್ಟುಕೊಳ್ಳುವುದು ಶ್ರೇಯಸ್ಕರವೆಂದು ಸಿದ್ಧವಾಗುತ್ತದೆ !